Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
11/11 ಸಂಖ್ಯೆ ಹಿಂದಿದ್ಯಾ ಅದೃಷ್ಟದ ಬೇಟೆ..! ಏಂಜಲ್ ನಂಬರ್ ಅರ್ಥವೇನು?
ನೀವು ಸಂಖ್ಯಾಶಾಸ್ತ್ರದಲ್ಲಿ ನಂಬಿಕೆ ಇಟ್ಟವರಾಗಿದ್ದರೆ ನೀವು ಏಂಜಲ್ ನಂಬರ್‌ಗಳ ನಂಬುತ್ತಿರಬಹುದು. ಅಂದ್ರೆ ಕೆಲವೊಂದು ಸಂಖ್ಯೆಗಳು ನಮಗೆ ಅದೃಷ್ಟ ತರಲಿದೆ ಎಂದು ನಂಬುವುದಾಗಿದೆ. ಅದರಲ್ಲಿ ಕೆಲವೊಂದು ಸಂಖ್ಯೆಗಳು ಕೆಲವೊಂದು ರಾಶಿಯವರು ಹಾಗೂ ನಕ್ಷತ್ರದವರಿಗೆ ಅದೃಷ್ಟ ಹೊತ್ತು ತರಲಿವೆ ಎಂದು ಹೇಳಲಾಗುತ್ತದೆ. ಹೀಗಾಗಿ ಏಂಜಲ್ ನಂಬರ್‌ಗಳ ನೋಡುವುದು, ಅವುಗಳಿಗೆ ಅನುಸಾರವಾಗಿ ದಿನನಿತ್ಯದ ಕಾರ್ಯ ಮಾಡುವುದರಿಂದ ಶುಭವಾಗಲಿದೆ ಎಂದು ನಂಬಲಾಗಿರುತ್ತದೆ.
ಏಂಜೆಲ್ ಸಂಖ್ಯೆಗಳಾದ 111, 222, 333 ಅಥವಾ 11:11, 10:10 ಸೇರಿ ಹಲವು ಸಂಖ್ಯೆಗಳು ಬಹಳ ಅದೃಷ್ಟ ಸಂಖ್ಯೆ ಎಂದು ಭಾವಿಸಲಾಗುತ್ತದೆ. ಹಾಗೆ ನಾಳೆಯ ದಿನಾಂಕ ಕೂಡ ಈ ಏಂಜಲ್ ನಂಬರ್ ಜೊತೆ ಸೇರಿಕೊಂಡಿದೆ, ನಾಳೆಯ ದಿನಾಂಕ 11/11 ಎಂದಾಗುತ್ತದೆ ಇದರ ಅರ್ಥ 1111 ಎಂದು ಭಾವಿಸಲಾಗುತ್ತದೆ. ಈ 1111 ಸಂಖ್ಯೆಯು ಆಧ್ಯಾತ್ಮಿಕ ಅರ್ಥಗಳನ್ನು ತನ್ನಲ್ಲಿಟ್ಟುಕೊಂಡಿದೆ.

ಹಾಗಾದ್ರೆ ನಾವಿಂದು ದಿನಾಂಕ 11/11ರ ಅರ್ಥ ಏನು? ಯಾರಿಗೆ ಲಾಭವಾಗಲಿದೆ. ಇದರ ಪ್ರಯೋಜನವೇನು ಎಂಬ ಕುರಿತು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ. ಹಾಗೆ ಸಂಖ್ಯಾಶಾಸ್ತ್ರದಲ್ಲಿ ಈ ಸಂಖ್ಯೆಯನ್ನು ಶಕ್ತಿಯ ಸಂಕೇತ , ಅದೃಷ್ಟದ ಸಂಕೇತ ಎಂದು ನಂಬಲಾಗಿದೆ. ಇದು ನಿಮ್ಮಲ್ಲಿ ಹೊಸತನ, ಹೊಸ ಕಾರ್ಯಕ್ಕೆ ಸ್ಪೂರ್ತಿಯಾಗುತ್ತದೆ ಎನ್ನಲಾಗಿದೆ.
ಈ ಸಮಯದಲ್ಲಿ ಮಾಡುವ ಪ್ರತಿಯೊಂದು ಕಾರ್ಯಗಳಲ್ಲಿ ಯಶಸ್ಸು ಪಡೆಯಬಹುದು ಎಂಬುದು ಸಂಖ್ಯಾಶಾಸ್ತ್ರದ ಒಳಾರ್ಥವಾಗಿದೆ. ಅಲ್ಲದೆ ಈ ಸಂಖ್ಯೆಗಳು ನಿಮ್ಮನ್ನು ಕಾಯುತ್ತಿರುವ ಗಾರ್ಡಿಯನ್ ನೀಡುವ ಸಂಕೇತ ಅಂತಲೂ ನಂಬಲಾಗುತ್ತದೆ. ಸಂಖ್ಯಾ ಶಾಸ್ತ್ರದ ಪ್ರಕಾರ 11 ಸಂಖ್ಯೆ ತಾಳ್ಮೆ, ಬುದ್ಧಿವಂತಿಕೆ, ಸೂಕ್ಷ್ಮತೆಯನ್ನು ಪ್ರತಿನಿಧಿಸುತ್ತದೆ. ಜೊತೆಗೆ ಅಧ್ಯಾತ್ಮಿಕತೆಯನ್ನೂ ಈ ಸಂಖ್ಯೆ ಸೂಚಿಸುತ್ತದೆ. ಹಾಗೆ ಈ ಸಂಖ್ಯೆ ಅದೃಷ್ಟ ತರಲಿದೆ.
ಇನ್ನು 1111 ಅವಳಿ ಸಂಖ್ಯೆಯು ಉದ್ಯೋಗ, ಆರೋಗ್ಯ, ಆರ್ಥಿಕ ಸ್ಥಿತಿ ಸೇರಿ ನಿಮ್ಮ ಜೀವನದಲ್ಲಿ ಬದಲಾವಣೆಗಳ ಬಯಸುವ ಸಂಖ್ಯೆಯಂತೆ. ಹೀಗಾಗಿ ಕೆಲವರು ಶುಭ ಕಾರ್ಯ ಮಾಡುವಾಗ ಸಮಯ 11:11 ಆಗಲಿ ಎಂದು ಕಾಯುತ್ತಾರೆ, ಅಲ್ಲವೆ 11:11ಕ್ಕೆ ಶುಭಾಶಯ ಕೋರುವುದು, ಯಾವುದಾದರು ಕೆಲಸ ಆರಂಭಿಸುವುದು ಮಾಡುತ್ತಾರೆ.
ನಾವು ಗಡಿಯಾರದಲ್ಲಿ ಸಮಯ 11:11 ಆದಾಗ ಗಡಿಯಾರ ನೋಡುವುದು ಕೂಡ ಶುಭ ಸೂಚಕ ಎಂದು ಹೇಳಲಾಗುತ್ತದೆ. ನೀವು ಯಾವುದೇ ಮುನ್ಸೂಚನೆಯಿಲ್ಲದೆ ಸಮಯ ನೋಡಿದಾಗ ನಿಮಗೆ 11:11 ಎಂಬ ಸಂಖ್ಯೆ ಕಾಣಿಸಿದರೆ ಅದು ಶುಭ ಸೂಚಕ ಎಂಬುದು ಸಂಖ್ಯಾಶಾಸ್ತ್ರದಲ್ಲಿ ಹೇಳಲಾದ ವಾದವಾಗಿದೆ. ಹಾಗೆ 1111 ಎಂಬ ಸಂಖ್ಯೆ ಕನಸಿನಲ್ಲಿ ಕಾಣಿಸಿದರೂ ಕೂಡ ಯಶಸ್ಸು ಕಾದಿದೆ ಎಂಬ ಅರ್ಥ ನೀಡುತ್ತದೆ.
ಇನ್ನು ನಾಳೆ 11/11 ಎಂಬ ದಿನಾಂಕ ಬರುತ್ತಿದೆ. ಈ ಇಡೀ ದಿನ ಹಲವರಿಗೆ ಫಲಪ್ರದವಾಗಬಹುದು. ವಿವಾಹ, ಹುಟ್ಟುಹಬ್ಬ, ಶುಭ ಕಾರ್ಯಗಳು, ವಾಹನ ಖರೀದಿ, ಹೊಸ ಮನೆ ಪ್ರವೇಶ, ಉದ್ಯೋಗ ಹೀಗೆ ಹತ್ತಾರು ಕಾರ್ಯಗಳನ್ನು ನಡೆಸುವುದು ನಾವು ನೋಡಬಹುದು. ಕೆಲವರಿಗೆ ಇದು ಅದೃಷ್ಟ ತರಲಿದೆ ಎಂಬುದನ್ನು ಕೂಡ ಸಂಖ್ಯಾಶಾಸ್ತ್ರ ಹೇಳುತ್ತದೆ.
1111 ನಂಬರ್ ಪಡೆದ ಸ್ಟಾರ್
ವಾಹನ ಖರೀದಿಸಿದ ಬಳಿಕ ಆ ವಾಹನಕ್ಕೆ 1111 ನಂಬರ್ ಸಿಗುವುದು ಅಪರೂಪ. ಈ ಫ್ಯಾನ್ಸಿ ನಂಬರ್ ಪಡೆಯಲು ಲಕ್ಷ ಲಕ್ಷ ರೂಪಾಯಿ ನೀಡುವುದನ್ನು ನಾವು ನೋಡಿದ್ದೇವೆ. ಈ ಸಾಲಿಗೆ ಟಾಲಿವುಡ್ ನಟ 'ಮೆಗಾ ಸ್ಟಾರ್' ಚಿರಂಜೀವಿ ಕೂಡ ಸೇರಿಕೊಂಡಿದ್ದಾರೆ. ಅವರು ತಮ್ಮ ಹೊಸ ಟೊಯೊಟಾ ಕಂಪನಿಯ 'ವೆಲ್ಫೈರ್' ಕಾರು ಖರೀದಿಸಿ ಅದಕ್ಕೆ ಫ್ಯಾನ್ಸಿ ನಂಬರ್ ಪಡೆದಿದ್ದರು.
ಅದೃಷ್ಟಶಾಲಿ ಸಂಖ್ಯೆಯಾಗಿದ್ದ 1111 ನಂಬರ್ ಅನ್ನು ಅವರು ಪಡೆದಿದ್ದರು. ಈ ನಂಬರ್ ಪಡೆಯಲು ಅವರು ಬರೋಬ್ಬರಿ 5 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ವರದಿಯಾಗಿತ್ತು. ಈ ಕಾರಿನ ಬೆಲೆ ಕೂಡ ಕಡಿಮೆ ಏನಲ್ಲ ಇದು ಭಾರತದಲ್ಲಿ ಬರೋಬ್ಬರಿ 1.2 ಕೋಟಿ ರೂಪಾಯಿಗೆ ಮಾರಾಟವಾಗುವ ಐಷಾರಾಮಿ ಕಾರಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications