ದ್ವಾದಶ ರಾಶಿಗಳಲ್ಲಿ ಯಾರಿಗೆ ಯಾವ ಬಗೆಯ ಕಲ್ಲಿನ ಆಭರಣ ಧರಿಸುವುದು ಅದೃಷ್ಟಕರ?

ಆಭರಣ ಖರೀದಿಸಲು ಹೋಗುವಾಗ ಕೆಲವೊಂದು ಹರಳುಗಳ ಡಿಸೈನ್‌ಗಳು ನಮಗೆ ಇಷ್ಟವಾಗಿ ಅದನ್ನು ಖರೀದಿಸುತ್ತೇವೆ. ಆದರೆ ನಾವು ನಮ್ಮ ರಾಶಿಗೆ ತಕ್ಕ ಹರಳು ಅಥವಾ ಸ್ಟೋನ್ ಆಭರಣ ಖರೀದಿಸಿದರೆ ಅದು ನಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ಹೆಚ್ಚಿನವರು ಆಭರಣ ಖರೀದಿಸುವಾಗ ಈ ವಿಷಯಗಳನ್ನು ತುಂಬಾ ಗಮನಿಸುತ್ತಾರೆ.

ನೀವು ಉಂಗುರ ಅಥವಾ ಚೈನ್, ಬ್ರಾಸೆಲೆಟ್ ಇವುಗಳನ್ನು ಖರೀದಿಸುವಾಗ ನೀವು ನಿಮ್ಮ ರಾಶಿಗೆ ಅದೃಷ್ಟ ತರುವ ಹರಳನ್ನು ಬಳಸಿದರೆ ಇನ್ನೂ ಒಳ್ಳೆಯದು. ಯಾವ ರಾಶಿಯವರಿಗೆ ಯಾವ ಹರಳು ಒಳ್ಳೆಯದು ಎಂದು ನೋಡೋಣ ಬನ್ನಿ:

Stone For zodiac Signs
ಮೇಷ ರಾಶಿ
ಮೇಷ ರಾಶಿಯವರಿಗೆ ವಜ್ರದ ಹರಳು ತುಂಬಾ ಒಳ್ಳೆಯದು. ನೀವು ವಜ್ರ ಧರಿಸಿದರೆ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು, ನಾಯಕತ್ವದ ಗುಣ ಹೆಚ್ಚಾಗುವುದು.

ವೃಷಭ ರಾಶಿ
ವೃಷಭ ರಾಶಿಯವರಿಗೆ ಪಚ್ಚೆ ಹರಳು ಅದೃಷ್ಟದ ಕಲ್ಲಾಗಿದೆ. ಈ ಹರಳು ಧರಿಸುವುದರಿಂದ ನಿಮಗೆ ಪ್ರಗತಿ ಉಂಟಾಗುವುದು. ನಿಮ್ಮ ತಾಳ್ಮೆ ಹೆಚ್ಚಿಸುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ರತ್ನದ ಹರಳು ತುಂಬಾ ಒಳ್ಳೆಯದು. ಇದು ನಿಮ್ಮ ಸ್ವಭಾವದಲ್ಲಿ ಸೌಮ್ಯತೆ ತರುತ್ತದೆ. ಇದು ಮನೆಯವರ ಜೊತೆಗೆ ನಿಮ್ಮ ಸಂಬಂಧ ಬಲಪಡಿಸಲು ಸಹಾಯತ್ತೆ, ನಿಮ್ಮ ಅದೃಷ್ಟ ಹೆಚ್ಚಿಸುತ್ತೆ.

ಕರ್ಕ ರಾಶಿ
ಕರ್ಕರಾಶಿಯವರಿಗೆ ಮೂನ್‌ಸ್ಟೋನ್‌ ತುಂಬಾ ಅದೃಷ್ಟದ ಕಲ್ಲು. ಇದು ನಿಮ್ಮಲ್ಲಿ ಕ್ರಿಯಾತ್ಮಕ ಶಕ್ತಿ ಹೆಚ್ಚಿಸುತ್ತದೆ. ಇದು ನಿಮ್ಮಲ್ಲಿ ಅನುಕಂಪದ ಗುಣವನ್ನು ಹೆಚ್ಚಿಸುತ್ತದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಹವಳ ತುಂಬಾ ಒಳ್ಳೆಯದು. ಇದು ನಿಮ್ಮಲ್ಲಿ ನಾಯಕತ್ವದ ಗುಣವನ್ನು ಹೆಚ್ಚಿಸುತ್ತದೆ.

ಕನ್ಯಾ ರಾಶಿ
ನೀಲಮಣಿ ಕನ್ಯಾ ರಾಶಿಯವರಿಗೆ ಅದೃಷ್ಟದ ಕಲ್ಲು. ಇದು ನಿಮಗೆ ನಿಮ್ಮ ನಿರ್ಧಾರಗಳಲ್ಲಿ ಒಂದು ಸ್ಪಷ್ಟತೆ ನೀಡಲಿದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಓಪಲ್ ಕಲ್ಲು ಒಳ್ಳೆಯದು. ಈ ಕಲ್ಲು ಶಾಂತಿ, ಪ್ರೀತಿ, ಕ್ರಿಯಾಶೀಲತೆ ಹೆಚ್ಚಾಗುವುದು. ಇದನ್ನು ಧರಿಸುವುದರಿಂದ ಸಂಬಂಧದಲ್ಲಿ ಸಮತೋಲನ ಕಾಪಾಡುವ ಸಾಮರ್ಥ್ಯ ದೊರೆಯಲಿದೆ.

ವೃಶ್ಚಿಕ ರಾಶಿ
ಕೆಂಪು ಹರಳು ಅಥವಾ Garnet ಸ್ಟೋನ್ ವೃಶ್ಚಿಕ ರಾಶಿಯವರಿಗೆ ಅದೃಷ್ಟದ ಕಲ್ಲಾಗಿದೆ. ಇದರ ಆಭರಣಗಳನ್ನು ಧರಿಸುವುದು ನಿಮಗೆ ಅದೃಷ್ಟಕರ.

ಧನು ರಾಶಿ
ಧನು ರಾಶಿಯವರಿಗೆ Topaz ಅಥವಾ ನೀಲಮಣಿ ಅದೃಷ್ಟದ ಆಭರಣವಾಗಿದೆ. ಇದನ್ನು ಧರಿಸುವುದರಿಂದ ನಿಮಗೆ ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದು, ಧೈರ್ಯ ಹೆಚ್ಚಾಗುವುದು.

ಮಕರ ರಾಶಿ
ಮಕರ ರಾಶಿಯವರಿಗೆ ರತ್ನದ ಹರಳು ತುಂಬಾ ಒಳ್ಳೆಯದು. ಇದನ್ನು ಧರಿಸುವುದರಿಂದ ನಿಮಗೆ ಪ್ರಗತಿ ಉಂಟಾಗಲಿದೆ. ಇದು ನಿಮ್ಮ ಗುರಿ ತಲುಪಲು ಅದೃಷ್ಟದ ಬೆಂಬಲ ನೀಡಲಿದೆ.

ಕುಂಭ ರಾಶಿ
ಅಕ್ವಾಮರೀನ್ ರತ್ನ ಅಥವಾ aquamarine stone ಕುಂಭ ರಾಶಿಯವರಿಗೆ ಅದೃಷ್ಟದ ಸಮಯವಾಗಿದೆ. ಇದು ನಿಮ್ಮ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ.

ಮೀನ ರಾಶಿ
ಮೀನ ರಾಶಿಯವರಿಗೆ Jade ಅದೃಷ್ಟದ ಬಣ್ಣವಾಗಿದೆ. ಇದು ನಿಮ್ಮ ಕಾರ್ಯಗಳಿಗೆ ಅದೃಷ್ಟದ ಬೆಂಬಲವನ್ನು ತರುತ್ತದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Which Stone Is Good For All zodiac Signs In Kannada?

Do you which stone jewellery good for your zodiac signs, read on....
Story first published: Friday, December 8, 2023, 11:17 [IST]
X
Desktop Bottom Promotion