Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಈ ವಾರದ (ಆಗಸ್ಟ್ 18-24) ಭವಿಷ್ಯ ಪ್ರಕಾರ ನಿಮ್ಮ ಪ್ರೀತಿ ಭವಿಷ್ಯ ಹೇಗಿದೆ?
ಈ ವಾರದ (ಆಗಸ್ಟ್ 18-24) ಭವಿಷ್ಯ ಪ್ರಕಾರ ನಿಮ್ಮ ಪ್ರೀತಿ ಬದುಕು ಹೇಗಿರಲಿದೆ?
ಮೇಷ ರಾಶಿ
ಸಂಬಂಧದ ವಿಷಯದಲ್ಲಿ ಈ ವಾರ ನಿಮಗೆ ಉತ್ತಮವಾಗಿದೆ. ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲಿದೆ. ಇನ್ನು ಈ ಸಮಯ ಪ್ರೇಮಿಗಳಿಗೆ ತುಂಬಾ ಚೆನ್ನಾಗಿರಲಿದೆ.

ವೃಷಭ ರಾಶಿ
ಈ ವಾರ ಕೆಲಸದ ಒತ್ತಡದ ಕಾರಣ ಕುಟುಂಬದ ಕಡೆಗೆ ಗಮನ ನೀಡಲು ಸಾಧ್ಯವಾಗಲ್ಲ. ನೀವು ಕೆಲಸದ ಜೊತೆಗೆ ಕುಟುಂಬದ ಕಡೆಗೂ ಗಮನ ನೀಡಿದರೆ ಒಳ್ಳೆಯದು. ಆವಾಗ ವೈವಾಹಿಕ ಬದುಕು ಚೆನ್ನಾಗಿರಲಿದೆ. ಪ್ರೇಮಿಗಳಿಗೆ ವಿಶೇಷವಾಗಿರಲಿದೆ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ.
ಮಿಥುನ ರಾಶಿ
ಸಂಬಂಧದಲ್ಲಿ ಈ ಅವಧಿ ಉತ್ತಮವಾಗಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಪ್ರೇಮಿಗಳು ಮದುವೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಈ ಅವಧಿ ಉತ್ತಮವಾಗಿದೆ. ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ಅವಧಿ ಉತ್ತಮವಾಗಿರಲಿದೆ, ಒಳ್ಳೆಯ ಸಂಬಂಧ ಕೂಡಿ ಬರಲಿದೆ.
ಕರ್ಕ ರಾಶಿ
ಪ್ರೇಮಿಗಳಿಗೆ ಈ ಅವಧಿ ಅನುಕೂಲಕರವಲ್ಲ, ನಿಮ್ಮ ಪ್ರೀತಿಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಬಹುದು, ಆದರೆ ತಾಳ್ಮೆಯಿಂದ ಪರಿಸ್ಥಿತಿ ಬಗೆಹರಿಸಲು ಪ್ರಯತ್ನಿಸಬೇಕು. ವೈವಾಹಿಕ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು, ಅವಾಹಿತರಿಗೆ ಮದುವೆ ಪ್ರಸ್ತಾಪ ಬಂದರೆ ಆಲೋಚಿಸಿ ತೀರ್ಮಾನ ತೆಗೆದುಕೊಳ್ಳಿ.
ಸಿಂಹ ರಾಶಿ
ವೈವಾಹಿಕ ಬದುಕಿನಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಅದೆಲ್ಲಾ ಬಗೆಹರಿಸಲು ಸಾಧ್ಯವಾಗುವುದು, ನಿಮ್ಮ ನಡುವೆ ಪ್ರೀತಿ ಮತ್ತಷ್ಟು ಹೆಚ್ಚಾಗುವುದು. ಸಂಗಾತಿಗೆ ಹೆಚ್ಚಿನ ಸಮಯ ನೀಡಲು ಪ್ರಯತ್ನಿಸಿ. ಅವರಿಗೆ ನೀವು ನಿರ್ಲಕ್ಷ್ಯ ಮಾಡುತ್ತಿದ್ದೀರಿ ಎಂಬ ಭಾವನೆ ಮೂಡಲು ಬಿಡದಿರಿ.
ಕನ್ಯಾ ರಾಶಿ
ವೈವಾಹಿಕ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು. ನೀವು ನಿಮ್ಮ ಮನಸ್ತಾಪ ಹೆಚ್ಚಾಗಲು ಬಿಡಬೇಡಿ. ನಿಮ್ಮ ಕೆಲಸದ ಕಾರಣ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗಲ್ಲ, ಇದು ಕೂಡ ನಿಮ್ಮ ಸಂಗಾತಿಯ ಕೋಪಕ್ಕೆ ಕಾರಣವಾಗಿರಬಹುದು. ಕೆಲಸ ಮತ್ತು ಪ್ರೀತಿ ಜೀವನ ಸಮತೋಲನ ಮಾಡಿದರೆ ಒಳ್ಳೆಯದು.
ತುಲಾ ರಾಶಿ
ಈ ಅವಧಿ ನಿಮಗೆ ಅಷ್ಟೊಂದು ಉತ್ತಮವಲ್ಲ, ಮನೆಯಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು, ನೀವು ನಿಮ್ಮ ಸಂಗಾತಿಯ ಬಾವನೆಗಳನ್ನು ಗೌರವಿಸಬೇಕು. ಇನ್ನು ನಿಮ್ಮ ಕೋಪ ನಿಯಂತ್ರಿಸಿ, ಅವಾಹಿತರಿಗೆ ಈ ಅವಧಿಯಲ್ಲಿ ಮದುವೆ ಪ್ರಸ್ತಾಪ ಬಂದರೆ ಸರಿಯಾಗಿ ವಿಚಾರಿಸಿ ನಂತರ ಒಪ್ಪಿಗೆ ನೀಡಿ.
ವೃಶ್ಚಿಕ ರಾಶಿ
ಸಂಬಂಧಗಳಲ್ಲಿ ಸ್ಥಿರತೆ ಇರುತ್ತದೆ. ನೀವು-ನಿಮ್ಮ ಸಂಗಾತಿ ಖುಷಿ-ಖುಷಿಯಿಂದ ಇರುತ್ತೀರಿ, ಇಬ್ಬರು ಟ್ರಿಪ್ ಪ್ಲ್ಯಾನ್ ಮಾಡಬಹುದು, ಈ ವಾರ ರೊಮ್ಯಾಂಟಿಕ್ ಆಗಿರಲಿದೆ. ಅವಾಹಿತರಿಗೆ ಒಳ್ಳೆಯ ಮದುವೆ ಪ್ರಸ್ತಾಪ ಬರಬಹುದು.
ಧನು ರಾಶಿ
ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ, ಅವಿವಾಹಿತರಿಗೆ ಉತ್ತಮ ವಿವಾಹ ಪ್ರಸ್ತಾಪ ಬರಬಹುದು. ವಿವಾಹಿತರಿಗೆ ಖುಷಿಯ ಸುದ್ದಿ ಸಿಗಲಿದೆ, ಈ ವಾರದ ಏಳು ದಿನಗಳು ತುಂಬಾ ಚೆನ್ನಾಗಿರಲಿದೆ.
ಮಕರ ರಾಶಿ
ಕೆಲಸದಲ್ಲಿ ನಿರತರಾಗಿರುವ ಕಾರಣ, ನಿಮ್ಮ ಸಂಗಾತಿಯು ನಿಮಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಇದು ನಿಮ್ಮ ಮನಸ್ಸಿಗೆ ನೋವುಂಟು ಮಾಡಬಹುದು, ಆದರೆ ನೀವು ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
ಕುಂಭ ರಾಶಿ
ಸಂಬಂಧದ ವಿಷಯದಲ್ಲಿ ಈ ವಾರ ನಿಮಗೆ ಉತ್ತಮವಾಗಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ. ನಿಮ್ಮ ನಡುವೆ ಪ್ರೀತಿ ಇನ್ನಷ್ಟು ಹೆಚ್ಚಾಗಲಿದೆ. ವಿವಾಹಕ್ಕೆ ಸಂಬಂಧ ಹುಡುಕುತ್ತಿದ್ದರೆ ಕೆಲ ಮದುವೆ ಪ್ರಸ್ತಾಪ ಬರಬಹುದು.
ಮೀನ ರಾಶಿ
ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ಒಗ್ಗಟ್ಟು ಇರುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಯಿದ್ದರೆ, ನಿಮ್ಮ ಪ್ರೀತಿಪಾತ್ರರ ಸಹಾಯದಿಂದ ಅದನ್ನು ಪರಿಹರಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
