Latest Updates
-
ಚಂದ್ರಗ್ರಹಣದ ದಿನ.. ಪ್ರೇಮ ಜೀವನದಲ್ಲಿ ಸಂಕಷ್ಟ! ಪ್ರಣಯ ಸಂಬಂಧಗಳಲ್ಲಿ ಎಚ್ಚರ -
March 03 Horoscope: ವರ್ಷದ ಮೊದಲ ಚಂದ್ರಗ್ರಹಣ.. ಅಪಘಾತ ಸಂಭವಿಸುವ ಸಾಧ್ಯತೆ! ಖರ್ಚುಗಳು ಹೆಚ್ಚಾಗಲಿವೆ -
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ? -
30 ವರ್ಷ ದಾಟಿದ್ರಾ? ಈ 5 ಅಭ್ಯಾಸಗಳನ್ನು ತಕ್ಷಣ ಬದಲಿಸಿ.. ಜೀವನಪೂರ್ತಿ ಫಿಟ್ ಆಗಿರಿ! -
Happy Holi 2026: ನಿಮ್ಮ ಪ್ರೀತಿಪಾತ್ರರಿಗೆ ಕಳಿಸಿ ಈ ಸ್ಪೆಷಲ್ ಶುಭಾಶಯಗಳು! ಸ್ನೇಹ, ಪ್ರೀತಿ, ಸಂತೋಷ ತುಂಬಿದ ಮೆಸೇಜ್ ಇಲ್ಲಿವೆ -
ಹಸಿ ಬಟಾಣಿ ಬಳಸಿ ಖಸ್ತ ಪೂರಿ ಹೀಗೆ ಮಾಡಿ.. ಪ್ರತಿ ಪುರಿಯೂ ಹೂವಿನಂತೆ ಉಬ್ಬಿ ಬರುತ್ತೆ! ಸೂಪರ್ ರುಚಿ, 15 ನಿಮಿಷಗಳಲ್ಲಿ ರೆಡಿ! -
ಈ ದಿನ ಕೌಟುಂಬಿಕ ಸುಖ ಪ್ರಾಪ್ತಿ! ಪ್ರೇಮ ಜೀವನದಲ್ಲಿ ತೊಂದರೆಗಳು -
March 02 Horoscope: ಸಾಲದ ಕುರಿತಾದ ಚಿಂತೆಯೊಂದು ದೂರಾಗಲಿದೆ!
ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ (ಜೂನ್ 8-15) ನಿಮಗೆ ಹೇಗಿರಲಿದೆ?
ನಿಮ್ಮ ಜನ್ಮ ಸಂಖ್ಯೆ ಪ್ರಕಾರ ಈ ವಾರದ ( ಜೂನ್ 8-15) ಸಂಖ್ಯಾಶಾಸ್ತ್ರ ಭವಿಷ್ಯ:
ಸಂಖ್ಯೆ 1 (ಹುಟ್ಟಿದ ದಿನಾಂಕ1,10,19,28)
ಈ ಸಮಯದಲ್ಲಿ, ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸಬೇಕು. ವಿವಾದ ಹೆಚ್ಚಾಗದಂತೆ ಜಾಗ್ರತೆವಹಿಸಬೇಕು, ನೀವು ಎಣಿಸಿದಂತೆ ಯಾವುದು ಆಗುತ್ತಿಲ್ಲ ಎಂದಾದರೆ ತಾಳ್ಮೆವಹಿಸಿ. ಈ ಅವಧಿಯಲ್ಲಿ ಯಾವುದೇ ವಿಷಯವಾಗಲಿ ಅವಸರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ವೈವಾಹಿಕ ಬದುಕಿನಲ್ಲಿ ಮೂರನೇಯ ವ್ಯಕ್ತಿ ಅಭಿಪ್ರಾಯ ಹೇಳುವುದನ್ನು ಕೇಳಬೇಡಿ. ಆರೋಗ್ಯ ಸಮಸ್ಯೆವಿರಬಹುದು, ಆರೋಗ್ಯಕ್ಕಾಗಿ ಹಣ ಖರ್ಚಾಗುವುದು.

