Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜನ್ಮ ದಿನಾಂಕವೇ ಹೇಳುತ್ತೆ.. ನಿಮ್ಮ ಲಕ್ಕಿ ಕಲರ್ ಯಾವುದು ಅಂತ! ಇಲ್ಲಿದೆ ಮಾಹಿತಿ
ನಿಮ್ಮ ಲಕ್ಕಿ ಕಲರ್ ಇದು! ನಿಮ್ಮ ಜನ್ಮ ದಿನಾಂಕವೇ ಹೇಳುತ್ತೆ ನಿಮ್ಮ ಅದೃಷ್ಟದ ಬಣ್ಣ ಯಾವುದು ಅಂತ. ನಿಮ್ಮ ಜನ್ಮದಿನಾಂಕದ ಪ್ರಕಾರ, ಯಾವ ಬಣ್ಣವನ್ನು ಧರಿಸಿದ್ರೆ ನಿಮ್ಮ ಅದೃಷ್ಟ ಖುಲಾಯಿಸುತ್ತೆ ಗೊತ್ತಾ? ಸಂಖ್ಯಾಶಾಸ್ತ್ರದಲ್ಲಿ, ಪ್ರತಿಯೊಂದು ಬಣ್ಣವೂ ಒಂದು ಸಂಖ್ಯೆ, ಒಂದು ಗ್ರಹ ಹಾಗೂ ನಮ್ಮ ದೇಹದಲ್ಲಿನ ಚಕ್ರಗಳೊಂದಿಗೆ ವಿಶಿಷ್ಟ ಸಂಬಂಧವನ್ನು ಹೊಂದಿದೆ. ಪ್ರತಿಯೊಂದು ಸಂಖ್ಯೆ, ಗ್ರಹ ಮತ್ತು ಚಕ್ರಕ್ಕೆ ಅದರದೇ ಆದ ವಿಶಿಷ್ಟ ಬಣ್ಣವಿದೆ. ನಿಮ್ಮ ಜನ್ಮ ದಿನಾಂಕದ (Birth Date) ಪ್ರಕಾರ, ನಿಮ್ಮ ಅದೃಷ್ಟದ ಬಣ್ಣ (Lucky Color) ಯಾವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಜ್ಯೋತಿಷ್ಯದ ಪ್ರಕಾರ, ಜನ್ಮ ದಿನಾಂಕದಲ್ಲಿ ಕೆಲವು ಸಂಖ್ಯೆಗಳ ಕೊರತೆಯಿದ್ದಾಗ ಅಥವಾ ದೇಹದಲ್ಲಿ ಚಕ್ರಗಳು ದುರ್ಬಲಗೊಂಡಾಗ, ಬಣ್ಣ ಚಿಕಿತ್ಸೆಯನ್ನು ಬಳಸಲಾಗುತ್ತದೆ. ಬಣ್ಣ ಚಿಕಿತ್ಸೆಯು ಒಂದು ಪ್ರಬಲವಾದ ವಿಧಾನವಾಗಿದ್ದು, ಇದನ್ನು ಜೀವನದಲ್ಲಿ ಅದೃಷ್ಟವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಈ ಚಿಕಿತ್ಸೆಯು ಸಮಸ್ಯೆಗೆ ಸಂಬಂಧಿಸಿದ ಗ್ರಹದ ಬಣ್ಣವನ್ನು ಬಳಸಿಕೊಂಡು ಚಕ್ರಗಳನ್ನು ಬಲಪಡಿಸುತ್ತದೆ. ಆದ್ದರಿಂದ ನಿಮ್ಮ ಜನ್ಮ ದಿನಾಂಕದ ಪ್ರಕಾರ, ನಿಮ್ಮ ಅದೃಷ್ಟದ ಬಣ್ಣ ಯಾವುದು (Lucky Color According To Birth Date) ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ.

ಅದೃಷ್ಟ ಸಂಖ್ಯೆ 1
ಸಂಖ್ಯೆ 1 (ಮೂಲಾಂಕ 2) ಅನ್ನು ಹೊಂದಿರುವ ಜನರು ಸೂರ್ಯ ಗ್ರಹದ ಪ್ರಭಾವವನ್ನು ಹೊಂದಿರುತ್ತಾರೆ. ಇವರಿಗೆ ಗೋಲ್ಡ್ (ಚಿನ್ನ), ಹಳದಿ ಮತ್ತು ಕಿತ್ತಳೆ ಬಣ್ಣಗಳು ಅದೃಷ್ಟವನ್ನು ತರುತ್ತವೆ. ಈ ಬಣ್ಣಗಳನ್ನು ಬಳಸುವುದರಿಂದ ಸೂರ್ಯ ಗ್ರಹದ ಶಕ್ತಿ ಹೆಚ್ಚುತ್ತದೆ.
ಅದೃಷ್ಟ ಸಂಖ್ಯೆ 2
ಮೂಲಾಂಕ 2ರ ಅಡಿಯಲ್ಲಿ ಬರುವವರಿಗೆ ಬಿಳಿ, ಕ್ರೀಮ್ (ತಿಳಿ ಹಳದಿ) ಮತ್ತು ಬೆಳ್ಳಿ ಬಣ್ಣಗಳು ಅತ್ಯಂತ ಶುಭಕರ. ಈ ಬಣ್ಣಗಳನ್ನು ದೈನಂದಿನ ಜೀವನದಲ್ಲಿ ಬಳಸುವುದರಿಂದ ಚಂದ್ರನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಅದೃಷ್ಟ ಸಂಖ್ಯೆ 3
ಸಂಖ್ಯೆ 3 ಅನ್ನು ಹೊಂದಿರುವ ವ್ಯಕ್ತಿಯು ಹಳದಿ, ನೇರಳೆ ಮತ್ತು ರಸ್ಟ್ (ಕೆಂಪು ಮತ್ತು ಕಿತ್ತಳೆ ಮಿಶ್ರಿತ) ಬಣ್ಣಗಳನ್ನು ಬಳಸಬಹುದು. ಈ ಬಣ್ಣಗಳು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತವೆ.
ಅದೃಷ್ಟ ಸಂಖ್ಯೆ 4
ಸಂಖ್ಯೆ 4ಕ್ಕೆ ಸೇರಿದ ಜನರಿಗೆ ನೀಲಿ, ಬೂದು ಮತ್ತು ಕಡಲ ಹಸಿರು ಬಣ್ಣಗಳು ಸೂಕ್ತ. ಈ ಬಣ್ಣಗಳನ್ನು ವಸ್ತ್ರ ಅಥವಾ ಉಡುಪುಗಳಲ್ಲಿ ಬಳಸುವುದರಿಂದ ರಾಹು ಗ್ರಹದ ಶಕ್ತಿಯನ್ನು ಬಲಪಡಿಸಿ, ಜೀವನವನ್ನು ಉತ್ತಮಗೊಳಿಸಬಹುದು.
ಅದೃಷ್ಟ ಸಂಖ್ಯೆ 5
ಮೂಲಾಂಕ 5 ಅನ್ನು ಹೊಂದಿರುವ ಜನರಿಗೆ ಬುಧ ಗ್ರಹದ ಪ್ರಭಾವವಿದೆ. ಇವರು ಹಸಿರು, ಬೆಳ್ಳಿ ಮತ್ತು ಬಿಳಿ ಬಣ್ಣಗಳನ್ನು ಬಳಸಬಹುದು.
ಅದೃಷ್ಟ ಸಂಖ್ಯೆ 6
ಸಂಖ್ಯೆ 6ಕ್ಕೆ ಸೇರಿದವರು ನೀಲಿ, ಗುಲಾಬಿ ಮತ್ತು ಬಿಳಿ ಬಣ್ಣಗಳನ್ನು ಬಳಸಬೇಕು. ಈ ಮೂಲಕ ತಮ್ಮ ದೈನಂದಿನ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಬಹುದು.
ಅದೃಷ್ಟ ಸಂಖ್ಯೆ 7
ಮೂಲಾಂಕ 7ರ ಜನರಿಗೆ ಕೇತು ಗ್ರಹದ ಪ್ರಭಾವವಿದೆ. ಇವರು ಹಸಿರು, ಬಿಳಿ ಮತ್ತು ಹಳದಿ ಬಣ್ಣಗಳನ್ನು ಬಳಸಬಹುದು. ಈ ಮೂಲಕ ತಮ್ಮ ದೈನಂದಿನ ಜೀವನದಲ್ಲಿ ಶುಭ ಫಲ ಪಡೆಯಬಹುದು.
ಅದೃಷ್ಟ ಸಂಖ್ಯೆ 8
ಸಂಖ್ಯೆ 8 ಅನ್ನು ಹೊಂದಿರುವ ವ್ಯಕ್ತಿಗೆ ಶನಿ ಗ್ರಹ ಅಧಿಪತಿ. ಶನಿ ಪ್ರಭಾವಕ್ಕೆ ಒಳಗಾದವರು ನೀಲಿ, ಕಪ್ಪು ಮತ್ತು ನೇರಳೆ ಬಣ್ಣಗಳನ್ನು ಬಳಸಬಹುದು. ಇದರಿಂದ ಜೀವನದಲ್ಲಿ ಶಾಂತಿಯನ್ನು ಮತ್ತು ಸಂತೋಷವನ್ನು ಕಾಣಬಹುದು.
ಅದೃಷ್ಟ ಸಂಖ್ಯೆ 9
ಸಂಖ್ಯೆ 9 ಅನ್ನು ಹೊಂದಿರುವ ಜನರು ಮಂಗಳ ಗ್ರಹದೊಂದಿಗೆ ಸಂಬಂಧ ಹೊಂದಿದ್ದಾರೆ. ಇವರು ಕೆಂಗಂದು, ಕೆಂಪು ಮತ್ತು ಗುಲಾಬಿ ಬಣ್ಣಗಳನ್ನು ಬಳಸಬಹುದು. ಈ ಮೂಲಕ ತಮ್ಮ ದೈನಂದಿನ ಜೀವನದಲ್ಲಿ ಮಂಗಳ ಗ್ರಹಕ್ಕೆ ಶಕ್ತಿ ತುಂಬಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು, ಜ್ಯೋತಿಷ್ಯ, ವಾಸ್ತು, ಪಂಚಾಂಗ, ಧಾರ್ಮಿಕ ಗ್ರಂಥಗಳು ಇತ್ಯಾದಿಗಳ ಆಧರಿಸಿದೆ. ಈ ಮಾಹಿತಿ ಮತ್ತು ಸಂಗತಿಗಳ ನಿಖರತೆ, ಸಂಪೂರ್ಣತೆಗೆ ಬೋಲ್ಡ್ ಸ್ಕೈ ಕನ್ನಡ ಜವಾಬ್ದಾರಿಯಲ್ಲ. ಈ ಮೇಲಿನ ಯಾವುದೇ ವಿಷಯವನ್ನು ಅನುಸರಿಸುವ ಮೊದಲು ನಿರ್ದಿಷ್ಟ ಅಥವಾ ಸೂಕ್ತ ತಜ್ಞರ ಭೇಟಿಗೆ ಸಲಹೆ ನೀಡಲಾಗುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications













