Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೋಮಲವಾದ ಕೈಗಾಗಿ ಪಾಲಿಸಬೇಕಾದ 7 ನಿಯಮಗಳು
ನವ ಯೌವ್ವನ ಕಳೆಯುತ್ತಿದ್ದ ಹಾಗೆ ಸಾಮಾನ್ಯವಾಗಿ ಎಲ್ಲರಿಗೂ (ವಿಶೇಷವಾಗಿ ಮಹಿಳೆಯರಿಗೆ) ಸೌಂದರ್ಯದ ಬಗ್ಗೆ ಯೋಚನೆಗಳು ಆರಂಭವಾಗುತ್ತವೆ. ಜಗತ್ತಿನ ಯಾವುದೇ ಮೇಕಪ್ ಹಚ್ಚಿದರೂ, ಮರು ಯೌವ್ವನವನ್ನು ಪಡೆಯಲು ಎಷ್ಟೇ ಪ್ರಯತ್ನಪಟ್ಟರೂ ನಿಮ್ಮ ಕೈಗಳೇ ನಿಮ್ಮ ವಯಸ್ಸನ್ನು ಹೇಳಿ ಬಿಡುತ್ತವೆ! ಆದರೂ ನಿಮ್ಮ ಕಠಿಣ ಕೈಗಳನ್ನು ಮೃದುವನ್ನಾಗಿಸುವ ಉಪಾಯಗಳಿವೆ.
ವಯಸ್ಸಾಗುತ್ತಿದ್ದ ಹಾಗೆ ದೇಹ ಮೊದಲಿನ ಮೃದುತ್ವವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಆದ್ದರಿಂದ ತ್ವಚೆಯ ಬಗೆಗೆ ಹೆಚ್ಚಿನ ಗಮನವಹಿಸುವುದು ಬಹಳ ಮುಖ್ಯ.
ನಿಮ್ಮ ಕೈಗಳ ಮೃದುತ್ವವನ್ನು ಉಳಿಸಲು ಕೆಲವು ಕ್ರಮಗಳು:

1. ಗ್ಲೌಸ್ ಗಳು ನಿಮ್ಮ ಸ್ನೇಹಿತರಾಗಿರಲಿ: ವಾತಾವರಣದಲ್ಲಿ ತಾಪಮಾನ ಇಳಿಯುತ್ತಿದ್ದ ಹಾಗೆ ನಿಮ್ಮ ಬಳಿ ಸದಾ ಕೈ ಗ್ಲೌಸ್ ಗಳಿರಲಿ. ನಿಮಗೆ ಇದನ್ನು ಧರಿಸುವುದು ಬೇಡವೆನ್ನಿಸಬಹುದು. ಆದರೆ ಇವು ತಂಪಾದ ವಾತಾವರಣದಲ್ಲಿ ನಿಮ್ಮ ತ್ವಚೆ ಸುಕ್ಕುಗಟ್ಟುವುದನ್ನು, ಒರಟಾಗುವುದನ್ನು ತಪ್ಪಿಸುತ್ತದೆ.
ರಬ್ಬರ್ ಕೈ ಗ್ಲೌಸ್ (ಕೈಗವಚ) ಗಳನ್ನು ಧರಿಸದೆ ಮನೆ ಸ್ವಚ್ಛಮಾಡುವ ಕೆಲಸವನ್ನು ಮಾಡಬೇಡಿ. ಸ್ವಚ್ಛಮಾಡುವಾಗ ಬಳಸುವ ಉತ್ಪನ್ನಗಳು ನಿಮ್ಮ ತ್ವಚೆಯನ್ನು ಒರಟುಗೊಳಿಸುವುದು ಮಾತ್ರವಲ್ಲದೇ ತ್ವಚೆಯನ್ನು ಸುಡಬಹುದು! ಆದ್ದರಿಂದ ಸದಾ ಕೈಗವಚಗಳನ್ನು ಧರಿಸಿ ಕೆಲಸಮಾಡಿ.
2. ಹೈಡ್ರೇಶನ್:ನಿಮ್ಮ ತ್ವಚೆ ಸದಾ ಮೃದು ಹಾಗೂ ಉತ್ತಮವಾಗಿರಲು, ಹೈಡ್ರೇಶನ್ ತುಂಬಾ ಮುಖ್ಯ. ಆದ್ದರಿಂದಲೇ ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯಬೇಕು ಎಂದು ಹೇಳಲಾಗುತ್ತದೆ. ನಿಮಗೆ ಬಾಯಾರಿಕೆಯಾಗದಂತೆ ನೋಡಿಕೊಳ್ಳಿ. ದೇಹದಲ್ಲಿ ನೀರಿನ ಪ್ರಮಾಣ ಅಧಿಕವಾಗಿರಬೇಕು. ಇಡೀ ದಿನ ನಿಮ್ಮ ಬಳಿಯಲ್ಲಿ ಕುಡಿಯುವ ನೀರನ್ನು ಇಟ್ಟುಕೊಳ್ಳಿ. ದೇಹಕ್ಕೆ ಹೆಚ್ಚು ನೀರು ಸಿಕ್ಕಷ್ಟೂ ಒಳ್ಳೆಯದು.
3. ಮಾಯಿಶ್ಚರೈಸರ್:ದೇಹಕ್ಕೆ ಹೈಡ್ರೇಶನ್ ಎಷ್ಟು ಅಗತ್ಯವೋ ಹಾಗೆ ದೇಹದ ಹೊರಭಾಗಕ್ಕೆ ಮಾಯಿಶ್ಚರೈಸರ್ ಚಿಕಿತ್ಸೆ ಕೂಡ ಅಷ್ಟೇ ಮುಖ್ಯ. ಕೆಲವು ಮಹಿಳೆಯರು ಮಾಯಿಶ್ವರೈಸರ್ ಕ್ರೀಮ್ ಗಳನ್ನು ದಿನಕ್ಕೆ ಹಲವಾರು ಬಾರಿ ಹಚ್ಚುತ್ತಲೇ ಇರುತ್ತಾರೆ. ಇಂತಹ ಕ್ರೀಮ್ ಕ್ರೇಜ್ ಒಳ್ಳೆಯದಲ್ಲ. ದಿನದಲ್ಲಿ ಬೆಳಗ್ಗೆ ಹಾಗೂ ಸಾಯಂಕಾಲ ಕ್ರೀಮ್ ಗಳನ್ನು ಕೈಗಳಿಗೆ ಹಚ್ಚಿ. ಆದರೂ ಹೆಚ್ಚಾಗಿ ಮನೆಗೆಲಸ ಮಾಡಿದರೆ ತ್ವಚೆಗೆ ಮಾಯಿಶ್ಚರೈಸರ್ ಅಗತ್ಯವಿದ್ದರೆ ಹೆಚ್ಚು ಬಾರಿ ಕ್ರೀಮ್ ಬಳಸಬೇಕಾಗಬಹುದು. ಈ ವಿಷಯವನ್ನು ನಿರ್ಲಕ್ಷಿಸಬೇಡಿ.
4. ಬಿಸಿ ನೀರು ಬಳಸಬೇಡಿ:ಬಿಸಿ ನೀರು ತ್ವಚೆಯ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದಲ್ಲ. ಇದು ನಿಮ್ಮ ತ್ವಚೆಯನ್ನು ಒರಟು ಮಾಡುತ್ತದೆ ಹಾಗೂ ಕೈಗಳ ತ್ವಚೆ ಒಣಗಿ ಬಿರುಕುಬಿಡುವ ಸಾಧ್ಯತೆಗಳಿರುತ್ತವೆ.
ನಿಮ್ಮ ಕೈಗಳನ್ನು ಅಧಿಕ ಬಿಸಿ ನೀರನ್ನು ಬಳಸದೆ ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ. ಬಿಸಿ ನೀರಿನೊಂದಿಗೆ ಒರಟು ಸೋಪ್ ಗಳನ್ನು ಬಳಸುವುದರಿಂದಲೂ ಕೂಡ ನಿಮ್ಮ ತ್ವಚೆ ಹಾಳಾಗಬಹುದು. ನಂತರ ತ್ವಚೆಯ ಮೃದುತ್ವವನ್ನು ಪಡೆಯಲು ವಿಶೇಷ ಕಾಳಜಿ ಮಾಡಬೇಕಾಗುತ್ತದೆ.
5. ಉತ್ತಮ ಸೋಪ್ ಆಯ್ಕೆ ಮಾಡಿ: ನಿಮ್ಮ ತ್ವಚೆಯು ಮೃದುತ್ವವನ್ನು ಕಳೆದುಕೊಳ್ಳುವಲ್ಲಿ ಪ್ರಪ್ರಥಮ ಕಾರಣ ನೀವು ಬಳಸುವ ಸೋಪ್ ಗಳು! ಆದ್ದರಿಂದ ನಿಮ್ಮ ತ್ವಚೆಗೆ ಸರಿಹೊಂದುವಂತಹ ಸೋಪ್ ಆಯ್ಕೆ ಮಾಡುವುದು ಅತ್ಯಂತ ಮುಖ್ಯ. ಒಮ್ಮೆ ನೀವು ಬಳಸಿದ ಸೋಪ್ ನಿಮ್ಮ ತ್ವಚೆಗೆ ಸರಿಹೊಂದಿದರೆ ಅದೇ ಸೋಪನ್ನೇ ಬಳಸಿ. ಮತ್ತೆ ಮತ್ತೆ ಸೋಪ್ ಬದಲಾಯಿಸಬೇಡಿ. ನೀವು ಕೊಂಡುಕೊಳ್ಳುವ ಸೋಪ್ ಮಾಯಿಶ್ವರೈಸರ್ ಅಥವಾ ಮೃದು ತ್ವಚೆಗೆ ಸಹಾಯಕಾರಿಯೇ ಎಂಬುದನ್ನು ಗಮನಿಸಿ.
6. ವ್ಯಾಕ್ಸ್: ನಿಮ್ಮ ಮಾಯಿಶ್ಚರೈಸರ್ ಸರಿಯಾಗಿ ಕೆಲಸ ಮಾಡುವುದಿಲ್ಲವಾದರೆ ಕೈಗಳಿಗೆ ಸರಳ ಪ್ಯಾಕ್ಸ್ ಮಾಡಿ. ಇದಕ್ಕೆ ನಿಮ್ಮ ತ್ವಚೆಗೆ ಸರಿಯಾಗುವಂತಹ ಉತ್ಪನ್ನಗಳನ್ನೇ ಬಳಸಿ. ರಾತ್ರಿ ಮಲಗುವ ಮುನ್ನ ಕೈಗಳಿಗೆ ಪ್ಯಾಕ್ಸ್ ಮಾಡಿ ಗ್ಲೌಸ್ ಧರಿಸಿ ಮಲಗಿ. ಬೆಳಿಗ್ಗೆ ಎದ್ದಾಗ ನಿಮ್ಮ ತ್ಚಚೆ ಮೃದು ಹಾಗೂ ಕೋಮಲವಾಗಿರುತ್ತದೆ.
7. ಸನ್ ಸ್ಕ್ರೀನ್: ನಮಗೆ ಸನ್ ಸ್ಕ್ರೀನ್ ಬಳಸುವ ಪ್ರಾಮುಖ್ಯತೆ ಗೊತ್ತು. ಆದರೂ ಸಾಕಷ್ಟು ಜನ ಸನ್ ಸ್ಕ್ರೀನ್ ಗಳನ್ನು ಕೈಗಳಿಗೆ ಹಚ್ಚುವುದಿಲ್ಲ. ಯಾಕೆಂದರೆ ಸನ್ ಸ್ಕ್ರೀನ್ ಗಳು ಎಣ್ಣೆಯುಕ್ತ ಮತ್ತು ಜಿಗುಟಾಗಿರುತ್ತವೆ ಹಾಗೂ ಅದನ್ನು ಕೈಗಳಿಗೆ ಹಚ್ಚಿದರೂ ತಕ್ಷಣ ತೊಳೆಯುತ್ತೇವೆ. ಇದು ಸರಿಯಾದ ವಿಧಾನವಲ್ಲ.
ಬಿಸಿಲಿಗೆ ತ್ವಚೆ ಒಣಗುತ್ತದೆ. ಆದರೆ ಬಿಸಿಲಿನಿಂದ ಕೈಗಳನ್ನೂ ರಕ್ಷಿಸುವುದು ಬಹಳ ಮುಖ್ಯ. ಆದ್ದರಿಂದ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಗಳನ್ನು ಕೈಗಳಿಗೂ ಬಳಸಿ. ಕೈಗಳ ರಕ್ಷಣೆ ಮಾಡುವುದನ್ನು ಮರೆಯಬೇಡಿ.
ಹಾಗಾದರೆ ಈ ಮೇಲಿನ ವಿಧಾನಗಳ ಮೂಲಕ ನಿಮ್ಮಕೈ ತ್ವಚೆಯ ಕೋಮಲತೆಯನ್ನು ಮರಳಿಪಡೆಯುವಿರಿ ತಾನೆ? ತ್ವಚೆಯ ಮೃದುತ್ವದ ಬಗ್ಗೆ ಇಂತಹ ಯಾವುದೇ ಟಿಪ್ಸ್ ಅಥವಾ ನಿಮ್ಮ ಸ್ವಂತ ಅನುಭವಗಳು ನಿಮ್ಮಲ್ಲೂ ಇದ್ದರೆ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ !



Click it and Unblock the Notifications