ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ (ಜುಲೈ 20-27) ನಿಮಗೆ ಹೇಗಿರಲಿದೆ?

ನಿಮ್ಮ ಜನ್ಮ ಸಂಖ್ಯೆ ಪ್ರಕಾರ ವಾರ ಭವಿಷ್ಯ ಹೇಳಲಾಗಿದೆ, ನೀವು ಯಾವ ದಿನಾಕದಂದು ಜನಿಸಿದ್ದೀರಿ ಅದರ ಮೇಲೆ ಜನ್ಮ ಸಂಖ್ಯೆ ಹೇಳಲಾಗುವುದು, ಉದಾರಣೆಗೆ ನೀವು 24ನೇ ತಾರೀಕಿಗೆ ಹುಟ್ಟಿದ್ದರೆ ನಿಮ್ಮ ಜನ್ಮ ಸಂಖ್ಯೆ 2+4=6 ಆಗಿದೆ. ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ ನಿಮ್ಮ ಜನ್ಮ ಸಂಖ್ಯೆಗೆ ಹೇಗಿರಲಿದೆ ಎಂದು ನೋಡೋಣ.

numerology prediction

ಸಂಖ್ಯೆ 1 (ಹುಟ್ಟಿದ ದಿನಾಂಕ 1,10,19,28)

ಈ ವಾರ ಪ್ರೇಮಿಗಳಿಗೆ ಚೆನ್ನಾಗಿರಲಿದೆ, ಆದರೆ ವೈವಾಹಿಕ ಜೀವನದಲ್ಲಿ ಏರಳಿತವಿರಬಹುದು, ನೀವು ಸಂಗಾತಿಯನ್ನು ಅರ್ಥ ಮಾಡಿಕೊಲ್ಳಲು ಪ್ರಯತ್ನಿಸಿ. ಇನ್ನು ವೃತ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಾದರೆ ಆತುರ ಪಡಬೇಡಿ ಎಂದು ಸಲಹೆ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿದೆ. ಈ ವಾರ ಆರೋಗ್ಯ ಉತ್ತಮವಾಗಿರಲಿದೆ.

ಸಂಖ್ಯೆ 2 (ಹುಟ್ಟಿದ ದಿನಾಂಕ 2,11,20,29)

ವಾರದ ಆರಂಭ ನಿಮಗೆ ಕೆಲ ಅಡಚಣೆ ಎದುರಾಗಬಹುದು, ಆದರೆ ನಂತರ ಪರಿಸ್ಥಿತಿ ಸುಧಾರಿಸಲಿದೆ, ವೃತ್ತಿ ಬದುಕಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಯುವುದರಿಂದ ನಿರಾಳವಾಗುತ್ತೀರಿ, ಆರೋಗ್ಯದ ದೃಷ್ಟಿಯಿಂದ ಕೂಡ ಈ ಅವಧಿ ನಿಮಗೆ ಉತ್ತಮವಾಗಿದೆ, ಆರೋಗ್ಯ ಸಮಸ್ಯೆ ಇದ್ದರೆ ಸುಧಾರಣೆ ಕಂಡು ಬರಲಿದೆ. ಆರ್ಥಿಕವಾಗಿಯೂ ಉತ್ತಮ ಪ್ರಯೋಜನ ಪಡೆಯುತ್ತೀರಿ.

ಸಂಖ್ಯೆ 3 (ಹುಟ್ಟಿದ ದಿನಾಂಕ 3,12,21,30)

ಈ ಅವಧಿಯಲ್ಲಿ ಖರ್ಚು ಹೆಚ್ಚಿರಲಿದೆ, ಹೀಗಾಗಿ ಹಣದ ಚಿಂತೆ ಕಾಡಬಹುದು. ಅಲ್ಲದೆ ಕೆಲಸದಲ್ಲಿಯೂ ಹೆಚ್ಚಿನ ಒತ್ತಡ ಇರಲಿದೆ. ಇನ್ನು ಕೆಲಸದ ಸಮಯದಲ್ಲಿ ನಿಮ್ಮ ಆಪ್ತರು ನಿಮ್ಮ ಸಹಾಯಕ್ಕೆ ಬರುತ್ತಾರೆ, ವಿದ್ಯಾರ್ಥಿಗಳು ತಾಳ್ಮೆಯಿಂದಿರಬೇಕು.

ಸಂಖ್ಯೆ 4 (ಹುಟ್ಟಿದ ದಿನಾಂಕ 4,13,22,31)

ಈ ವಾರ ನಿಮಗೆ ಉತ್ತಮವಾಗಿದೆ, ನೀವು ಉತ್ತಮ ಯಶಸ್ಸನ್ನು ಪಡೆಯಬಹುದು. ಈ ಅವಧಿಯಲ್ಲಿ, ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರಿಗಳಿಗೆ ಆರ್ಥಿಕ ದೃಷ್ಟಿಯಿಂದ ಉತ್ತಮವಾಗಿದೆ. ಮನೆಯಲ್ಲಿ ಶೀಘ್ರದಲ್ಲಿಯೇ ಕೆಲವು ಶುಭ ಕಾರ್ಯಗಳು ನೆರವೇರಲಿವೆ. ಅರ್ಥಿಕವಾಗಿ ಈ ವಾರ ನಿಮಗೆ ತುಂಬಾನೇ ಚೆನ್ನಾಗಿರಲಿದೆ.

ಸಂಖ್ಯೆ 5(ಹುಟ್ಟಿದ ದಿನಾಂಕ 5,14,23)

ವ್ಯಾಪಾರಿಗಳು ಜಾಗ್ರತೆವಹಿಸಬೇಕು, ಬಾಕಿ ಉಳಿದಿರುವ ವ್ಯವಹಾರದ ವಿಷಯಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಪ್ರೇಮಿಗಳ ಜೀವನದಲ್ಲಿ ಹೊಸ ತಿರುವು ಉಂಟಾಗಲಿದೆ. ವಿವಾಹಿತರು ವೈವಾಹಿಕ ಬದುಕಿನ ಕಡೆಗೆ ಹೆಚ್ಚಿನ ಗಮನ ಹರಿಸಿದರೆ ಒಳ್ಳೆಯದು. ಹೂಡಿಕೆಯಿಂದ ಲಾಭ ಗಳಿಸುತ್ತೀರಿ.

ಸಂಖ್ಯೆ 6 (ಹುಟ್ಟಿದ ದಿನಾಂಕ 6,15,24)

ಈ ವಾರ ನಿಮಗೆ ಉತ್ತಮವಾಗಿದೆ, ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ , ಪ್ರೇಮಿಗಳ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ಆರ್ತಿಕವಾಗಿ ಈ ವಾರ ನಿಮಗೆ ಉತ್ತಮವಾಗಿದೆ. ಹೊಸ ಪ್ರಯತ್ನಗಳಿಗೆ ಯಶಸ್ಸು ಸಿಗಲಿದೆ. ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವುದು.

ಸಂಖ್ಯೆ 7 (ಹುಟ್ಟಿದ ದಿನಾಂಕ 7,16,25)

ಪ್ರತಿಕೂಲ ಸಂದರ್ಭಗಳಲ್ಲಿ ನೀವು ಕೋಪದಿಂದ ವರ್ತಿಸುವ ಬದಲು ತಾಳ್ಮೆಯಿಂದ ವರ್ತಿಸಿದರೆ ಒಳ್ಳೆಯದು. ಆರ್ಥಿಕ ದೃಷ್ಟಿಯಿಂದ ಈ ಅವಧಿ ನಿಮಗೆ ಉತ್ತಮವಾಗಿಲ್ಲ, ಹಾಗಾಗಿ ನೀವು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ನೀವು ಇನ್ನೂ ಸ್ವಲ್ಪ ಸಮಯ ಕಾಯುವುದು ಒಳ್ಳೆಯದು. ಕೆಲಸ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸುವತ್ತ ಗಮನ ಕೊಡಿ. ಹೆಚ್ಚುತ್ತಿರುವ ಕೆಲಸದ ಒತ್ತಡವು ನಿಮ್ಮ ನಡವಳಿಕೆಯ ಮೇಲೂ ಪರಿಣಾಮ ಬೀರುವುದು, ಕೋಪ ಹೆಚ್ಚಾಗುವುದು, ಆದರೆ ಕೋಪ ನಿಯಂತ್ರಿಸಿದರೆ ಒಳ್ಳೆಯದು.

ಸಂಖ್ಯೆ 8 (ಹುಟ್ಟಿದ ದಿನಾಂಕ 8,17,26)

ಕೆಲಸ ಕಾರ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿದೆ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ನಿಮ್ಮ ನಡುವೆ ಏನೇ ಸಮಸ್ಯೆ ಇದ್ದರೆ ಮಾತುಕತೆ ಮೂಲಕ ಬಗೆಹರಿಸಲು ಪ್ರಯತ್ನಿಸಿ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಬೇರೆಯವರು ಹೇಳಿದರು ಎಂದ ಮಾತ್ರಕ್ಕೆ ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆರೋಗ್ಯದ ಕಡೆಗೆ ಗಮನಹರಿಸಿ.

ಸಂಖ್ಯೆ 9 (ಹುಟ್ಟಿದ ದಿನಾಂಕ 9,18,27)

ಈ ಅವಧಿಯಲ್ಲಿ ಯಾವುದೋ ವಿಷಯ ನಿಮ್ಮ ಮನಸ್ಸಿಗೆ ತುಂಬಾನೇ ನೋವುಂಟು ಮಾಡಬಹುದು. ಮೌನವಾಗಿರುವುದು ನಿಮ್ಮ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಬಹುದು. ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಹಣದ ವಿಷಯದಲ್ಲಿ ಈ ವಾರ ತುಂಬಾ ದುಬಾರಿಯಾಗಲಿದೆ. ಅನಗತ್ಯ ಖರ್ಚುಗಳು ಬರಬಹುದು. ಆದರೆ ಅ ನಗ್ಯತ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಅರೋಗ್ಯ ಸಮಸ್ಯೆ ಇದ್ದರೆ ವಿಶೇಷ ಕಾಳಜಿ ವಹಿಸುವುದು ಒಳ್ಳೆಯದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Numerology Prediction From July 20 to 27 In Kannada

Here are weekly numerology prediction from July 20 to 27, read on.
Story first published: Saturday, July 20, 2024, 18:01 [IST]
X
Desktop Bottom Promotion