ಸಂಖ್ಯೆ 2 (ಹುಟ್ಟಿದ ದಿನಾಂಕ 2,11,20,29)
ಕೆಲಸದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ಹಣದ ವಿಷಯದಲ್ಲಿ ಯಾವುದೇ ರೀತಿಯ ಅಜಾಗರೂಕತೆ ಬೇಡ. ನಿಮ್ಮ ಖರ್ಚುವೆಚ್ಚಗಳ ಮೇಲೆ ನಿಗಾ ಇಟ್ಟರೆ ಒಳ್ಳೆಯದು. ನಿಮ್ಮ ಆದಾಯವನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಆದಾಯವನ್ನು ಖರ್ಚು ಮಾಡಿದರೆ ಆರ್ಥಿಕ ಸಮಸ್ಯೆ ಹೆಚ್ಚಾಗುವುದನ್ನು ತಡೆಗಟ್ಟಬಹುದು. ಈ ಏಳು ದಿನಗಳು ನಿಮಗೆ ತುಂಬಾ ರೊಮ್ಯಾಂಟಿಕ್ ಆಗಿರಲಿದೆ. ವೈವಾಹಿಕ ಜೀವನ ಮತ್ತಷ್ಟು ಗಟ್ಟಿಯಾಗುವುದು.
ಸಂಖ್ಯೆ 3( ಹುಟ್ಟಿದ ದಿನಾಂಕ 3,12,21,30)
ಕುಟುಂಬ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು, ನೀವು ನಿಮ್ಮ ಕೆಲಸದ ಕಡೆಗೆ ಹೆಚ್ಚು ಗಮನಹರಿಸಿ, ಇಲ್ಲದಿದ್ದರೆ ಹಿಂದೆ ಮಾಡಿದ ಶ್ರಮ ವ್ಯರ್ಥವಾಗುತ್ತದೆ. ನೀವು ವಿದೇಶಕ್ಕೆ ಹೋಗಿ ಉದ್ಯೋಗವನ್ನು ಪಡೆಯಲು ಬಯಸಿದರೆ ನೀವು ಸರಿಯಾದ ದಿಕ್ಕಿನಲ್ಲಿ ಪ್ರಯತ್ನ ಮಾಡಬೇಕಾಗುತ್ತದೆ. ಹಣದ ಚಿಂತೆ ದೂರಾಗುವುದು. ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಿ.
ಸಂಖ್ಯೆ 4 (ಹುಟ್ಟಿದ ದಿನಾಂಕ 4,13,22,31)
ಕೆಲಸದಲ್ಲಿ ಜಾಗ್ರತೆವಹಿಸಬೇಕು, ಕಚೇರಿಯಲ್ಲಿ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು. ಕೆಲಸದ ಕಡೆಗೆ ಹೆಚ್ಚು ಗಮನ ನೀಡಲು ಸಾಧ್ಯವಾಗಲ್ಲ, ಈ ಅವಧಿಯಲ್ಲಿ ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳಿ. ಈ ಅವಧಿಯಲ್ಲಿ ಕೆಲಸದ ಜೊತೆಗೆ ನಿಮ್ಮ ಸಂಬಂಧಗಳಿಗೂ ಪ್ರಾಮುಖ್ಯತೆ ನೀಡಿ. ಸಾಧ್ಯವಾದರೆ, ಹೊರಗಿನ ಒತ್ತಡವನ್ನು ಮನೆಗೆ ತರಬೇಡಿ. ಆರ್ರತಿಕವಾಗಿ ಈ ಸಮಯ ಉತ್ತಮವಾಗಿದೆ.
ಸಂಖ್ಯೆ 5 (ಹುಟ್ಟಿದ ದಿನಾಂಕ 5,14,23)
ಅದು ಉದ್ಯೋಗ ಅಥವಾ ವ್ಯವಹಾರವಾಗಿರಲಿ ನಿಮ್ಮ ಅಪೂರ್ಣ ಕೆಲಸ ಪೂರ್ಣವಾಗಲಿದೆ. ಈ ಸಮಯದಲ್ಲಿ ನಿಮ್ಮ ಪ್ರಮುಖ ಚಿಂತೆ ದೂರಾಗಲಿದೆ,. ವೈವಾಹಿಕ ಜೀವನ ಚೆನ್ನಾಗಿರಲಿದೆ, ಈ ಸಮಯದಲ್ಲಿ ನಿಮ್ಮ ನಡುವಿನ ಎಲ್ಲಾ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುತ್ತವೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಯಾವುದೇ ರೀತಿಯ ಅಜಾಗರೂಕತೆಯನ್ನು ತಪ್ಪಿಸಬೇಕು, ಇಲ್ಲದಿದ್ದರೆ ಈ ಅವಧಿಯಲ್ಲಿ ನೀವು ದೊಡ್ಡ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ.
ಸಂಖ್ಯೆ 6 (ಹುಟ್ಟಿದ ದಿನಾಂಕ 6,15,24)
ನೀವು ಪ್ರೀತಿಯಲ್ಲಿದ್ದರೆ ಈ ವಾರ ನಿಮಗೆ ತುಂಬಾ ವಿಶೇಷವಾಗಿರುತ್ತದೆ, ಈ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಈ ಅವಧಿಯಲ್ಲಿ ಯಾವುದೇ ಅಡೆತಡೆ ಇರಲ್ಲ, ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತೀರಿ
ಸಂಖ್ಯೆ 7 (ಹುಟ್ಟಿದ ದಿನಾಂಕ 7,16,25)
ವೈವಾಹಿಕ ಜೀವನದಲ್ಲಿ ಕೆಲಗೊಂದಲಗಳು ಕಂಡುಬರುತ್ತವೆ. ನಿಮ್ಮ ಸಂಗಾತಿಗೆ ಹೆಚ್ಚಿನ ಸಮಯವನ್ನು ನೀಡಲು ಪ್ರಯತ್ನಿಸಿ. ದಂಪತಿಗಳಿಗೆ ಈ ವಾರ ತುಂಬಾ ಆಹ್ಲಾದಕರವಾಗಿರುತ್ತದೆ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ, ಈ ಅವಧಿಯಲ್ಲಿ, ಆದಾಯ ಹೆಚ್ಚಾಗಲಿದೆ. ಶೀಘ್ರದಲ್ಲೇ ನಿಮ್ಮ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ. ವ್ಯಾಪಾರಿಗಳು ಈ ವಾರ ತರಾತುರಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಉತ್ತಮ.
ಸಂಖ್ಯೆ 8 (ಹುಟ್ಟಿದ ದಿನಾಂಕ 8,17,26)
ಉದ್ಯೋಗಿಗಳಿಗೆ ಈ ಅವಧಿ ಉತ್ತಮವಾಗಿದೆ, ವ್ಯಾಪಾರಿಗಳು ಲಾಭವನ್ನು ಗಳಿಸಲು ಕಷ್ಟಪಡಬೇಕಾಗಬಹುದು, ಆದರೆ ನಿಮ್ಮ ಕಠಿಣ ಪರಿಶ್ರಮದ ಸರಿಯಾದ ಫಲಿತಾಂಶವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಹೊಸ ವ್ಯವಹಾರ ಪ್ರಸ್ತಾಪವನ್ನು ಸಹ ಪಡೆಯಬಹುದು. ನೀವು ಕೆಲಸದಲ್ಲಿ ತುಂಬಾ ನಿರತರಾಗಿರುತ್ತೀರಿ. ನಿಮ್ಮ ಪ್ರೀತಿಪಾತ್ರರ ಸಂತೋಷದ ಕಡೆಗೆ ನೀವು ಕಾಳಜಿ ವಹಿಸಿದರೆ ಅದು ಉತ್ತಮವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದ ಚಿಂತೆ ದೂರಾಗುವುದು.
ಸಂಖ್ಯೆ 9 (ಹುಟ್ಟಿದ ದಿನಾಂಕ 9,18,27)
ನಿಮ್ಮ ಕೆಲಸವನ್ನು ಬೇರೆಯವರ ಜೊತೆ ಹಂಚಿಕೊಳ್ಳಬೇಡಿ, ಕಚೇರಿಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ನೀವು ಮುಜುಗರ ಅನುಭವಿಸಬೇಕಾಗುತ್ತದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಈ ವಾರ ತುಂಬಾ ಶುಭಕರವಾಗಿರುತ್ತದೆ. ನೀವು ಅವಿವಾಹಿತರಾಗಿದ್ದರೆ ಮದುವೆ ಸಂಬಂಧ ಬರಬಹುದು, ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರುವುದು, ಒಟ್ಟಿನಲ್ಲಿ ಈ ವಾರ ನಿಮಗೆ ಉತ್ತಮವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











