Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಗರ್ಭಧಾರಣೆ ಸಂಬಂಧಿತ ಚರ್ಮದ ಸಮಸ್ಯೆಗಳು ಮತ್ತು ನೈಸರ್ಗಿಕ ಪರಿಹಾರಗಳು!
ನಿಮ್ಮ ತ್ವಚೆ ಗಮನಾರ್ಹವಾಗಿ ರೋಮಾಂಚಕ ಬದಲಾವಣೆಯನ್ನು ಕಾಣುತ್ತದೆ, ಮತ್ತು ನೀವು ಹೊಳೆಯುತ್ತೀರಿ. ಇವು ನೀವು ಗರ್ಭಿಣಿಯಾಗಿರುವಾಗ ನಿಮ್ಮ ದೇಹದಲ್ಲಿನ ಬದಲಾವಣೆಗಳು! ಹೌದು ನೀವು ಸಂತೋಷಗೊಂಡಿದ್ದೀರಿ. ನೀವು ತಾಯಿಯ ಸುಖವನ್ನು ಅನುಭವಿಸಲಿದ್ದೀರಿ!
ಆರೋಗ್ಯಕರವಾಗಿ ಮಗುವಿಗೆ ಜನ್ಮ ನೀಡಲು 8 ವಿಧಾನಗಳು
ಸಂತೋಷವಾಗಿ ಮತ್ತು ತಾಯಿ ಆಗಬೇಕೆಂಬ ಹೆಮ್ಮೆಯ ಜೊತೆಗೆ ನೀವು ಗರ್ಭಧಾರಣೆಯ ಹಂತದಲ್ಲಿ ಒಂಬತ್ತು ತಿಂಗಳಲ್ಲಿ ಎದುರಿಸುವ ಇತರ ಸಮಸ್ಯೆಗಳೂ ಸಾಕಷ್ಟಿವೆ! ಬೆಳಗಿನ ಬೇನೆ, ಕಾಲಿನ ಊತ, ತಲೆಸುತ್ತುವಿಕೆ, ಮತ್ತು ಗರ್ಭಧಾರಣೆಯ ತೂಕ ಹೆಚ್ಚಾಗುವ ತೊಂದರೆಗಳು, ಮೊದಲಾದವು ಗರ್ಭಧಾರಣೆಯ ಹಂತದಲ್ಲಿ ಸಂಭವಿಸುವ ಸಮಸ್ಯೆಗಳಲ್ಲಿ ಕೆಲವು. ಹೌದು, ಈ ಸಂದರ್ಭದಲ್ಲಿ ನೀವು ತ್ವಚೆಗೆ ಸಂಬಂಧಿಸಿದ ತೊಂದರೆಗಳನ್ನೂ ಅನುಭವಿಸಬೇಕಾಗಬಹುದು.
ಗರ್ಭಾವಸ್ಥೆಯಲ್ಲಿ ದೇಹದಲ್ಲಿ ದಿನದಿಂದ ದಿನಕ್ಕೆ ಹಲವಾರು ಬದಲಾವಣೆಗಳು ಉಂಟಾಗಬಹುದು. ವಿಶೇಷವಾಗಿ ಚರ್ಮ, ಕೂದಲು, ಉಗುರು ಇನ್ನಷ್ಟು ಹಾಳಾಗಬಹುದು. ಎಣ್ಣೆಯುಕ್ತ ಚರ್ಮದವರು, ಮೊಡವೆಯನ್ನು ಹೆಚ್ಚಾಗಿ ಪಡೆಯಬಹುದು. ಇದಕ್ಕೆ ಕಾರಣ ತೈಲ ಗ್ರಂಥಿಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತದೆ ಮತ್ತು ತೈಲ ಸ್ರವಿಸುವಿಕೆಯನ್ನು ಉಂಟುಮಾಡುವ ಪುರುಷ ಲೈಂಗಿಕ ಹಾರ್ಮೋನುಗಳು ಗರ್ಭಧಾರಣೆಯ ಸಮಯದಲ್ಲಿ ಹೆಚ್ಚುತ್ತದೆ.
ಅನೇಕ ಮಹಿಳೆಯರು ತಮ್ಮ ಮುಖದ ಮೇಲೆ ಕಪ್ಪು ಕಲೆ ತೇಪೆ/ ಗಳನ್ನು ಅನುಭವಿಸುತ್ತಾರೆ. ಗಾಢ ಕಲೆಗಳು, ಮೂಗಿನ ಸಮೀಪದ ಭಾಗ, ಮೇಲ್ದುಟಿಗಳ ಭಾಗ ಹೀಗೆ ಕೆನ್ನೆಯ ಮೂಳೆಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಆದರೆ ಸಾಮಾನ್ಯವಾಗಿ ಈ ಡಾರ್ಕ್ ಪ್ಯಾಚ್ ಗಳು ಗರ್ಭಾವಸ್ಥೆಯ ಕೆಲವು ತಿಂಗಳುಗಳ ನಂತರ ಕಣ್ಮರೆಯಾಗುತ್ತವೆ. ನಿಮ್ಮ ಚರ್ಮದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೊದಲು ನೀವು, ನಿಮ್ಮ ಮಗುವಿಗೆ ಜನ್ಮ ನೀಡುವ ಮೊದಲು ಮತ್ತು ನಂತರ ನಿಮ್ಮ ದೇಹದಲ್ಲಾಗುವ ಬದಲಾವಣೆಗೆ ಹೊಂದಿಕೊಳ್ಳಲು ಸಮಯ ನೀಡಬೇಕು.
ಸಿಸೇರಿಯನ್ ಪ್ರಸವದ ನಂತರ ಸೇವಿಸಬೇಕಾದ ಆಹಾರಗಳು
ಇಲ್ಲಿ ನಿಮ್ಮ ಸಮಸ್ಯೆಗಳಿಗೆ ಕೆಲವು ಉಪಾಯಗಳನ್ನು ಹೇಳಲಾಗಿದೆ :

ವ್ಯಾಯಾಮ:
ಪ್ರತಿದಿನ ವ್ಯಾಯಾಮ ಮಾಡಿ. ನೀವು ಗರ್ಭಿಣಿ ಎಂದ ಮಾತ್ರಕ್ಕೆ ನೀವು ಆಲಸ್ಯವನ್ನು ತೋರಬೇಕೆಂದಿಲ್ಲ. ವ್ಯಾಯಾಮ ಮಾಡುವಾಗ ಬೆವರು ಕಾಣಿಸಿಕೊಳ್ಳುತ್ತದೆ. ಇದು ನಿಮಗೆ ಅತ್ಯಗತ್ಯ.

ಆಹಾರ:
ಎಷ್ಟು ನೀವು ಮಸಾಲೆ ಆಹಾರ (ಖಾರದ ಆಹಾರ) ವನ್ನು ಬಿಡಬಹುದೇ ಅಷ್ಟೂ ನಿಮಗೆ ಒಳ್ಳೆಯದು. ಮಸಾಲೆ ಆಹಾರದಿಂದ ಆಗಾಗ್ಗೆ ಮೊಡವೆ ಸಂಭವಿಸಲು ಕಾರಣವಾಗಬಹುದು ಮತ್ತು ಆಸಿಡಿಟಿಗೂ ಕಾರಣವಾಗಬಹುದು.

ನೀರು:
ಸಾಧ್ಯವಾದಷ್ಟು ಹೆಚ್ಚು ನೀರನ್ನು ಕುಡಿಯಿರಿ. ರಕ್ತದ ಹರಿವು ಗರ್ಭಧಾರಣೆಯ ಅವಧಿಯಲ್ಲಿ ಅತ್ಯಂತ ವೇಗವಾಗಿರುತ್ತದೆ. ನೀರು ದೇಹದ ಅಂಗಗಳ ಕಾರ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಎಳೆನೀರು ದೇವರಿದ್ದಂತೆ! ನೀವು ಗರ್ಭಿಣಿ ಎಂದು ತಿಳಿದಂದಿನಿಂದ ದಿನವೂ ಎಳನೀರು ಸೇವಿಸಲು ಪ್ರಾರಂಭಿಸಿ. ಎಳೆನೀರು ನಿಮ್ಮ ದೇಹವನ್ನು ತಂಪಾಗಿಡಲು ಸಹಾಯ ಮಾಡುವ ಪೋಷಕಾಂಶಗಳನ್ನು ಹೊಂದಿದೆ. ಇದು ವಯಸ್ಸಾದ ಕಳೆಯನ್ನು ಹೋಗಲಾಡಿಸುವ ಪೋಷಕಾಂಶಗಳನ್ನೂ ಹೊಂದಿದೆ. ಎಳನೀರಿನ ತಂಪಾದ ದ್ರವ ಮೊಡವೆ ಸಂಭವಿಸುವಿಕೆಯನ್ನು ತಡೆಗಟ್ಟುವಲ್ಲಿ ನೆರವಾಗುತ್ತದೆ. ಎಳೆನೀರು ಭ್ರೂಣವನ್ನು ಬಲಪಡಿಸಲೂ ಸಹಾಯ ಮಾಡುತ್ತದೆ

ಮಾಸ್ಕ್ :
ರಾಸಾಯನಿಕ ಮಾಸ್ಕ್ ಗಳು ಅಥವಾ ಕ್ರೀಮ್, ನಿಮ್ಮ ರಕ್ತದ ನಾಳಗಳ ಪರಿಚಲನೆಗೆ ತೊಂದರೆಯನ್ನುಂಟು ಮಾಡಬಹುದು. ಇದು ಗರ್ಭಿಣಿಯಾದ ಸಂದರ್ಭದಲ್ಲಿ ದೇಹಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ. ಆದ್ದರಿಂದ ನೈಸರ್ಗಿಕ ವಸ್ತುಗಳನ್ನೇ ಬಳಸಿ. ಮುಖದಲ್ಲಿನ ಡಾರ್ಕ್ ಪೆಚಸ್ (ಗಾಢ ಕಲೆಗಳು) ನ್ನು ಕಡಿಮೆ ಮಾಡಲು ಬೇವಿನ ಪೇಸ್ಟ್ ಹಚ್ಚಿ.



Click it and Unblock the Notifications