Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಜನ್ಮ ಸಂಖ್ಯೆ ಪ್ರಕಾರ ಈ ವಾರ ನಿಮಗೆ ಹೇಗಿರಲಿದೆ?
ಸಂಖ್ಯಾಶಾಸ್ತ್ರದಲ್ಲಿ ನಿಮ್ಮ ಹುಟ್ಟಿದ ದಿನಾಂಕ ನೋಡಿ ನಿಮ್ಮ ಜನ್ಮ ಸಂಖ್ಯೆ ತಿಳಿಯಬಹುದು, ಈ ವಾರ ನಿಮ್ಮ ಜನ್ಮ ಸಂಖ್ಯೆಗೆ ಹೇಗಿರಲಿದೆ ಎಂದು ನೋಡೋಣ:

ಸಂಖ್ಯೆ 1 ( ಹುಟ್ಟಿದ ದಿನಾಂಕ 1, 10, 19, 28 )
ಈ ವಾರ ಈ ಸಂಖ್ಯೆಯವರಿಗೆ ಈ ಅವಧಿ ಉತ್ತಮವಾಗಿದೆ. ವೃತ್ತಿ ಬದುಕಿನಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಇನ್ನು ನಿಮ್ಮ ಕೆಲಸದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ವಿದ್ಯಾರ್ಥಿಗಳಿಗೆ ಈ ಅವಧಿ ಉತ್ತಮವಾಗಿದೆ, ಈ ಅವಧಿಯಲ್ಲಿ ಆರೋಗ್ಯ ಉತ್ತಮವಾಗಿರಲಿದೆ.
ಸಂಖ್ಯೆ 2 ( ಹುಟ್ಟಿದ ದಿನಾಂಕ 2, 11, 20, 29)
ವೈವಾಹಿಕ ಜೀವನ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ. ಇನ್ನು ಈ ವಾರ ದೂರ ಪ್ರಯಾಣ ಮಾಡಬಹುದು. ವೃತ್ತಿ ದೃಷ್ಟಿಯಿಂದ ಮಾಡುವ ಪ್ರಯತ್ನದಿಂದ ನೀವು ಉತ್ತಮ ಫಲ ಪಡೆಯಬಹುದು. ಈ ಅವಧಿಯಲ್ಲಿ ಆರೋಗ್ಯ ಉತ್ತಮವಾಗಿರಲಿದೆ.
ಸಂಖ್ಯೆ 3 ( ಹುಟ್ಟಿದ ದಿನಾಂಕ 3, 12, 21, 30 )
ವೈವಾಹಿಕ ಜೀವನ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿಯ ನಡುವಿನ ಭಿನ್ನಾಭಿಪ್ರಾಯ ದೂರಾಗಲಿದೆ, ಏನೇ ಸಮಸ್ಯೆಯಿದ್ದರೆ ಮಾತುಕತೆಯ ಮೂಲಕ ಬಗೆಹರಿಸಲು ಪ್ರಯತ್ನಿಸಿ. ಕುಟುಂಬ ಜೀವನ ಚೆನ್ನಾಗಿರಲಿದೆ. ವೃತ್ತಿ ಬದುಕಿನ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ಉತ್ತಮವಾಗಿದೆ. ವ್ಯಾಪಾರಿಗಳು ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯಲಿದೆ. ಆರೋಗ್ಯದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ.
ಸಂಖ್ಯೆ 4 (ಹುಟ್ಟಿದ ದಿನಾಂಕ 4, 13, 22, 31)
ಈ ವಾರ ನೀವು ಜಾಗ್ರತೆವಹಿಸಿ, ಕುಟುಂಬದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು, ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ. ಇನ್ನು ಈ ವಾರ ಉದ್ಯೋಗದಲ್ಲಿ ಕೆಲಸದ ಒತ್ತಡ ಅಧಿಕವಿರಲಿದೆ. ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ತುಂಬಾನೇ ಗಮನಹರಿಸಬೇಕು. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಲಾಭ ಗಳಿಸಲು ಕಷ್ಟವಾಗುವುದು. ಇನ್ನು ಆರೋಗ್ಯದ ಬಗ್ಗೆ ಹೇಳುವುದಾದರೆ ಚರ್ಮ ಸಂಬಂಧಿತ ಸಮಸ್ಯೆಗಳಿರಬಹುದು.
ಸಂಖ್ಯೆ 5 (ಹುಟ್ಟಿದ ದಿನಾಂಕ 5, 14,23 ರಂದು ನಡೆದಿದೆ)
ವೃತ್ತಿ ಜೀವನದ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ನಿಮಗೆ ತುಂಬಾ ಉತ್ತಮವಾಗಿದೆ. ನಿಮ್ಮ ವೃತ್ತಿ ಬದುಕಿನಲ್ಲಿ ಧನಾತ್ಮಕ ಬದಲಾವಣೆಗಳು ಕಂಡು ಬರುವುದು. ವ್ಯಾಪಾರದಲ್ಲಿ ಲಾಭ ಗಳಿಸುತ್ತೀರಿ. ಆರೋಗ್ಯದ ದೃಷ್ಟಿಯಿಂದ ಈ ವಾರ ಉತ್ತಮವಾಗಿದೆ.
ಸಂಖ್ಯೆ 6 (ಹುಟ್ಟಿದ ದಿನಾಂಕ 6,15, 24 ರಂದು ನಡೆದಿದೆ)
ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ, ಹೊಸ ಉದ್ಯೋಗವಕಾಶಗಳು ದೊರೆಯಲಿದೆ. ವಿದ್ಯಾರ್ಥಿಗಳಿಗೆ ಈ ಅವಧಿ ಉತ್ತಮವಾಗಿರಲಿದೆ. ಸ್ವಂತ ವ್ಯಾಪಾರ ಮಾಡುವವರು ಈ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುವುದು. ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ. ಪ್ರೇಮಿಗಳಿಗೆ ಅನುಕೂಲಕರವಾಗಿದೆ. ಆರೋಗ್ಯದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ.
ಸಂಖ್ಯೆ 7 (ಹುಟ್ಟಿದ ದಿನಾಂಕ7, 16, 25 ರಂದು ನಡೆದಿದೆ)
ವೃತ್ತಿ ಜೀವನದಲ್ಲಿ ನಿಮ್ಮ ಕೆಲಸದಿಂದ ಗುರುತಿಸಿಕೊಳ್ಳುತ್ತೀರಿ. ಕಠಿಣ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುವುದರಿಂದ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ. ಕುಟುಂಬ ಜೀವನದ ಬಗ್ಗೆ ನೋಡುವುದಾದರೆ ಕುಟುಂಬದಲ್ಲಿ ಕೆಲ ಸಮಸ್ಯೆಗಳಿರಬಹುದು, ಇದರಿಂದ ಮನಸ್ಸಿಗೆ ಬೇಸರವಾಗಬಹುದು, ಆದರೆ ನೀವು ಕುಟುಂಬದಲ್ಲಿನ ಸಮಸ್ಯೆ ಸಾಮಾನ್ಯವಾಗಿ ಬಗೆಹರಿಸಲು ಪ್ರಯತ್ನಿಸಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆವಿರಬಹುದು.
ಸಂಖ್ಯೆ 8 (ಹುಟ್ಟಿದ ದಿನಾಂಕ 8,17, 26 ರಂದು ನಡೆದಿದೆ)
ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು. ವ್ಯಾಪಾರಿಗಳು ಕೂಡ ಲಾಭ ಗಳಿಸಲು ಕಷ್ಟಪಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ನೋಡುವುದಾದರೆ ಕಾಲು ನೋವಿನ ಸಮಸ್ಯೆವಿರಬಹುದು. ವಿದ್ಯಾರ್ಥಿಗಳಿಗೆ ಈ ಅವಧಿ ಸವಾಲಿನಿಂದ ಕೂಡಿರಲಿದೆ. ಇನ್ನು ನೀವು ನಿಮ್ಮ ಸಂಗಾತಿಯ ಜೊತೆ ಭಿನ್ನಾಭಿಪ್ರಾಯ ಉಂಟಾಗದಂತೆ ಜಾಗ್ರತೆವಹಿಸಿ.
ಸಂಖ್ಯೆ 9 (ಹುಟ್ಟಿದ ದಿನಾಂಕ 9,18, 27 ರಂದು ನಡೆದಿದೆ)
ವೃತ್ತಿ ಬದುಕಿನ ಬಗ್ಗೆ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ. ವ್ಯಾಪಾರಿಗಳಿಗೆ ಲಾಭ ಗಳಿಸಲು ಸಾಧ್ಯವಾಗುವುದು. ಆರೋಗ್ಯದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ. ಈ ಅವಧಿಯಲ್ಲಿ ನಿಮ್ಮ ಹಾಗೂ ಸಂಗಾತಿಯ ನಡುವಿನ ಬಾಂಧವ್ಯ ಇರಲಿದೆ. ಇನ್ನು ಈ ಅವಧಿಯಲ್ಲಿ ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಿದದ್ದರೆ ಒಳ್ಳೆಯದು, ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











