Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ(ಜುಲೈ6-13) ನಿಮ್ಮ ಜನ್ಮ ಸಂಖ್ಯೆಗೆ ಹೇಗಿರಲಿದೆ?
ಸಂಖ್ಯಾಶಾಸ್ತ್ರದಲ್ಲಿ ನಿಮ್ಮ ಜನ್ಮ ದಿನಾಂಕ ನೋಡಿ ಭವಿಷ್ಯ ಹೇಳಲಾಗುವುದು. ನೀವು ಯಾವುದೇ ಮಾಸದ 10ನೇ ದಿನಾಂಕಕ್ಕೆ ಹುಟ್ಟಿದ್ದರೆ 1+0=1, ಅದೇ 11ನೇ ತಾರೀಕಿಗೆ ಹುಟ್ಟಿದ್ದರೆ 1+1=2 ಹೀಗೆ ಲೆಕ್ಕ ಹಾಕಬೇಕು, ಈ ವಾರ ನಿಮ್ಮ ಜನ್ಮ ಸಂಖ್ಯೆಗೆ ಹೇಗಿರಲಿದೆ ಎಂದು ನೋಡೋಣ:

ಸಂಖ್ಯೆ 1 (ಹುಟ್ಟಿದ ದಿನಾಂಕ 1,10,19,28)
ಈ ವಾರ ನೀವು ನಿಮ್ಮ ವೈವಾಹಿಕ ಜೀವನದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ನಿಮ್ಮ ನಡುವೆ ಭಿನ್ನಾಭಿಪ್ರಾಯ ಹೆಚ್ಚಾದರೆ ಮನಸ್ಸಿನ ನೆಮ್ಮದಿ ದೂರಾಗುವುದು, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ. ಇನ್ನು ಕೆಲಸದಲ್ಲಿಯೂ ನಿಮಗೆ ಅತೃಪ್ತಿ ಉಂಟಾಗಬಹುದು, ಮೇಲಾಧಿಕಾರಿಗಳ ವರ್ತನೆ ನಿಮ್ಮ ಮನಸ್ಸಿಗೆ ಇಷ್ಟವಾಗದೆ ಹೋಗಬಹುದು. ವ್ಯಾಪಾರಿಗಳು ಕೂಡ ಈ ವಾರ ತಮ್ಮ ವ್ಯವಹಾರ ವಿಷಯದಲ್ಲಿ ಜಾಗ್ರತೆವಹಿಸಬೇಕು. ಈ ಸಮಯದಲ್ಲಿ ನೀವು ಯಾವುದೇ ಹೂಡಿಕೆ ಮಾಡಲು ಹೋಗದಿದ್ದರೆ ಒಳ್ಳೆಯದು. ಅಲ್ಲದೆ ಈ ಅವಧಿಯಲ್ಲಿ ನಿಮಗೆ ನಿಮ್ಮದೇ ತಪ್ಪು ಅನಿಸಬಹುದು, ಆತ್ಮವಿಶ್ವಾಸ ಕುಗ್ಗಬಹುದು, ದಿರಿಂದ ಹೊರಗೆ ಬರಲು ಪ್ರಯತ್ನಿಸಿ.
ಸಂಖ್ಯೆ 2 (ಹುಟ್ಟಿದ ದಿನಾಂಕ 2,11,20,29)
ಈ ವಾರ ನಿಮಗೆ ಶುಭವಾಗಿದೆ, ಈ ವಾರ ಕೆಲಸದಲ್ಲಿ ನಿಮಗೆ ಅನುಕೂಲಕರವಾಗಿದೆ, ನಿಮ್ಮೆಲ್ಲಾ ಕೆಲಸ ಕಾರ್ಯಗಳು ಯೋಜನೆಯಂತೆಯೇ ಪೂರ್ಣಗೊಳ್ಳಲಿದೆ. ಇನ್ನು ಸಮಯದಲ್ಲಿ ವ್ಯಾಪಾರಿಗಳು ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ವೈವಾಹಿಕ ಜೀವನದಲ್ಲಿ ಮಾಧುರ್ಯ ಹೆಚ್ಚಾಗುವುದು, ಪ್ರೇಮಿಗಳಿಗೆ ಈ ಸಮಯ ಉತ್ತಮವಾಗಿದೆ, ಆರೋಗ್ಯವೂ ಉತ್ತಮವಾಗಿರಲಿದೆ.
ಸಂಖ್ಯೆ 3 (ಹುಟ್ಟಿದ ದಿನಾಂಕ 3,12,21,30)
ಈ ಸಮಯ ನಿಮಗೆ ಉತ್ತಮವಾಗಿದೆ, ಅದರಲ್ಲಿಯೂ ಉದ್ಯೋಗಿಗಳಿಗೆ ಈ ಅವಧಿ ತುಂಬಾನೇ ಚೆನ್ನಾಗಿರಲಿದೆ. ವ್ಯಾಪಾರಿಗಳು ಧನ ಲಾಭ ಪಡೆಯಬಹುದು, ಉದ್ಯಮಿಗಳು ದೊಡ್ಡ ವ್ಯವಹಾರ ನಡೆಸಬಹುದು. ಆರ್ಥಿಕವಾಗಿ ಉತ್ತಮವಾಗಿದೆ, ವೈವಾಹಿಕ ಜೀವನದಲ್ಲಿ ಸಂತೋಷ, ನೆಮ್ಮದಿ ಇರಲಿದೆ. ಆರೋಗ್ಯ ಚೆನ್ನಾಗಿರಲಿದೆ.
ಸಂಖ್ಯೆ 4 (ಹುಟ್ಟಿದ ದಿನಾಂಕ 4,13,22,31)
ಈ ವಾರ ನೀವು ಸ್ವಲ್ಪ ಜಾಗ್ರತೆವಹಿಸಬೇಕು. ಕೆಲಸದಲ್ಲಿ ಹೆಚ್ಚಿನ ಒತ್ತಡ ಇರಲಿದೆ. ವ್ಯಾಪಾರಿಗಳು ಜಾಗ್ರತೆ ವಹಿಸದಿದ್ದರೆ ಹಣದ ನಷ್ಟ ಉಂಟಾಗಬಹುದು, ಆದ್ದರಿಂದ ನೀವು ಜಾಗ್ರತೆವಹಿಸಿ. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಇನ್ನು ನೀವು ಆಹಾರಕ್ರಮದ ಕಡೆಗೆ ಗಮನಹರಿಸದಿದ್ದರೆ ಆರೋಗ್ಯ ಹಾಳಾಗುತ್ತೆ, ಆದ್ದರಿಂದ ಜಾಗ್ರತೆವಹಿಸಿ.
ಸಂಖ್ಯೆ 5 (ಹುಟ್ಟಿದ ದಿನಾಂಕ 5,14,23)
ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ಅವಧಿ ಉತ್ತಮವಾಗಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಸಂಪೂರ್ಣ ಗಮನ ಹರಿಸುತ್ತಾರೆ. ಪ್ರಣಯ ಜೀವನದಲ್ಲಿ ಪ್ರೀತಿ ಇರಲಿದೆ, ಆರೋಗ್ಯ ಕೂಡ ಚೆನ್ನಾಗಿರಲಿದೆ.
ಸಂಖ್ಯೆ 6 (ಹುಟ್ಟಿದ ದಿನಾಂಕ 6,15,24)
ಈ ವಾರ ನಿಮಗೆ ಒಳ್ಳೆಯದಿದೆ, ಆರೋಗ್ಯ ಸಮಸ್ಯೆವಿದ್ದರೆ ಸುಧಾರಿಸಿಕೊಳ್ಳುತ್ತೀರಿ. ಉದ್ಯೋಗಿಗಳಿಗೆ ಈ ಸಮಯ ಶುಭವಾಗಿದೆ, ಕೆಲಸದ ಬದಲಾವಣೆ ಮಾಡುವುದಾದರೆ ಈ ಸಮಯ ಉತ್ತಮವಾಗಿದೆ. ಈ ಸಮಯವು ಅನುಕೂಲಕರವಾಗಿರುತ್ತದೆ. ಇನ್ನು ಅವಾಹಿತರಿಗೆ ಮದುವೆ ಪ್ರಸ್ತಾಪ ಬರುವ ಸಾಧ್ಯತೆ ಇದೆ.
ಸಂಖ್ಯೆ 7(ಹುಟ್ಟಿದ ದಿನಾಂಕ 7,16,25)
ಈ ವಾರ ನಿಮಗೆ ಮಿಶ್ರಫಲ, ಅನೇಕ ಅನಗ್ಯತ ಯೋಚನೆಗಳಿಂದ ಬಳಲುತ್ತೀರಿ. ಮನಸ್ಸಿನಲ್ಲಿ ಬೇಡದ ಯೋಚನೆಗಳನ್ನು ಹೊರ ಹಾಕಲು ಪ್ರಯತ್ನಿಸಿ. ಇನ್ನು ವ್ಯಾಪಾರಿಗಳು ಪ್ರತಿ ವ್ಯವಹಾರ ಜಾಗ್ರತೆಯಿಂದ ಮಾಡಬೇಕು, ಇಲ್ಲದಿದ್ದರೆ ನಷ್ಟ ಉಂಟಾಗುವುದು. ಮನೆಯ ವಾತಾವರಣ ಕೂಡ ಅಷ್ಟೊಂದು ಚೆನ್ನಾಗಿರಲ್ಲ, ಇದರ ಜೊತೆಗೆ ಆರೋಗ್ಯ ಸಮಸ್ಯೆ ನಿಮ್ಮ ಸಮಸ್ಯೆ ಹೆಚ್ಚಿಸಬಹುದು.
ಸಂಖ್ಯೆ 8 (ಹುಟ್ಟಿದ ದಿನಾಂಕ 8,17,26)
ಈ ಅವಧಿ ನೀವು ಎಷ್ಟು ತಾಳ್ಮೆಯಿಂದ ವರ್ತಿಸುತ್ತೀರೋ ಅಷ್ಟು ಒಳ್ಳೆಯದು. ವೃತ್ತಿ ಬದುಕಿನಲ್ಲಿ ಯೋಚಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸ್ವಲ್ಪ ಕಾಯಿರಿ ಎಲ್ಲವೂ ಸರಿಯಾಗಲಿದೆ, ಹಾಗಾಗಿ ತಾಳ್ಮೆ ತುಂಬಾನೇ ಮುಖ್ಯ ಎಂದು ಹೇಳಲಾಗುವುದು. ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಒಳ್ಳೆಯದಲ್ಲ. ಅತಿಯಾದ ಮಾನಸಿಕ ಒತ್ತಡ, ಕೆಲಸದ ಒತ್ತಡ ಇವೆಲ್ಲಾ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನೀವು ಒತ್ತಡ ಕಡಿಮೆ ಮಾಡಲು ಧ್ಯಾನದತ್ತ ಗಮನಹರಿಸಿ.
ಸಂಖ್ಯೆ 9 (ಹುಟ್ಟಿದ ದಿನಾಂಕ 9,18,27)
ಕೆಲಸದ ದೃಷ್ಟಿಯಿಂದ ನೋಡುವುದಾದರೆ ಈ ಸಮಯ ನಿಮಗೆ ತುಂಬಾನೇ ಉತ್ತಮವಾಗಿದೆ. ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಈ ಸಮಯ ಒಳ್ಳೆಯದಿದೆ. ವಿದ್ಯಾರ್ಥಿಗಳಿಗೂ ಈ ಸಮಯ ಒಳ್ಳೆಯದಿದೆ. ವೈವಾಹಿಕ ಬದುಕಿನಲ್ಲಿ ಪ್ರೀತಿ, ಹೊಂದಾಣಿಕೆ ಇರುವುದರಿಂದ ಸಂತೋಷವಾಗಿರುತ್ತೀರಿ. ಆರೋಗ್ಯ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications


