Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಶಿವರಾತ್ರಿ ಮತ್ತು ಮಹಾಶಿವರಾತ್ರಿ ಒಂದೇ ಅಲ್ಲ, ಇವುಗಳ ನಡುವೆ ವ್ಯತ್ಯಾಸವೇನು?
ಅನೇಕ ಜನರು ಮಹಾಶಿವರಾತ್ರಿಯನ್ನು ಶಿವರಾತ್ರಿ ಎಂದು ಕರೆಯುತ್ತಾರೆ, ಆದರೆ ಅದು ಹಾಗಲ್ಲ. ಈ ಎರಡೂ ಹಬ್ಬಗಳು ವಿಭಿನ್ನವಾಗಿವೆ. ಇವುಗಳ ನಡುವೆ ಇರುವ ವ್ಯತ್ಯಾಸವೇನು ಎಂದು ನೋಡೋಣ ಬನ್ನಿ:
ಶಿವರಾತ್ರಿ: ಶಿವರಾತ್ರಿಯು ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಬರುತ್ತದೆ. ವರ್ಷದಲ್ಲಿ 12 ಶಿವರಾತ್ರಿ, ಆದರೆ ಮಹಾಶಿವರಾತ್ರಿ ವರ್ಷದಲ್ಲಿ ಒಂದೇ ದಿನ ಬರುತ್ತದೆ.

ಮಹಾಶಿವರಾತ್ರಿಯನ್ನು ವರ್ಷಕ್ಕೊಮ್ಮೆ ಮಾತ್ರ ಆಚರಿಸಲಾಗುತ್ತದೆ. ಪೌರಾಣಿಕ ಕತೆಯ ಪ್ರಕಾರ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯ ವಿವಾಹವು ನಡೆಯಿತು. ಆದ್ದರಿಂದ ಈ ಹಬ್ಬವನ್ನು ಶಿವ ಮತ್ತು ಪಾರ್ವತಿಯರ ವಿವಾಹದ ನೆನಪಿಗಾಗಿ ಆಚರಿಸಲಾಗುವುದು. ಆದ್ದರಿಂದ ಮಹಾಶಿವರಾತ್ರಿಯನ್ನು ವರ್ಷಕ್ಕೊಮ್ಮೆ ಆಚರಿಸಲಾಗುತ್ತದೆ ಆದರೆ ಶಿವರಾತ್ರಿಯನ್ನು ಪ್ರತಿ ತಿಂಗಳು ಆಚರಿಸಲಾಗುತ್ತದೆ.
ಶಿವ-ಪಾರ್ವತಿ ವಿವಾಹ
ಮಾತೆ ಪಾರ್ವತಿ ಮತ್ತು ಶಿವನ ವಿವಾಹವು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ನಡೆಯಿತು. ಈ ದಿನಾಂಕವನ್ನು ಶಿವ ಮತ್ತು ತಾಯಿ ಪಾರ್ವತಿಯ ಸಂಯೋಗದ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನದಂದು ಶಿವನನ್ನು ಪೂಜಿಸುವುದರಿಂದ ಶೀಘ್ರದಲ್ಲೇ ಸಂತೋಷವಾಗುತ್ತದೆ ಎಂದು ಹೇಳಲಾಗುವುದು. ಮಹಾಶಿವರಾತ್ರಿಯಂದು ಉಪವಾಸ ಮಾಡುವುದರಿಂದ ಮದುವೆಯಲ್ಲಿನ ಅಡೆತಡೆಗಳು ದೂರವಾಗುತ್ತವೆ ಮತ್ತು ಶೀಘ್ರದಲ್ಲೇ ಮದುವೆ ನಡೆಯುತ್ತದೆ ಎಂಬ ನಂಬಿಕೆಯೂ ಇದೆ.
ಮಹಾಶಿವರಾತ್ರಿಯನ್ನು ಏಕೆ ಆಚರಿಸಲಾಗುತ್ತದೆ?
ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯ ವಿವಾಹವು ನಡೆಯಿತು. ಆದ್ದರಿಂದ ಈ ಹಬ್ಬವನ್ನು ಶಿವ ಮತ್ತು ಪಾರ್ವತಿಯ ಮದುವೆಯ ದಿನವೆಂದು ಶಿವ ಭಕ್ತರು ಈ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸುತ್ತಾರೆ. ಈ ದಿನ ಶಿವ ಭಕ್ತರು ಭಕ್ತಿ ಮತ್ತು ಪೂರ್ಣ ಉತ್ಸಾಹದಿಂದ ಆಚರಿಸುತ್ತಾರೆ.
ಮಹಾಶಿವರಾತ್ರಿಯಂದು ಶಿವಲಿಂಗವನ್ನು ಪೂಜಿಸುವುದೇಕೆ?
ಮಹಾಶಿವರಾತ್ರಿಯ ದಿನದಂದು ಶಿವನು ತನ್ನ ಶಿವಲಿಂಗ ರೂಪದಲ್ಲಿ ಕಾಣಿಸಿಕೊಂಡನು. ನಂತರ ಮೊದಲು ಬ್ರಹ್ಮಾಜಿ ಮತ್ತು ವಿಷ್ಣುವು ಅವರನ್ನು ವಿಧಿವತ್ತಾಗಿ ಪೂಜಿಸಿದರು. ಈ ಕಾರಣಕ್ಕಾಗಿ ಮಹಾಶಿವರಾತ್ರಿಯ ದಿನದಂದು ವಿಶೇಷವಾಗಿ ಶಿವಲಿಂಗವನ್ನು ಪೂಜಿಸುವ ಸಂಪ್ರದಾಯವಿದೆ.
ಈ ವರ್ಷ ಶಿವರಾತ್ರಿ, ಮಹಾಶಿವರಾತ್ರಿ ಒಂದೇ ದಿನ
ಕಾಕತಾಳೀಯವೆಂಬಂತೆ ಈ ವರ್ಷ ಶಿವರಾತ್ರಿ ಹಾಗೂ ಮಹಾಶಿವರಾತ್ರಿ ಒಂದೇ ದಿನ ಬಂದಿರುವುದು ಹಬ್ಬದ ಸಡಗರ ಮತ್ತಷ್ಟು ಹೆಚ್ಚಿಸಿದೆ.
300 ವರ್ಷಗಳ ಬಳಿ ಇಂಥದ್ದೊಂದು ಮಹಾ ಯೋಗ ಏರ್ಪಟ್ಟಿದೆ
ಈ ವರ್ಷದ ಶಿವರಾತ್ರಿಯ ವಿಶೇಷವೆಂದರೆ 300 ವರ್ಷಗಳ ಬಳಿಕ ಮಹಾಶಿವರಾತ್ರಿಯಂದು ಮಹಾಯೋಗ ಏರ್ಪಟ್ಟಿದೆ. ಈ ವರ್ಷದ ಮಹಾಶಿವರಾತ್ರಿಯಂದು ಅಂಥದ್ದೊಂದು ಯೋಗ ಕೂಡಿ ಬಂದಿದೆ ಈ ಅವಧಿಯಲ್ಲಿ ಶಿವ ಮಂತ್ರಗಳನ್ನು ಪಠಣೆ ಮಾಡುವುದರಿಂದ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು. ಶಿವಯೋಗ ಮಾರ್ಚ್ 7 ಮಧ್ಯರಾತ್ರಿ 12:46ರಿಂದ ಶಿವಯೋಗ ಉಂಟಾಗಲಿದೆ. ಈ ದಿನ ಸರ್ವರ್ಥ ಸಿದ್ಧಿ ಯೋಗ ಬೆಳಗ್ಗೆ 06:38ರಿಂದ 10:41ರವರೆಗೆ ಇರಲಿದೆ.
ಶುಕ್ರ ಪ್ರದೋಷ ಮತ್ತು ಮಹಾಶಿವರಾತ್ರಿ ಒಂದೇ ದಿನ ಬಂದಿದೆ
ಮಾರ್ಚ್‌ನಲ್ಲಿ ಪ್ರದೋಷ ವ್ರತ ಮಾರ್ಚ್ 8ಕ್ಕೆ ಬಂದಿದೆ. ಇದೇ ದಿನ ಮಹಾ ಶಿವರಾತ್ರಿ, ಪ್ರದೋಷ ವ್ರತ ಕೂಡ ಶಿವನ ಆರಾಧನೆಗೆ ತುಂಬಾ ವಿಶೇಷವಾದ ದಿನ. ಇದೀಗ ಎರಡು ಜೊತೆಗೆ ಬಂದಿರುವುದರಿಂದ ಈ ದಿನ ಹೊಸ ವೃತ್ತಿ ಆರಂಭಿಸಲು, ಹೊಸ ಉದ್ಯೋಗ ಮಾಡಲು ಈ ದಿನ ಶುಭವಾಗಿದೆ.
ಈ ದಿನದಂದು ಏರ್ಪಟ್ಟಿರುವ ವಿಶೇಷ ಯೋಗಗಳು
ಮಹಾಶಿವರಾತ್ರಿಯಂದು ಶಿವ ಯೋಗವಿದೆ. ಈ ಯೋಗದ ಸಮಯದಲ್ಲಿ ಮನೆಯಲ್ಲಿ ಶುಭ ಕಾರ್ಯ ಮಾಡಿದರೆ ಒಳ್ಳೆಯದು.
ಸಿದ್ಧಿ ಯೋಗ
ಸಿದ್ಧಿ ಯೋಗ ಗಣೇಶನಿಗೆ ಸಂಬಂಧಿಸಿದೆ. ಈ ಯೋಗದಲ್ಲಿ ನೀವು ಪೂಜೆ ಮಾಡುವುದರಿಂದ ವಿಘ್ನ ನಿವಾರಕ ನಿಮ್ಮೆಲ್ಲಾ ಸಮಸ್ಯೆ ದೂರ ಮಾಡುತ್ತಾನೆ ರಂದು ನಂಬಲಾಗಿದೆ.
ಶ್ರವಣ ನಕ್ಷತ್ರ ಶನಿ ದೇವ ಶ್ರವಣ ನಕ್ಷತ್ರದ ಅಧಿಪತಿ. ,
ಈ ನಕ್ಷತ್ರದಲ್ಲಿ ಯಾವುದೇ ಕಾರ್ಯ ಮಾಡಿದರೆ ಶುಭವಾಗುವುದು ಎಂದು ಹೇಳಲಾಗುವುದು. ಈ ದಿನ ಮನೆಗೆ ಯಾವುದಾದರೂ ವಸ್ತುಗಳನ್ನು ತಂದರೆ ಒಳ್ಳೆಯದು ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
