ಸಂಖ್ಯಾಶಾಸ್ತ್ರ ಪ್ರಕಾರ ಜನವರಿ ಮಾಸದ ಕೊನೆಯ ವಾರ ನಿಮಗೆ ಹೇಗಿರಲಿದೆ?

ಸಂಖ್ಯಾಶಾಸ್ತ್ರ ಪ್ರಕಾರ ಜನವರಿ ಮಾಸದ ಕೊನೆಯ ವಾರ ಹೇಗಿರಲಿದೆ ನೋಡೋಣ:

ಸಂಖ್ಯೆ 1
ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣತ್ತೀರ, ಅಲ್ಲದೆ ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ನಿಮಗೆ ಕುಟುಂಬದ ಇರಲಿದೆ, ಹೀಗಾಗಿ ಹೊಸ ರಿಸ್ಕ್‌ ತೆಗೆದುಕೊಳ್ಳಲು ಭಯವಾಗುವುದಿಲ್ಲ, ಆರ್ಥಿಕ ದೃಷ್ಟಿಯಿಂದಲೂ ಈ ವಾರ ನಿಮಗೆ ಉತ್ತಮವಾಗಿದೆ. ಹೊಸ ಅವಕಾಶಗಳು ದೊರೆಯಲಿದೆ, ಆತ್ಮವಿಶ್ವಾಸದಿಂದ ನೀವು ಆ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ.

numerology prediction

ಸಂಖ್ಯೆ 2
ಈ ವಾರ ಕುಟುಂಬದ ಕಾರಣಕ್ಕೆ ಮಾನಸಿಕ ಒತ್ತಡವಿರಬಹುದು, ಮಕ್ಕಳ ಭವಿಷ್ಯದ ಕುರಿತ ಚಿಂತೆ ಕಾಡಬಹುದು. ಮನೆಯ ಸದಸ್ಯರಿಗೆ ಆರೋಗ್ಯ ಸಮಸ್ಯೆವಿದ್ದರೆ ನೀವು ಆರೋಗ್ಯದ ಕಡೆಗೆ ಗಮನಹರಿಸಿ, ನೀವು ಮಾನಸಿಕ ಒತ್ತಡ ಕಡಿಮೆ ಮಾಡುವುದರ ಕಡೆಗೆ ಗಮನಹರಿಸಿದರೆ ಒಳ್ಳೆಯದು. ಈ ವಾರ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳದಂತೆ ಸಲಹೆ ನೀಡಲಾಗುವುದು.

ಸಂಖ್ಯೆ 3
ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ, ಹೊಸ ಕಾರ್ಯಕ್ಕೆ ಕೈ ಹಾಕಲು ಈ ವಾರ ಅನುಕೂಲಕವಾಗಿದೆ. ನಿಮ್ಮ ಅಭಿಪ್ರಾಯಗಳನ್ನು ಕೆಲವರು ಮೆಚ್ಚಿಕೊಳ್ಳಬಹುದು, ಕೆಲವರು ಇಷ್ಟಪಡದೆಯೂ ಇರಬಹುದು ಆದರೆ ಒಂದು ಕೆಲಸ ಮಾಡುವಾಗ ಟೀಕೆ ಮಾಡುವವರೂ ಇರ್ತಾರೆ ಎಂಬುವುದು ಯೋಚಿಸಿ ಮುನ್ನೆಡೆಯಿರಿ. ಕೆಲಸದ ವಿಷಯದಲ್ಲಿ ಅತಿಯಾಗಿ ವರ್ಕ್‌ಲೋಡ್‌ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಲಾಗುವುದು.

ಸಂಖ್ಯೆ 4
ನೀವು ಅನಾವಶ್ಯಕವಾಗಿ ಹಠ ಹಿಡಿದು ಕೂರುವುದು ಸರಿಯಲ್ಲ, ಕೆಲವೊಂದು ವಿಚಾರಗಳಿಗೆ ಬಿಟ್ಟುಕೊಡುವುದು ಒಳ್ಳೆಯದು, ಅಲ್ಲದೆ ಈ ಗುಣದಿಂದ ಪ್ರಯೋಜನ ಕೂಡ ಪಡೆಯುವಿರಿ. ನೀವು ನಿಮ್ಮ ಗುರಿಯತ್ತ ಗಮನಹರಿಸಿ, ಇನ್ನು ಕೆಲಸದಲ್ಲಿ ನೀವು ಮಾಡುವ ಬದಲಾವಣೆಗಳು ನಿಮಗೆ ಯಶಸ್ಸು, ಲಾಭ ತಂದುಕೊಡಲಿದೆ.

ಸಂಖ್ಯೆ 5
ಹೊಸ ಸವಾಲುಗಳನ್ನು ಸ್ವೀಕರಿಸಲು ಹಿಂದೇಟು ಹಾಕಬೇಡಿ, ಹೊಸ ಅವಕಾಶಗಳು ಹೊಸ ಪಾಠವನ್ನು ನೀಡಲಿದೆ, ನಿಮ್ಮ ಸಂವಹನ ಶೈಲಿ ಈ ವಾರ ನಿಮಗೆ ಪ್ಲಸ್ ಆಗಲಿದೆ. ಆರ್ಥಿಕವಾಗಿ ಉತ್ತಮವಾಗಿದೆ, ವಾರದ ಕೊನೆಯಲ್ಲಿ ಹೆಚ್ಚು ಆರ್ಥಿಕ ಲಾಭ ದೊರೆಯಲಿದೆ. ನಿಮ್ಮ ಕ್ರಿಯೇಟಿವಿಟಿಗೆ ಉತ್ತಮ ಮನ್ನಣೆ ದೊರೆಯಲಿದೆ.

ಸಂಖ್ಯೆ 6
ಈ ವಾರ ನಿಮಗೆ ಮಿಶ್ರಫಲ, ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ. ನಿಮ್ಮ ಗುರಿಗಳ ಕಡೆಗೆ ಗಮನಹರಿಸಿ, ಯಾವ ವಿಷಯವೇ ಆಗಲಿ ಅತಿಯಾ ಗಿ ಚಿಂತೆ ಮಾಡಬೇಡಿ, ಚಿಂತೆ ಮಾಡುವುದರಿಂದ ಮನಸ್ಸಿನ ನೆಮ್ಮದಿ ಹಾಳಾಗುವುದಲ್ಲದೆ ಬೇರೆ ಪ್ರಯೋಜನವಿಲ್ಲ. ಕೆಲಸದ ಜಾಗದಲ್ಲಿ ಸಹೋದ್ಯೋಗಿಗಳ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗದಂತೆ ಜಾಗ್ರತೆವಹಿಸಿ. ಮಾನಸಿಕ ನೆಮ್ಮದಿ ಕಡಿಮೆ ಮಾಡಲು ಮನಸ್ಸಿಗೆ ಖುಷಿ ನೀಡುವ ವಿಷಯದ ಕಡೆಗೆ ಗಮನಹರಿಸಿ ಧ್ಯಾನ, ಯೋಗ ಇಷ್ಟವಾದ ಸಂಗೀತ ಕೇಳುವುದು ಇವೆಲ್ಲಾ ಮಾನಸಿಕ ಒತ್ತಡ ಕಡಿಮೆಯಾಗುವುದು.
.

ಸಂಖ್ಯೆ 7
ಈ ವಾರ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿ ಸಿಗಲಿದೆ, ವೃತ್ತಿ ಬದುಕಿನಲ್ಲಿ ನೀವು ಕನಸು ಕಂಡಂತೆಯೇ ಉತ್ತಮ ಅವಕಾಶ ದೊರೆಯಲಿದೆ. ಆರ್ಥಿಕವಾಗಿ ಈ ಅವಧಿ ತುಂಬಾ ಉತ್ತಮವಾಗಿದೆ, ಈ ವಾರ ನೀವು ನಿಮ್ಮ ಶ್ರಮಕ್ಕೆ ಪ್ರತಿಫಲ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ, ಆರ್ಥಿಕವಾಗಿ ಉತ್ತಮವಾಗಿದೆ, ಕುಟುಂಬ ಜೀವನದ ದೃಷ್ಟಿಯಿಂದಲೂ ಉತ್ತಮವಾಗಿದೆ.

ಸಂಖ್ಯೆ 8
ಈ ವಾರ ನಿಮ್ಮ ಕೆಲಸ ಕಾರ್ಯದ ಕಡೆಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗುವುದು, ಆದರೆ ವೃತ್ತಿ ಜೀವನದ ಕುರಿತ ನಿರ್ಧಾರಗಳನ್ನು ಆಲೋಚಿಸಿ ತೆಗೆದುಕೊಳ್ಳಿ, ನಿಮ್ಮ ಕೌಶಲ್ಯದಿಂದಾಗಿ ನೀವು ಉತ್ತಮ ಅವಕಾಶ ಪಡೆಯಲು ಸಾಧ್ಯವಾಗುವುದು. ಈ ವಾರ ನಿಮಗೆ ತುಂಬಾ ಉತ್ತಮವಾಗಿರಲಿದೆ.

ಸಂಖ್ಯೆ 9
ನೀವು ಬೇರೆಯವರು ಏನು ಹೇಳುತ್ತಾರೆ ಎಂದು ತಲೆಕೆಡಿಸಿಕೊಳ್ಳುವುದಕ್ಕಿಂತ ನಿಮ್ಮ ಸಾಮರ್ಥ್ಯದ ಕಡೆಗೆ ಗಮನಹರಿಸುವುದು ಒಳ್ಳೆಯದು. ವೃತ್ತಿಬದುಕು ಹಾಗೂ ವೈಯಕ್ತಿಕ ಬಸುಕಿನಲ್ಲಿ ಹೊಸ ಬದಲಾವಣೆ ಕಾಣಬಹುದು, ಎರಡನ್ನೂ ಉತ್ತಮವಾಗಿ ನಿಭಾಯಿಸಿಕೊಂಡು ಹೋಗಲು ಪ್ರಯತ್ನ ಮಾಡಬೇಕು. ಮಾನಸಿಕ ಒತ್ತಡ ಹೊರ ಹಾಕಲು ಕೂಡ ಪ್ರಯತ್ನ ಮಾಡಬೇಕು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Numerology Prediction From January 25 To January 31 In Kannada

Here is numerology prediction for your birth shine, read on..
Story first published: Saturday, January 25, 2025, 19:20 [IST]
X
Desktop Bottom Promotion