Latest Updates
-
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
Yearly Horoscope 2026: ಈ ವರ್ಷ 12 ರಾಶಿಗಳಿಗೆ ಹೇಗಿರಲಿದೆ? ಯಾರಿಗೆ ಲಾಭ, ಯಾರಲ್ಲಿ ಅಶುಭ?
ಹೊಸ ವರ್ಷ ಆರಂಭಗೊಂಡಿದೆ. ಹೀಗಾಗಿ ನಿಮ್ಮಲ್ಲ ಹೊಸತನ, ಉಲ್ಲಾಸ, ಹೊಸ ಭರವಸೆ, ಕನಸುಗಳನ್ನು ಹೊತ್ತು ಈ ವರ್ಷ ಕೂಡ ಶುಭ ಕೆಲಸಗಳ ಮಾಡಲು ನೀವು ಮುಂದಾಗುತ್ತಿರಬಹುದು. ಹಾಗೆ ಈ ವರ್ಷ ನಿಮ್ಮ ಗ್ರಹಗತಿಗಳಲ್ಲಿನ ಬದಲಾವಣೆಗಳು ಎಲ್ಲಾ ರೀತಿಯಲ್ಲೂ ಶುಭ ಹಾಗೂ ಅಶುಭ ಪ್ರಭಾವಗಳಿಗೆ ಕಾರಣವಾಗಬಹುದು. ಹಾಗೆ 2026ರಲ್ಲಿ ಎಲ್ಲಾ 12 ರಾಶಿಗಳಲ್ಲಿ ಯಾವೆಲ್ಲಾ ಶುಭ ಹಾಗೂ ಅಶುಭ ಯೋಗಗಳಿವೆ ಎಂಬುದನ್ನು ತಿಳಿದುಕೊಳ್ಳಲು ಎಲ್ಲರಲ್ಲೂ ಕುತೂಹಲವಂತು ಇದ್ದೇ ಇರಲಿದೆ.
ಸರಳವಾಗಿ ಹೇಳುವುದಾದರೆ ಸರಿಯಾದ ಸಮಯ ಯಾವಾಗ ಮತ್ತು ದುರ್ಬಲ ಹಂತ ಯಾವಾಗ? ನಿಮ್ಮ ಗುರಿಗಳಿಗೆ ಹತ್ತಿರವಾಗಲು ನೀವು ಯಾವಾಗ ಕ್ರಮ ತೆಗೆದುಕೊಳ್ಳಬೇಕು? ಹಾಗೆ ಮುಂಬರುವ ದಿನಗಳಲ್ಲಿ ನಿಮಗೆ ಯಾವ ರೀತಿ ಫಲಗಳಿವೆ ಎಂಬುದನ್ನು ತಿಳಿಯಲು ನಾವಿಂದು 12 ರಾಶಿಗಳ ವಾರ್ಷಿಕ ಭವಿಷ್ಯವನ್ನು ಇಲ್ಲಿ ತಿಳಿದುಕೊಳ್ಳೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ 2026ನೇ ವರ್ಷ ಬಹಳ ಅನುಕೂಲ ಹಾಗೂ ಮತ್ತಷ್ಟು ಶುಭ ತರುವಂತಹ ಸಮಯ ಆಗಿರಲಿದೆ. ವರ್ಷದ ಆರಂಭದಲ್ಲಿ, ಸೂರ್ಯನು ಬುಧ, ಶುಕ್ರ ಮತ್ತು ಮಂಗಳರೊಂದಿಗೆ ಧನು ರಾಶಿಯಲ್ಲಿ ಇರುತ್ತಾನೆ. ಹಾಗಾದ್ರೆ ಮೇಷ ರಾಶಿಯ ವಾರ್ಷಿಕ ಭವಿಷ್ಯ ತಿಳಿದುಕೊಳ್ಳಿ.
ವೃಷಭ ರಾಶಿ
2026ರ ಆರಂಭದಲ್ಲಿ ನಾವಿಂದು ವೃಷಭ ರಾಶಿ ಅವರ ಆರೋಗ್ಯ, ಹಣಕಾಸು, ದಾಂಪತ್ಯ, ವ್ಯವಹಾರ, ವ್ಯಾಪಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅವರ ಗ್ರಹಗತಿಗಳು ಏನು ಹೇಳುತ್ತವೆ ಅನ್ನೋದನ್ನು ತಿಳಿದುಕೊಳ್ಳೋಣ.
