Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ದಿನಾ ಈ 5 ಬ್ಯೂಟಿ ಟಿಪ್ಸ್ ಪಾಲಿಸಿ, ನಿಮ್ಮ ಮುಖ ತುಂಬಾನೇ ಆಕರ್ಷಕವಾಗುವುದು
ಪ್ರತಿಯೊಬ್ಬರಿಗೂ ತ್ವಚೆ ಆರೈಕೆ ಬಹಳ ಮುಖ್ಯ. ಕೆಲವರು ಪಾರ್ಲರ್‌ಗೆ ಹೋದರೆ ಇನ್ನು ಕೆಲವರು ಮನೆಮದ್ದು ಮೂಲಕ ತ್ವಚೆಯ ಆರೈಕೆ ಮಾಡುತ್ತಾರೆ. ಸಾಕಷ್ಟು ಸೆಲೆಬ್ರಿಟಿಗಳು ಕೂಡ ಮನೆಮದ್ದು ಮಾಡುತ್ತಾರೆ. ನೀವು ನಿಮ್ಮ ತ್ವಚೆಯನ್ನು ತುಂಬಾನೇ ಆರೈಕೆ ಮಾಡಬೇಕೆಂದು ಬಯಸುವುದಾದರೆ ಈ ಟಿಪ್ಸ್ ಅನುಸರಿಸಿ:

ಫೇಸ್ ಮಾಸ್ಕ್:
ದಿನ ಆರಂಭವನ್ನೇ ತ್ವಚೆಯ ಆರೈಕೆಯೊಂದಿಗೆ ಶುರು ಮಾಡಬೇಕು ಎಂಬ ಮಾತಿದೆ. ಅದಕ್ಕಾಗಿ ಬೆಳಗ್ಗೆ ನಿಮ್ಮ ತ್ವಚೆಯನ್ನು ಪೋಷಣೆಯುಕ್ತ ಮತ್ತು ಹೈಡ್ರೀಕರಿಸಿದ ವಸ್ತುಗಳನ್ನ ಬಳಸಬೇಕು. ಇಡೀ ದಿನ ನೀವು ಮನೆಯಿಂದ ಹೊರಗಿರುವುದರಿಂದ, ತ್ವಚೆಯು ಸೂರ್ಯನಿಗೆ ಮತ್ತು ಅದರ ಹಾನಿಕಾರಕ ಯುವಿಕಿರಣಗಳಿಗೆ ತೆರೆದುಕೊಳ್ಳುತ್ತದೆ.
ಇದು ನಿಮ್ಮ ತ್ವಚೆಗೆ ಬಹಳ ಸೂಕ್ಷ್ಮವಾಗಿ ಪರಿಣಾಮ ಬೀರುತ್ತದೆ. ತ್ವಚೆಯನ್ನು ಹೈಡ್ರೇಟ್ ಆಗಿರಿಸಲು ಬೆಳಗ್ಗೆ ನಿಂಬೆ ಮಿಶ್ರಿತ ನೀರನ್ನು ಕುಡಿಯುತ್ತಾರೆ. ಇದಲ್ಲದೆ ನಿಮ್ಮ ತ್ವಚೆಯ ವಿನ್ಯಾಸಕ್ಕೆ ಅನುಗುಣವಾಗಿ ವಿವಿಧ ರೀತಿಯ ಫೇಸ್ ಮಾಸ್ಕ್ ಬಳಸಬಹುದು
ಟೋನರ್:
ತ್ವಚೆಯ ಆರೈಕೆಯಲ್ಲಿ ಟೋನರ್ ಬಹಳ ನಿರ್ಣಾಯಕ ಪಾತ್ರ ವಹಿಸುತ್ತದೆ. ನಿಮ್ಮ ತ್ವಚೆಯ ಟೋನ್ ಸುಧಾರಿಸಲು ಟೋನರ್‌ಗಳು ಸಹಕಾರಿ. ಟೋನರ್ ಬಳಸುವುದರಿಂದ ಮೊಡವೆಗಳನ್ನು ಗುಣಪಡಿಸಲು, ಆರೋಗ್ಯಕರ ತ್ವಚೆಯ ಕೋಶಗಳನ್ನು ಪುನರ್ನಿರ್ಮಿಸಲು, ಸನ್‌ಟ್ಯಾನ್ ಉಂಟಾಗುವುದನ್ನು ತಡೆಗಟ್ಟಲು ಸಹಕಾರಿ.
ವಿಟಮಿನ್ ಸಿ ಸೆರಮ್
ವಿಟಮಿನ್ ಸಿ ಸೆರಮ್ ಸೌಂದರ್ಯ ವೃದ್ಧಿಗೆ ತುಂಬಾನೇ ಸಹಕಾರಿ. ಇದನ್ನು ತ್ವಚೆಗೆ ಬಳಸಿದರೆ ತ್ವಚೆಯನ್ನು ಕಾಂತಿಯುತಗೊಳಿಸುವಲ್ಲಿ ಸಹಕಾರಿ. ಇದು ತ್ವಚೆಯಲ್ಲಿ ಅಂಟಿಕೊಂಡಿರುವ ಕಶ್ಮಲವನ್ನು ಹೊರ ಹಾಕಿ ತ್ವಚೆಯನ್ನು ಆರೈಕೆ ಮಾಡುತ್ತದೆ, ಮುಖದಲ್ಲಿ ಕೊಲಜಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಹೀಗಾಗಿ ತ್ವಚೆಯಲ್ಲಿ ಯೌವನ ಕಳೆ ಬೇಗನೆ ಮಾಸುವುದಿಲ್ಲ.
ಮಾಯಿಶ್ಚರೈಸಿಂಗ್ ಎಸ್‌ಪಿಎಫ್:
ತ್ವಚೆ ಡ್ರೈಯಾಗದಿರಲು ಮಾಯಿಶ್ಚರೈಸರ್ ಹಚ್ಚುವುದು ಅತ್ಯಗತ್ಯ. ಅಲ್ಲದೆ ತ್ವಚೆ ರಕ್ಷಣೆಗೆ ಸನ್‌ಸ್ಕ್ರೀನ್ ಕೂಡ ತುಂಂಬಾನೇ ಮುಖ್ಯ. ನಿಮ್ಮ ತ್ವಚೆಯ ಆರೈಕೆಯಲ್ಲಿ ಬೇರೆ ಯಾವುದನ್ನು ತಪ್ಪಿಸಿದರೂ, ಇವೆರಡನ್ನೂ ಮಿಸ್ ಮಾಡಲೇಬಾರದು.
ಲಿಪ್ ಬಾಮ್:
ಆರೋಗ್ಯಕರ ತುಟಿಗಾಗಿ ಲಿಪ್‌ಬಾಮ್ ಹಚ್ಚಿಕೊಳ್ಳುವುದು ಬಹಳ ಮುಖ್ಯ. ಇವು ನಿಮ್ಮ ತಟಿಯನ್ನು ತೇವಾಂಶದಿಂದ ಕೂಡಿರಲು ಸಹಕಾರಿ.



Click it and Unblock the Notifications
