Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೆಬ್ರವರಿಯಲ್ಲೂ ತ್ರಿಗ್ರಹ ಯೋಗ: ಯಾವ ರಾಶಿಯವರಿಗೆ ಅನುಕೂಲ, ಯಾರಿಗೆ ಲಾಭಕರ ನೋಡಿ!
ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಲ್ಲಿ ಪ್ರತಿಯೊಂದೂ ಒಂದು ನಿರ್ದಿಷ್ಟ ಅವಧಿಯಲ್ಲಿ ತನ್ನ ರಾಶಿ, ನಕ್ಷತ್ರ, ಪಥ ಬದಲಾಯಿಸುತ್ತವೆ. ಈ ಬದಲಾವಣೆಯ ಸಮಯದಲ್ಲಿ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತವೆ. ಹಾಗೆ ಕೆಲವೊಮ್ಮೆ ಒಂದೇ ರಾಶಿಯಲ್ಲಿ ಎರಡಕ್ಕಿಂತ ಹೆಚ್ಚಿನ ಗ್ರಹಗಳು ಸಂಯೋಗವಾಗುವುದು ಸಹ ನೋಡಬಹುದು.
ಈ ರೀತಿಯ ಸಂಯೋಗದಿಂದ ವಿಶೇಷ ಯೋಗಗಳು ರೂಪುಗೊಳ್ಳುವ ಜೊತೆಗೆ ಎಲ್ಲಾ ರಾಶಿಗಳ ಮೇಲೆಯೂ ಇದು ಪರಿಣಾಮ ಬೀರುವುದು ನೋಡಬಹುದು. ಸದ್ಯ ಈಗ ಫೆಬ್ರವರಿಯಲ್ಲಿ ಮೂರು ಗ್ರಹಗಳ ಸಮ್ಮಿಲದ ಕಾರಣದಿಂದಾಗಿ ತ್ರಿಗ್ರಹಿ ಯೋಗ ಉಂಟಾಗುತ್ತಿದೆ. ಈ ತ್ರಿಗ್ರಹ ಯೋಗವು ಫೆಬ್ರವರಿ 13 ರಂದು ರೂಪುಗೊಳ್ಳಲಿದೆ.

ಫೆಬ್ರವರಿ 06 ರಂದು ಶುಕ್ರನು ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಅದರ ನಂತರ ಫೆಬ್ರವರಿ 13 ರಂದು ಗ್ರಹಗಳ ರಾಜ ಎಂದು ಪರಿಗಣಿಸಲಾದ ಸೂರ್ಯ ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಅಲ್ಲದೆ ರಾಹು ಈಗಾಗಲೇ ಕುಂಭ ರಾಶಿಯಲ್ಲಿದ್ದಾನೆ. ಹೀಗಾಗಿ ಮೂರು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗವಾಗಿ ಈ ತ್ರಿಗ್ರಹ ಯೋಗ ರೂಪಿಸುತ್ತಿವೆ. ಈ ಯೋಗದ ಪ್ರಭಾವವು 12 ರಾಶಿ ಜನರ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳ ನೋಡಬಹುದು. ಮುಖ್ಯವಾಗಿ ಹಲವರು ವೃತ್ತಿಜೀವನದಲ್ಲಿ ಉತ್ತಮ ಆರ್ಥಿಕ ಲಾಭ ಮತ್ತು ಪ್ರಗತಿಯನ್ನು ನೋಡುತ್ತಾರೆ. ಈಗ ಕುಂಭ ರಾಶಿಯಲ್ಲಿ ರೂಪುಗೊಂಡ ತ್ರಿಗ್ರಹ ಯೋಗದಿಂದಾಗಿ ಯಾವ ರಾಶಿ ಜನರಿಗೆ ಅದೃಷ್ಟ ಒಲಿಯಲಿದೆ ಯಾರಿಗೆ ಲಾಭದಾಯಕ ಅನ್ನೋದನ್ನು ತಿಳಿದುಕೊಳ್ಳೋಣ.
ಮಕರ ರಾಶಿ
ಮಕರ ರಾಶಿಯ 2 ನೇ ಮನೆಯಲ್ಲಿ ಸೂರ್ಯ, ಶುಕ್ರ ಮತ್ತು ರಾಹುವಿನ ಸಂಯೋಜನೆಯು ತ್ರಿಗ್ರಹ ಯೋಗವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಮಕರ ರಾಶಿ ಜನರಿಗೆ ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆ ಹೆಚ್ಚಾಗುವುದು ನೋಡಬಹುದು. ನಿಮ್ಮ ವ್ಯವಹಾರಗಳು ನೀವು ಅಂದುಕೊಂಡಿದ್ದ ರೀತಿಯಲ್ಲಿ ಮುಗಿಯಲಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ದಾಂಪತ್ಯದಲ್ಲಿ ಸಂತಸ ನೋಡಬಹುದು. ಮಕ್ಕಳ ವಿಚಾರದಲ್ಲಿ ಇದ್ದಂತಹ ಚಿಂತೆಯೊಂದು ದೂರಾಗಲಿದೆ. ಬಹಳ ಸಮಯದಿಂದ ಅರ್ಧಕ್ಕೆ ನಿಂತ ಕೆಲಸವನ್ನು ನೀವು ಮಾಡಿ ಮುಗಿಸುವಿರಿ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ 9ನೇ ಭಾವದಲ್ಲಿ ಸೂರ್ಯ, ಶುಕ್ರ ಮತ್ತು ರಾಹು ಒಂದೇ ಸಮಯದಲ್ಲಿ ಸೇರಿ ತ್ರಿಗ್ರಹ ಯೋಗವನ್ನು ರೂಪಿಸುತ್ತವೆ. ಇದರ ಪರಿಣಾಮವಾಗಿ ಅದೃಷ್ಟದ ದಿನಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವರಿಗೆ ವಿದೇಶ ಪ್ರವಾಸದ ಅವಕಾಶಗಳು ದೊರೆಯಬಹುದು. ಶುಭ ಕಾರ್ಯಗಳಲ್ಲಿ ಹೆಚ್ಚು ಭಾಗವಹಿಸುವ ಅವಕಾಶ ಸಿಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಆಲೋಚಿಸಿ ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮ ಫಲಿತಾಂಶ ನೀಡುತ್ತವೆ. ಈ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ, ನಿಮ್ಮ ವ್ಯಕ್ತಿತ್ವದ ಪ್ರಭಾವವೂ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಈ ಸಮಯವು ಅನುಕೂಲಕರ ಆಗಿರಲಿದೆ.
ಧನು ರಾಶಿ
ಧನು ರಾಶಿಯವರಿಗೆ 3ನೇ ಮನೆಯಲ್ಲಿ ಸೂರ್ಯ, ಶುಕ್ರ ಮತ್ತು ರಾಹು ಸಂಯೋಗದಿಂದ ತ್ರಿಗ್ರಹ ಯೋಗ ನಿರ್ಮಾಣವಾಗುತ್ತದೆ. ಇದರ ಪರಿಣಾಮವಾಗಿ ಧೈರ್ಯ ಮತ್ತು ಶೌರ್ಯದ ಕೆಲಸಗಳಲ್ಲಿ ನೀವು ಭಾಗಿಯಾಗುತ್ತೀರಿ. ಹೊಸ ಮನೆ ಅಥವಾ ವಾಹನ ಖರೀದಿಸಲು ಅನುಕೂಲಕರ ಸಂದರ್ಭಗಳು ಎದುರಾಗುತ್ತವೆ. ವಿದೇಶ ಸಂಬಂಧಿತ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ. ಸಹೋದರ-ಸಹೋದರಿಯರಿಂದ ಪೂರ್ಣ ಬೆಂಬಲ ಸಿಗುತ್ತದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ, ಸಂಬಳ ಹೆಚ್ಚಳ ಅಥವಾ ಹೊಸ ಅವಕಾಶಗಳ ಸಾಧ್ಯತೆಗಳು ಮೂಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )



Click it and Unblock the Notifications