Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸಂಖ್ಯಾಶಾಸ್ತ್ರ ಭವಿಷ್ಯ: ಈ ವಾರ ನಿಮ್ಮ ಸಂಖ್ಯೆಗೆ ಈ ಏಳು ದಿನಗಳು ಹೇಗಿರಲಿದೆ?
ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ ನಿಮಗೆ ಹೇಗಿರಲಿದೆ ಎಂಬ ಭವಿಷ್ಯ ಹೇಳಲಾಗಿದೆ. ನೀವು ಹುಟ್ಟಿದ ದಿನಾಂಕ ಪ್ರಕಾರ ನಿಮ್ಮ ಜನ್ಮ ಸಂಖ್ಯೆ ತಿಳಿಯಬಹುದು, ಬನ್ನಿ ಈ ವಾರ ಯಾರಿಗೆಲ್ಲಾ ಅದೃಷ್ಟಕರ ಎಂದು ನೋಡೋಣ ಬನ್ನಿ:

ಸಂಖ್ಯೆ 1(ಹುಟ್ಟಿದ ದಿನಾಂಕ 1,10,19,28)
ಕೆಲಸದಲ್ಲಿ ಈ ವಾರ ನಿಮಗೆ ಶುಭವಾಗಲಿದೆ, ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ. ಇನ್ನು ಕೆಲವರಿಗೆ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳುವ ಅವಕಾಶವೂ ಸಿಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೂ ಈ ವಾರ ಫಲ ಪ್ರದವಾಗಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತದ್ದರೆ ಈ ವಾರ ತುಂಬಾ ಒಳ್ಳೆಯದಿದೆ. ಇನ್ನು ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ನೀವು ಸಂಬಂಧದದ ಕಡೆಗೆ ಗಮನಹರಿಸಿಬೇಕು, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ, ಆರೋಗ್ಯದ ದೃಷ್ಟಿಯಿಂದ ಈ ವಾರ ಒಳ್ಳೆಯದಿದೆ, ಆರೋಗ್ಯ ಸಮಸ್ಯೆಯಿದ್ದರೆ ಈ ವಾರ ಸುಧಾರಣೆ ಕಂಡು ಬರಲಿದೆ.
ಸಂಖ್ಯೆ 2 ( ಹುಟ್ಟಿದ ದಿನಾಂಕ 2,11,20,29)
ಕುಟುಂಬ ಜೀವನ ಚೆನ್ನಾಗಿರಲಿದೆ. ಪ್ರೇಮಿಗಳಿಗೆ ಈ ವಾರ ತುಂಬಾ ರೊಮ್ಯಾಂಟಿಕ್ ಆಗಿರಲಿದೆ. ವಿವಾಹಿತರಿಗೆ ಈ ಏಳೂ ದಿನಗಳು ತುಂಬಾ ಚೆನ್ನಾಗಿರಲಿದೆ. ಹಣದ ಸ್ಥಿತಿ ಚೆನ್ನಾಗಿರಲಿದೆ, ಆದರೆ ಹಣದ ಹೂಡಿಕೆಯ ನಿರ್ಧಾರ ಈ ವಾರ ತೆಗೆದುಕೊಳ್ಳದಿದ್ದರೆ ಒಳ್ಳೆಯದು. ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ವಾರ ಉತ್ತಮವಾಗಿರಲಿದೆ. ಸ್ವಂತ ವ್ಯವಹಾರ ಪ್ರಾರಮಭಿಸಲು ಬಯಸಿದ್ದರೆ ಈ ವಾರ ನಿಮಗೆ ಉತ್ತಮವಾಗಿದೆ.
ಸಂಖ್ಯೆ 3 ( ಹುಟ್ಟಿದ ದಿನಾಂಕ 3,12,21,30)
ಈ ವಾರ ನಿಮ್ಮ ಹಾಗೂ ಸಂಗಾತಿಯ ನಡುವೆ ಕೆಲ ಭಿನ್ನಾಭಿಪ್ರಾಯವಿರಲಿದೆ. ನೀವಿಬ್ಬರು ಮುಕ್ತವಾಗಿ ಮಾತನಾಡಿದರೆ ಸಮಸ್ಯೆ ಬಗೆಹರಿಯಲು ಸಹಾಯವಾದೀತು. ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ. ನೀವು ಹೊಸ ಆಸ್ತಿ ಇತ್ಯಾದಿಗಳನ್ನು ಖರೀದಿಸಲು ಬಯಸಿದರೆ ಈ ವಾರ ನಿಮಗೆ ಅನುಕೂಲಕರವಾಗಿದೆ. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ, ಆರೋಗ್ಯ ಚೆನ್ನಾಗಿರಲಿದೆ.
ಸಂಖ್ಯೆ 4( ಹುಟ್ಟಿದ ದಿನಾಂಕ 4,13,22,31)
ಈ ವಾರ ಮನೆಯಲ್ಲಿ ಖುಷಿಯ ವಾತಾವರಣ ಇರಲಿದೆ. ಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಇನ್ನು ಕೆಲಸದ ಬಗ್ಗೆ ಹೇಳುವುದಾದರೆ ನಿಮ್ಮ ಪ್ರಮುಖ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನ ಹಾಕಬೇಕು, ಇಲ್ಲದಿದ್ದರೆ ಸಮಸ್ಯೆಯಾಗಬಹುದು. ಉದ್ಯಮಿಗಳು ಈ ಅವಧಿಯಲ್ಲಿ ಕೆಲ ಅಡೆತಡೆಗಳನ್ನು ಎದುರಿಸಬಹುದು. ಆರೋಗ್ಯದ ಬಗ್ಗೆ ಗಮನಹರಿಸಿ.
ಸಂಖ್ಯೆ 5 (ಹುಟ್ಟಿದ ದಿನಾಂಕ 5,14,23)
ವಿವಾಹಿತರಿಗೆ ಈ ವಾರ ಅಷ್ಟೊಂದು ಅನುಕೂಲಕರವಲ್ಲ, ನಿಮ್ಮ ಹಾಗೂ ಸಂಗಾತಿಯ ನಡುವೆ ಕೆಲವೊಂದು ಭಿನ್ನಾಭಿಪ್ರಾಯ ಬರಬಹುದು. ಅವಾಹಿತರಿಗೆ ಈ ವಾರ ಏನಾದರೂ ಮದುವೆ ಪ್ರಸ್ತಾಪ ಬಂದರೆ ಆತುರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಉದ್ಯೋಗಿಗಳು ಕೆಲಸದ ಬಗ್ಗೆ ಅನಗ್ಯತ ಚಿಂತೆ ಬಿಡಿ, ಸಮಯ ಬಂದಾಗ ಎಲ್ಲವೂ ಸರಿಯಾಗಲಿದೆ. ವ್ಯಾಪಾರಿಗಳು ಲಾಭ ಪಡೆಯಲು ಹೆಚ್ಚಿನ ಶ್ರಮ ಹಾಕಬೇಕಾಗುವುದು.
ಸಂಖ್ಯೆ 6 ( ಹುಟ್ಟಿದ ದಿನಾಂಕ 6,15,24)
ಹಣಕಾಸಿನ ವಿಷಯಗಳಲ್ಲಿ ನೀವು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದು. ಕೆಲಸದಲ್ಲಿ ಉತ್ತಮ ಪ್ರಗತಿ ಕಂಡು ಬರಲಿದೆ, ಅಲ್ಲದೆ ನೀವು ಏನಾದರೂ ಹೂಡಿಕೆ ಮಾಡಿದ್ದರೆ ಅದರಿಂದ ಕೂಡ ಲಾಭ ಸಿಗಲಿದೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಕೆಲ ಸಮಸ್ಯೆ ಎದುರಾಗುವುದು, ಅದನ್ನು ನಿಭಾಯಿಸಲು ಪ್ರಯತ್ನಿಸಿ. ಪ್ರೇಮಿಗಳಿಗೆ ಈ ವಾರ ವಿಶೇಷವಾಗಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ.
ಸಂಖ್ಯೆ 7 (ಹುಟ್ಟಿದ ದಿನಾಂಕ 7,16,25)
ಕೆಲಸದಲ್ಲಿ ಈ ವಾರ ಉತ್ತಮವಾಗಿದೆ, ನಿಮ್ಮ ಎಲ್ಲಾ ಕೆಲಸಗಳು ನಿಮ್ಮ ಯೋಜನೆಯಂತೆ ಪೂರ್ಣಗೊಳ್ಳಲಿದೆ. ಈ ವಾರ ಹಣದ ಬಗ್ಗೆ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ಮೋಸ ಹೋಗಬಹುದು. ನಿಮ್ಮ ಸಂಗಾತಿ ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದರೆ ಎಂದು ನಿಮಗನಿಸಬಹುದು. ಆದರೆ ನೀವು ನಿಮ್ಮಿಂದ ಏನಾದರೂ ತಪ್ಪಾಗಿದೆಯೇ ಎಂದು ಕೂಡ ಆಲೋಚಿಸುವುದು ಒಳ್ಳೆಯದು.
ಸಂಖ್ಯೆ 8( ಹುಟ್ಟಿದ ದಿನಾಂಕ 8,17,26)
ಈ ವಾರ ನಿಮಗೆ ಚೆನ್ನಾಗಿರಲಿದೆ. ನಿಮ್ಮ ಸಮಸ್ಯೆ ಬಗೆಹರಿಯಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಈ ವಾರ ನೀವು ಧಾರ್ಮಿಕ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಈ ವಾರ ಕೆಲಸದ ಮೇಲೆ ತುಂಬಾನೇ ಚೆನ್ನಾಗಿರಲಿದೆ.
ಸಂಖ್ಯೆ 9 ( ಹುಟ್ಟಿದ ದಿನಾಂಕ 9,18,27)
ಉದ್ಯೋಗಿಗಳಿಗೆ, ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿದೆ. ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿಯಲ್ಲಿ ಕೆಲಸ ಸಿಗುವ ಸಾಧ್ಯತೆ ಇದೆ. ಹಣದ ವಿಷಯದಲ್ಲಿ ಈ ವಾರ ನಿಮಗೆ ಉತ್ತಮವಾಗಿರಲಿದೆ. ಸಂಬಂಧದ ಬಗ್ಗೆ ಜಾಗ್ರತೆವಹಿಸಬೇಕು. ನಿಮ್ಮ ನಡುವಿನ ಸಮಸ್ಯೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಉತ್ತಮ ಆರೋಗ್ಯಕ್ಕಾಗಿ, ನೀವು ಒತ್ತಡದಿಂದ ದೂರವಿರಬೇಕು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
