Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ(ಸೆಪ್ಟೆಂಬರ್ 21ರಿಂದ 28) ನಿಮ್ಮ ಜನ್ಮ ಸಂಖ್ಯೆಗೆ ಹೇಗಿರಲಿದೆ?
ಸಂಖ್ಯಾಶಾಸ್ತ್ರದಲ್ಲಿ ನೀವು ಹುಟ್ಟಿದ ದಿನಾಂಕದ ಪ್ರಕಾರ ಜನ್ಮ ದಿನಾಂಕ ಹೇಳಲಾಗುವುದು, ಈ ವಾರ ನಿಮ್ಮ ಜನ್ಮ ಸಂಖ್ಯೆಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಸಂಖ್ಯೆ 1 (ಹುಟ್ಟಿದ ದಿನಾಂಕ 1, 10, 19, 28)
ವೈವಾಹಿಕ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ವಿದ್ಯಾರ್ಥಿಗಳು ತಮ್ಮ ಓದಿನ ಕಡೆಗೆ ಗಮನಹರಿಸಬೇಕು. ವ್ಯಾಪಾರಿಗಳು ಲಾಭ ಗಳಿಸುತ್ತೀರಿ. ಆರೋಗ್ಯದ ದೃಷ್ಟಿಯಿಂದ, ಈ ಅವಧಿಯು ಅನುಕೂಲಕರವಾಗಿರುತ್ತದೆ, ಕುಟುಂಬ ಜೀವನ ಚೆನ್ನಾಗಿರಲಿದೆ.

ಸಂಖ್ಯೆ 2 (ಹುಟ್ಟಿದ ದಿನಾಂಕ 2, 11, 20, 29 )
ಈ ಅವಧಿಯಲ್ಲಿ ವೈವಾಹಿಕ ಬದುಕಿನಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಸ್ವಂತ ವ್ಯವಹಾರ ಹೊಂದಿರುವವರಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ಅವರು ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಆರೋಗ್ಯದ ಕಡೆಗೆ ಗಮನಹರಿಸಿ.
ಸಂಖ್ಯೆ 3 (ಹುಟ್ಟಿದ ದಿನಾಂಕ 3, 12, 21, 30 )
ಪ್ರೇಮಿಗಳಿಗೆ ಈ ಅವಧಿ ವಿಶೇಷವಾಗಿರಲಿದೆ.ವೃತ್ತಿಪರ ಜೀವನದಲ್ಲಿ ಪ್ರಗತಿ ಕಂಡು ಬರಲಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆಗಳಿವೆ, ವ್ಯಾಪಾರಿಗಳಿಗೆ ಅನುಕೂಲಕರವಾಗಿದೆ, ಆರೋಗ್ಯ ಉತ್ತಮವಾಗಿರಲಿದೆ. ಕುಟುಂಬ ಜೀವನ ಉತ್ತಮವಾಗಿರಲಿದೆ. ವೈವಾಹಿಕ ಬದುಕಿನಲ್ಲಿ ಹೊಂದಾಣಿಕೆ ಇರಲಿದೆ.
ಸಂಖ್ಯೆ 4 (ಹುಟ್ಟಿದ ದಿನಾಂಕ 4, 13, 22, 31)
ಈ ವಾರ ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಸಂಬಂಧದಲ್ಲಿ ನಿಮ್ಮ ಸಂಗಾತಿ ನಡುವೆ ಹೊಂದಾಣಿಕೆಯ ಕೊರತೆ ಉಂಟಾಗುವುದು. ವಿದ್ಯಾರ್ಥಿಗಳಿಗೂ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ. ಕೆಲಸದ ಜಾಗದಲ್ಲಿ ಒತ್ತಡ ಅಧಿಕವಿರಲಿದೆ. ವ್ಯಾಪಾರಿಗಳಿಗೂ ಏರಳಿತಗಳಿಂದ ಕೂಡಿರಲಿದೆ. ತ್ವಚೆ ಸಮಸ್ಯೆಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ.
ಸಂಖ್ಯೆ 5 (ಹುಟ್ಟಿದ ದಿನಾಂಕ 5, 14, 23)
ಈ ಅವಧಿ ನಿಮಗೆ ಉತ್ತಮವಾಗಿರಲಿದೆ, ನಿಮ್ಮ ಹಾಗು ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ವೃತ್ತಿ ಜೀವನದ ದೃಷ್ಟಿಯಿಂದ ನೋಡುವುದಾದರೆ ಈ ಸಮಯ ಉತ್ತಮವಾಗಿದೆ. ಎಲ್ಲಾ ಕೆಲಸ ಕಾರ್ಯಗಳು ಯೋಜನೆಯಂತೆಯೇ ಪೂರ್ಣಗೊಳ್ಳಲಿದೆ. ವ್ಯಾಪಾರಿಗಳಿಗೆ ಈ ಅವಧಿ ಉತ್ತಮವಾಗಿರಲಿದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಸಂಖ್ಯೆ 6 ( ಹುಟ್ಟಿದ ದಿನಾಂಕ 6, 15, 24)
ಈ ವಾರ ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ. ಕೆಲಸ ಕಾರ್ಯಗಳು ನಿಮ್ಮ ಯೋಜನೆಯಂತೆಯೇ ಪೂರ್ಣಗೊಳ್ಳಲಿದೆ. ಇದರಿಂದ ಈ ವಾರ ನೀವು ತುಂಬಾ ರಿಲ್ಯಾಕ್ಸ್ ಅಗುವಿರಿ. ವ್ಯಾಪಾರಿಗಳಿಗೆ ಈ ಅವಧಿ ಉತ್ತಮವಾಗಿರಲಿದೆ. ಈ ಸಮಯದಲ್ಲಿ ನಿಮಗೆ ಆರೋಗ್ಯ ಉತ್ತಮವಾಗಿರಲಿದೆ.
ಸಂಖ್ಯೆ 7 ( ಹುಟ್ಟಿದ ದಿನಾಂಕ 7, 16, 25 )
ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯಗಳು ಬರಬಹುದು, ಪ್ರೇಮಿಗಳಿಗೂ ಈ ವಾರ ಸವಾಲಿನಿಮದ ಕೂಡಿರಲಿದೆ, ವಿದ್ಯಾರ್ಥಿಗಳು ತಮ್ಮ ಓದಿನ ಕಡೆಗೆ ಹೆಚ್ಚಿನ ಗಮನಹರಿಸದಿದ್ದರೆ ಕಷ್ಟ. ವ್ಯಾಪಾರಿಗಳು ಲಾಭ ಗಳಿಸಲು ಕಷ್ಟಪಡಬಹುದು, ಆರೋಗ್ಯದ ದೃಷ್ಟಿಯಿಂದಲೂ ಈ ವಾರ ಉತ್ತಮವಲ್ಲ, ನೀವು ಆರೋಗ್ಯದ ಕಡೆಗೆ ಗಮನಹರಿಸಿದರೆ ಒಳ್ಳೆಯದು.
ಸಂಖ್ಯೆ 8 (ಹುಟ್ಟಿದ ದಿನಾಂಕ 8, 17, 26)
ಈ ಸಮಯ ನಿಮಗೆ ಅನುಕೂಲಕರವಾಗಿದೆ. ವೃತ್ತಿ ಬದುಕಿನಲ್ಲಿ ಅನುಕೂಲಕರ ಪ್ರಯೋಜನ ಪಡೆಯುವಿರಿ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಸ್ವಲ್ಪ ಕಠಿಣವಾಗಲಿದೆ, ನಿಮ್ಮ ಪ್ರತಿಸ್ಪರ್ಧಿಗಳು ತೀವ್ರ ಪೈಪೋಟಿ ನೀಡಬಹುದು. ಆರೋಗ್ಯದ ಬಗ್ಗೆ ನೋಡುವುದಾದರೆ ಮೈಕೈ ನೋವಿನ ಸಮಸ್ಯೆವಿರಬಹುದು.
ಸಂಖ್ಯೆ 9 (ಹುಟ್ಟಿದ ದಿನಾಂಕ 9, 18, 27)
ಈ ವಾರ ನಿಮಗೆ ಅನುಕೂಲಕರವಾಗಿರಲಿದೆ. ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕು ಚೆನ್ನಾಗಿರಲಿದೆ. ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ, ವ್ಯಾಪಾರಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಆರೋಗ್ಯದ ದೃಷ್ಟಿಯಿಂದ ಈ ವಾರ ಉತ್ತಮವಾಗಿರುತ್ತದೆ, ಒಟ್ಟಿನಲ್ಲಿ 9 ಸಂಖ್ಯೆಯವರಿಗೆ ಈ ಅವಧಿ ಉತ್ತಮವಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
