Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸಂಖ್ಯಾಶಾಸ್ತ್ರ ಪ್ರಕಾರ ಈ ದಿನಗಳು (ಡಿಸೆಂಬರ್ 22-28) ನಿಮಗೆ ಹೇಗಿರಲಿದೆ?
ಡಿಸೆಂಬರ್ ಮಾಸದ ಕೊನೆಯ ವಾರ ಸಂಖ್ಯಾಶಾಸ್ತ್ರ ಪ್ರಕಾರ ಯಾರಿಗೆ ಹೇಗಿರಲಿದೆ ಎಂದು ನೋಡೋಣ:
ನೀವು ಹುಟ್ಟಿದ ದಿನಾಂಕ ಪ್ರಕಾರ ಸಂಖ್ಯಾಶಾಸ್ತ್ರ ಭವಿಷ್ಯ ಹೇಳಲಾಗಿದೆ. ನೀವು ಹುಟ್ಟಿದ ದಿನಾಂಕ 10 ಆಗಿದ್ದರೆ (ಯಾವುದೇ ತಿಂಗಳಿನ) ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಸಂಖ್ಯೆ 1+0=1 ಆಗಿದೆ. ಅದರಂತೆ 31ಕ್ಕೆ ಜನಿಸಿದ್ದರೆ 3+1=4 ಹೀಗೆ ಲೆಕ್ಕ ಹಾಕಿದರೆ ನಿಮ್ಮ ಜನ್ಮ ಸಂಖ್ಯೆ ತಿಳಿಯುವುದು.
ಸಂಖ್ಯೆ 1
ಸಂಖ್ಯಾಶಾಸ್ತ್ರ ಪ್ರಕಾರ 1 ಸಂಖ್ಯೆಯವರು ಈ ವಾರ ವೃತ್ತಿ ಬದುಕಿನ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಕೆಲಸದಲ್ಲಿ ಕೆಲ ಅಡೆತಡೆ ಬರಬಹುದು, ಬಾಸ್ ಬಗ್ಗೆ ಅಸಮಧಾನ ಕೂಡ ಉಂಟಾಗಬಹುದು, ವ್ಯಾಪಾರಿಗಳು ಕೂಡ ಈ ಅವಧಿಯಲ್ಲಿ ವ್ಯವಹಾರದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಹಣದ ಹೂಡಿಕೆ ಬಗ್ಗೆ ಗಮನವಿರಲಿ. ಇನ್ನು ಹಣಕಾಸಿನ ಬಗ್ಗೆ ಹೇಳುವುದಾದರೆ ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ.ಸಂಗಾತಿ ಜೊತೆ ಕೋಪದಿಂದ ವರ್ತಿಸಬೇಡಿ.

ಸಂಖ್ಯೆ 2
ಈ ವಾರ ವೃತ್ತಿ ಬದುಕಿನ ದೃಷ್ಟಿಯಿಂದ ನಿಮಗೆ ಅನುಕೂಲಕರವಾಗಿದೆ, ಆದರೆ ನೀವು ಸಿಕ್ಕ ಅವಕಾಶ ಬಳಸಿಕೊಳ್ಳಲು ಪ್ರಯತ್ನಿಸಬೇಕು. ಅಲ್ಲದೆ ನಿಮ್ಮ ಸಂವಹನ ಕೌಶಲ್ಯ ಕೂಡ ನಿಮಗೆ ಪ್ಲಸ್ ಪಾಯಿಂಟ್ ಆಗಲಿದೆ. ವ್ಯಾಪಾರಿಗಳಿಗೆ ಈ ವಾರ ಉತ್ತಮವವಾಗಿರಲಿದೆ, ವೈಯಕ್ತಿಕ ಬದುಕಿನ ದೃಷ್ಟಿಯಿಂದಲೂ ಈ ವಾರ ನಿಮಗೆ ಅನುಕೂಲಕರವಾಗಿದೆ.
ಸಂಖ್ಯೆ 3
ಈ ವಾರ ನೀವು ನಿಮ್ಮ ವೃತ್ತಿ ಬದುಕಿನ ಕಡೆಗೆ ಮತ್ತಷ್ಟು ಆಸಕ್ತಿ ತೋರಬೇಕು, ಸೋಮಾರಿತನ ನಷ್ಟಕ್ಕೆ ಕಾರಣವಾಗಬಹುದು, ಹಾಗಾಗಿ ಚಿಕ್ಕ ನಿರ್ಲಕ್ಷ್ಯ ಕೂಡ ಬೇಡ ಎಂಬ ಸಲಹೆ ನೀಡಲಾಗುವುದು. ಸಂಗಾತಿ ಜೊತೆ ಕೆಲ ಅಭಿಪ್ರಾಯ ವ್ಯತ್ಯಾಸ ಬರಬಹುದು, ಆದರೆ ಅವರ ಅಭಿಪ್ರಾಯಕ್ಕೆ ಕೂಡ ಮನ್ನಣೆ ನೀಡಿದರೆ ಸಮಸ್ಯೆ ದೂರಾಗುವುದು ಎಂಬ ಸಲಹೆ ನೀಡಲಾಗುವುದು. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಅನುಕೂಲಕರವಾಗಿದೆ.
ಸಂಖ್ಯೆ 4
ಈ ವಾರ ಅನುಕೂಲಕರವಾಗಿರಲಿದೆ, ಆರ್ಥಿಕವಾಗಿಯೂ ನಿಮಗೆ ಶುಭ, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ವೃತ್ತಿ ಬದುಕಿನಲ್ಲಿ ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗುವುದರಿಂದ ತೃಪ್ತಿ ಇರಲಿದೆ. ಈ ವಾರ ಖುಷಿಯಿಂದ ಕಳೆಯುತ್ತೀರಿ, ಇಯರ್‌ಎಂಡ್ ನಿಮಗೆ ಅದ್ಭುತವಾಗಿರಲಿದೆ.
ಸಂಖ್ಯೆ 5
ವೃತ್ತಿ ಬದುಕಿನಲ್ಲಿ ನಿಮಗೆ ಅತ್ಯುತ್ತಮವಾದ ಅವಕಾಶ ದೊರೆಯಲಿದೆ, ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನಿಮಗೆ ಪ್ರಮುಖ ಜವಾಬ್ದಾರಿ ವಹಿಸಿಕೊಡಬಹುದು. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ, ಆರ್ಥಿಕ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ.
ಸಂಖ್ಯೆ 6
ಈ ಅಧಿಯಯಲ್ಲಿ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುವುದು. ಅಲ್ಲದೆ ಬಿಡುವಿಲ್ಲದ ಕೆಲಸದಿಂದ ಸ್ವಲ್ಪ ಬ್ರೇಕ್ ತೆಗೆದು ನೀವು ವಿಶ್ರಾಂತಿ ಕಡೆಗೆ ಗಮನಹರಿಸಿದರೆ ಮಾನಸಿಕ ಒತ್ತಡ ತುಂಬಾ ಕಡಿಮೆಯಾಗುವುದು, ಖುಷಿಯಿಂದ ಇರಲು ಸಾಧ್ಯವಾಗುವುದು. ಕೆಲವೊಂದು ಭವಿಷ್ಯದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು.
ಸಂಖ್ಯೆ 7
ಈ ವಾರ ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕು, ಏನಾದರು ಆರೋಗ್ಯ ಸಮಸ್ಯೆ ಇದ್ದರೆ ನಿಯಮಿತ ಔಷಧಿಗಳನ್ನು ತೆಗೆದುಕೊಳ್ಖಿ, ನಿರ್ಲಕ್ಷ್ಯ ಮಾಡಬೇಡಿ. ನೀವು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ನಿಮ್ಮ ಹಾಗೂ ಸಂಗಾತಿ ನಡುವೆ ಏನಾದರು ಭಿನ್ನಾಭಿಪ್ರಾಯವಿದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಿ.
ಸಂಖ್ಯೆ 8
ಈ ವಾರ ಭಾವನಾತ್ಮಕವಾಗಿ ಸ್ವಲ್ಪ ದುರ್ಬಲರಾಗಿರಬಹುದು, ನಿಮ್ಮ ನಿರೀಕ್ಷೆಗೆ ತಕ್ಕ ಫಲ ದೊರೆಯುವುದು ಕಷ್ಟವಾಗಬಹುದು, ಆರೋಗ್ಯ ಸಂಬಂಧಿತ ಸಮಸ್ಯೆ ಕೂಡ ಕೆಲಸದ ಮೇಲೆ ಪರಿಣಾಮ ಬೀರುವುದು, ನೀವು ಕೆಲಸ ಅಂತ ಆರೋಗ್ಯ ನಿರ್ಲಕ್ಷ್ಯ ಮಾಡಬೇಡಿ.ಆರ್ಥಿಕವಾಗಿ ನೋಡುವುದಾದರೆ ಹಣದ ಖರ್ಚು ಹೆಚ್ಚಿರಲಿದೆ.
ಸಂಖ್ಯೆ 9
ಈ ವಾರ ನೀವು ನಿರ್ಧಾರಗಳನ್ನು ಆಲೋಚಿಸಿ ತೆಗೆದುಕೊಳ್ಳಬೇಕು, ಈ ವಾರ ಕೆಲವೊಂದು ವಿಷಯಗಳು ಮನಸ್ಸಿಗೆ ನೋವುಂಟು ಮಾಡಬಹುದು. ವ್ಯಾಪಾರಿಗಳಿಗೆ ಸ್ಪರ್ಧೆ ಹೆಚ್ಚಿರಬಹುದು. ಉದ್ಯೋಗಿಗಳಿಗೂ ಈ ವಾರ ಒತ್ತಡದಿಂದ ಕೂಡಿರಲಿದೆ, ಆದರೆ ಎಲ್ಲಾ ಪರಿಸ್ಥಿತಿಯನ್ನು ನೀವು ಸಮಧಾನದಿಂದ ನಿಭಾಯಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











