ನಿಮ್ಮ ರಾಶಿಗೆ ಜನ್ಮದತ್ತವಾಗಿ ಬಂದಿರುವ ವರವೇನು? ಶಾಪವೇನು ಗೊತ್ತಾ?

ಜ್ಯೋತಿಷ್ಯದಲ್ಲಿ ಪ್ರತಿಯೊಂದು ರಾಶಿಯು ವಿಭಿನ್ನ ಯೋಗ, ವಿಭಿನ್ನ ಲಾಭ ಹಾಗೆ ದೋಷಗಳ ಹೊಂದಿರುತ್ತದೆ. ವ್ಯಕ್ತಿಯೊಬ್ಬರ ಜಾತಕ ಆತನ ಇಡೀ ಜೀವನವನ್ನು ಚಿತ್ರಿಸುವ ರೂಪಕವಾಗಿರುತ್ತೆ. ಜಾತಕದ ಮೂಲಕ ಜೀವನದ ಏಳು ಬೀಳುಗಳು, ಸಾಧನೆ, ಸಂಕಷ್ಟಗಳು ಎಲ್ಲವನ್ನು ಕೂಡ ಅವಲೋಕಿಸಬಹುದು. ಹೀಗಾಗಿ ಜ್ಯೋತಿಷ್ಯದಲ್ಲಿ ಗ್ರಹಗತಿಗಳ ಹಾಗೂ ಜಾತಕ ಫಲಕ್ಕೆ ಅತೀ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ.

ವ್ಯಕ್ತಿಯೊಬ್ಬ ಜನಿಸಿದ ದಿನ, ಗಳಿಗೆ, ಆತನ ರಾಶಿಯಿಂದಾಗಿ ಹಲವು ಲಾಭಗಳಿಗೆ ಹೇಗೆ ಕಾರಣನಾಗುತ್ತಾನೋ ಹಲವು ಸಂಕಷ್ಟಗಳು ಆತನ ಜನ್ಮ ನಕ್ಷತ್ರ ಹಾಗೂ ಗ್ರಹಗತಿಯ ಕಾರಣದಿಂದ ಉಂಟಾಗಲಿದ ಎಂದು ನಂಬಲಾಗಿದೆ. ಒಬ್ಬ ವ್ಯಕ್ತಿಯು ಜನಿಸಿದಾಗ, ಅವರು ಕೆಲವು ಆಶೀರ್ವಾದ ಮತ್ತು ಶಾಪಗಳನ್ನು ಪಡೆಯುತ್ತಾನೆ.

What Is The Blessing And Curse That You Were Born With Your Zodaic Sign

ಹಾಗಾದ್ರೆ ಯಾವ ರಾಶಿಯವರು ಜನಿಸುವಾಗಲೇ ಯಾವ ರೀತಿಯ ವರ ಹಾಗೂ ಶಾಪವನ್ನು ಪಡೆದಿರುತ್ತಾರೆ ಎಂಬುದನ್ನು ನಾವಿಂದು ತಿಳಿಯೋಣ. ಹಾಗೆ ಯಾವ ರಾಶಿಯವರಲ್ಲಿ ಯಾವ ವರವಿದೆ ಯಾವುದು ಅವರಲ್ಲಿ ಶಾಪವಾಗಿ ಪರಿಣಮಿಸಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯವರು ಎಲ್ಲದರಲ್ಲೂ ಮುಂಚೂಣಿಯಲ್ಲಿರಬೇಕು ಎಂದು ಬಯಸುವ ಜನರು. ನಿಮಗೆ ಸ್ವಾಭಾವಿಕವಾಗಿ ನಾಯಕತ್ಬಗಳು ಬಂದಿರುವುದು ವರವಾಗಿರಲಿದೆ. ಹಾಗೆ ನಿಮ್ಮ ಭಾವನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ನಿಮ್ಮ ಸಂಬಂಧಿಗಳು, ಕುಟುಂಬಸ್ಥರು ವಿಫಲರಾಗುವುದು ನಿಮ್ಮ ಶಾಪವಾಗಿದೆ.

ವೃಷಭ ರಾಶಿ

ವೃಷಭ ರಾಶಿಯವರು ಕೆಲಸಗಳನ್ನು ಮಾಡುವುದರಲ್ಲಿ ಉತ್ತಮರು. ಅವರು ಅಡೆತಡೆಗಳನ್ನು ಮೀರಿ ತಮ್ಮ ಕಾರ್ಯ ಸಾಧನೆಗೆ ಶ್ರಮಿಸುವವರು. ಹಾಗೆ ನಿಮ್ಮ ತತ್ವ ಆದರ್ಶಗಳು ನಿಮಗೆ ವರವಾಗಿವೆ. ಆದರೆ ನಿಮಗೆ ಬೇಕಾಗಿರುವುದನ್ನು ಪಡೆಯುವವರೆಗೂ ನಿಮಗೆ ನೆಮ್ಮದಿ ಇಲ್ಲದೆ ಇರುವುದು ಶಾಪವಾಗಿ ಪರಿಣಮಿಸುತ್ತದೆ.

ಮಿಥುನ ರಾಶಿ

ಮಿಥುನ ರಾಶಿಯವರು ದ್ವಂದ್ವ ವ್ಯಕ್ತಿತ್ವದ ವ್ಯಕ್ತಿಗಳಾಗಿ ಕಾಣಿಸಲಿದ್ದಾರೆ. ಪರಿಸ್ಥಿತಿಗೆ ಹೊಂದಿಕೊಳ್ಳಲು ಹಾಗು ವ್ಯತಿರಿಕ್ತ ಪರಿಸ್ಥಿತಿಯಲ್ಲೂ ಸಮಾಧಾನವಾಗಿ ವರ್ತಿಸುವುದು ನಿಮ್ಮ ವರವಾಗಿದೆ. ಆದರೆ ಯವುದೇ ಒಂದು ವಿಷಯವನ್ನು ನಂಬುವ ಮುನ್ನ ನಿಮ್ಮಲ್ಲಿ ಉಂಟಾಗುವ ಗೊಂದಲ ನಿಮಗೆ ಯಾವಾಗಲು ಶಾಪವಾಗಿರಲಿದೆ.

ಕರ್ಕ ರಾಶಿ

ಕರ್ಕಾಟಕ ರಾಶಿಯವರು ಇತರರಿಗೆ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುತ್ತಾರೆ. ಸುಲಭವಾಗಿ ಭಾವುಕರಾಗುವ ಜನರು. ಇತರರ ಕಡೆಗೆ ಅವರ ದಯೆಯು ಒಂದು ಆಶೀರ್ವಾದವಾಗಿದೆ. ಇದರಿಂದ ಇತರರು ಸುಲಭವಾಗಿ ಮೋಸ ಹೋಗುತ್ತಾರೆ. ಇದು ಅವರಲ್ಲಿ ಶಾಪವಾಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯವರು ತಮ್ಮ ಯೋಗಕ್ಷೇಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಸಂಬಂಧವನ್ನು ಕಾಪಾಡಿಕೊಳ್ಳಲು ಅವರು ಯಾವುದೇ ಹಂತಕ್ಕೆ ಹೋಗುತ್ತಾರೆ. ಸತ್ಯ ಮತ್ತು ಪ್ರಾಮಾಣಿಕತೆ ಅವರ ವರವಾಗಿದ್ದರೆ, ನೀವು ನಂಬಿಕೆ ಉಳಿಸಿಕೊಳ್ಳಲು ಹಾಗೂ ಸಂಬಂಧಗಳ ಕಾಪಾಡಲು ಕಷ್ಟಪಡುವುದು ನಿಮಗೆ ಶಾಪವಾಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರು ಯಾವುದೇ ಕಾರ್ಯವನ್ನು ನಿಖರವಾಗಿ ಯೋಜಿಸುವ ಮತ್ತು ಕಾರ್ಯಗತಗೊಳಿಸುವ ಜನರಾಗಿದ್ದಾರೆ. ಯಾವುದೇ ನಿರ್ಧಾರವನ್ನು ಸರಿಯಾಗಿ ವಿಶ್ಲೇಷಿಸಿ ತೆಗೆದುಕೊಳ್ಳುವ ಸಾಮರ್ಥ್ಯ ಅವರಿಗೆ ವರವಾಗಿದೆ. ಹಾಗೆ ಹಣಕಾಸು ವಿಚಾರದಲ್ಲಿ ಅವರ ದುಡುಕಿನ ನಿರ್ಧಾರ ಶಾಪವಾಗುತ್ತದೆ.

ತುಲಾ ರಾಶಿ

ತುಲಾ ರಾಶಿಯವರು ಜೀವನದ ಎಲ್ಲಾ ಸಂದರ್ಭಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವವರು. ಪ್ರೀತಿ ಹಂಚುವಂತಹ ಅವರ ಗುಣವು ಅವರಿಗೆ ವರವಾದರೆ, ಯಾವಾಗಲು ಒಳ್ಳೆಯದು ಮಾಡುವಾಗ ಅವರಿಗಾಗುವ ಸಮಸ್ಯೆಗಳು ಶಾಪವಾಗುತ್ತವೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಚಾಕಚಕ್ಯತೆಯಿಂದ ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಎಲ್ಲಾ ಸಂದರ್ಭಗಳನ್ನು ಅರ್ಥೈಸಿಕೊಂಡು, ಅದನ್ನು ನಿಭಾಯಿಸುವುದು ವರವಾಗಿದೆ. ಹಾಗೆ ಕೆಟ್ಟವರನ್ನು ನೀವು ಗುರುತಿಸಲು ಸಾಧ್ಯವಾಗದೆ ಅವರಿಂದಲೇ ಸಮಸ್ಯೆಗೆ ತುತ್ತಾಗುವುದು ಶಾಪವಾಗುತ್ತದೆ.

ಧನು ರಾಶಿ

ಧನು ರಾಶಿಯವರು ತಮ್ಮ ಸ್ವಾತಂತ್ರ್ಯ ಮತ್ತು ಬಯಕೆಗೆ ಹೆಚ್ಚಿನ ಒತ್ತು ನೀಡುವವರು. ಸವಾಲುಗಳನ್ನು ಯಾವುದೇ ಅಡೆತಡೆಯಿಲ್ಲದೆ ನಿಭಾಯಿಸಿ ಅದರಲ್ಲಿ ಯಶಸ್ಸುಗಳಿಸುವ ನಿಮ್ ಸಾಮರ್ಥ್ಯ ವರವಾಗಿ ನಿಮಗೆ ಬಂದಿದೆ. ಆದರೆ ಬಹುಬೇಗ ನೀವು ನೋವಿಗೆ ಒಳಗಾಗುವುದು ನೊಂದುಕೊಳ್ಳುವುದು ಶಾಪವಾಗಿದೆ.

ಮಕರ ರಾಶಿ

ಮಕರ ರಾಶಿಯವರು ಜೀವನದಲ್ಲಿ ಎಲ್ಲವನ್ನೂ ಹೊಸ ದೃಷ್ಟಿಕೋನದಿಂದ ನೋಡುವ ಜನರು. ಎಲ್ಲಾ ಸಂದರ್ಭದಲ್ಲೂ ನೀವು ನಗುವಿನ ಮೂಲಕ ಗೆಲ್ಲಬಹುದು ಎಂಬುದನ್ನು ಸಾಬೀತುಪಡಿಸುವುದು ನಿಮ್ಮ ವರವಾಗಲಿದೆ. ಹಾಗೆ ನಿಮ್ಮಿಂದ ಬೇರೆಯವರು ಲಾಭ ಪಡೆದು ನಿಮಗೆ ಶಾಪವಾಗಿ ಪರಿಣಮಿಸುತ್ತಾರೆ.

ಕುಂಭ ರಾಶಿ

ಯಾವುದರಲ್ಲೂ ಆತ್ಮವಿಶ್ವಾಸದಿಂದ ವರ್ತಿಸುವುದರಲ್ಲಿ ಕುಂಭ ರಾಶಿಯವರಿಗಿಂತ ಮಿಗಿಲಾದವರು ಯಾರೂ ಇಲ್ಲ. ನೀವು ದಾನ ಧರ್ಮ, ದಯೆ, ಪ್ರೀತಿಯಲ್ಲಿ ಎತ್ತಿದ ಕೈ ಇವು ನಿಮಗೆ ವರದಾನವಾಗಿ ಬಂದಿವೆ. ಹಾಗೆ ನಿಮ್ಮ ಪ್ರಾಮಾಣಿಕತೆ ಹಾಗೂ ಸತ್ಯ ಜೀವನವೇ ನಿಮಗೆ ಶಾಪವಾಗಿ ಪರಿಣಮಿಸುವುದು ದೊಡ್ಡ ವಿಪರ್ಯಾಸವಾಗಲಿದೆ.

ಮೀನ ರಾಶಿ

ಮೀನ ರಾಶಿಯವರು ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಅವರ ಅಸಾಧಾರಣ ಕಲ್ಪನೆಯೇ ಅವರ ಕೊಡುಗೆಯಾಗಿದೆ. ಇಲ್ಲದ್ದನ್ನು ಕಲ್ಪಿಸಿಕೊಂಡು ಮನಃಶಾಂತಿ ಕೆಡಿಸಿಕೊಳ್ಳುವುದು ನಿಮಗೆ ಶಾಪವಾಗಿ ಪರಿಣಮಿಸಲಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

What Is The Blessing And Curse That You Were Born With Your Zodiac Sign?

Let us find out today what kind of blessings and curses each zodiac sign has at birth. So, let us find out today what blessings each zodiac sign has and what will become a curse for them.
Story first published: Sunday, December 22, 2024, 11:54 [IST]
X
Desktop Bottom Promotion