Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಅಕ್ಟೋಬರ್ 22ಕ್ಕೆ ದುರ್ಗಾಷ್ಟಮಿ: ಈ ದಿನ 108 ಸಂಖ್ಯೆಗೆ ಏಕಿಷ್ಟು ಮಹತ್ವ
ನವರಾತ್ರಿ 8ನೇ ತುಂಬಾ ವಿಶೇಷವಾದ್ದದು, ಏಕೆಂದರೆ ಈ ದಿನವನ್ನು ದುರ್ಗಾಷ್ಟಮಿ ಎಂದು ಆಚರಿಸಲಾಗುವುದು. ಈ ವರ್ಷ ದುರ್ಗಾಷ್ಟಮಿಯನ್ನು ಅಕ್ಟೋಬರ್ 22ರಂದು ಆಚರಿಸಲಾಗುವುದು. ಹಿಂದೂ ಸಂಪ್ರದಾಯದಲ್ಲಿ ಈ ದಿನ ಕನ್ಯಾ ಪೂಜೆ ಮಾಡಲಾಗುವುದು. ಇನ್ನೂ ಋತುಚಕ್ರ ಪ್ರಾರಂಭವಾಗದ ಚಿಕ್ಕ ಹೆಣ್ಣು ಮಕ್ಕಳನ್ನು ಮನೆಗೆ ಕರೆತಂದು ಕನ್ಯಾ ಪೂಜೆ ಮಾಡುವ ಪದ್ಧತಿ ಇದೆ. ಆ ಹೆಣ್ಮಕ್ಕಳನ್ನು ದುರ್ಗೆಯರು ಎಂದೇ ಭಾವಿಸಿ ಆರಾಧಿಸಲಾಗುವುದು. ಅವರ ಪಾದ ಪೂಜೆ ಮಾಡಿ ನಂತರ ಅವರಿಗೆ ಸಿಹಿ ತಿಂಡಿ, ಮೇಕಪ್ ವಸ್ತುಗಳು, ವಸ್ತ್ರ ಇವುಗಳನ್ನು ಕೊಡುಗೆ ನೀಡಲಾಗುವುದು.

ಕನ್ಯಾ ಪೂಜೆಯಲ್ಲಿ 9 ಹೆಣ್ಮಕ್ಕಳನ್ನು ಪೂಜಿಸಲಾಗುವುದು
* ಒಂದು ಹುಡುಗಿಗೆ ಕನ್ಯಾ ಪೂಜೆ ಮಾಡಿದರೆ ಐಶ್ವರ್ಯ ಪ್ರಾಪ್ತಿಯಾಗುವುದು
* ಎರಡು ಹೆಣ್ಮಕ್ಕಳನ್ನು ಪೂಜಿಸಿದರೆ ಮನೆಯಲ್ಲಿ ಭೋಗ, ಮೋಕ್ಷ ಸಿಗಲಿದೆ
* ಮೂರು ಹುಡುಗಿಯರಿಗೆ ಪಾದ ಪೂಜೆ ಮಾಡುವುದರಿಂದ ಧರ್ಮ, ಅರ್ಥ, ಉತ್ತಮ ವೈವಾಹಿಕ ಜೀವನವನ್ನು ಒದಗಿಸುತ್ತದೆ
* ನಾಲ್ಕು ಹುಡುಗಿಯರನ್ನು ಆರಾಧಿಸುವುದರಿಂದ ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ.
* ಐದು ಹುಡುಗಿಯರನ್ನು ಪೂಜಿಸುವುದರಿಂದ ಅರಿವು ಹೆಚ್ಚಾಗುವುದು
* 6 ಹೆಣ್ಮಕ್ಕಳಿಗೆ ಕನ್ಯಾ ಪೂಜೆ ಮಾಡುವುದರಿಂದ ಆರು ತರದ ವಿಶೇಷ ಸಿದ್ಧಿ ಸಿಗಲಿದೆ.
* 7 ಹೆಣ್ಮಕ್ಕಳಿಗೆ ಪೂಜೆ ಮಾಡಿದರೆ ಇಷ್ಟಾರ್ಥ ನೆರವೇರುವುದು
* 8 ಹೆಣ್ಮಕ್ಕಳನ್ನು ಆರಾಧಿಸಿದರೆ ಸಂಪತ್ತು ವೃದ್ಧಿಸಲಿದೆ.
*9 ಹೆಣ್ಮಕ್ಕಳಿಗೆ ಆರಾಧನೆ ಮಾಡಿದರೆ ದೇವಿ ಸಕಲ ಸಂಪತ್ತು ನೀಡುತ್ತಾಳೆ.
2023ರಲ್ಲಿ ದುರ್ಗಾಷ್ಟಮಿ ದಿನಾಂಕ : ಅಕ್ಟೋಬರ್ 22, ಭಾನುವಾರ
ಅಷ್ಟಮಿ ತಿಥಿ ಪ್ರಾರಂಭ: ಅಕ್ಟೋಬರ್ 21 ಬೆಳಗ್ಗೆ 09:53ರವರೆಗೆ
ಅಷ್ಟಮಿ ತಿಥಿ: ಅಕ್ಟೋಬರ್ 22 ಸಂಜೆ 07:58ರವರೆಗೆ
ಮಹಾ ಅಷ್ಟಮಿ ಪೂಜಾ ಮುಹೂರ್ತ
ಅಶ್ವಿನಿ ಶುಕ್ಲ ಅಷ್ಟಮಿ ತಿಥಿ ಅಕ್ಟೋಬರ್ 21 ರಾತ್ರಿ 09:53ರಿಂದ ಪ್ರಾರಂಭವಾಗಿ ಅಕ್ಟೋಬರ್ 22 ಸಂಜೆ 07:58, ಈ ಸಮಯದಲ್ಲಿ ದುರ್ಗೆಗೆ ಪೂಜೆ ಸಲ್ಲಿಸಬಹುದು.
ದುರ್ಗಾ ಪೂಜೆಯಲ್ಲಿ 108 ಸಂಖ್ಯೆಯ ಮಹತ್ವ
ದುರ್ಗೆ ಪೂಜೆಯಲ್ಲಿ 108 ದೀಪಗಳನ್ನು ಹಚ್ಚಿಡಲಾಗುವುದು. ಅಲ್ಲದೆ ನಾಲಗೆಯಿಂದ ಲುಲು ಅಂತ ಶಬ್ದವನ್ನು ಮಾಡುತ್ತಾರೆ. ಹೀಗೆ ಮಾಡಿದರೆ ಋಣಾತ್ಮಕ ಶಕ್ತಿಯಿದ್ದರೆ ಅದು ದೂರಾಗುವುದು ಎಂದು ನಂಬಲಾಗಿದೆ. ಈ ದಿನ ದುರ್ಗೆ ಪೂಜೆಯಲ್ಲಿ 108 ತಾವರೆಗಳನ್ನು ಅರ್ಪಿಸಲಾಗುವುದು.
ದುರ್ಗಾಷ್ಟಮಿ ಪೂಜಾ ವಿಧಿಗಳು
* ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ದೇವರಿಗೆ ದೀಪವನ್ನು ಹಚ್ಚಿ.
* ದೇವಿಗೆ ನೈವೇದ್ಯ ಅರ್ಪಿಸಿ.
* ದುರ್ಗಾಷ್ಟಮಿ ವ್ರತವನ್ನು ಮಾಡುವವರು ಈ ದಿನ ನೀರು ಕೂಡ ಮುಟ್ಟುವುದಿಲ್ಲ, ಕೆಲವರು ಸಾತ್ವಿಕ ಆಹಾರವನ್ನಷ್ಟೇ ಸೇವಿಸುತ್ತಾರೆ.
* ಮನೆಯಲ್ಲಿ ಪೂಜೆ ಮಾಡಿದ ಬಳಿಕ ಸಮೀಪದ ದೇವಾಲಯಕ್ಕೆ ಹೋಗಿ ಪೂಜೆ ಮಾಡಿ ಬನ್ನಿ.
ಈ ದಿನ ಮಾಡುವ ಪೂಜೆ-ಹವನಗಳಿಂದ ಹೆಚ್ಚಿನ ಫಲ ಸಿಗುವುದು
ಯಾರು ನವರಾತ್ರಿಯಂದು ಪೂಜೆ- ಹವನಗಳನ್ನು ಮಾಡುತ್ತಾರೋ ಈ ದಿನ ಹೆಚ್ಚಿನ ಫಲ ಸಿಗುವುದು ಎಂದು ಹೇಳಲಾಗುವುದು. ಆದ್ದರಿಂದ ಈ ದಿನ ಹೋಮ-ಹವನಗಳನ್ನು ಮಾಡಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications