Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ (ಜೂ.30-ಜು.6)ನಿಮ್ಮ ಜನ್ಮ ಸಂಖ್ಯೆಗೆ ಹೇಗಿರಲಿದೆ?
ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ ನಿಮಗೆ ಹೇಗಿರಲಿದೆ ಎಂದು ಹೇಳಲಾಗಿದೆ. ನೀವು ಯಾವ ದಿನಾಂಕದಂದು ಜನಿಸಿದ್ದೀರಿ ಎಂಬುವುದರ ಮೇಲೆ ನಿಮ್ಮ ಜನ್ಮ ಸಂಖ್ಯೆ ತಿಳಿಯಬಹುದು. ಉದಾಹರಣೆಗೆ ನೀವು 10ನೇ ತಾರೀಕಿಗೆ ಜನಿಸಿದ್ದರೆ 1+0=1, ನಿಮ್ಮ ಜನ್ಮ ಸಂಖ್ಯೆ 1 ಅಂತ ಲೆಕ್ಕ ಹಾಕಿ...

ಸಂಖ್ಯೆ 1 (ಹುಟ್ಟಿದ ದಿನಾಂಕ 1,10,19,28)
ಈ ವಾರ ಸವಾಲುಗಳು ಇರಲಿದೆ, ಆದರ ಸೂಕ್ತ ನೆರವು ಸಿಗುವುದರಿಂದ ದೊಡ್ಡ ಸಮಸ್ಯೆಯಾಗಲ್ಲ, ಆರ್ಥಿಕ ಸಮಸ್ಯೆಯಿದ್ದರೂ ನೀವು ಕೇಳಿದವರಿಂದ ಹಣ ಸಿಗಲಿದೆ. ಈ ಆಸ್ತಿಗೆ ಸಂಬಂಧಿಸಿದ ವಿವಾದ ಬಗೆಹರಿಸಲು ಸಾಧ್ಯವಾಗುವುದು, ಇನ್ನ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಅವಾಹಿತರಾಗಿದ್ದರೆ ಮದುವೆ ಪ್ರಸ್ತಾಪ ಬರಬಹುದು.
ಸಂಖ್ಯೆ 2(ಹುಟ್ಟಿದ ದಿನಾಂಕ 2,11,20,29)
ವೃತ್ತಿಪರ ಜೀವನದ ವಿಷಯದಲ್ಲಿ ಈ ವಾರ ಅದ್ಭುತವಾಗಿರಲಿದೆ. ಕೆಲಸದಲ್ಲಿ ನೀವು ಬಯಸಿದಂತೆಯೇ ಬಡ್ತಿ ಸಿಗಲಿದೆ, ಮನೆಯಲ್ಲಿನ ಸಮಸ್ಯೆ ಬಗೆ ಹರಿಯಲಿದೆ, ಇದರಿಂದ ಮನಸ್ಸಿಗೆ ಖುಷಿ ಸಿಗಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ರೋಗ ನಿರೋಧಕ ಶಕ್ತಿ ಕೂಡ ಉತ್ತಮವಾಗಿರಲಿದೆ.
ಸಂಖ್ಯೆ 3 (ಹುಟ್ಟಿದ ದಿನಾಂಕ 3,12,21,30)
ನಿಮ್ಮ ಕೋಪವೇ ನಿಮ್ಮ ಪ್ರಮುಖ ಶತ್ರುವಾಗಬಹುದು, ಆದ್ದರಿಂದ ಕೋಪವನ್ನು ನಿಯಂತ್ರಿಸಿ. ವೃತ್ತಿ ಬದುಕಿನಲ್ಲಿ ಈ ವಾರ ಅನುಕೂಲಕರವಾಗಿದೆ, ನೀವು ನಿರೀಕ್ಷಿಸಿದಂತೆಯೇ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯಾಪಾರಿಗಳಿಗೆ ಲಾಭ ಸಿಗಲಿದೆ. ಕುಟುಂಬ ಜೀವನದಲ್ಲಿ ಖುಷಿ ಇರಲಿದೆ, ಆರೋಗ್ಯ ಉತ್ತಮವಾಗಿರಲಿದೆ.
ಸಂಖ್ಯೆ 4 (ಹುಟ್ಟಿದ ದಿನಾಂಕ 4,13,22,31)
ಈ ಸಮಯದಲ್ಲಿ ಅವಸರದ ನಿರ್ಧಾರ ತೆಗೆದುಕೊಳ್ಳಬೇಡಿ, ಸರಿಯಾಗಿ ಯೋಚಿಸಿದ ಬಳಿಕವಷ್ಟೇ ನೀವು ನಿರ್ಧಾರಕ್ಕೆ ಬರಬೇಕು. ಈ ಅವಧಿಯಲ್ಲಿ ಆರೋಗ್ಯದ ಇಂತೆಗಳಿರಬಹುದು. ವೈವಾಹಿಕ ಜೀವನ ಚೆನ್ನಾಗಿರಲಿದೆ. ನೀವು ಉದ್ಯಮಿಯಾಗಿದ್ದರೆ ನಿಮ್ಮ ಪ್ರತಿಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಲು ನೀವು ಕೆಲವು ಅಪಾಯಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು. ಕೆಲಸದಲ್ಲಿ ಹೆಚ್ಚು ಒತ್ತಡ ಇರಲಿದೆ.
ಸಂಖ್ಯೆ 5 (ಹುಟ್ಟಿದ ದಿನಾಂಕ 5,14,23)
ನಿಮಗೆ ಈ ವಾರ ತುಂಬಾ ಚೆನ್ನಾಗಿರಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಈ ಸಮಯದಲ್ಲಿ, ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಉದ್ಯೋಗ ಅಥವಾ ವ್ಯವಹಾರವಾಗಿರಲಿ, ಈ ಅವಧಿಯಲ್ಲಿ ನೀವು ಅಪಾರ ಯಶಸ್ಸ ಪಡೆಯಲು ಸಾಧ್ಯವಾಗುವುದು. ದಂಪತಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರುತ್ತದೆ.
ಸಂಖ್ಯೆ 6 (ಹುಟ್ಟಿದ ದಿನಾಂಕ 6,15,24)
ಈ ವಾರ ನಿಮಗೆ ಏರಿಳಿತಗಳಿಂದ ಕೂಡಿರಲಿದೆ. ನೀವು ನಿಮ್ಮ ಸಂಗಾತಿಯ ಜೊತೆ ಸಂಬಂಧ ಚೆನ್ನಾಗಿ ಇಟ್ಟುಕೊಲ್ಳಬೇಕು. ವೃತ್ತಿ ಜೀವನದಲ್ಲಿ ಕೆಲಸದ ಹೊರೆ ಹೆಚ್ಚಾಗಲಿದೆ. ವ್ಯಾಪಾರಿಗಳು ತಮ್ಮ ವ್ಯವಹಾರದ ಕಡೆಗೆ ಗಮನಹರಿಸಬೇಕು, ಇಲ್ಲದಿದ್ದರೆ ನಷ್ಟ ಉಂಟಾಗುವುದು. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯವಲ್ಲ. ಮಧುಮೇಹಿಗಳಾಗಿದ್ದರೆ ಆರೋಗ್ಯದ ಕಡೆಗೆ ಗಮನಹರಿಸಿ.
ಸಂಖ್ಯೆ 7 ( ಹುಟ್ಟಿದ ದಿನಾಂಕ 7,16,25)
ಈ ವಾರ ನಿಮಗೆ ಶುಭಕರವಾಗಿರುತ್ತದೆ. ದೇವರ ಆಶೀರ್ವಾದ ನಿಮ್ಮ ಮೇಲಿರುತ್ತದೆ ಮತ್ತು ನಿಮ್ಮ ಎಲ್ಲಾ ಕೆಲಸಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಚೆನ್ನಾಗಿರಲಿದೆ. ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಇದು ಸರಿಯಾದ ಸಮಯ. ಆರೋಗ್ಯಕ್ಕಾಗಿ ಪ್ರತಿದಿನ ಯೋಗ ಮತ್ತು ಧ್ಯಾನವನ್ನು ಮಾಡಿ. ದಾಂಪತ್ಯ ಜೀವನ ಚೆನ್ನಾಗಿರಲಿದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಪ್ರೀತಿ, ವಾತ್ಸಲ್ಯ ಇರಲಿದೆ.
ಸಂಖ್ಯೆ 8 (ಹುಟ್ಟಿದ ದಿನಾಂಕ 8,17,26)
ಈ ಅವಧಿಯಲ್ಲಿ ಹೊಸ ಸವಾಲುಗಳು ಎದುರಾಗಬಹುದು. ಉದ್ಯಮಿಗಳಿಗೆ ಈ ಅವಧಿಯಲ್ಲಿ ಕೆಲ ಸವಾಲುಗಳು ಎದುರಾಗಬಹುದು. ಆದರೆ ಹೆಚ್ಚು ಚಿಂತೆ ಈ ಸಮಸ್ಯೆ ಶೀಘ್ರದಲ್ಲಿಯೇ ಸರಿಯಾಗಲಿದೆ. ವಿದ್ಯಾರ್ಥಿಗಳು ಅಧ್ಯಯನ ಕಡೆಗೆ ಗಮನಹರಿಸಬೇಕು. ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿರಬಹುದು, ಆದರೆ ತಾಳ್ಮೆಯಿಂದ ಬಗೆಹರಿಸಿ. ಅತಿಯಾದ ಮಾನಸಿಕ ಒತ್ತಡ ಶರೀರದ ಮೇಲೆ ಪರಿಣಾಮ ಬೀರುವುದು.
ಸಂಖ್ಯೆ 9 (ಹುಟ್ಟಿದ 9,18,27)
ವೃತ್ತಿ ಬದುಕಿನಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳ ಸಾಧ್ಯತೆಯಿದೆ. ನಿಮ್ಮ ಕೆಲಸವನ್ನು ನೀವು ಪೂರ್ಣ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಮಾಡಬೇಕು. ವ್ಯಾಪಾರಿಗಳು ಆರ್ಥಿಕ ಲಾಭ ಗಳಿಸಲು ಸಾಧ್ಯವಾಗುವುದು. ಬರಬೇಕಾಗಿರುವ ಹಣ ಕೈ ಸೇರಲಿದೆ. ಸಂಗಾತಿಯ ಜೊತೆ ಬಾಂಧವ್ಯ ಚೆನ್ನಾಗಿರಲಿದೆ. ಸಂತೋಷ ಮತ್ತು ಧನಾತ್ಮಕವಾಗಿರುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications