Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
2025ರಲ್ಲಿ ಈ 4 ರಾಶಿಯವರ ಕನಸು ನನಸಾಗಲಿದೆ..! ಯಾವ ರಾಶಿಯವರಿಗೆ ನೋಡಿ..!
2025 ವರ್ಷ ಆರಂಭವಾಗುತ್ತಿದೆ. ಹೀಗಾಗಿ ಮುಂದಿನ ವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ನಡೆಯಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದೇ ಇರುತ್ತದೆ. ಮುಂದಿನ ವರ್ಷವಾದರೂ ನಿಮ್ಮ ಕನಸುಗಳು ಈಡೇರಲಿದ್ಯಾ? ಮುಂದಿನ ವರ್ಷ ಯಾವ ರಾಶಿಯವರಲ್ಲಿ ಶುಭ ದಿನಗಳ ನೋಡಬಹುದು. ಯಾರಿಗೆ ಲಾಭದ ದಿನಗಳು ಕಾದಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
2025ರ ವೈದಿಕ ಶಾಸ್ತ್ರದ ಪ್ರಕಾರ, ಕೆಲವು ರಾಶಿ ಜನರು ಅಪೇಕ್ಷಿತ ಯಶಸ್ಸು ಪಡೆಯುತ್ತಾರೆ. ಕೆಲವು ರಾಶಿಯ ಜನರು ಈ ವರ್ಷ ಕೆಲವೊಂದು ವಿಶೇಷ ಫಲಿತಾಂಶ ಪಡೆಯಲಿದ್ದಾರೆ. ಕೆಲವು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಬೇಕಾಗುತ್ತದೆ. ಹಾಗೆ ಮತ್ತೆ ಕೆಲವರು ಎಷ್ಟೇ ಶ್ರಮ ವಹಿಸಿದರೂ ಕೂಡ ನಿರೀಕ್ಷಿತ ಫಲಿತಾಂಶ ನೀಡುವುದಿಲ್ಲ. ಹಾಗಾದ್ರೆ 2025ರಲ್ಲಿ ಯಾವ ರಾಶಿಯವರ ಕನಸುಗಳು ಈಡೇರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ
2025ರ ಭವಿಷ್ಯವಾಣಿಯ ಪ್ರಕಾರ ಮೇಷ ರಾಶಿಯ ಜನರಲ್ಲಿ ಆರ್ಥಿಕ ಲಾಭ ಕಂಡುಬರಲಿದೆ. ಮೇ ಅಂತ್ಯದವರೆಗೂ ನಿಮಗೆ ಸಂಪತ್ತಿನ ಭಾಗ್ಯ ಇರಲಿದೆ. ಹಾಗೆ ಭಾರೀ ಹಣ ಗಳಿಸುವ ಸಾಧ್ಯತೆಗಳಿವೆ. ಆದರೆ ಮೇ ನಂತರ ರಾಹು ತನ್ನ ಮನೆ ಬದಲಿಸುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಮತ್ತಷ್ಟು ಸುಧಾರಿಸಲಿದೆ. ಈ ರೀತಿ ಆರ್ಥಿಕ ಲಾಭದ ಕಾರಣದಿಂದಾಗಿ ನೀವು ನಿಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಬಹುದು. 2025ರಲ್ಲಿ ನಿಮ್ಮ ಹಲವು ಕನಸುಗಳು ನನಸಾಗಬಹುದು.
ವೃಷಭ ರಾಶಿ
2025 ವೃಷಭ ರಾಶಿಯವರಿಗೆ ಸಮೃದ್ಧ ತರುವಂತಹ ವರ್ಷ ಆಗಿರಲಿದೆ. ಅನುಕೂಲಕರ ಗ್ರಹಗಳ ಸ್ಥಾನವು ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ ಮತ್ತು ಅವರ ಕಠಿಣ ಪರಿಶ್ರಮದ ಪರಿಣಾಮವಾಗಿ ಗಮನಾರ್ಹ ಆದಾಯವನ್ನು ಗಳಿಸುತ್ತಾರೆ. ನಿಮ್ಮ ಗ್ರಹಗತಿಗಳ ಸಂಚಾರದ ಸೂಕ್ತ ಮನೆಯಲ್ಲಿ ಉಂಟಾಗುತ್ತದೆ. ಹೀಗಾಗಿ ನಿಮ್ಮ ಹಣಕಾಸಿನ ಲಾಭ ಹೆಚ್ಚಾಗಲಿದೆ. 2025ರಲ್ಲಿ ನಿಮ್ಮ ಚಿನ್ನ ಬೆಳ್ಳಿಯಿಂದ ಲಾಭ ಗಳಿಸುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಮನೆಯಲ್ಲಿ ನೀವು ಬಹಳ ಕಾಲದಿಂದ ಅಂದುಕೊಂಡ ಕೆಲಸ ಪೂರ್ಣ ಆಗಲಿದೆ. ಹಾಗೆ ನಿಮ್ಮ ಕನಸುಗಳು ಈಡೇರುವ ಸಂಭವವಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಈ ವರ್ಷ ತಮ್ಮ ಕನಸಿನ ಜೀವನವನ್ನು ಸಾಧಿಸುವ ಅದೃಷ್ಟವನ್ನು ಹೊಂದಿರುತ್ತಾರೆ. ಅವಿವಾಹಿತರಿಗೆ ತಮ್ಮ ವಿವಾಹದ ಕನಸು ಈಡೇರಬಹುದು. ಹಾಗೆ ಕನ್ಯಾರಾಶಿಯವರಲ್ಲಿ ಎಲ್ಲಾ ಕೆಲಸ ಕಾರ್ಯಗಳು ಯಾವ ಅಡ್ಡಿ ಆತಂಕವಿಲ್ಲದೆ ನಡೆಯುವ ವರ್ಷವಿದು. ತಮ್ಮ ಕಠಿಣ ಪರಿಶ್ರಮ ಮತ್ತು ವ್ಯವಹಾರದಲ್ಲಿ ಉತ್ತಮ ಬದಲಾವಣೆಗಳಿಂದ ಹೆಚ್ಚಿನ ಆರ್ಥಿಕ ಲಾಭವನ್ನು ಪಡೆಯುತ್ತಾರೆ ಮತ್ತು ಆದ್ದರಿಂದ ಶಾಂತಿಯುತ ಜೀವನವನ್ನು ಹೊಂದಿರುತ್ತಾರೆ. ನೀವು ಒಂದಿಷ್ಟು ಕಡೆ ಹಣ ಹೂಡಿಕೆ ಮಾಡುತ್ತೀರಿ. ಇದು ಲಾಭದಾಯಕವಾಗಿ ಪರಿಣಮಿಸಬಹುದು.
ವೃಶ್ಚಿಕ ರಾಶಿ
2025ರಲ್ಲಿ ವೃಶ್ಚಿಕ ರಾಶಿಯವರಲ್ಲಿ ಅತ್ಯಧಿಕ ಲಾಭ ನೋಡಬಹುದು. ಇವರಲ್ಲಿ ಕೃಷಿ ಸಂಬಂಧಿ, ಸಣ್ಣ ವ್ಯಾಪಾರ, ಸ್ವಂತ ಉದ್ಯಮಿಗಳು ಅಧಿಕ ಲಾಭ ಮಾಡುತ್ತಾರೆ, ಇದರಿಂದ ನಿಮ್ಮ ಹಲವು ವರ್ಷದ ಕನಸೊಂದು ನೆರವೇರಲಿದೆ ಎಂಬ ಸೂಚನೆ ಇದೆ. ನಿಮ್ಮ ಹಣಕಾಸು ವ್ಯವಹಾರ ಬಲವಾಗಲಿದೆ. ಆರ್ಥಿಕವಾಗಿ ಸದೃಢವಾಗಲಿದ್ದೀರಿ. ಹಾಗೆ ನಿಮ್ಮ ಮಕ್ಕಳ ಕನಸುಗಳಿಗೆ ನೀವು ನೆರಳಾಗಿ ನಿಲ್ಲಲಿದ್ದೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











