Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Year Ender 2025: ಈ ವರ್ಷ 7 ರಾಶಿ, 14 ನಕ್ಷತ್ರಗಳಲ್ಲಿ ಮಂಗಳ ಸಂಚಾರ! ಎಲ್ಲಾ 12 ರಾಶಿಗಳಿಗೆ ಏನು ಲಾಭ?
2025ರ ವರ್ಷಾಂತ್ಯ ವಿಶೇಷ! ಮಂಗಳ ಗ್ರಹ 7 ಬಾರಿ ರಾಶಿ ಬದಲಾವಣೆ, 14 ಬಾರಿ ನಕ್ಷತ್ರ ಗೋಚಾರ. ನಿಮ್ಮ ರಾಶಿಗೆ ಏನಾಯ್ತು? ಎಲ್ಲಾ 12 ರಾಶಿಗಳ ಮೇಲೆ ಪರಿಣಾಮಗಳು ಇಲ್ಲಿವೆ. ಹೌದು, ಜ್ಯೋತಿಷ್ಯ ಲೋಕದಲ್ಲಿ ನವಗ್ರಹಗಳಿಗೆ ಮಹತ್ವದ ಸ್ಥಾನವಿದೆ. ಇವುಗಳಲ್ಲಿ ಕ್ರಿಯೆ, ಶಕ್ತಿ ಮತ್ತು ಧೈರ್ಯದ ಸಂಕೇತವಾದ ಮಂಗಳ ಗ್ರಹ ತನ್ನ ಗೋಚಾರದಿಂದ ಪ್ರಮುಖ ಪರಿಣಾಮಗಳನ್ನು ಬೀರುತ್ತದೆ.
ಈ ಲೇಖನದಲ್ಲಿ ಮಂಗಳ ಗ್ರಹದ ಸಂಚಾರ (mangal gochar), ರಾಶಿ ಮತ್ತು ನಕ್ಷತ್ರ ಬದಲಾವಣೆಗಳ ಸಂಪೂರ್ಣ ಮಾಹಿತಿ ನೀಡಲಾಗಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಮಂಗಳ ಗ್ರಹವು ಶೌರ್ಯ, ಪರಾಕ್ರಮ, ಭೂಮಿ, ಶಸ್ತ್ರಾಸ್ತ್ರ, ಸಹೋದರರು, ಸೇನೆ ಮತ್ತು ಪೋಲೀಸ್ ವಿಭಾಗಗಳನ್ನು ಪ್ರತಿನಿಧಿಸುತ್ತದೆ. ಶಕ್ತಿ, ಚುರುಕುತನ, ನಿರ್ಧಾರ ಸಾಮರ್ಥ್ಯ ಅಗತ್ಯವಿರುವ ಎಲ್ಲ ಕ್ಷೇತ್ರಗಳ ಮೇಲೆ ಇದರ ಪ್ರಭಾವವಿರುತ್ತದೆ.

ಮಂಗಳ ಗ್ರಹವು (mars transit 2025) ಸುಮಾರು 45 ದಿನಗಳಿಗೊಮ್ಮೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುತ್ತದೆ. ಹೀಗಾಗಿ ಒಂದೇ ರಾಶಿಯಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಈ ಅವಧಿಯಲ್ಲಿ ಮಂಗಳವು ಒಂದೆರಡು ಬಾರಿ ನಕ್ಷತ್ರವನ್ನೂ ಬದಲಿಸುತ್ತದೆ. ಇದರ ರಾಶಿ-ನಕ್ಷತ್ರ ಗೋಚಾರಗಳು 12 ರಾಶಿಗಳ ಜೀವನದಲ್ಲಿ ಸಕಾರಾತ್ಮಕ ಅಥವಾ ಸವಾಲಿನ ಪರಿಣಾಮಗಳನ್ನು ಬೀರುತ್ತವೆ. ಇದು ವೃತ್ತಿ, ಸಂಪತ್ತು, ಆರೋಗ್ಯ, ಸಂಬಂಧಗಳ ಮೇಲೆ ಗಮನಾರ್ಹ ಪ್ರಭಾವ ಹೊಂದಿರುತ್ತದೆ.
2025ರಲ್ಲಿ (Year Ender 2025) ಮಂಗಳ ಗ್ರಹ ಯಾವ ದಿನ, ಸಮಯ ಮತ್ತು ಎಷ್ಟು ಬಾರಿ ರಾಶಿ-ನಕ್ಷತ್ರ ಬದಲಾಯಿಸಿತು (mars transit 2025 effects on zodiac signs) ಎಂಬುದರ ವಿವರ ಇಲ್ಲಿದೆ.
2025ರಲ್ಲಿ ಮಂಗಳ ಗ್ರಹದ ರಾಶಿ ಗೋಚಾರಗಳು
2025ರಲ್ಲಿ ಮಂಗಳ ಒಟ್ಟು 7 ಬಾರಿ ರಾಶಿ ಬದಲಾಯಿಸಿ, ಜಾತಕರ ಮೇಲೆ ವಿಭಿನ್ನ ಪ್ರಭಾವ ಬೀರಿತು. ಈ ಗೋಚಾರಗಳ ಸಮಯ ಮತ್ತು ರಾಶಿಗಳ ವಿವರ ಇಲ್ಲಿದೆ.
• ಜನವರಿ 21: ಬೆಳಗ್ಗೆ 09:37 ಗಂಟೆಗೆ ಮಿಥುನ ರಾಶಿಗೆ ಪ್ರವೇಶ.
• ಏಪ್ರಿಲ್ 3: ಮುಂಜಾನೆ 01:56 ಗಂಟೆಗೆ ಕರ್ಕಾಟಕ ರಾಶಿಗೆ ಪ್ರವೇಶ.
• ಜೂನ್ 7: ಮುಂಜಾನೆ 02:28 ಗಂಟೆಗೆ ಸಿಂಹ ರಾಶಿಗೆ ಪ್ರವೇಶ.
• ಜುಲೈ 28: ರಾತ್ರಿ 08:11 ಗಂಟಗೆ ಕನ್ಯಾ ರಾಶಿಗೆ ಪ್ರವೇಶ.
• ಸೆಪ್ಟೆಂಬರ್ 13: ರಾತ್ರಿ 09:34 ಗಂಟೆಗೆ ತುಲಾ ರಾಶಿಗೆ ಪ್ರವೇಶ.
• ಅಕ್ಟೋಬರ್ 27: ಮಧ್ಯಾಹ್ನ 03:53 ಗಂಟೆಗೆ ವೃಶ್ಚಿಕ ರಾಶಿಗೆ ಪ್ರವೇಶ.
• ಡಿಸೆಂಬರ್ 7: ರಾತ್ರಿ 08:27 ಗಂಟೆಗೆ ಧನು ರಾಶಿಗೆ ಪ್ರವೇಶ.
2025ರಲ್ಲಿ ಮಂಗಳ ಗ್ರಹದ ನಕ್ಷತ್ರ ಗೋಚಾರಗಳು
ಮಂಗಳ ಗ್ರಹವು 2025ರಲ್ಲಿ 14 ಬಾರಿ ನಕ್ಷತ್ರ ಬದಲಾಯಿಸಿ, ಜಾತಕರ ಜೀವನದಲ್ಲಿ ವಿಶಿಷ್ಟ ಸಂದರ್ಭ-ಅವಕಾಶಗಳನ್ನು ನೀಡಿತು. ಗೋಚಾರ ಮಾಡಿದ ನಕ್ಷತ್ರಗಳ ವಿವರ ಇಲ್ಲಿದೆ.
• ಜನವರಿ 12: ರಾತ್ರಿ 11:52 ಗಂಟೆಗೆ ಪುನರ್ವಸು ನಕ್ಷತ್ರ.
• ಏಪ್ರಿಲ್ 12: ಬೆಳಗ್ಗೆ 06:32 ಗಂಟೆಗೆ ಪುಷ್ಯ ನಕ್ಷತ್ರ.
• ಮೇ 12: ಬೆಳಗ್ಗೆ 08:55 ಗಂಟೆಗೆ ಆಶ್ಲೇಷ ನಕ್ಷತ್ರ.
• ಜೂನ್ 7: ಬೆಳಗ್ಗೆ 02:28 ಗಂಟೆಗೆ ಮಖಾ ನಕ್ಷತ್ರ.
• ಜೂನ್ 30: ರಾತ್ರಿ 08:33 ಗಂಟೆಗೆ ಪೂರ್ವಫಾಲ್ಗುಣಿ ನಕ್ಷತ್ರ.
• ಜುಲೈ 23: ಬೆಳಗ್ಗೆ 08:50 ಗಂಟೆಗೆ ಉತ್ತರಫಾಲ್ಗುಣಿ ನಕ್ಷತ್ರ.
• ಆಗಸ್ಟ್ 13: ರಾತ್ರಿ 10:44 ಗಂಟೆಗೆ ಹಸ್ತ ನಕ್ಷತ್ರ.
• ಸೆಪ್ಟೆಂಬರ್ 3: ಸಂಜೆ 06:04 ಗಂಟೆಗೆ ಚಿತ್ರಾ ನಕ್ಷತ್ರ.
• ಸೆಪ್ಟೆಂಬರ್ 23: ರಾತ್ರಿ 09:08 ಗಂಟೆಗೆ ಸ್ವಾತಿ ನಕ್ಷತ್ರ.
• ಅಕ್ಟೋಬರ್ 13: ಬೆಳಗ್ಗೆ 09:29 ಗಂಟೆಗೆ ವಿಶಾಖಾ ನಕ್ಷತ್ರ.
• ನವೆಂಬರ್ 1: ಬೆಳಗ್ಗೆ 08:28 ಗಂಟೆಗೆ ಅನುರಾಧ ನಕ್ಷತ್ರ.
• ನವೆಂಬರ್ 19: ಸಂಜೆ 07:40 ಗಂಟೆಗೆ ಜ್ಯೇಷ್ಠ ನಕ್ಷತ್ರ.
• ಡಿಸೆಂಬರ್ 7: ರಾತ್ರಿ 08:27 ಗಂಟೆಗೆ ಮೂಲ ನಕ್ಷತ್ರ.
• ಡಿಸೆಂಬರ್ 25: ಮಧ್ಯಾಹ್ನ 12:24 ಗಂಟೆಗೆ ಪೂರ್ವಾಷಾಢ ನಕ್ಷತ್ರ.
ಮಂಗಳ ಗೋಚಾರದ ಶುಭ ಪರಿಣಾಮಗಳು
ಮೇಷ
ಮಂಗಳ ಗೋಚಾರ ಸಕಾರಾತ್ಮಕ. ವೃತ್ತಿ-ವ್ಯವಹಾರದಲ್ಲಿ ಹೊಸ ಅವಕಾಶ, ಆರ್ಥಿಕ ಪ್ರತಿಫಲ ಸಿಗುತ್ತವೆ. ಕುಟುಂಬ-ಮಿತ್ರರ ಬೆಂಬಲದಿಂದ ಮಾನಸಿಕ ಉತ್ಸಾಹವೂ ಹೆಚ್ಚಲಿದೆ.
ಮಿಥುನ
ಈ ವರ್ಷ ಮಂಗಳ ಸಂಚಾರದಿಂದ ವಿಶೇಷ ಪ್ರಯೋಜನ. ಉದ್ಯೋಗ, ವ್ಯವಹಾರ, ಹೂಡಿಕೆಯಲ್ಲಿ ಯಶಸ್ಸು; ಸಾಮಾಜಿಕ ಸಂಬಂಧ ಬಲಗೊಂಡು, ಕೌಟುಂಬಿಕ ವಾತಾವರಣ ಸುಖಕರವಾಗಲಿದೆ.
ಕರ್ಕಾಟಕ
ಮಂಗಳ ಗೋಚಾರದಿಂದ ವೃತ್ತಿ / ಸಂಪತ್ತಿನಲ್ಲಿ ಹೆಚ್ಚಳ. ಹೊಸ ಜವಾಬ್ದಾರಿ, ಪದೋನ್ನತಿ, ವ್ಯಾಪಾರ ಲಾಭದ ಅವಕಾಶಗಳು. ಆರೋಗ್ಯ ಉತ್ತಮ, ಮಾನಸಿಕ ಸಮತೋಲನ ಕಾಯ್ದುಕೊಳ್ಳುತ್ತದೆ.
ತುಲಾ
ಇದು ಆರ್ಥಿಕ ಲಾಭ, ವೃತ್ತಿಜೀವನದಲ್ಲಿ ಯಶಸ್ಸಿನ ಸಮಯ. ಹೂಡಿಕೆ, ವ್ಯವಹಾರ, ಹೊಸ ಯೋಜನೆಗಳಿಂದ ಉತ್ತಮ ಲಾಭ ಸಾಧ್ಯ. ಕುಟುಂಬ, ಸ್ನೇಹಿತರ ಸಹಕಾರವೂ ದೊರೆಯುತ್ತದೆ.
ವೃಶ್ಚಿಕ
ಮಂಗಳ ಗೋಚಾರ ಉತ್ಸಾಹ ಮತ್ತು ಶಕ್ತಿ ಹೆಚ್ಚಿಸುತ್ತದೆ. ವೃತ್ತಿಪರ ಜೀವನದಲ್ಲಿ ಸುಧಾರಣೆ ಹಾಗೂ ಆರ್ಥಿಕ ಲಾಭ ಸಾಧ್ಯ. ಶಿಕ್ಷಣ, ಕೌಶಲ್ಯ ಅಭಿವೃದ್ಧಿಯ ಹೂಡಿಕೆ ಲಾಭದಾಯಕ.
ಧನು
ಈ ಅವಧಿ ಶುಭ, ಅದೃಷ್ಟಶಾಲಿಯಾಗಿರುತ್ತದೆ. ಉದ್ಯೋಗ, ವ್ಯವಹಾರ, ಹೂಡಿಕೆಯಲ್ಲಿ ವೃದ್ಧಿ. ಪ್ರಯಾಣ / ಹೊಸ ತಂತ್ರಜ್ಞಾನ ಕಲಿಕೆಯಿಂದ ಭವಿಷ್ಯದಲ್ಲಿ ಪ್ರಯೋಜನ.
ಮಕರ
ಮಂಗಳ ಗೋಚಾರದಿಂದ ವೃತ್ತಿ, ವ್ಯವಹಾರದಲ್ಲಿ ಲಾಭ. ಹೊಸ ಅವಕಾಶ, ಗೌರವದ ಸಾಧ್ಯತೆ. ಆರೋಗ್ಯ ಸಾಮಾನ್ಯ, ಮಾನಸಿಕ ಶಕ್ತಿ ಉನ್ನತ ಮಟ್ಟದಲ್ಲಿರುತ್ತದೆ.
ಕುಂಭ
ಈ ಸಮಯದಲ್ಲಿ ಪ್ರಯತ್ನಗಳ ಫಲವನ್ನು ಆರ್ಥಿಕ-ವೃತ್ತಿಪರವಾಗಿ ಪಡೆಯುತ್ತಾರೆ. ಕುಟುಂಬ-ಮಿತ್ರರ ಬೆಂಬಲ ದೊರೆತು, ನೆಟ್‌ವರ್ಕಿಂಗ್, ಸಂವಹನದಿಂದ ಹೊಸ ಅವಕಾಶ ಸೃಷ್ಟಿಯಾಗುತ್ತವೆ.
ಮೀನ
ಮಂಗಳ ಗೋಚಾರ ಲಾಭಕಾರಿ. ವೃತ್ತಿ-ಹೂಡಿಕೆಯಲ್ಲಿ ಸಕಾರಾತ್ಮಕ ಬದಲಾವಣೆಗಳು. ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ.
ಮಂಗಳ ಗೋಚಾರದ ಅಶುಭ ಪರಿಣಾಮಗಳು
ವೃಷಭ
ಈ ವರ್ಷ ಮಂಗಳ ಗೋಚಾರದಿಂದ ಸವಾಲು ಎದುರಿಸಬಹುದು. ಆರ್ಥಿಕ ಯೋಜನೆಗಳಲ್ಲಿ ಅಡೆತಡೆ/ಅನಿರೀಕ್ಷಿತ ಖರ್ಚಿನ ಸಾಧ್ಯತೆ. ವೃತ್ತಿಪರ ಜೀವನದಲ್ಲಿ ಎಚ್ಚರಿಕೆ ಅಗತ್ಯ.
ಸಿಂಹ
ಈ ಅವಧಿ ಸ್ವಲ್ಪ ಸವಾಲಿನದ್ದು. ಕೆಲಸದ ಸ್ಥಳದಲ್ಲಿ ಒತ್ತಡ, ವಿರೋಧ, ಜವಾಬ್ದಾರಿಗಳ ಒತ್ತಡವಿರಬಹುದು. ಆರೋಗ್ಯ ಹಾಗೂ ಮಾನಸಿಕ ಸಮತೋಲನಕ್ಕೆ ಗಮನ ಹರಿಸುವುದು ಮುಖ್ಯ.
ಕನ್ಯಾ
ಮಂಗಳ ಗೋಚಾರದಲ್ಲಿ ಸಮಸ್ಯೆಗಳು ಬರಬಹುದು. ಹೂಡಿಕೆ-ವ್ಯವಹಾರದಲ್ಲಿ ಎಚ್ಚರವಿರಲಿ. ಕೌಟುಂಬಿಕ ವಿಷಯಗಳಲ್ಲಿ ವಿವಾದಗಳ ಸಾಧ್ಯತೆಯೂ ಇರುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











