Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಸಂಖ್ಯಾಶಾಸ್ತ್ರ ಭವಿಷ್ಯ ಪ್ರಕಾರ ಈ ವಾರ ಆಗಸ್ಟ್ (11-17) ನಿಮಗೆ ಹೇಗಿರಲಿದೆ?
ಸಂಖ್ಯಾಶಾಸ್ತ್ರದಲ್ಲಿ ನಿಮ್ಮ ಜನ್ಮ ದಿನಾಂಕ ನೋಡಿ ಭವಿಷ್ಯ ಹೇಳಲಾಗುವುದು, 12 ತಿಂಗಳಿನಲ್ಲಿ ಯಾವುದೇ ಮಾಸವಾಗಿರಲಿ, ಹುಟ್ಟಿದ ದಿನಾಂಕ ನೋಡಿ ಹೇಳಲಾಗುವುದು, ಅದರಂತೆ ಈ ವಾರ ನಿಮಗೆ ಹೇಗಿರಲಿದೆ ನೋಡೋಣ:

ಸಂಖ್ಯೆ 1 (ಹುಟ್ಟದ ದಿನಾಂಕ 1, 10, 19, 28)
ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ, ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದರೆ ಆ ಕೆಲಸ ದೊರೆಯಲಿದೆ, ವೃತ್ತಿ ಬದುಕಿನಲ್ಲಿನ ಕೌಶಲ್ಯ ನಿಮ್ಮ ಪ್ರಗತಿಗೆ ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಈ ಅವಧಿ ಉತ್ತಮವಾಗಿದೆ, ಅರೋಗ್ಯ ಚೆನ್ನಾಗಿರಲಿದೆ, ವೈವಾಹಿಕ ಬದುಕು, ಕುಟುಂಬ ಜೀವನ ಚೆನ್ನಾಗಿರಲಿದೆ.
ಸಂಖ್ಯೆ 2 ( ಹುಟ್ಟಿದ ದಿನಾಂಕ 2, 22, 20, 29)
ಸಂಗಾತಿಯೊಂದಿಗಿನ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ, ಅಲ್ಲದೆ ಯಾವುದನ್ನು ರಹಸ್ಯವಾಗಿ ಇಡಬೇಡಿ, ಮುಕ್ತಮಾತುಕತೆ ಸಂಬಂಧದಲ್ಲಿ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುತ್ತದೆ. ವಿದ್ಯಾರ್ಥಿಗಳಿಗೆ ಈ ಅವಧಿ ಉತ್ತಮವಾಗಿದೆ, ಉದ್ಯೋಗಿಗಳಿಗೂ ಈ ಸಮಯ ಒಳ್ಳೆಯದಿದೆ, ಆರೋಗ್ಯವು ಚೆನ್ನಾಗಿರಲಿದೆ.
ಸಂಖ್ಯೆ 3(ಹುಟ್ಟಿದ ದಿನಾಂಕ 3, 12, 30)
ವೃತ್ತಿ ಬದುಕು ತುಂಬಾ ಚೆನ್ನಾಗಿರಲಿದೆ,ಅಲ್ಲದೆ ಕೆಲಸದ ಜಾಗದಲ್ಲಿ ನಿಮಗೆ ಗೌರವ ಸಿಗಲಿದೆ, ವ್ಯಾಪಾರಿಗಳಿಗೂ ಈ ಅವಧಿ ಲಾಭದಾಯಕವಾಗಿದೆ. ವೈವಾಹಿಕ ಹಾಗೂ ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ಕಡೆಗೆ ಗಮನಹರಿಸಿ, ಕೆಮ್ಮು, ಶೀತ, ತಲೆನೋವು ಈ ಬಗೆಯ ಸಮಸ್ಯೆಗಳಿರಬಹುದು.
ಸಂಖ್ಯೆ 4 (ಹುಟ್ಟಿದ ದಿನಾಂಕ 4, 13, 22, 31)
ವೃತ್ತಿ ಬದುಕಿನಲ್ಲಿ ಒತ್ತಡ ಅಧಿಕವಿರಲಿದೆ, ವ್ಯಾಪಾರಿಗಳಿಗೆ ಪ್ರಬಲ ಸ್ಪರ್ಧೆ ಎದುರಾಗಲಿದೆ. ವಿದ್ಯಾರ್ಥಿಗಳು ಕೂಡ ಕೆಲ ಅಡೆತಡೆ ಎದುರಿಸಬಹುದು. ಅರೋಗ್ಯದ ಬಗ್ಗೆ ನೋಡುವುದಾದರೆ ತ್ವಚೆ ಸಂಬಂಧಿತ ಸಮಸ್ಯೆವಿರಬಹುದು. ಕುಟುಂಬ ಜೀವನದಲ್ಲಿಯೂ ಅಷ್ಟೆ ಸಮಸ್ಯೆಗಳನ್ನು ದೊಡ್ಡದಾಗಲು ಅವಕಾಶ ನೀಡಬೇಡಿ.
ಸಂಖ್ಯೆ 5(ಹುಟ್ಟಿದ ದಿನಾಂಕ 5, 14, 23)
ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ, ಉದ್ಯೋಗಿಗಳಿಗೆ ಪ್ರಗತಿಯ ಸಮಯ. ಆರೋಗ್ಯವೂ ಚೆನ್ನಾಗಿರಲಿದೆ, ವಿದ್ಯಾರ್ಥಿಗಳು ವೃತ್ತಿ ಜೀವನಕ್ಕೆ ಸಂಬಂಧಿಸಿದ ಶಿಕ್ಷಣ ಪಡೆಯಲು ಈ ಅವಧಿ ನಿಮಗೆ ಉತ್ತಮವಾಗಿದೆ. ವೈವಾಹಿಕ ಹಾಗೂ ಕುಟುಂಬ ಜೀವನ ಚೆನ್ನಾಗಿರಲಿದೆ.
ಸಂಖ್ಯೆ 6(ಹುಟ್ಟಿದ ದಿನಾಂಕ 6, 15, 24)
ವೈವಾಹಿಕ ಬದುಕಿನಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ವೃತ್ತಿ ಬದದುಕಿನಲ್ಲಿ ನೀವು ತುಂಬಾನೇ ಜಾಗ್ರತೆವಹಿಸಬೇಕು, ವ್ಯಾಪಾರಿಗಳಿಗೂ ತುಂಬಾನೇ ಸವಾಲು ಎದುರಾಗುವುದು, ಆರೋಗ್ಯದ ಬಗ್ಗೆ ಹೇಳುವುದಾದರೆ ಅಲರ್ಜಿಗೆ ಸಂಬಂಧಿಸಿದ ಸಮಸ್ಯೆವಿರಬಹುದು.
ಸಂಖ್ಯೆ 7 (ಹುಟ್ಟಿದ ದಿನಾಂಕ 7, 16, 25)
ಈ ಅವಧಿಯಲ್ಲಿ ನಿಮ್ಮ ಸಂಗಾತಿಗೆ ನೀವು ಅವರ ಮೇಲೆ ಗಮನಹರಿಸುತ್ತಿಲ್ಲ ಎಂಬ ಅಸಮಧಾನವಿರಬಹುದು. ಹಾಗಾಗಿ ಕುಟುಂಬ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಕೂಡ ಹೆಚ್ಚಿನ ಗಮನಹರಿಸಬೇಕು. ಆರೋಗ್ಯ ಸಮಸ್ಯೆಗಳುರಬಹುದು.
ಸಂಖ್ಯೆ 8 (ಹುಟ್ಟಿದ ದಿನಾಂಕ 8, 17, 26)
ಈ ವಾರ ಕೆಲ ಒತ್ತಡಗಳಿರಬಹುದು, ವೈವಾಹಿಕ ಬದುಕಿನಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು, ನಿಮ್ಮ ನಡುವೆ ಅಂತರ ಹೆಚ್ಚಾಗದಂತೆ ನೋಡಿಕೊಳ್ಳಿ, ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ವೃತ್ತಿ ಜೀವನದಲ್ಲಿ ಅತೃಪ್ತಿ ಕಾಡಬಹುದು, ಕೆಲಸ ಬದಲಾಯಿಸುವುದರ ಬಗ್ಗೆ ಕೂಡ ಯೋಚಿಸಬಹುದು. ಈ ಅವಧಿಯಲ್ಲಿ ಕಾಲುಗಳಲ್ಲಿ ನೋವು ಕಂಡು ಬರುವುದು.
ಸಂಖ್ಯೆ 9( ಹುಟ್ಟಿದ ದಿನಾಂಕ 9, 18, 27)
ನಿಮ್ಮ ಹಾಗೂ ಸಂಗಾತಿಯ ನಡುವೆ ಬಾಂಧವ್ಯ ಚೆನ್ನಾಗಿರಲಿದೆ, ನಿಮ್ಮ ನಡುವೆ ಸಾಮರಸ್ಯ ಇರಲಿದೆ, ಸಂಗಾತಿಯ ಜೊತೆ ಹೆಚ್ಚಿನ ಸಮಯ ಕಳೆಯುತ್ತೀರಿ. ಈ ವಾರ ಹೊಸ ಉದ್ಯೋಗಾವಕಾಶ ದೊರೆಯಲಿದೆ. ಆರೋಗ್ಯದ ದೃಷ್ಟಿಯಿಮದ ಈ ಅವಧಿ ಚೆನ್ನಾಗಿರಲಿದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications