Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಸೌಂದರ್ಯ ಸಂಬಂಧ ನೀವು ಮಾಡುತ್ತಿರುವ 4 ತಪ್ಪುಗಳು..!
ಎಲ್ಲರಿಗೂ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಹಂಬಲ ಇದ್ದೇ ಇರುತ್ತೆ. ತ್ವಚೆ ಕಲೆಗಳಂದ ಮುಕ್ತವಾಗಿರಬೇಕು. ಸುಂದರವಾಗಿ ಕಾಣಬೇಕು ಎಂದುಕೊಂಡಿರುತ್ತಾರೆ. ಹೀಗಾಗಿ ಅದೆಷ್ಟೋ ಕ್ರಿಮ್‌ಗಳು, ಔಷಧಿಗಳು, ಲೋಷನ್‌ಗಳ ಹಚ್ಚುತ್ತಾರೆ. ಆರೋಗ್ಯಕರ ತ್ವಚೆ ಪಡೆದುಕೊಳ್ಳಬೇಕು ಎಂದು ಇನ್ನಿಲ್ಲದ ಹರಸಾಹಸ ಮಾಡುತ್ತಾರೆ.
ಇದಕ್ಕಾಗಿ ಮನೆಮದ್ದುಗಳು, ಸಿಕ್ಕ ಸಿಕ್ಕ ಎಣ್ಣೆಗಳು, ಪೌಡರ್‌ಗಳು, ಕ್ರೀಮ್, ಗಿಡಮೂಲಿಕೆಗಳ ಹಚ್ಚುವುದು ಸಹ ನೋಡಿರುತ್ತೇವೆ. ಆದರೆ ನೀವು ಮುಖ ಸುಂದರವಾಗಿಸಲು, ತ್ವಚೆ ಬಿಳಿಯಾಗಿಸಲು ಹಚ್ಚುವ ಕ್ರೀಮ್, ಸೌಂದರ್ಯ ವರ್ಧಕಗಳೇ ನಿಮ್ಮ ತ್ವಜೆಗೆ ಹಾನಿಯಾಗಬಹುದು ಎಂಬುದು ನಿಮಗೆ ಗೊತ್ತಾ?

ಹೌದು ನೀವು ಮಾಡುತ್ತಿರುವ ಕೆಲವೊಂದು ವಿಧಾನ ನಿಮ್ಮ ಸೌಂದರ್ಯಕ್ಕೆ ಹಾನಿ ತರುತ್ತವೆ. ಚರ್ಮದ ಆರೈಕೆಯಲ್ಲಿನ ತಪ್ಪು ಹೆಜ್ಜೆಗಳು ಮಾರಕವಾಗಬಹುದು. ಹಾಗಾದ್ರೆ ನಾವು ಮಾಡುತ್ತಿರುವ ತಪ್ಪುಗಳೇನು? ಸೌಂದರ್ಯ ವರ್ಧಕ ಬಳಕೆ ಮಾಡುವುದರಲ್ಲಿ ನಾವು ಮಾಡುವ ಸಾಮಾನ್ಯ ತಪ್ಪುಗಳಿವು.
ಮುಖ ತೊಳೆಯುವಾಗ ನಾವು ಮಾಡುವ ತಪ್ಪು
ನಾವು ಮುಖ ತೊಳೆದುಕೊಳ್ಳುವಾಗಲೇ ತಪ್ಪು ಮಾಡುತ್ತಿರುತ್ತೇವೆ. ನಾವು ಅತೀಯಾದ ಬಿಸಿ ನೀರು, ಇಲ್ಲವೆ ಅತೀಯಾದ ತಂಪು ನೀರಿನಿಂದ ತೊಳೆಯುತ್ತೇವೆ, ಇದು ನಾವು ಮಾಡುತ್ತಿರುವ ಸಾಮಾನ್ಯ ತಪ್ಪಾಗಿದೆ. ಇನ್ನೊಂದೆಡೆ ಮುಖ ತೊಳೆದುಕೊಳ್ಳುವಾಗ 2 ನಿಮಿಷವಾದರು ಮುಖಕ್ಕೆ ಫೇಸ್ ವಾಶ್‌ನಿಂದ ತೊಳೆಯುವುದು ಉತ್ತಮ. ಮುಖವನ್ನು ಸೋಪು ಬಳಸಿ ತೊಳೆಯುವುದು ತಪ್ಪು. ಹಾಗೆ ಮುಖಕ್ಕೆ ಉಗುರು ಬೆಚ್ಚಗಿನ ನೀರು ಬಳಸಿ ತೊಳೆದುಕೊಳ್ಳುವುದು ಉತ್ತಮ.
ತ್ವಚೆಯ ಅನುಸಾರವಾಗಿ ನಿರ್ಧಿಷ್ಟ ಅಗತ್ಯ ನಿರ್ಲಕ್ಷಿಸುವುದು
ಭೂಮಿ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ರೀತಿಯ ತ್ವಚೆಯ ಲಕ್ಷಣವಿರುತ್ತೆ. ಎಲ್ಲರಿಗೂ ಒಂದೇ ರೀತಿಯ ಚರ್ಮದ ಪ್ರಕಾರಗಳ ಹೊಂದಿರುವುದಿಲ್ಲ. ನಮ್ಮ ತ್ವಚೆಗೆ ಅಗತ್ಯವಿರುವ ಹಾಗೂ ಸರಿಯಾಗಿ ಹೊಂದಿಕೊಳ್ಳುವ ಸೋಪು, ಶಾಂಪು, ಕ್ರೀಮ್‌ಗಳ ಬಳಸಬೇಕು. ಆದರೆ ಸಾಮಾನ್ಯವಾಗಿ ಇದನ್ನು ನಾವು ನಿರ್ಲಕ್ಷಿಸುತ್ತೇವೆ. ಜಾಹೀರಾತುಗಳಲ್ಲಿ ಯಾವ ಉತ್ಪನ್ನ ತೋರಿಸುತ್ತಾರೋ ಅದನ್ನು ತಂದು ಬಳಸುತ್ತೇವೆ. ಉದಾಹರಣೆಗೆ, ಕೊರಿಯನ್ ಗ್ಲಾಸ್ ಸ್ಕಿನ್ ಟ್ರೆಂಡ್ ಸಾಧಿಸಲು ಸಾಧ್ಯವಾಗದಿರಬಹುದು ಅಥವಾ ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಾಗಿರುವುದಿಲ್ಲ. ನಿಮ್ಮ ಚರ್ಮದ ಪ್ರಕಾರ ಮತ್ತು ಅದರ ವಿಶಿಷ್ಟ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.
ಪಲ್ಯೂಷನ್ ವಿರುದ್ಧ ರಕ್ಷಣೆ ನಿರ್ಲಕ್ಷಿಸುವುದು
ನಾವು ನಿತ್ಯ ಹೊರಗಡೆ ಓಡಾಡುವಾಗ ಪಲ್ಯೂಷನ್‌ನಿಂದ ನಮ್ಮ ತ್ವಚೆ ಹಾಳಾಗುತ್ತದೆ. ಆದ್ರೆ ನಾವು ಇದನ್ನು ಬಹುತೇಕ ಸಮಯದಲ್ಲಿ ನಿರ್ಲಕ್ಷಿಸುತ್ತೇವೆ. ಆದ್ರೆ ನಮ್ಮ ತ್ವಚೆಯ ಮೇಲೆ ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಹಾನಿ ಮಾಡುತ್ತದೆ. ಹೊಗೆ, ಧೂಳು ಮತ್ತು ಸೂಕ್ಷ್ಮ ಕಣಗಳಂತಹ ಮಾಲಿನ್ಯಕಾರಕಗಳು ಚರ್ಮದ ಹಾನಿಗೆ ಕಾರಣವಾಗುತ್ತದೆ. ಹೈಪರ್ಪಿಗ್ಮೆಂಟೇಶನ್, ಹೆಚ್ಚಿದ ಸಂವೇದನೆ ಮತ್ತು ಮೊಡವೆ ಮತ್ತು ಎಸ್ಜಿಮಾದಂತಹ ಉಲ್ಬಣಗೊಳ್ಳುವ ಪರಿಸ್ಥಿತಿಗಳಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಪರಿಣಾಮಗಳನ್ನು ಎದುರಿಸಲು, ಆಂಟಿಆಕ್ಸಿಡೆಂಟ್‌ಗಳನ್ನು ನಿಮ್ಮ ತ್ವಚೆಯ ಆರೈಕೆಯಲ್ಲಿ ಸೇರಿಸುವುದು ಅತ್ಯಗತ್ಯ.
ಸನ್‌ಸ್ಕ್ರೀನ್‌ನ ಅಸಮರ್ಪಕ ಬಳಕೆ
ತ್ವಚೆಯ ಆರೋಗ್ಯವನ್ನು ರಕ್ಷಿಸಲು ಸರಿಯಾದ ಸನ್‌ಸ್ಕ್ರೀನ್ ಬಳಕೆ ಮುಖ್ಯವಾಗಿದೆ. ಅನೇಕ ಜನರು ಬಿಸಿಲಿನ ದಿನಗಳಲ್ಲಿ ಸನ್‌ಸ್ಕ್ರೀನ್ ಅನ್ನು ಅನ್ವಯಿಸುವ ತಪ್ಪನ್ನು ಮಾಡುತ್ತಾರೆ ಅಥವಾ UVA ರಕ್ಷಣೆಯನ್ನು ಪರಿಗಣಿಸದೆ SPF ರೇಟಿಂಗ್‌ನಲ್ಲಿ ಮಾತ್ರ ಗಮನಹರಿಸುತ್ತಾರೆ. ಆದರೆ ಬಿಸಿಲಿನಲ್ಲಿ ಮಾತ್ರ ಸನ್‌ಸ್ಕ್ರೀನ್ ಹಚ್ಚಿಕೊಳ್ಳಬಾರದು. ಯಾವುದೇ ಹವಾಮಾನ ಇರಲಿ ಸನ್‌ಸ್ಕ್ರೀನ್ ಹಚ್ಚಿಕೊಳ್ಳುವುದು ಉತ್ತಮ ಅಭ್ಯಾಸವಾಗಿದೆ. ಇನ್ನು ಬಿಸಿಲಿಗೆ ಹೋಗುವ ನಿಮಿಷಕ್ಕೂ ಮುನ್ನ ಹಚ್ಚಿಕೊಳ್ಳುವುದರಿಂದ ಅದು ಬೆವರಿನ ಜೊತೆ ಸೇರಿಕೊಳ್ಳುತ್ತದೆ, ಯಾವಾಗಲೂ 10 ನಿಮಿಷ ಮುನ್ನವೇ ಸನ್‌ಸ್ಕ್ರೀನ್ ಬಳಸಿ.



Click it and Unblock the Notifications
