Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ (ಜನವರಿ4-10) ನಿಮಗೆ ಹೇಗಿರಲಿದೆ?
ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ ನಿಮ್ಮ ಜನ್ಮ ಸಂಖ್ಯೆಗೆ ಹೇಗಿರಲಿದೆ ಎಂದು ನೋಡೋಣ:
ಸಂಖ್ಯೆ 1
ಈ ವಾರ ನಿಮಗೆ ಅನುಕೂಲಕರವಾಗಿದೆ, ಈ ವಾರ ಸುತ್ತಲಿನ ವಾತಾವರಣ ತುಂಬಾ ಧನಾತ್ಮಕವಾಗಿರಲಿದೆ.ವೃತ್ತಿ ಬದುಕು ಆರಂಭದಲ್ಲಿ ಚೆನ್ನಾಗಿರಲಿದೆ, ವಾರದ ಮಧ್ಯದಲ್ಲಿ ಕೆಲ ಸವಾಲುಗಳು ಬರಬಹುದು, ಆದರೆ ಎಲ್ಲವೂ ಸರಿಯಾಗಲಿದೆ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರ್ಥಿಕ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ.

ಸಂಖ್ಯೆ 2
ಈ ವಾರ ವೃತ್ತಿ ಬದುಕಿನಲ್ಲಿ ಉತ್ತಮ ಅವಕಾಶ ದೊರೆಯಲಿದೆ. ನಿಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಿ. ನಿಮ್ಮ ಕೌಶಲ್ಯಕ್ಕೆ ತಕ್ಕ ಮನ್ನಣೆ ದೊರೆಯಲಿದೆ. ಸಂಬಂಧದಲ್ಲಿ ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲು ನಿಮ್ಮ ನಡುವೆ ಸಂವಹನ ಚೆನ್ನಾಗಿರಬೇಕು. ಮನಸ್ಸಿನಲ್ಲಿರುವ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ನಿಮ್ಮ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ.
ಸಂಖ್ಯೆ 3
ಈ ವಾರ ಅನುಕೂಲಕರವಾಗಿರಲಿದೆ, ಈ ವಾರ ಕೆಲ ಅಚ್ಚರಿಗಳಿರಬಹುದು, ಸಂತೋಷವಿರಬಹುದು, ಒಟ್ಟಿನಲ್ಲಿ ಈ ಅವಧಿ ನಿಮಗೆ ತುಂಬಾ ಚೆನ್ನಾಗಿರಲಿದೆ. ವೃತ್ತಿ ಬದುಕಿನಲ್ಲಿ ಹೊಸ ಅವಕಾಶಗಳು ದೊರೆಯಲಿದೆ. ಈ ವಾರ ನಿಮಗೆ ಧನಾತ್ಮಕವಾಗಿರಲಿದೆ.
ಸಂಖ್ಯೆ 4
ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಲಹೆ ನೀಡಲಾಗುವುದು. ನಿಮ್ಮ ಸ್ವಭಾವದಿಂದಕೆಲ ಸಮಸ್ಯೆಗಳು ಬರಬಹುದು, ಕೆಲವು ಕಡೆ ಹಠ ಬಿಡಿ, ತಾಳ್ಮೆಯಿಂದ ವರ್ತಿಸಿ ಎಂದು ಸಲಹೆ ನೀಡಲಾಗುವುದು, ಆರ್ಥಿಕವಾಗಿ ನೋಡುವುದಾದರೆ ಈ ವಾರ ತುಂಬಾ ಚೆನ್ನಾಗಿರಲಿದೆ.
ಸಂಖ್ಯೆ 5
ಈ ವಾರ ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ, ಮನೆಯ ಸದಸ್ಯರ ಸಾಧನೆ ಕುಟುಂಬದಲ್ಲಿ ಸಂತೋಷ ಹೆಚ್ಚಿಸಲಿದೆ, ಈ ವಾರ ಪ್ರಯಾಣ ಹೆಚ್ಚಿರಲಿದೆ. ವಾರದ ಕೊನೆಯಲ್ಲಿ ನಿಮ್ಮ ಸಾಧನೆಗೆ ತಕ್ಕ ಪ್ರತಿಫಲ ಸಿಗಲಿದೆ. ಈ ವಾರ ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರತೆಗೆದುಕೊಳ್ಳಲು ಉತ್ತಮವಾಗಿದೆ.
ಸಂಖ್ಯೆ 6
ನೀವು ನಿರೀಕ್ಷೆದಂತೆ ಪ್ರತಿಫಲ ದೊರೆಯಲಿದೆ. ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿದೆ. ಯಶಸ್ಸು ಗಳಿಸಲು ನೀವು ಪ್ರತಿಫಲ ಸಿಗಲಿದೆ. ಪ್ರತಿಕೂಲ ಸಂದರ್ಭದಲ್ಲಿ ಆಪ್ತರ ನೆರವು ಸಿಗಲಿದೆ, ನೀವು ತಾಳ್ಮೆಯಿಂದಿರಿ, ನಿಮ್ಮ ಕೆಲಸದತ್ತ ,ಮಾತ್ರ ಗಮನಹರಿಸಿ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡುವುದು ಒಳ್ಳೆಯದು.
ಸಂಖ್ಯೆ 7
ಈ ವಾರ ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು. ನೀವು ನಿಮ್ಮ ಮೌಲ್ಯಗಳ ಕಡೆ ಹೆಚ್ಚಿನ ಗಮನಹರಿಸಬೇಕು. ನೀವು ಪುರುಷರಾಗಿದ್ದರೆ ನಿಮ್ಮ ಬದುಕಿನಲ್ಲಿ ಮಹಿಳೆಯೊಬ್ಬರು ಪ್ರಭಾವ ಬೀರಬಹುದು. ಆಧ್ಯಾತ್ಮದ ಕಡೆಗೆ ಗಮನಹರಿಸಿ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ನೀವು ಧ್ಯಾನದ ಕಡೆಗೆ ಗಮನಹರಿಸಿ.
ಸಂಖ್ಯೆ 8
ಈ ವಾರ ಮನೆಯ ವಿಚಾರಗಳ ಕಡೆಗೆ ಗಮನ ಹರಿಸಿ. ವೈಕ್ತಿಕ ಬದುಕಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ, ಆರ್ಥಿಕವಾಗಿ ಲಾಭ ಪಡೆಯಲು ಸಾಧ್ಯವಾಗುವುದು.
ಸಂಖ್ಯೆ 9
ಈ ವಾರ ನಿಮ್ಮ ಪ್ರಮುಖ ಕನಸು ನನಸಾಗಲಿದೆ. ವ್ಯಾಪಾರಸ್ಥರು ಈ ವಾರ ವ್ಯಾಪಾರದಲ್ಲಿ ಸುಧಾರಣೆಯನ್ನು ಕಾಣಬಹುದು, ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಗಮನಹರಿಸಿ. ನೀವು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಗಮನಹರಿಸಬೇಕು.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications