ವಾರ ಭವಿಷ್ಯ ಪ್ರಕಾರ ಈ ವಾರ (ಆಗಸ್ಟ್ 11-17) ವಿವಾಹಿತರಿಗೆ, ಪ್ರೇಮಿಗಳಿಗೆ, ಅವಾಹಿತರಿಗೆ ಹೇಗಿರಲಿದೆ?

ವಾರ ಭವಿಷ್ಯ ಪ್ರಕಾರ ಈ ವಾರ ನಿಮ್ಮ ಸಂಬಂಧ ಹೇಗಿರಲಿದೆ, ಸಂಗಾತಿ ಹಾಗೂ ನಿಮ್ಮ ನಡುವೆ ಸಮನ್ವಯ ಹೇಗಿರಲಿದೆ? ಪ್ರೇಮಿಗಳಿಗೆ ಅನುಕೂಲಕರವೇ, ಮದುವೆಗೆ ಸಂಬಂಧ ಹುಡುಕುತ್ತಿರುವ ಅವಾಹಿತರಿಗೆ ಮದುವೆ ಸಂಬಂಧ ಬರುವುದೇ ಎಂದು ನೋಡೋಣ ಬನ್ನಿ:

weekly love horoscope

ಮೇಷ ರಾಶಿ

ಸಂಬಂಧದ ದೃಷ್ಟಿಯಿಂದ ಈ ವಾರ ನಿಮಗೆ ತುಂಬಾ ಉತ್ತಮವಾಗಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಒಳ್ಳೆಯ ಬಾಂಧವ್ಯ ಇರಲಿದೆ. ಇನ್ನು ಪ್ರೀತಿ ಮಾಡುತ್ತಿರುವವರು ತಮ್ಮ ಪ್ರೀತಿಗೆ ಮನೆಯವರ ಒಪ್ಪಿಗೆ ಪಡೆಯಲು ಈ ವಾರ ಅನುಕೂಲಕರವಾಗಿದೆ, ನೀವು ಪ್ರೇಮ ವಿವಾಹದ ನಿರ್ಧಾರ ತೆಗೆದುಕೊಳ್ಳಬಹುದು. ಮದುವೆಗೆ ಸಂಬಂಧ ಹುಡುಕುತ್ತಿರುವ ಅವಾಹಿತರಿಗೆ ಈ ಅವಧಿ ಅನುಕೂಲಕರವಾಗಿದೆ.

ವೃಷಭ ರಾಶಿ

ಈ ವಾರ ಸಂಬಂಧದ ದೃಷ್ಟಿಯಿಮದ ನೋಡುವುದಾದರೆ ನಿಮಗೆ ತುಂಬಾನೇ ಉತ್ತಮವಾಗಿದೆ. ನಿಮ್ಮ ಹಾಗೂ ಸಂಗಾತಿಯ ನಡುವೆ ಒಳ್ಳೆಯ ಬಾಂಧವ್ಯ ಇರಲಿದೆ, ಈ ವಾರ ನೋವು ಖುಷಿಯಿಂದ ಇರುವಿರಿ, ಅವಾಹಿತರು ಕೂಡ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ.

ಮಿಥುನ ರಾಶಿ

ಸಂಬಂಧದ ವಿಷಯದಲ್ಲಿ ಈ ವಾರ ನೀವು ಜಾಗ್ರತೆವಹಿಸಬೇಕು, ಕುಟುಂಬದಲ್ಲಿ ಪರಿಸ್ಥಿತಿ ಅಷ್ಟು ಚೆನ್ನಾಗಿರಲ್ಲ, ಕುಟುಂಬ ಸದಸ್ಯರ ನಡುವೆ ಸಮನ್ವಯ ಕ್ಷೀಣಿಸುವ ಸಾಧ್ಯತೆಯಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಬಹುದು, ನೀವು ಕೋಪದಿಂದ ವರ್ತಿಸಿದರೆ ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.

ಕರ್ಕ ರಾಶಿ

ಕೂಡು ಕುಟುಂಬದಲ್ಲಿ ವಾಸಿಸುತ್ತಿದ್ದರೆ ಈ ವಾರ ಉತ್ತಮವಾಗಿರಲಿದೆ, ಕುಟುಂಬ ಸದಸ್ಯರ ನಡುವೆ ಒಳ್ಳೆಯ ಹೊಂದಾಣಿಕೆ ಇರಲಿದೆ, ವಿವಾಹಿತರಿಗೆ, ಪ್ರೇಮಿಗಳಿಗೆ ಈ ವಾರ ವಿಶೇಷವಾಗಿರಲಿದೆ, ಮದುವೆ ಪ್ರಯತ್ನ ಮಾಡುತ್ತಿರುವ ಅವಾಹಿತರಿಗೆ ಈ ಅವಧಿ ಒಳ್ಳೆಯದಿದೆ.

ಸಿಂಹ ರಾಶಿ

ನೀವು ಸಂಬಂಧದ ವಿಷಯದಲ್ಲಿ ಜಾಗ್ರತೆವಹಿಸಬೇಕು, ಆರಂಭದಲ್ಲಿ ಕುಟುಂಬ ಜೀವನ ಅಷ್ಟು ಚೆನ್ನಾಗಿರಲ್ಲ, ಕೆಲ ಭಿನ್ನಾಭಿಪ್ರಾಯಗಳು ಇರಬಹುದು. ಮನೆಯ ಹಿರಿಯರ ಮಾತುಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಆತುರದ ನಿರ್ಧಾರ ಒಳ್ಳೆಯದಲ್ಲ, ಅವಾಹಿತರಿಗೆ ಮದುವೆ ಪ್ರಸ್ತಾಪ ಬಂದರೆ ಸರಿಯಾಗಿ ವಿಚಾರಿಸುವುದು ಒಳ್ಳೆಯದು.

ಕನ್ಯಾ ರಾಶಿ

ಈ ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಪ್ರಮುಖ ಸಮಸ್ಯೆ ಬಗೆಹರಿಯುವುದರಿಂದ ನೀವು ರಿಲ್ಯಾಕ್ಸ್ ಆಗಿರುತ್ತೀರಿ, ಅಲ್ಲದೆ ನಿಮ್ಮ ಹಾಗೂ ಸಂಗಾತಿ ನಡುವಿನ ಭಿನ್ನಾಭಿಪ್ರಾಯ ಕೂಡ ದೂರಾಗುವುದು. ಅಲ್ಲದೆ ಈ ಅವಧಿಯಲ್ಲಿ ನೀವು ನಿಮ್ಮ ವರ್ತನೆ ಕಡೆಗೆ ಗಮನಹರಿಸಿ.


ತುಲಾ ರಾಶಿ

ವಿವಾಹಿತರಿಗೆ ಈ ಅವಧಿ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧಬವ್ಯ ತುಂಬಾ ಚೆನ್ನಾಗಿರಲಿದದೆ. ಅಲ್ಲದೆ ಈ ಅವಧಿಯಲ್ಲಿ ಕುಟುಂಬದಲ್ಲಿನ ಬಿರುಕು ದೂರಾಗುವುದು, ಮನೆಯ ವಾತಾವರಣ ಉತ್ತಮವಾಗುವುದು. ಪ್ರೇಮಿಗಳಿಗೂ ಈ ಅವಧಿ ಉತ್ತಮವಾಗಿದೆ.

ವೃಶ್ಚಿಕ ರಾಶಿ

ನಿಮ್ಮ ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸೂಚನೆಯಿದೆ, ಅವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ. ಅಲ್ಲದೆ ನಿಮಗೆ ಒಂದು ಅವಶ್ಯಕತೆ ಬಂದಾಗ ಕುಟುಂಬದವರ ಬೆಂಬಲ ಸಿಗಲಿದೆ, ಈ ಅವಧಿಯಲ್ಲಿ ನೀವು ನಿಮ್ಮ ಕೋಪ ನಿಯಂತ್ರಿಸಿದರೆ ತುಂಬಾ ಒಳ್ಳೆಯದು.

ಧನು ರಾಶಿ

ಈ ಅವಧಿ ವಿವಾಹಿತರಿಗೆ ಅಷ್ಟೊಂದು ಅನುಕೂಲಕರವಲ್ಲ,ನಿಮ್ಮ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಗಾಢವಾಗಬಹುದು. ನಿಮ್ಮ ನಡುವಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ, ಇಲ್ಲದಿದ್ದರೆ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುವುದು, ಪ್ರೇಮಿಗಳ ನಡುವೆ ಕೂಡ ಕೆಲ ಭಿನ್ನಾಭಿಪ್ರಾಯವಿರಬಹುದು. ಅವಾಹಿತರಿಗೆ ಮದುವೆ ಪ್ರಸ್ತಾಪ ಬಂದರೆ ಅವಸರದಿಂದ ನಿರ್ಧಾರಕ್ಕೆ ಬರಬೆಡಿ.

ಮಕರ ರಾಶಿ

ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ, ಪ್ರೀತಿ ಬದುಕಿನಲ್ಲಿ ಖುಷಿ ಇರಲಿದೆ ಆದರೆ ನೀವು ಸಣ್ಣ ವಿಷಯಗಳನ್ನು ನಿರ್ಲಕ್ಷಿಸಲು ಕಲಿಯಬೇಕಾಗುತ್ತದೆ, ಇಲ್ಲದಿದ್ದರೆ ಸಂಬಂಧಗಳಲ್ಲಿನ ಅಂತರವು ಮತ್ತಷ್ಟು ಹೆಚ್ಚಾಗಬಹುದು ಅದು ವಿವಾಹಿತರು ಆದರೂ ಸರಿ, ಅವಾಹಿತರು ಅದರೂ ಸರಿ.

ಕುಂಭ ರಾಶಿ

ನಿಮ್ಮ ಹಾಗೂ ಸಂಗತಿ ನಡುವೆ ಹೊಂದಾಣಿಕೆ ತುಂಬಾ ಚೆನ್ನಾಗಿರಲಿದೆ, ಆದರೆ ಪ್ರೀತಿಯ ವಿಷಯದಲ್ಲಿ ಈ ವಾರ ನಿಮಗೆ ವಿವಾದಾತ್ಮಕವಾಗಿರುತ್ತದೆ. ನಿಮ್ಮ ನಡುವೆ ನಂಬಿಕೆಯ ಕೊರತೆ ಇರುತ್ತದೆ, ಬೇಡದ ವಿಷಯಗಳಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಅವಾಹಿತರಿಗೆಎ ಈ ಅವಧಿ ಉತ್ತಮವಾಗಿರಲಿದೆ.

ಮೀನ ರಾಶಿ

ಸಂಬಂಧದ ವಿಷಯಗಳಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ನೀವು ನಿಮ್ಮ ಸಂಗಾತಿಯ ಜೊತೆ ಕೋಪದಿಂದ ವರ್ತಿಸುವ ಬದಲಿಗೆ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಅವಾಹಿತರಿಗೆ ಮದುವೆ ಪ್ರಸ್ತಾಪ ಬಂದರೆ ಹಿಂದು-ಮುಂದು ಆಲೋಚಿಸಿದ ಬಳಿಕವಷ್ಟೇ ನಿರ್ಧಾರ ತೆಗೆದುಕೊಳ್ಳಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Love Horoscope Prediction From August 11-17 In Kannada

Here is weekly love horoscope prediction From August 11-17 for each zodiac signs
Story first published: Sunday, August 11, 2024, 20:01 [IST]
X
Desktop Bottom Promotion