Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಐಬಿಎಫ್ 13: ಗೌರವ್ ಗುಪ್ತ ಗ್ಲಾಮರ್ ಶೋ
ಐಬಿಎಫ್ 2013ರ ಎರಡನೇ ದಿನ ಗೌರವ್ ಗುಪ್ತರ ವಧುವಿನ ಸಂಗ್ರಹದ ಬಟ್ಟೆಗಳು ವೇದಿಕೆಯ ಮೇಲೆ ಮಿಂಚು ಹರಿಸಿದವು. ಸುಂದರ ವಸ್ತ್ರಗಳು, ಸಂಗೀತ ಮತ್ತು ಅಲೌಕಿಕ ವಿನ್ಯಾಸದಲ್ಲಿ ರೂಪಿಸಲಾಗಿದ್ದ ವೇದಿಕೆ ಗೌರವ್ ಗುಪ್ತಾರ ಶೋಗೆ ಮೆರುಗನ್ನು ತಂದುಕೊಟ್ಟವು.
ಗೌರವ ಗುಪ್ತ ಕೆಲವು ಸಂಕೀರ್ಣವಾದ ವಿನ್ಯಾಸವನ್ನು ತಮ್ಮ ಬಟ್ಟೆಗಳಲ್ಲಿ ಬಳಸಿದ್ದರು. ಇದರಲ್ಲಿ ಮಿನುಗುವ ಗೋಲ್ಡ್ ನಿಂದ ಗ್ರೇವರೆಗೆ ಹಲವು ಶೇಡ್‍ಗಳನ್ನು ನೋಡಬಹುದಿತ್ತು. ಇದರೊಂದಿಗೆ ಸಾಂಪ್ರದಾಯಿಕ ಬಣ್ಣಗಳಾದ ರೆಡ್ ನ್ಯೂಡ್, ಪಿಂಕ್ ಮತ್ತು ಕೋರಲ್ ಬಣ್ಣ ಈ ಸಂಗ್ರಹಕ್ಕೆ ಹೊಸ ಮೆರುಗನ್ನು ತಂದುಕೊಟ್ಟಿತು. ಈ ಸಂಗ್ರಹದಲ್ಲಿ ಗೌನ್‍ಗಳಿಂದ ಹಿಡಿದು ನಿರಿಗೆಗಳುಳ್ಳ ಸಿಲ್ಹೌಟ್ಟಿಸ್‍ವರೆಗೆ ವೈವಿಧ್ಯತೆಯನ್ನು ಕಾಣಬಹುದಿತ್ತು.
ಇವುಗಳಲ್ಲಿ ಎದ್ದುಕಾಣುತ್ತಿದ್ದುದು ಸಂಕೀರ್ಣವಾಗಿ ಬಳಸಿದ್ದ ನಿರಿಗೆಗಳ ರೀತಿ. ಇವುಗಳೊಂದಿಗೆ ಹೂವಿನ ಚಿತ್ತಾರಗಳನ್ನು ಕೂಡ ಬಳಸಲಾಗಿತ್ತು. ಲೇಸ್ ಅನ್ನು ಇದರಲ್ಲಿ ಹೆಚ್ಚಾಗಿ ಬಳಸಲಾಗಿತ್ತು. ಗೌರವ್‍ರ ವಧುವಿನ ಸಂಗ್ರಹದಲ್ಲಿ ಲೇಸ್ ವಿನ್ಯಾಸದ ಬಟ್ಟೆಗಳು ಹೆಚ್ಚಾಗಿ ಕಂಡುಬರುತಿತ್ತು. ಕಲ್ಕಿ ಕೊಯಿಚ್ಲಿನ್, ಅದಿತಿ ರಾವ್ ಹೈದಾರಿ, ಪ್ರಾಚಿ ದೇಸಾಯಿ ಮತ್ತು ಕಿರಣ್ ರಾವ್ ಗೌರವ್ ಗುಪ್ತರ ಸಂಗ್ರಹವನ್ನು ಪ್ರದರ್ಶಿಸಿದ ತಾರೆಗಳು.
ಗೌರವ್ ಗುಪ್ತ ಕಲೆಕ್ಷನ್‍ನ ಸಂಕ್ಷಿಪ್ತ ನೋಟ ಇಲ್ಲಿದೆ ನೋಡಿ:

1. ಅದಿತಿ ರಾವ್ ಹೈದರಿ
ಈ ನಟಿಗೆ ಗೌರವ್ ಗುಪ್ತ ವಿನ್ಯಾಸದ ಬಟ್ಟೆಗಳನ್ನು ತೊಡುವುದು ಬಹಳ ಇಷ್ಟ. ಬಿಳಿ ಬಣ್ಣದ ಲೋ ಹೆಮ್‍ಲೈನ್ ಡ್ರೆಸ್‍ನಲ್ಲಿ ಈಕೆ ಸುಂದರವಾಗಿ ಕಾಣುತ್ತಿದ್ದಳು.

2. ಪ್ರಾಚಿ ದೇಸಾಯಿ
ಪ್ರಾಚಿ ಬೆಳ್ಳಿ ಬಣ್ಣದ ವಸ್ತ್ರ ತೊಟ್ಟಿದ್ದಳು. ಇದರ ಎಡಭಾಗದಲ್ಲಿ ಚಿಕ್ಕ ಸ್ಲಿಟ್ ಇತ್ತು. ಇದರ ನೆಕ್‍ಲೈನ್‍ಗೆ ಚುಮ್ಕಿ ಕಸೂತಿಯನ್ನು ಮಾಡಲಾಗಿತ್ತು.

3. ಕಾಜಲ್ ಅಗರ್‍ವಾಲ್
ಕಾಜಲ್ ಅಗರ್‍ವಾಲ್ ಅರ್ಧತೋಳಿನ ಕೆಂಪು ಬಣ್ಣದ ಗೌನ್ ತೊಟ್ಟಿದ್ದಳು. ಇದರ ನಡುವಿಗೆ ಚಿನ್ನದ ಬಣ್ಣದ ಕಸೂತಿಯಿತ್ತು.

4. ಕಲ್ಕಿ ಕೊಯೆಚ್ಲಿನ್
ಕಲ್ಕಿ ನೇರಳೆ ಬಣ್ಣದ ಲೇಸ್ ಗೌನಿನಲ್ಲಿ ಮನೋಹಕವಾಗಿ ಕಾಣುತ್ತಿದ್ದಳು. ಕುತ್ತಿಗೆ ಮುಚ್ಚುವಂತಿದ್ದ ಶೀರ್ ಲೇಸ್ ವರ್ಕ್ ಈ ಬಟ್ಟೆಯ ಆಕರ್ಷಣೆಯಾಗಿತ್ತು.

5. ಕಿರಣ್ ರಾವ್
ಕಿರಣ್ ರಾವ್ ಲೊ ಹೆಮ್ ನಿಯಾನ್ ಆರೆಂಜ್ ಬಣ್ಣದ ಬ್ಲೌಸ್ ತೊಟ್ಟಿದ್ದಳು. ಇದಕ್ಕೆ ನಿಯಾನ್ ಯೆಲ್ಲೋ ಬಣ್ಣದ ನೆಕ್‍ಲೆನ್ ಇತ್ತು.

6. ಕ್ರಿಮಿ ವೈಟ್ ಲೇಸ್ ಲೆಹಂಗ
ಕ್ರೀಮಿ ವೈಟ್ ಲೆಹಂಗಾವನ್ನು ಲೇಸ್ ಬಳಸಿ ವಿನ್ಯಾಸಗೊಳಿಸಲಾಗಿತ್ತು. ಇದಕ್ಕೆ ಶೀರ್ ಬಂಧಗಾಲದ ಪೂರ್ತಿ ತೋಳಿನ ಬ್ಲಾಸ್ ಹಾಕಲಾಗಿತ್ತು. ಇದರಲ್ಲಿ ಕೂಡ ಲೇಸ್ ಪ್ರಧಾನವಾಗಿ ಕಾಣುತಿತ್ತು.

7.ಫ್ಲೋರಲ್ ಮೊಟಿಫ್ಸ್
ಕೆಲವು ವಸ್ತ್ರಗಳನ್ನು ಹೂವಿನ ಚಿತ್ತಾರಗಳನ್ನು ಬಳಸಿ ವಿನ್ಯಾಸಗೊಳಿಸಲಾಗಿತ್ತು. ನೋಡಲು ಕೂಡ ತುಂಬ ಸ್ಟೈಲಿಶ್ ಆಗಿತ್ತು.

8. ಹೆಡ್ ಬ್ಯಾಂಡ್ಸ್
ಮಾಡೆಲ್‍ಗಳು ತಮ್ಮ ವಧುವಿನ ವಸ್ತ್ರಗಳೊಂದಿಗೆ ಗೋಲ್ಡನ್ ಲೀಫ್ ಮತ್ತು ಹೂವಿನಾಕರಾದ ಹೆಡ್ ಬ್ಯಾಂಡ್‍ಗಳನ್ನು ಹಾಕಿಕೊಂಡು ಪ್ರದರ್ಶಿಸಿದರು.

9. ಶೀರ್
ಶೀರ್ ಬಳಸಿ ಮಾಡಿದ್ದ ಹಲವು ವಸ್ತ್ತಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದಿತ್ತು. ಇದು ಸ್ಟೈಲಿಶ್ ಲುಕ್ ಒಳಗೊಂಡಿತ್ತು.

10. ಶಿಮ್ಮರ್
ಶಿಮ್ಮರಿಂಗ್ ಗೋಲ್ಡನ್ ಮತ್ತು ಸಿಲ್ವರ್ ಬಣ್ಣಗಳು ವೇದಿಕೆಗೆ ರಂಗನ್ನು ತುಂಬಿದವು. ಈ ಬಟ್ಟೆಗಳು ಹೊಳೆಯುತ್ತಿದ್ದವು ಮತ್ತು ಬಟ್ಟೆಯ ಮೇಲೆ ಮತ್ತು ಬದಿಗಳಲ್ಲಿ ಶೀರ್ ಡಿಸೈನ್‍ಗಳನ್ನು ಒಳಗೊಂಡಿತ್ತು.

11. ಲೇಸ್ ಗೌನ್
ಸ್ಟ್ರಾಪ್ ಲೆಸ್ ಲೇಸ್ ಗೌನ್ ನೋಡಲು ಆಕರ್ಷಕವಾಗಿತ್ತು. ಇದನ್ನು ಲೇಸ್ ಮತ್ತು ದಾರದ ಕಸೂತಿಯೊಂದಿಗೆ ವಿನ್ಯಾಸಗೊಳಿಸಲಾಗಿತ್ತು.

12. ಗ್ರೇ
ತೊಡೆಗಳವರೆಗೆ ಸ್ಲಿಟ್ ಹೊಂದಿದ್ದ ಗ್ರೇ ಗೌನುಗಳು ವೇದಿಕೆಯ ಮೇಲೆ ಸೆಕ್ಸಿಯಾಗಿ ಕಾಣಿಸುತ್ತಿದ್ದವು.

13. ಹೆವಿ ಜಾಕೆಟ್
ಕಸೂತಿ ಮಾಡಿದ ಜಾಕೆಟ್‍ಗಳನ್ನು ನಿರಿಗೆಗಳಿದ್ದ ಗೌನುಗಳ ಮೇಲೆ ಹಾಕಿಕೊಂಡಿದ್ದರು. ಇವುಗಳ ಮೇಲೆ ಕಸೂತಿ ಮತ್ತು ಪ್ರಿಂಟ್‍ಗಳಿದ್ದವು.

14. ಬೋಲ್ಡ್ ಗೌನ್ಸ್
ಸಿಲ್ವರ್ ಮತ್ತು ಬ್ಲಾಕ್ ಗೌನುಗಳು ಬದಿಗಳಲ್ಲಿ ಶೀರ್‍ಗಳನ್ನು ಹೊಂದಿದ್ದವು.

15. ಡಿಸೈನರ್ ಜೊತೆಯಲ್ಲಿ
ಪ್ರಾಚಿ, ಅದಿತಿ ಮತ್ತು ಕಲ್ಕಿ ಗೌರವ್ ಗುಪ್ತ ಜೊತೆಯಲ್ಲಿ ಹೀಗೆ ಪ್ರದರ್ಶನದ ನಂತರ ಫೋಟೋಗೆ ಪೋಸ್ ನೀಡಿದರು.



Click it and Unblock the Notifications