ಮಿಥುನ ರಾಶಿ
2026ರಲ್ಲಿ ಹಲವು ರೀತಿಯ ಗ್ರಹಗತಿಗಳ ಬದಲಾವಣೆ ಮಿಥುನ ರಾಶಿಯವರಿಗೆ ಶುಭ ಹಾಗೂ ಅಶುಭ ಯೋಗಗಳ ಉಂಟು ಮಾಡುತ್ತಿದೆ. 2026ರಲ್ಲಿ ನೀವು ಹಲವು ರೀತಿಯ ಶುಭಯೋಗಗಳ ನೀಡಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ 2026ರ ಸಮಯದಲ್ಲಿ ಗುರುವು ಜೂನ್ ನಿಂದ ಅಕ್ಟೋಬರ್ ವರೆಗೆ ಚಲಿಸುತ್ತಾನೆ. ಆದರೆ ರಾಹು ವರ್ಷವಿಡೀ ಎಂಟನೇ ಮನೆಯಲ್ಲಿರುತ್ತಾನೆ. ಹಾಗಾದ್ರೆ ಈ ವರ್ಷ ಕರ್ಕ ರಾಶಿಯವರಿಗೆ ಯಾವ ರೀತಿಯ ಫಲವಿದೆ ಎಂಬುದನ್ನು ತಿಳಿದುಕೊಳ್ಳಿ.
ಸಿಂಹ ರಾಶಿ
ಸೂರ್ಯನ ಆಡಳಿತವಿರುವ ಸಿಂಹ ರಾಶಿಯ ಜನರಿಗೆ 2026ರಲ್ಲಿನ ಹಲವು ಗ್ರಹಗತಿಗಳ ಬದಲಾವಣೆಯು ಹಲವು ರೀತಿಯ ಶುಭ ಯೋಗಗಳನ್ನು ತರಲಿದೆ. ನಿಮ್ಮ ಆರ್ಥಿಕ ಸ್ಥಿತಿ, ಆರೋಗ್ಯ, ವ್ಯಕ್ತಿತ್ವ, ಆತ್ಮವಿಶ್ವಾಸ, ಸಾಮರ್ಥ್ಯ, ಆಲೋಚನೆಗಳು ಈ ಸಮಯದಲ್ಲಿ ಧನಾತ್ಮಕವಾಗಿ ಬದಲಾಗುತ್ತವೆ.
ಕನ್ಯಾ ರಾಶಿ
2026ರಲ್ಲಿ ಕನ್ಯಾ ರಾಶಿಯವರು ಹಲವು ಕೆಲಸಗಳಲ್ಲಿ ಶುಭ ನೋಡುವರು. ಮಾನಸಿಕ ಸ್ಥಿತಿ, ನೈತಿಕತೆ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯದಲ್ಲಿ ಕಳೆದ ವರ್ಷಕ್ಕಿಂತ ಉತ್ತಮವಾಗಿರುತ್ತದೆ. ಆರೋಗ್ಯವು ಶುಭಕರವೆಂದು ಸಾಬೀತುಪಡಿಸುತ್ತದೆ. ನಿಮ್ಮ ಸಂಪೂರ್ಣ ಭವಿಷ್ಯ ಇಲ್ಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ 2026 ರ ವರ್ಷವು ಅವರ ವೃತ್ತಿ ಮತ್ತು ವ್ಯವಹಾರಗಳಲ್ಲಿ ಸ್ಥಿರತೆ ಮತ್ತು ಬೆಳವಣಿಗೆಯನ್ನು ತರಲಿದೆ. ವಿವಾಹ ಸಂಬಂಧಿ ವಿಚಾರ, ಮನೆ ನಿರ್ಮಾಣ, ತಂದೆ ತಾಯಿಯ ಹಾಗೂ ಸಂಬಂಧಿಕರ ವಿಚಾರ ವ್ಯಾಪಾರ ಹಾಗು ವ್ಯವಹಾರ ಸಂಬಂಧಿತ ವಿಚಾರಗಳಲ್ಲಿ ಯಾವ ರೀತಿಯಾಗಿ ಮಿಶ್ರಫಲವಿದೆ ಎಂಬುದನ್ನು ತಿಳಿದುಕೊಳ್ಳೋಣ.
ವೃಶ್ಚಿಕ ರಾಶಿ
2026ರಲ್ಲಿ ವೃಶ್ಚಿಕ ರಾಶಿಯವರಿಗೆ ಹಲವು ರೀತಿಯಲ್ಲಿ ಶುಭ ಹಾಗೂ ಅಶುಭ ಯೋಗಗಳು ಇರುವುದು ಸಹ ನೋಡಬಹುದು. ನಿಮ್ಮ ಗ್ರಹಗತಿಗಳ ಆಧಾರದ ಮೇಲೆ ಈ ವರ್ಷ ನಿಮ್ಮ ರಾಶಿಯಲ್ಲಿ ಯಾವ ರೀತಿ ಫಲಗಳಿವೆ ಎಂಬುದನ್ನು ಹೇಳಬಹುದು.
ಧನು ರಾಶಿ
ಧನು ರಾಶಿಯ ವಾರ್ಷಿಕ ಭವಿಷ್ಯ 2026 ರ ಪ್ರಕಾರ, ಈ ವರ್ಷ ಧನು ರಾಶಿಯವರು ಶನಿ ಧೈಯಾದ ಪ್ರಭಾವಕ್ಕೊಳಪಡಲಿದ್ದಾರೆ. ಆದಾರೂ, ವರ್ಷದ ಆರಂಭದಲ್ಲಿ ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಗುರು ಸಂಚಾರ ಮಾಡುವುದರಿಂದ ಶನಿಯ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಕರ ರಾಶಿ
2026ರಲ್ಲಿ ಮಕರ ರಾಶಿ ಜನರಲ್ಲಿ ಹಲವು ರೀತಿಯ ಲಾಭಗಳಿವೆ. ಮಹತ್ವಾಕಾಂಕ್ಷೆ, ಅವಕಾಶ ಮತ್ತು ಆತ್ಮವಿಶ್ವಾಸದ ವರ್ಷವಾಗಿದೆ. ಶನಿಯು ನಿಮಗೆ ಸ್ಥಿರತೆ ಮತ್ತು ತಾಳ್ಮೆಯನ್ನು ಒದಗಿಸುವ ಸಮಯ ಇದು, ಆದರೆ ಗುರುವು ಹೊಸ ಅವಕಾಶಗಳ ರೂಪದಲ್ಲಿ ನಿಮ್ಮ ಮಹತ್ವಾಕಾಂಕ್ಷೆಗಳನ್ನು ನನಸಾಗಿಸಬಹುದು.
ಕುಂಭ ರಾಶಿ
2026ರಲ್ಲಿ ಕುಂಭ ರಾಶಿ ಜನರಿಗೆ ಶುಭ ಹಾಗೂ ಅಶುಭ ಯೋಗಗಳಿವೆ. ಈ ವರ್ಷ ಪ್ರಯೋಜನಕಾರಿ ಸಮಯವಾಗಿರುತ್ತದೆ, ಆದರೆ ಹೊಸ ಸವಾಲುಗಳಿಂದ ಕೂಡಿರಲಿದೆ. ಕುಂಭ ರಾಶಿಯವರು ಆರ್ಥಿಕವಾಗಿ, ವ್ಯಾಪಾರ, ವ್ಯವಹಾರ, ಆದಾಯ, ಆಪ್ತ ಸಂಬಂಧಗಳು, ಹೂಡಿಕೆ ಸೇರಿದಂತೆ ಹಲವು ವಿಚಾರದಲ್ಲಿ ಯಾವೆಲ್ಲಾ ರೀತಿಯ ಲಾಭಗಳಿವೆ ಅನ್ನೋದನ್ನು ನಾವು ತಿಳಿದುಕೊಳ್ಳೋಣ.
ಮೀನ ರಾಶಿ
2026ರಲ್ಲಿ ಮೀನ ರಾಶಿ ಜನರಿಗೆ ಅನುಕೂಲಕರ ವಿದ್ಯಮಾನಗಳು, ಆರಂಭಗಳು, ಯೋಗಗಳು ಅದಷ್ಟ ತರಲಿದೆ. ಶನಿಯು ವರ್ಷವಿಡೀ ನಿಮ್ಮ ಜಾತಕದ ಮೊದಲ ಮನೆಯಲ್ಲಿರುತ್ತಾನೆ. ಆದ್ದರಿಂದ ಕೆಲವೊಂದು ಕೆಲಸಗಳಲ್ಲಿ ಅಡ್ಡಿಗಳನ್ನು ಕೂಡ ನೀವು ನೋಡಬಹುದು.



Click it and Unblock the Notifications











