Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ವಿಶ್ವದ ಟಾಪ್ 10 ಸುರ ಸುಂದರಿಯರ ಪಟ್ಟಿಯಲ್ಲಿರುವ ಏಕೈಕ ಬಾಲಿವುಡ್ ನಟಿ
ವಿಶ್ವದ ಅತಿ ಸುಂದರ ಟಾಪ್ 10 ಮಹಿಳೆಯರಲ್ಲಿ ಭಾರತದ ಒಬ್ಬ ಮಹಿಳೆ ಇದ್ದಾರೆ, ಆದರೆ ಇವರು ವಿಶ್ವ ಸುಂದರಿ, ಭುವನ ಸುಂದರಿಯಾದವರಲ್ಲ, ಬದಲಿಗೆ ಬಾಲಿವುಡ್‌ನಲ್ಲಿ ಟಾಪ್ ನಟಿಯರಲ್ಲಿ ಒಬ್ಬರು, ಒಂದು ಮಗುವಿನ ತಾಯಿಯೂ ಹೌದು.
ಹೌದು ವಿಶ್ವದ ಟಾಪ್ 10 ಮಹಿಳೆಯರಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಒಬ್ಬರು. ಗೋಲ್ಡನ್ ರೇಶಿಯೋ ಬಿಡುಗಡೆ ಮಾಡಿರುವ ಅತಿ ಸುಂದರಿಯರ ಪಟ್ಟಿಯಲ್ಲಿ ಆಲಿಯಾ ಗುರುತಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಗುರುತಿಸಿಕೊಳ್ಳಬೇಕೆಂದರೆ ಅದಕ್ಕೆ ಹಲವು ಮಾನದಂಡಗಳಿವೆ, ಅದರಂತೆ ಆಲಿಯಾಭಟ್ ಎಂಬ ಗುಳಿಕೆನ್ನೆಯ ಭಾರತೀಯರ ವಿಶ್ವದ ಅತಿ ಸುಂದರಿಗಳಲ್ಲಿ ಒಬ್ಬರಾಗಿದ್ದಾರೆ.

ಪ್ರತಿವರ್ಷವು ಗೋಲ್ಡನ್ ರೆಶಿಯೊ ವಿಶ್ವದ ಅತಿ ಸುಂದರಿಯರ ಪಟ್ಟಿ ಮಾಡುತ್ತದೆ. ಇವರಿಂದ ಅತಿ ಸುಂದರ ಪಟ್ಟ ಗಳಿಸಲು ಬರಿ ಸೌಂದರ್ಯ ಸಾಕಾಗುವುದಿಲ್ಲ, ಹಲವು ಆಯಾಮಗಳನ್ನು ಗಮನದಲ್ಲಿಟ್ಟು ಈ ಪಟ್ಟಿ ಮಾಡಲಾಗಿದೆ. ಈ ಸಾಲಿನ ಮೋಸ್ಟ್ ಬ್ಯುಟಿಫುಲ್ ವುಮನ್ ಪಟ್ಟ ಅನ್ಯ ಟೆಲರ್ ಜಾಯ್ ಮುಡಿಗೇರಿದೆ. ಈಕೆ ಲಂಡನ್‌ನ ನಟಿ. ಭಾರತದ ನಟಿಯರಲ್ಲಿ ಅಲಿಯಾ ಭಟ್ ಮಾತ್ರ ಈ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಈ ಪ್ರಶಸ್ತಿಗೆ ಹಾಲಿವುಡ್, ಬಾಲಿವುಡ್ ಅಂತ ಪ್ರಸಿದ್ಧ ನಟಿಯರನ್ನು ಪರಿಗಣಿಸಲಾಗುವುದು, ಅನೇಕ ಮಾಡೆಲ್‌ಗಳು ಕೂಡ ಇದರಲ್ಲಿ ಭಾಗಿಯಾಗಿರುತ್ತಾರೆ. ವಿಶ್ವದ ಟಾಪ್ 10 ಅತಿ ಸುಂದರಿಯರ ಪಟ್ಟಿಯಲ್ಲಿ ಅಲಿಯಾ 91.14 ರೇಟಿಂಗ್ ಪಡೆಯುವ ಮೂಲಕ 9ನೇಸ್ಥಾನದಲ್ಲಿದ್ದಾರೆ.
2024-25 ವಿಶ್ವದ ಟಾಪ್ 10 ಸುಂದರಿಯರ ಪಟ್ಟಿ
ಅನ್ಯ ಟೇಲರ್ ಜಾಯ್ (ಶೇ.99.66 ರೇಟಿಂಗ್ಸ್)
ಝೆಂಡೆಯಾ( ಶೇ.94.37 ರೇಟಿಂಗ್ಸ್)
ಬೆಲ್ಲಾ ಹದೀದ್(ಶೇ.94.35 ರೇಟಿಂಗ್ಸ್)
ಮಾರ್ಗೋಟ್ ರೋಬಿ( ಶೇ.93.43 ರೇಟಿಂಗ್ಸ್)
ಸಾಂಗ್ ಹೈ ಕ್ಯೋ(ಶೇ. 92.67 ರೇಟಿಂಗ್ಸ್)
ಬೆಯಾನ್ಸ್(ಶೇ. 92.04 ರೇಟಿಂಗ್ಸ್
ಟೇಲರ್ ಸ್ವಿಫ್ಟ್( ಶೇ. 91.64 ರೇಟಿಂಗ್ಸ್)
ಝಾಂಗ್ ಝಿಯಿ(ಶೇ. 91.51 ರೇಟಿಂಗ್ಸ್)
ಆಲಿಯಾ ಭಟ್ (ಶೇ. 91.14 ರೇಟಿಂಗ್ಸ್
ನಾಜಾನಿನ್ ಬೊನಿಯಾಡಿ( ಶೇ. 90.89 ರೇಟಿಂಗ್ಸ್)
ಏನಿದು ಗೋಲ್ಡನ್ ರೆಶಿಯೋ ಸ್ಪರ್ಧೆ?
ಸೌಂದರ್ಯವನ್ನು ಅಳೆಯಲು ಇರುವ ಪುರಾತನ ವಿಧಾನ, ಇದರಲ್ಲಿ ಸೌಂದರ್ಯ, ಎತ್ತರ, ಅವರ ಬುದ್ಧಿವಂತಿಕೆ, ಮಾತು, ದೇಹ ಹೀಗೆ ಹತ್ತು ಹಲವು ಅಂಶಗಳನ್ನು ಗಮನಿಸಲಾಗುವುದು.
ಲಿಯಾನಾರ್ಡೋ ಡಾ ವಿನ್ಸಿ ಮೊನಲಿಸಾಳನ್ನು ಬರೆಯುವಾಗ ಇದೇ ಲೆಕ್ಕಾಚಾರದಲ್ಲಿ ಬರೆದರು, ಹಾಗಾಗಿ ಆ ಭಾವಚಿತ್ರ ಅಷ್ಟೊಂದು ಸುಂದರವಾಗಿದೆ ಎಂದು ಹೇಳಲಾಗುವುದು.



Click it and Unblock the Notifications
