Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮ ಸಂಖ್ಯೆಗೆ ಹೇಗಿರಲಿದೆ?
ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ ನಿಮಗೆ ಹೇಗಿರಲಿದೆ ನೋಡೋಣ:
ಸಂಖ್ಯೆ 1(ಹುಟ್ಟಿದ ದಿನಾಂಕ 1,0,19,28)
ಈ ವಾರ 1 ಸಂಖ್ಯೆಯವರಿಗೆ ವೃತ್ತಿ ಜೀವನದಲ್ಲಿ ಏರಿಳಿತಗಳಿರಲಿದೆ. ಯಾವುದೇ ಹೊಸ ಕೆಲಸ ಮಾಡಬೇಕೆಂದಿದ್ದರೆ ಈ ವಾರ ಮುಂದೂಡುವುದು ಒಳ್ಳೆಯದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಈ ವಾರ ಖರ್ಚು ನಿಮ್ಮ ಊಹೆಗೂ ಮೀರಿ ಇರಲಿದೆ, ವೈವಾಹಿಕ ಜಿವನ ಚೆನ್ನಾಗಿರಲಿದೆ, ಪ್ರೇಮಿಗಳಿಗೂ ಈ ಅವಧಿ ಉತ್ತಮವಾಗಿರಲಿದೆ. ಅರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ.

ಸಂಖ್ಯೆ 2 (ಹುಟ್ಟಿದ ದಿನಾಂಕ 2,11,20,29)
ಈ ವಾರದ ಆರಂಭ ಅಷ್ಟು ಉತ್ತಮವಾಗಿರಲ್ಲ, ಕೆಲಸವು ಆಯಾಸವನ್ನುಂಟು ಮಾಡಬಹುದು, ಈ ಸಮಯದಲ್ಲಿ ಯಾವುದೇ ನಿರ್ಧಾರವನ್ನು ಅತುರದಿಂದ ತೆಗೆದುಕೊಳ್ಳಬೇಡಿ, ಅಲ್ಲದೆ ನಿಮ್ಮ ಕೋಪದ ಸ್ವಭಾವಕ್ಕೆ ಕಡಿವಾಣ ಹಾಕುವುದು ಒಳ್ಳೆಯದು, ವೈವಾಹಿಕ ಜೀವನದಲ್ಲಿಯೂ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಇನ್ನು ನೀವು ಆರೋಗ್ಯ ಸಮಸ್ಯೆ ಹೊಂದಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಸಂಖ್ಯೆ3 (ಹುಟ್ಟಿದ ದಿನಾಂಕ 3,12,21,30
ಈ ಸಂಖ್ಯೆಯವರಿಗೆ ಈ ವಾರ ಉತ್ತಮವಾಗಿರಲಿದೆ, ಆದರೆ ಆರ್ಥಿಕ ವಿಷಯದಲ್ಲಿ ಜಾಗ್ರತೆವಹಿಸಿ, ಕೆಲಸಕ್ಕಾಗಿ ಹುಡುಕಾಟ ಮಾಡುತ್ತಿದ್ದರೆ ಈ ಅವಧಿ ಉತ್ತಮವಾಗಿದೆ. ಇನ್ನು ಕೆಲಸ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ವ್ಯಾಪಾರಿಗಳಿಗೆಎ ಈ ಅವಧಿ ಧನಾತ್ಮಕವಾಗಿರಲಿದೆ, ಆರೋಗ್ಯ ಚೆನ್ನಾಗಿರಲಿದೆ.
ಸಂಖ್ಯೆ 4(ಹುಟ್ಟಿದ ದಿನಾಂಕ 4,13,22,31
ಹಣಕಾಸಿನ ಪರಿಸ್ಥಿತಿಯು ಸುಧಾರಿಸುತ್ತದೆ, ಈ ಅವಧಿ ಹೂಡಿಕೆಗೆ ಅನುಕೂಲಕರವಾಗಿದೆ, ಇನ್ನು ಕೆಲಸದಲ್ಲಿನ ಅಡೆತಡೆ ದೂರಾಗಲಿದೆ. ಅಲ್ಲದೆ ಈ ಸಮಯದಲ್ಲಿ ಕೆಲಸದಲ್ಲಿನ ಅಡೆತಡೆ ದೂರಾಗಲಿದೆ. ಇನ್ನು ಪ್ರೇಮಿಗಳಿಗೂ ಈ ಸಮಯ ಉತ್ತಮವಾಗಿರಲಿದೆ, ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯ ಚೆನ್ನಾಗಿರಲಿದೆ.
ಸಂಖ್ಯೆ 5 (ಹುಟ್ಟಿದ ದಿನಾಂಕ (ಹುಟ್ಟಿದ ದಿನಾಂಕ 5,14,23)
ಈ ಸಮಯ ತುಂಬಾ ಚೆನ್ನಾಗಿರಲಿದೆ, ಈ ಸಮಯದಲ್ಲಿ ಕುಟುಂಬದ ಜೊತೆಗೆ ಕಳೆಯುವ ಸಮಯವೂ ಉತ್ತಮವಾಗಿರಲಿದೆ. ಈ ಸಮಯದಲ್ಲಿ ನೀವು ಆಲೋಚಿಸದೆ ದುಡ್ಡು ಖರ್ಚು ಮಾಡಬೇಡಿ, ಅಲ್ಲದೆ ಯಾವುದೇ ದೊಡ್ಡ ಹೂಡಿಕೆ ಮಾಡದಂತೆ ಸಲಹೆ ನೀಡಲಾಗುವುದು. ಹಣದ ಕಾರಣದಿಂದ ನಿಲ್ಲಿಸಿದ್ದ ಕೆಲಸ ಪೂರ್ಣಗೊಳ್ಳಲಿದೆ. ಆರೋಗ್ಯದ ದೃಷ್ಟಿಯಿಂದ ಈ ಅವಧಿ ತುಂಬಾ ಚೆನ್ನಾಗಿದೆ.
ಸಂಖ್ಯೆ 6 (ಹುಟ್ಟಿದ ದಿನಾಂಕ 6,15,24)
ಕಳೆದ ವಾರಕ್ಕಿಂತ ಈ ವಾರ ನಿಮಗೆ ಕೆಲಸ ಕಾರ್ಯಗಳಲ್ಲಿ ಹೆಚ್ಚು ಉತ್ತಮವಾಗಿದೆ, ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಮಾಡಿದ ಪ್ರಯತ್ನ ಫಲ ನೀಡಲಿದೆ, ವೈವಾಹಿಕ ಜೀವನ ಚೆನ್ನಾಗಿರಲಿದೆ, ಆರ್ತಿಕವಾಗಿ ಉತ್ತಮವಾಗಿರಲಿದೆ, ಅರೊಗ್ಯ ಸಾಧಾರಣವಾಗಿರಲಿದೆ.
ಸಂಖ್ಯೆ 7 (ಹುಟ್ಟಿದ ದಿನಾಂಕ 7,16,25)
ಈ ಸಮಯ ವೃತ್ತಿ ಬದುಕಿನ ದೃಷ್ಟಿಯಿಂದ ನೋಡುವುದಾದರೆ ಉತ್ತಮವಾಗಿದೆ, ಈ ಅವಧಿಯಲ್ಲಿ ನಿಮ್ಮ ಫಲಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಈ ಸಮಯದಲ್ಲಿ ನೀವು ಬೇಡದ ವಿಷಯಗಳಲ್ಲಿ ತಲೆ ಕೆಡಿಸದಿರುವುದು ಒಳ್ಳೆಯದು, ಅಲ್ಲದೆ ಬೇಕಾಬಿಟ್ಟಿ ಖರ್ಚು ಮಾಡಲು ಹೋಗಬೇಡಿ.
ಸಂಖ್ಯೆ 8 (ಹುಟ್ಟಿದ ದಿನಾಂಕ 8,17,26)
ಈ ಅವಧಿಯಲ್ಲಿ ಕುಟುಂಬ ಬದುಕು ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿಯ ನಡುವೆ ಉತ್ತಮ ಬಾಂಧವ್ಯ ಇರಲಿದೆ, ಅವಾಹಿತರಿಗೆ ಈ ವಾರ ಮದುವೆ ಪ್ರಸ್ತಾಪ ಬರಬಹುದು, ಆರ್ಥಿಕವಾಗಿಯು ಪ್ರಗತಿ ಕಾಣುವಿರಿ ಹೀಗಾಗಿ ಸಾಲ ಮುಗಿಸಲು ಸಾಧ್ಯವಾಗುವುದು. ಈ ಸಮಯದಲ್ಲಿ ಆರೋಗ್ಯವೂ ಚೆನ್ನಾಗಿರಲಿದೆ.
ಸಂಖ್ಯೆ 9 (ಹುಟ್ಟಿದ ದಿನಾಂಕ 9,18,27)
ಈ ವಾರ ಆರ್ತಿಕವಾಗಿ ಉತ್ತಮ ಇರಲಿದೆ, ಈ ಅವಧಿಯಲ್ಲಿ ನಿಮ್ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಲಿದೆ, ಕುಟುಂಬ ಜೀವನ ಚೆನ್ನಾಗಿರಲಿದೆ. ನಿಮ್ಮ ಸಂಗಾತಿಯ ಜೊತೆಗೆ ಏನಾದರೂ ಭಿನ್ನಾಭಿಪ್ರಾಯವಿದ್ದರೆ ಮಾತನಾಡಿ ಬಗೆಹರಿಸಸಲು ಪ್ರಯತ್ನಿಸಿ. ಆರೋಗ್ಯದ ವಿಷಯಲ್ಲಿ ನಿರ್ಲಕ್ಷ್ಯ ಬೇಡ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
