Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಾರದ ಪ್ರೀತಿ ಭವಿಷ್ಯ (ಜೂನ್15-22): ಈ ವಾರ ಪ್ರೇಮಿಗಳಿಗೆ, ವಿವಾಹಿತರಿಗೆ ಹೇಗಿರಲಿದೆ?
ವೈದಿಕ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ಪ್ರೀತಿ ಭವಿಷ್ಯ ಈ ವಾರ ಹೇಗಿರಲಿದೆ ನೋಡೋಣ:
ಮೇಷ ರಾಶಿ
ಪ್ರೇಮದಲ್ಲಿದ್ದರೆ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು. ನಿಮ್ಮ ಸಂಬಂಧವು ಹೆಚ್ಚು ಪ್ರಬುದ್ಧವಾಗುತ್ತದೆ. ನೀವು ಮದುವೆಯಾಗುವುದರ ಬಗ್ಗೆ ಯೋಚಿಸುತ್ತೀರಿ. ಮದುವೆ ವಯಸ್ಸಿನ ಒಂಟಿಯಾಗಿರುವವರೆಗೆ ಮದುವೆ ಪ್ರಸ್ತಾಪ ಬರಲಿದೆ.

ವೃಷಭ ರಾಶಿ
ವೃಷಭ ರಾಶಿಯವರಿಗೆ ವಿಶೇಷವಾಗಿರಲಿದೆ ನಿಮಗೆ ತುಂಬಾ ವಿಶೇಷವಾಗಿರಲಿದೆ. ಸ್ನೇಹ ಪ್ರೀತಿಯಾಗಿ ಬದಲಾಗಬಹುದು. ಪ್ರೀತಿ ಪ್ರಪೋಸ್‌ಗೆ ಈ ಸಮಯವು ಅನುಕೂಲಕರವಾಗಿರುತ್ತದೆ. ನೀವು ಈಗಾಗಲೇ ಸಂಬಂಧದಲ್ಲಿದ್ದರೆ ಆ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ನಿಮ್ಮ ಪ್ರಮುಖ ನಿರ್ಧಾರಗಳಲ್ಲಿ ನಿಮ್ಮ ಪಾಲುದಾರರಿಂದ ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಈ ರಾಶಿಯ ವಿವಾಹಿತರಿಗೆ ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ.
ಮಿಥುನ ರಾಶಿ
ಈ ವಾರ ದಂಪತಿಗಳಿಗೆ ಸ್ವಲ್ಪ ಒತ್ತಡದ ಸಾಧ್ಯತೆಯಿದೆ. ನಿಮ್ಮ ನಡುವೆ ಭಿನ್ನಾಭಿಪ್ರಾಯದ ಸಮಸ್ಯೆ ಇರಲಿದೆ. ನೀವು ಪರಸ್ಪರ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು . ಒಂಟಿಯಾಗಿರುವವರೆಗೆ ಲವ್ ಪ್ರಪೋಸ್ ಬಂದರೆ ನೀವು ಆತುರದಿಂದ ದೂರವಿರಬೇಕು. ಮೊದಲು ವ್ಯಕ್ತಿಯನ್ನು ಚೆನ್ನಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ.
ಕರ್ಕ ರಾಶಿ
ನೀವು ಕಚೇರಿಯಲ್ಲಿನ ವ್ಯಕ್ತಿಯಿಂದಾಗಿ ಪ್ರೀತಿ ಮೂಡಬಹುದು. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹೆಚ್ಚು ಆತುರಪಡಬೇಡಿ. ವಿಶೇಷವಾಗಿ ಕೆಲಸದ ಸ್ಥಳದಲ್ಲಿ, ನೀವು ಅಂತಹ ವಿಷಯಗಳನ್ನು ತಪ್ಪಿಸಬೇಕು, ಇಲ್ಲದಿದ್ದರೆ ಅದು ನಿಮ್ಮ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನೀವು ಇತ್ತೀಚೆಗೆ ಪ್ರೀತಿಯ ಪ್ರಸ್ತಾಪವನ್ನು ಸ್ವೀಕರಿಸಿದ್ದರೆ, ಈ ಸಮಯದಲ್ಲಿ ನೀವು ಅದನ್ನು ಪರಿಗಣಿಸಬಹುದು.
ಸಿಂಹ ರಾಶಿ
ಈ ಸಮಯದಲ್ಲಿ, ನಿಮ್ಮ ಪ್ರೀತಿಯ ಜೀವನದಲ್ಲಿ ನೀವು ಕೆಲವು ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ತುಂಬಾ ಬುದ್ಧಿವಂತಿಕೆಯಿಂದ ವರ್ತಿಸಬೇಕು. ನಿಮ್ಮ ಸಂಬಂಧದ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಯಾವುದೇ ಸಂದಿಗ್ಧತೆ ಇದ್ದರೆ, ನೀವು ನಿಮ್ಮ ಆಲೋಚನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕು. ಸಂಗಾತಿಯೊಂದಿಗಿನ ಸಂಬಂಧ ಸುಧಾರಿಸಬಹುದು.
ಕನ್ಯಾ ರಾಶಿ
ಈ ವಾರ ಪ್ರೇಮಿಗಳಿಗೆ ಉತ್ತಮವಾಗಿರಲಿದೆ. ನಿಮ್ಮ ಸಂಬಂಧವನ್ನು ಸುಧಾರಿಸುವ ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಮನಸ್ಸಿನಲ್ಲಿ ಪ್ರೀತಿ ಮೂಡಿದ್ದರೆ ಅದನ್ನು ಹೇಳಿಕೊಳ್ಳಿ. ಈ ಅವಧಿಯಲ್ಲಿ ನೀವು ನಿಮ್ಮ ಭಾವನೆಗಳನ್ನು ಪರಸ್ಪರ ಮುಕ್ತವಾಗಿ ಹಂಚಿಕೊಳ್ಳುತ್ತೀರಿ.
ತುಲಾ ರಾಶಿ
ಪ್ರೇಮಿಗಳ ನಡುವೆ ಪ್ರೀತಿ ಹೆಚ್ಚಾಗಲಿದೆ. ನೀವು ವಿವಾಹಿತರಾಗಿದ್ದರೆ ನಿಮ್ಮ ಜೀವನ ಸಂಗಾತಿಯ ಭಾವನೆಯ ಕಡೆಗೆ ಹೆಚ್ಚು ಗಮನ ಹರಿಸಬೇಕು. ನೀವು ಒಬ್ಬರಿಗೊಬ್ಬರು ಹೆಚ್ಚು ಸಮಯವನ್ನು ಕಳೆಯುತ್ತೀರಿ, ಈ ಅವಧಿಯಲ್ಲಿ ನಿಮ್ಮ ಸಂಬಂಧವೂ ಬಲಗೊಳ್ಳುತ್ತದೆ.
ವೃಶ್ಚಿಕ ರಾಶಿ
ಪ್ರೇಮ ಅತವಾ ವೈವಾಹಿಕ ಜೀವನವಾಗಿರಲಿ, ನಿಮ್ಮ ಸಂಬಂಧವನ್ನು ಸುಧಾರಿಸಲು ನೀವು ಕೆಲವು ಹೆಚ್ಚುವರಿ ಪ್ರಯತ್ನ ಮಾಡಬೇಕಾಗಬಹುದು. ಸಣ್ಣ ವಿಷಯಗಳಿಗೆ ಕೋಪಗೊಳ್ಳುವ ನಿಮ್ಮ ಅಭ್ಯಾಸವು ನಿಮ್ಮ ಪ್ರೀತಿಪಾತ್ರರನ್ನು ನಿಮ್ಮಿಂದ ದೂರವಿಡಬಹುದು. ಇದಲ್ಲದೆ, ನಿಮ್ಮ ಮನಸ್ಸಿನಲ್ಲಿ ಯಾವುದೇ ಸಂದಿಗ್ಧತೆ ಇದ್ದರೆ, ನಿಮ್ಮ ಆಲೋಚನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಪ್ರಯತ್ನಿಸಿ. ಮೌನವಾಗಿರುವುದು ನಿಮ್ಮ ನಡುವಿನ ತಪ್ಪು ತಿಳುವಳಿಕೆ ಮತ್ತಷ್ಟು ಹೆಚ್ಚಿಸಬಹುದು.
ಧನು ರಾಶಿ
ಈ ಸಮಯದಲ್ಲಿ, ನಿಮ್ಮ ಪ್ರೀತಿಯ ಜೀವನದಲ್ಲಿ ಹೊಸ ತಿರುವು ಬರಬಹುದು. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೂ ಅವರ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗದಿದ್ದರೆ, ಈ ಅವಧಿಯಲ್ಲಿ ಅವರೂ ಪ್ರೀತಿಯಲ್ಲಿ ಮುಳುಗಬಹುದು. ಅವರು ತಮ್ಮ ಭಾವನೆಗಳನ್ನು ನಿಮಗೆ ವ್ಯಕ್ತಪಡಿಸಲು ಸಾಧ್ಯವಾಗುವ ಸಾಧ್ಯತೆಯಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ, ನಿಮ್ಮ ಸಂಗಾತಿಯಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು.
ಮಕರ ರಾಶಿ
ನೀವು ಪ್ರೀತಿಸುತ್ತಿರುವ ವ್ಯಕ್ತಿಯನ್ನು ನಿಮ್ಮ ಕುಟುಂಬ ಸದಸ್ಯರಿಗೆ ಪರಿಚಯಿಸಲು ಇದು ಅನುಕೂಲಕರ ಸಮಯ. ವಿರೋಧ ಬಂದರೂ ಮನವೊಲಿಸಲು ಪ್ರಯತ್ನಿಸಿ, ತಾಳ್ಮೆಯಿಂದಿರಿ ಎಲ್ಲವೂ ಸರಿಯಾಗುವುದು. ಈ ಸಮಯದಲ್ಲಿ, ನಿಮ್ಮ ಸಂಬಂಧಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳದಂತೆ ಸಲಹೆ ನೀಡಲಾಗುವುದು.
ಕುಂಭ ರಾಶಿ
ಪ್ರೇಮಿಗಳ ನಡುವೆ ಭಿನ್ನಾಭಿಪ್ರಾಯವಿರಬಹುದು, ನಿಮ್ಮ ಸಂಬಂಧದ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಅಸಮಾಧಾನದ ಇರಲಿದೆ. ನಿಮ್ಮ ಸಂಗಾತಿಯ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳನ್ನು ನೀವು ಗಮನಿಸಬಹುದು , ಅವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯವಿರಲಿದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದೆ ಸಮಸ್ಯೆ ಹೆಚ್ಚಾಗುವುದು.
ಮೀನ ರಾಶಿ
ಕೆಲವು ಕಾರಣಗಳಿಂದ ನೀವು ನಿಮ್ಮ ಸಂಗಾತಿಯಿಂದ ದೂರವಿದ್ದರೆ ಆ ಅಂತರ ನಿಮ್ಮ ನಡುವೆ ಪ್ರೀತಿ ಹೆಚ್ಚಿಸಲಿದೆ. ಪ್ರೇಮ ಬಂಧವನ್ನು ಮದುವೆ ಬಂಧದ ಜೊತೆ ಗಟ್ಟಿಯಾಗಿಸಲು ಯೋಚಿಸಬಹುದು. ಈ ವಾರ ರೊಮ್ಯಾಂಟಿಕ್ ಆಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











