Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
ನೀವು ಹುಟ್ಟಿದ ದಿನಾಂಕ ಪ್ರಕಾರ ನಿಮ್ಮ ಜನ್ಮ ಸಂಖ್ಯೆ ತಿಳಿಯಬಹುದು, ನಿಮ್ಮ ಸಂಖ್ಯೆಗೆ ಸಂಖ್ಯಾಶಾಸ್ತ್ರ ಪ್ರಕಾರ ಈ ವಾರ ನಿಮಗೆ ಹೇಗಿರಲಿದೆ ಎಂದು ನೋಡೋಣ....
ಸಂಖ್ಯೆ 1( ಹುಟ್ಟಿದ ದಿನಾಂಕ 1, 10, 19, 28 )
ಈ ವಾರ ಜನರಿಗೆ ಧನಾತ್ಮಕವಾಗಿರುತ್ತದೆ. ಕೆಲಸದಲ್ಲಿ ಈ ವಾರ ಉತ್ತಮವಾಗಿದೆ, ಅಲ್ಲದೆ ಮೇಲಾಧಿಕಾರಿಗಳ ಬೆಂಬಲ ಸಿಗಲಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಸಮಯವು ಉತ್ತಮವಾಗಿರುತ್ತದೆ. ಕೆಲಸದ ಹೊರೆ ಅಧಿಕವಾಗಿರುವುದರಿಂದ ವಾರದ ಕೊನೆಯಲ್ಲಿ ಹೆಚ್ಚಿನ ಕೆಲಸದ ಹೊರೆಯಿಂದಾಗಿ ಕುಟುಂಬ ಜೀವನಕ್ಕೆ ಹೆಚ್ಚು ಗಮನ ನೀಡಲು ಸಾಧ್ಯವಾಗಲ್ಲ. ಭಾನುವಾರ ಸ್ವಲ್ಪ ಎಚ್ಚರಿಕೆಯಿಂದ ಕಳೆಯಿರಿ. ಕುಟುಂಬ ಹಾಗೂ ವೃತ್ತಿ ಜೀವನದ ನಡುವೆ ಸಮತೋಲನ ಕಾಪಾಡಿಕೊಳ್ಳಿ.

ಸಂಖ್ಯೆ 2 (ಹುಟ್ಟಿದ ದಿನಾಂಕ 2, 11, 20, 29 )
ಕಲಸದಲ್ಲಿ ನೀವು ಈ ವಾರ ಶುಭ ಫಲಿತಾಂಶ ಪಡೆಯುತ್ತೀರಿ. ನಿಮ್ಮ ಕೆಲಸವು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುವುದು. ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ. ಯಾರಿಗಾದರು ಹಣ ಕೊಟ್ಟಿದ್ದರೆ ಹಣ ಮರಳಿ ಸಿಗಲಿದೆ. ವ್ಯವಹಾರದಲ್ಲಿ ಯಾವುದೇ ಪ್ರಮುಖ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ವಾರದ ಕೊನೆಯಲ್ಲಿ ಮನೆಯ ಹಿರಿಯರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಈ ಸಮಯದಲ್ಲಿ ತಾಳ್ಮೆಯಿಂದ ವರ್ತಿಸಿ, ಪರಿಸ್ಥಿತಿ ಹಾಳಾಗದಂತೆ ನೋಡಿಕೊಳ್ಖಬೇಕು, ಇಲ್ಲದಿದ್ದರೆ ಮನಸ್ಸಿಗೆ ನೋವಾಗುವುದು.
ಸಂಖ್ಯೆ 3 (ಹುಟ್ಟಿದ ದಿನಾಂಕ 3, 12, 21, 30 )
ವಾರದ ಆರಂಭವು ಉತ್ತಮವಾಗಿರುತ್ತದೆ. ವಾರದ ಮಧ್ಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರಿಗಳು ನೀವು ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಎದುರಿಸಬೇಕಾಗಬಹುದು. ನೀವು ಕೇಳಿದ್ದನ್ನು ಅನುಸರಿಸಿ ಯಾವುದೇ ತಪ್ಪು ಕಾರ್ಯವನ್ನು ಮಾಡಬೇಡಿ. ವಾರಾಂತ್ಯದಲ್ಲಿ ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸಿದರೆ ಯಶಸ್ಸು ಸಿಗುವುದು. ವೈವಾಹಿಕ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯ ಬರಬಹುದು.
ಸಂಖ್ಯೆ 4 ( ಹುಟ್ಟಿದ ದಿನಾಂಕ 4, 13, 22, 31 )
ವಾರದ ಆರಂಭದಲ್ಲಿ ಸರ್ಕಾರಿ ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ವಾದ ಮಾಡಲು ಹೋಗಬೇಡಿ, ಕೋಪ ನಿಯಂತ್ರಿಸುವುದು ಒಳ್ಳೆಯದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರಿ, ತಪ್ಪುಗಳನ್ನು ಸರಿದೂಗಿಸಬೇಕು. ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡಬೇಡಿ.
ಸಂಖ್ಯೆ 5 (ಹುಟ್ಟಿದ ದಿನಾಂಕ 5, 14, 23 )
ಈ ವಾರ ನಿಮಗೆ ಮಿಶ್ರಫಲಿತಾಂಶ. ವಾರದ ಆರಂಭದಲ್ಲಿ ನೀವು ನಿಮ್ಮ ತಂದೆಯಿಂದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಕೆಲಸವನ್ನು ಗುರುತಿಸುತ್ತಾರೆ. ನೀವು ಕೆಲವು ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ. ಸ್ವಲ್ಪ ಮಾನಸಿಕ ಒತ್ತಡ ಇರುತ್ತದೆ. ಹಣದ ಖರ್ಚು ಅಧಿಕವಿರುವುದರಿಂದ ಉಳಿತಾಯ ಮಾಡುವುದು ಕಷ್ಟವಾಗುವುದು. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ, ಇಬ್ಬರ ನಡುವೆ ಮಾಧುರ್ಯ ಹೆಚ್ಚಾಗಲಿದೆ.
ಸಂಖ್ಯೆ 6( ಹುಟ್ಟಿದ ದಿನಾಂಕ 6, 15, 24 )
ವಾರದ ಆರಂಭದಲ್ಲಿ ಕೆಲಸದ ಹೊರೆಯಿಂದಾಗಿ ಕುಟುಂಬಕ್ಕೆ ಸಮಯ ಕೊಡುವುದು ಕಷ್ಟವಾಗಬಹುದು. ಜವಾಬ್ದಾರಿಗಳು ಹೆಚ್ಚಾಗಬಹುದು. ವಾರದ ಮಧ್ಯದಲ್ಲಿ ಅನಗ್ಯತ ಖರ್ಚು ಬರುವುದು. ಸ್ನೇಹಿತರೊಂದಿಗೆ ಟ್ರಿಪ್ ಹೋಗುವ ಪ್ಲ್ಯಾನ್ ಮಾಡುತ್ತೀರಿ, ಆರೋಗ್ಯದ ಕಡೆಗೆ ಗಮನಹರಿಸಿ.
ಸಂಖ್ಯೆ 7 (ಹುಟ್ಟಿದ ದಿನಾಂಕ 7, 16, 25 )
ಈ ವಾರ ನಿಮಗೆ ಮಿಶ್ರ ಫಲಿತಾಂಶ. ನಿಮ್ಮ ಮನೋಬಲ ಹೆಚ್ಚುತ್ತದೆ. ಆಸೆಗಳು ಈಡೇರುತ್ತವೆ. ಆದಾಗ್ಯೂ, ಮಂಗಳವಾರ ಸ್ವಲ್ಪ ಒತ್ತಡದಲ್ಲಿ ಕಳೆಯುತ್ತದೆ. ವಾರದ ಮಧ್ಯದಲ್ಲಿ ಅನಗತ್ಯ ಜಗಳ ತಪ್ಪಿಸಿ. ಕೋಪದಲ್ಲಿ ನಿಮ್ಮ ಮಾತಿನ ಮೇಲೆ ನಿಯಂತ್ರಣ ಕಳೆದುಕೊಳ್ಳಬೇಡಿ. ನಿಮ್ಮ ಜೀವನ ಸಂಗಾತಿಯ ಸಲಹೆಯಿಂದ ನೀವು ಲಾಭವನ್ನು ಪಡೆಯುತ್ತೀರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮನೆಯವರೊಂದಿಗೆ ಚರ್ಚಿಸಿ.
ಸಂಖ್ಯೆ 8 (ಹುಟ್ಟಿದ ದಿನಾಂಕ 8, 17, 26)
ಈ ವಾರದ ಆರಂಭವು ಸ್ವಲ್ಪ ನಿಧಾನವಾಗಿರುತ್ತದೆ. ಕೆಲಸದಲ್ಲಿ ಅಧಿಕಾರಿಯೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ನಿಮ್ಮ ಅಭಿಪ್ರಾಯಗಳನ್ನು ಸ್ವಲ್ಪ ನಯವಾಗಿ ಅವರಿಗೆ ಹೇಳಿ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ಮಾನಸಿಕ ಒತ್ತಡದಿಂದಾಗಿ ನಿದ್ರಾಹೀನತೆಯ ಸಮಸ್ಯೆ ಹೆಚ್ಚಾಗಬಹುದು. ಸ್ವಂತ ಪರಿಶ್ರಮದಿಂದ ಕೆಲಸ ಯಶಸ್ವಿಯಾಗುತ್ತದೆ. ಗುರುವಾರ ಸ್ವಲ್ಪ ಎಚ್ಚರಿಕೆಯಿಂದ ಕಳೆಯಿರಿ. ಖರ್ಚು ಅಧಿಕವಿರಲಿದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಸಂಖ್ಯೆ 9 (ಹುಟ್ಟಿದ ದಿನಾಂಕ 9, 18, 27)
9 ನೇ ಸಂಖ್ಯೆಯನ್ನು ಹೊಂದಿರುವ ಜನರಿಗೆ ವಾರವು ಸಾಮಾನ್ಯವಾಗಿ ಧನಾತ್ಮಕವಾಗಿರುತ್ತದೆ. ಅತಿಯಾದ ಕೆಲಸದ ಒತ್ತಡದಿಂದ ನೀವು ಆಯಾಸವನ್ನು ಅನುಭವಿಸುವಿರಿ. ಬುಧವಾರ ಉತ್ತಮ ದಿನವಾಗಿದೆ. ಈ ದಿನ ನೀವು ಮಂಗಳಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಮಕ್ಕಳ ಕುರಿತ ಚಿಂತೆ ಕಾಡಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications