ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ ( ಮಾರ್ಚ್‌ 3-10) ಯಾರಿಗೆ ಒಳ್ಳೆಯದು, ಯಾರು ಜಾಗ್ರತೆವಹಿಸಬೇಕು

ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮ ದಿನಾಂಕಗಳನ್ನು ಲೆಕ್ಕಾಚಾರ ಮಾಡಿ ಭವಿಷ್ಯ ನೀಡಲಾಗಿದೆ, ಈ ವಾರ ನಿಮಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಸಂಖ್ಯೆ 1 ( ಜನ್ಮ ದಿನಾಂಕ 1, 10, 19, 28)

ಈ ಅವಧಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ವ್ಯಾಪಾರಸ್ಥರು ಹೊಸ ಯೋಜನೆಗಳಿಗೆ ಸಹಿ ಹಾಕಲು ಮತ್ತು ವ್ಯಾಪಾರ ವಿಸ್ತರಣೆಯನ್ನು ಯೋಜಿಸಲು ಗಮನಹರಿಸುತ್ತಾರೆ. ಆರೋಗ್ಯ ಸಮಸ್ಯೆಗಳಿದ್ದರೆ ನಿರ್ಲಕ್ಷ್ಯ ಬೇಡ. ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ, ಪರಸ್ಪರ ಪ್ರೀತಿ ಹೆಚ್ಚಾಗಲಿದೆ.

Weekly Numerology


ಸಂಖ್ಯೆ 2 (2, 11, 20,29)

ಕೆಲಸ ಅಂತ ತುಂಬಾನೇ ಒತ್ತಡಕ್ಕೆ ಒಳಗಾಗಬೇಡಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ಅನಾರೋಗ್ಯ ಸಮಸ್ಯೆಯಿದ್ದರೆ ಔಷಧಿಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ವಾಹನ ಚಾಲನೆ ಮಾಡುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು. ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗದಂತೆ ಜಾಗ್ರತೆವಹಿಸಿ, ಏನೇ ಸಮಸ್ಯೆಯಿದ್ದರೆ ಬಗೆಹರಿಸಲು ಪ್ರಯತ್ನಿಸಿ. ಯಾವುದೇ ವಿಷಯದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ.

ಸಂಖ್ಯೆ 3 ( ಜನ್ಮ ಸಂಖ್ಯೆ 03, 12, 21, 30)

ಕೆಲಸದ ಒತ್ತಡ ಅಧಿಕವಿದ್ದರೆ ಅದನ್ನು ಕಡಿಮೆ ಮಾಡಲು ಧ್ಯಾನದತ್ತ ಗಮನಹರಿಸಿ. ವ್ಯಾಪಾರಿಗಳು ಹೂಡಿಕೆ ಮಾಡುವುದರಿಂದ ಹಣ ಹೆಚ್ಚು ಖರ್ಚಾಗಲಿದೆ. ಆರೋಗ್ಯ ಚೆನ್ನಾಗಿರಲಿದೆ. ಈ ವಾರ ಹಣದ ಖರ್ಚು ಹೆಚ್ಚಿರಲಿದೆ. ಕುಟುಂಬದಲ್ಲಿ ವಾತಾವರಣ ಚೆನ್ನಾಗಿರಲಿದೆ. ಕುಟುಂಬದೊಂದಿಗೆ ಕಾರ್ಯಕ್ರಮಗಳಿಗೆ ಹೋಗುತ್ತೀರಿ, ಈ ಅವಧಿಯನ್ನು ಖುಷಿಯಿಂದ ಕಳೆಯುತ್ತೀರಿ.


ಸಂಖ್ಯೆ 4 (ಜನ್ಮ ಸಂಖ್ಯೆ 04, 13, 22, 31)

ಕೆಲಸದಲ್ಲಿ ಒತ್ತಡ ಹೆಚ್ಚಾಗಿರಲಿದೆ. ನೀವು ಟೀಂ ಜೊತೆ ಕೆಲಸ ಮಾಡುತ್ತಿದ್ದರೆ ಕೆಲಸದಲ್ಲಿ ಮತ್ತಷ್ಟು ಗಮನಹರಿಸಬೇಕು. ಅನಗ್ಯತ ಚಿಂತೆ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು ಜಾಗರೂಕರಾಗಿರಿ. ಕೆಲವೊಂದು ಮೋಸದ ವ್ಯವಹಾರದ ಬಗ್ಗೆ ಜಾಗ್ರತೆವಹಿಸಿ. ಅಲ್ಲದೆ ನಿಮ್ಮ ಸಂಗಾತಿಯ ಮೇಲೆ ಹೆಚ್ಚು ಕೆಲಸದ ಒತ್ತಡವನ್ನು ಹಾಕುವುದನ್ನು ತಪ್ಪಿಸಿ. ಕುಟುಂಬದಲ್ಲಿಯೂ ಕೆಲ ಸಮಸ್ಯೆಗಳಿದ್ದರೆ ತಾಳ್ಮೆಯಿಂದ ಬಗೆಹರಿಸಿ.

ಸಂಖ್ಯೆ 5 (ಜನ್ಮ ದಿನಾಂಕ 05, 14, 23)

ಅತಿಯಾದ ಕೆಲಸದ ಹೊರೆಯಿಂದ ಮಾನಸಿಕ ಒತ್ತಡ ಹೆಚ್ಚಾಗುವುದು. ವ್ಯಾಪಾರಿಗಳು ಈ ಸಮಯದಲ್ಲಿ ಹಣ ಹೂಡಿಕೆ ಮಾಡುವಾಗ ಜಾಗ್ರತೆವಹಿಸಿ. ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ. ಈ ಅವಧಿಯಲ್ಲಿ ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಣದ ಖರ್ಚು ಹೆಚ್ಚಿರಲಿದೆ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಸುತ್ತಿದ್ದರೆ ಕೆಲ ಅಡೆತಡೆಗಳಿರಬಹುದು, ಆದರೆ ಪ್ರಯತ್ನ ಮುಂದುವರೆಸಿ, ಫಲ ಸಿಗುವುದು. ಸಂಗಾತಿ ಜೊತೆಗೆ ಕೆಲ ಭಿನ್ನಾಭಿಪ್ರಾಯಗಳಿರಬಹುದು, ಕುಟುಂಬದಲ್ಲಿಯೂ ಕೆಲಸ ಸಮಸ್ಯೆಗಳಿರಬಹುದು.

ಸಂಖ್ಯೆ 6 (ಜನ್ಮ ಸಂಖ್ಯೆ 6, 15, 24)

ಈ ಅವಧಿಯಲ್ಲಿ ಕೆಲಸದ ಒತ್ತಡ ಜೊತೆಗೆ ಸ್ವಲ್ಪ ಒಂಟಿತನ ಕೂಡ ಕಾಡಬಹುದು, ಖಿನ್ನತೆ ಕಾಡಬಹುದು. ಶಿನವ ಮಂತ್ರ ಪಠಿಸಿ, ಇನ್ನು ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಕುಟುಂಬ ಜೀವನದಲ್ಲಿಯೂ ಕೆಲ ಸಮಸ್ಯೆಗಳಿರಬಹುದು, ಹೀಗಾಗಿ ಈ ಎಲ್ಲಾ ಸಮಸ್ಯೆಗಳಿಂದಾಗಿ ಆತ್ಮವಿಶ್ವಾಸ ಸ್ವಲ್ಪ ಕಡಿಮೆ ಇರುತ್ತದೆ.

ಸಂಖ್ಯೆ 7 (ಜನ್ಮ ಸಂಖ್ಯೆ 7, 16, 25)

ಹಣಕಾಸಿನ ಅಡಚಣೆಗಳಿಂದ ಒತ್ತಡ ಹೆಚ್ಚಾಗಬಹುದು. ವ್ಯಾಪಾರಸ್ಥರು ಹಣಕಾಸಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ. ಸಂಗಾತಿ ಜೊತೆಗೆ ಏನಾದರೂ ಮನಸ್ತಾಪವಿದ್ದರೆ ಅದನ್ನು ದೊಡ್ಡದು ಮಾಡದೆ ಬಗೆಹರಿಸಲು ಪ್ರಯತ್ನಿಸಿ.

ಸಂಖ್ಯೆ 8 (ಜನ್ಮ ದಿನಾಂಕ 8, 17, 26)

ಅತಿಯಾದ ಕೆಲಸದ ಹೊರೆ ಕುಟುಂಬ ಮತ್ತು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುವುದು. ವ್ಯಾಪಾರಿಗಳಿಗೆ ಕೆಲವು ಅಡೆತಡೆಗಳಿರಬಹುದು, ಬಯಸಿದ ಲಾಭ ಸಿಗದೇ ಇರಬಹುದು. ಹೀಗಾಗಿ ನಿರಾಸೆ ಉಂಟಾಗುವುದು. ಕುಟುಂಬ ಜೀವನದ ಕಡೆಯೂ ಹೆಚ್ಚಿನ ಗಮನಹರಿಸಬೇಕು. ನಿಮ್ಮ ವೃತ್ತಿಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗುವುದು. ಪ್ರಯಾಣದ ಯೋಜನೆಗಳನ್ನು ಮುಂದೂಡಬಹುದು. ಆಸ್ತಿಯಲ್ಲಿ ಹೂಡಿಕೆಗೆ ಈ ಸಮಯ ಒಳ್ಳೆಯದಿದೆ.

ಸಂಖ್ಯೆ 9 ((ಜನ್ಮ ಸಂಖ್ಯೆ 9,18,27)

ಅತಿಯಾದ ಕೆಲಸ ಆಯಾಸ ಹೆಚ್ಚಾಗುವುದು. ಆದರೆ ನಿಮ್ಮ ಶ್ರಮಕ್ಕೆ ತಕ್ ಫಲ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ನಿಮಗೆ ಮಕ್ಕಳಿದ್ದರೆ ಅವರ ಶಿಕ್ಷಣಕ್ಕೆ ಹಣ ಖರ್ಚಾಗುವುದು. ಸಂಬಂಧ ಚೆನ್ನಾಗಿರಲಿದೆ, ಆರೋಗ್ಯ ಕೂಡ ಸಾಧಾರಣವಾಗಿರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Numerology Prediction From March 3 To March 10 In Kannada

Here are weekly numerology prediction from March 3 To March 10, Read on.....
X
Desktop Bottom Promotion