Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Lunar Eclipse In March: ವರ್ಷದ ಮೊದಲ ಚಂದ್ರಗ್ರಹಣ, ಸೂತಕ ಸಮಯ, ಜ್ಯೋತಿಷ್ಯ ಪರಿಹಾರ
2024 ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ ತಿಂಗಳಲ್ಲಿ ಸಂಭವಿಸಲಿದೆ. ಈ ಚಂದ್ರಗ್ರಹಣ ಮಾರ್ಚ್ 25ಕ್ಕೆ ನಡೆಯಲಿದೆ. ಇದೇ ದಿನ ಹೋಳಿ ಹಬ್ಬ ಕೂಡ ಇದೆ. ವೈಜ್ಞಾನಿಕ ದೃಷ್ಟಿಯಿಂದ ಚಂದ್ರಗ್ರಹಣವು ಭೌಗೋಳಿಕ ವಿದ್ಯಮಾನವಾಗಿದ್ದರೂ, ಜ್ಯೋತಿಷ್ಯದ ದೃಷ್ಟಿಯಿಂದ ಇದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
ಯಾವುದೇ ಗ್ರಹಣದ ಘಟನೆಯನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಣದ ಸಮಯದಲ್ಲಿ, ಅನೇಕ ರೀತಿಯ ನಕಾರಾತ್ಮಕ ಶಕ್ತಿಗಳು ಬಲಗೊಳ್ಳುತ್ತವೆ, ಗ್ರಹಣದ 9 ಗಂಟೆಯ ಮೊದಲು ಸೂತಕ ಸುರುವಾಗುವುದು. ಇಂತಹ ಪರಿಸ್ಥಿತಿಯಲ್ಲಿ ಮಾರ್ಚ್ ತಿಂಗಳಿನಲ್ಲಿ ಸಂಭವಿಸುವ ಗ್ರಹಣದ ಸೂತಕ ಕಾಲ ಮತ್ತು ಅದರ ಪರಿಣಾಮವನ್ನು ತಿಳಿಯೋಣ...

ಮೊದಲ ಚಂದ್ರಗ್ರಹಣ 2024 ಯಾವಾಗ ಸಂಭವಿಸುತ್ತದೆ?
ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 25 ರಂದು ನಡೆಯಲಿದೆ. ಇದು ಪೆನಂಬ್ರಾಲ್ ಚಂದ್ರಗ್ರಹಣವಾಗಿದ್ದು, ಇದನ್ನು ಭಾರತದಲ್ಲಿ ನೋಡಲಾಗುವುದಿಲ್ಲ. ಈ ಚಂದ್ರಗ್ರಹಣವು ಮಾರ್ಚ್ 25 ರಂದು ಬೆಳಿಗ್ಗೆ 10:23 ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 03:02 ರವರೆಗೆ ಇರುತ್ತದೆ. ಆದ್ದರಿಂದ ಭಾರತಕ್ಕೆ ಇದರ ಸೂತಕವಲ್ಲ.
ಮೊದಲ ಚಂದ್ರಗ್ರಹಣದ ಸೂತಕ ಕಾಲ ಯಾವಾಗ?
ಚಂದ್ರಗ್ರಹಣದ ಸೂತಕ ಅವಧಿಯು ಗ್ರಹಣದ ಸಮಯಕ್ಕಿಂತ 9 ಗಂಟೆಗಳ ಮೊದಲು ಪ್ರಾರಂಭವಾಗುವುದು. ಆದರೆ ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಈ ಕಾರಣದಿಂದಾಗಿ ಅದರ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಇದರಿಂದ ಈ ಗ್ರಹಣ ಹೋಳಿ ಹಬ್ಬದ ಮೇಲೆ ಪರಿಣಾಮ ಬೀರುವುದಿಲ್ಲ, ಆದ್ದರಿಂದ ನೀವು ಯಾವುದೇ ಆತಂಕವಿಲ್ಲದೆ ಹೋಳಿ ಹಬ್ಬವನ್ನು ಆಚರಿಸಬಹುದು.
ಮೊದಲ ಚಂದ್ರಗ್ರಹಣ ಎಲ್ಲಿ ಗೋಚರಿಸುತ್ತದೆ?
ಮಾರ್ಚ್ 25 ರಂದು ಹೋಳಿಯಲ್ಲಿ ಮೊದಲ ಚಂದ್ರಗ್ರಹಣವು ಐರ್ಲೆಂಡ್, ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್, ಹಾಲೆಂಡ್, ಬೆಲ್ಜಿಯಂ, ನಾರ್ವೆ, ಸ್ವಿಟ್ಜರ್ಲೆಂಡ್, ಇಟಲಿ, ಜರ್ಮನಿ, ಫ್ರಾನ್ಸ್, ಅಮೆರಿಕ, ಜಪಾನ್, ರಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಆರ್ಕ್ಟಿಕ್‌ನಲ್ಲಿ ಗೋಚರಿಸಲಿದೆ. ಮತ್ತು ಅಂಟಾರ್ಟಿಕಾ ಭಾಗಗಳಲ್ಲಿ ಕಾಣಬಹುದು.
ಗ್ರಹಣದ ಸಮಯದಲ್ಲಿ ಬಾಗಿಲು ಮುಚ್ಚುವುದು ಏಕೆ?
ಸೂರ್ಯ ಹಾಗೂ ಚಂದ್ರ ಭೂಮಿಗೆ ಬೆಳಕು ನೀಡುವ ಗ್ರಹಗಳಾಗಿವೆ. ಗ್ರಹಣವಾದಾಗ ಅವುಗಳ ಬೆಳಕು ಭೂಮಿಗೆ ತಲುಪುವುದಿಲ್ಲ, ಈ ಅವಧಿಯಲ್ಲಿ ನೆಗೆಟಿವ್ ಎನರ್ಜಿ ತುಂಬಾ ಇರುತ್ತದೆ, ಈ ಸಮಯದಲ್ಲಿ ಬಾಗಿಲು ತೆರೆದಿಟ್ಟರೆ ದೇವಾಲಯದಲ್ಲಿರು ದೈವಿಕ ಶಕ್ತಿ ಮೇಲೆ ಪ್ರಭಾವ ಬೀರುವುದು, ಈ ಕಾರಣದಿಂದ ದೇವಾಲಯದ ಬಾಗಿಲು ತೆರೆದಿರುವುದಿಲ್ಲ, ಆದರೆ ಭಾರತದಲ್ಲಿ ಸೂತಕವಿಲ್ಲ, ಆದ್ದರಿಂದ ಭಾರತದ ದೇವಾಲಯಗಳಲ್ಲಿ ಪೂಜೆ ಇರಲಿದೆ.
ಗ್ರಹಣದ ದೋಷ ತಟ್ಟದಿರಲು ತುಳಸಿ ಎಲೆ ಹಾಕಲಾಗುವುದು ದೇವಾಲಯದ ವಿಗ್ರಹಗಳಿಗೆ ಗ್ರಹಣದ ಋಣಾತ್ಮಕ ಶಕ್ತಿ ತಾಗದಿರಲು ತುಳಸಿ ಎಲೆಗಳನ್ನು ಹಾಕಿಡಲಾಗುವುದು, ಹಾನಿಕಾರಕ ಕಿರಣಗಳನ್ನು ಹೀರಿಕೊಳ್ಳುವ ಶಕ್ತಿ ತುಳಸಿಎಲೆಗೆ ಇದೆ, ಹಾಗಾಗಿ ಹೀಗೆ ಮಾಡಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications