Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಾರ ಭವಿಷ್ಯ ಪ್ರಕಾರ ಪ್ರೇಮಿಗಳಿಗೆ, ವಿವಾಹಿತರಿಗೆ, ಅವಾಹಿತರಿಗೆ ಹೇಗಿರಲಿದೆ?
ಈ ವಾರದ ಭವಿಷ್ಯ ಪ್ರಕಾರ ವಿವಾಹಿತರಿಗೆ, ಪ್ರೇಮಿಗಳಿಗೆ, ಅವಾಹಿತರಿಗೆ ಹೇಗಿರಲಿದೆ? ನೋಡೋಣ ಬನ್ನಿ:
ಮೇಷ ರಾಶಿ
ಸಂಬಂಧದ ದೃಷ್ಟಿಯಿಂದ ನೋಡುವುದಾದರೆ ಈ ವಾರ ನಿಮಗೆ ಉತ್ತಮವಲ್ಲ. ಚಿಕ್ಕ ವಿಷಯಕ್ಕೆ ಭಿನ್ನಾಭಿಪ್ರಾಯ ದೊಡ್ಡದಿರಬಹುದು. ಮನಸ್ಸಿನ ಬೇಸರ ಕೆಲಸ ಕಾರ್ಯಗಳ ಮೇಲೆ ಕೂಡ ಪರಿಣಾಮ ಬೀರುವುದು. ನೀವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ನಿಮ್ಮ ನಡುವಿನ ಸಮಸ್ಯೆ ಬೆಳೆಯಲು ಬಿಡಬೇಡಿ, ನೀವು ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ.

ವೃಷಭ ರಾಶಿ
ಸಂಬಂಧದ ದೃಷ್ಟಿಯಿಂದ ಈ ವಾರ ಉತ್ತಮವಲ್ಲ, ಪ್ರೇಮಿಗಳಿಗೆ ಕೆಲ ಸಮಸ್ಯೆ ಎದುರಾಗಬಹುದು, ವೈವಾಹಿಕ ಜೀವನದಲ್ಲಿನ ಭಿನ್ನಾಭಿಪ್ರಾಯ ದೂರ ಮಾಡಲು ಸಂಗಾತಿ ಜೊತೆಗೆ ಮುಕ್ತವಾಗಿ ಮಾತನಾಡಿ, ನಿಮ್ಮ ಸಮಸ್ಯೆಗೆ ಮೂರನೇಯ ವ್ಯಕ್ತಿ ಬಂದು ಸಲಹೆ ನೀಡಲು ಅವಕಾಶ ನೀಡಬೇಡಿ, ನಿಮ್ಮ ಸಮಸ್ಯೆ ನೀವೇ ಬಗೆಹರಿಸಲು ಪ್ರಯತ್ನಿಸಿ.
ಮಿಥುನ ರಾಶಿ
ಸಂಬಂಧದ ದೃಷ್ಟಿಯಿಂದ ಈ ವಾರ ಉತ್ತಮವಾಗಿದೆ, ನಿಮ್ಮ ನಡುವೆ ಹೊಂದಾಣಿಕೆ ಇರಲಿದೆ. ಇನ್ನು ಸವಾಲಿನ ಸಂದರ್ಭದಲ್ಲಿ ಸಂಗಾತಿಯಿಂದ ಬೆಂಬಲ ಸಿಗಲಿದೆ.
ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು, ಪ್ರೇಮಿಗಳಿಗೆ ವಿಶೇಷವಾಗಿರಲಿದೆ.
ಕರ್ಕ ರಾಶಿ
ಈ ವಾರ ವಿವಾಹಿತರಿಗೆ ಅನುಕೂಲಕರವಾಗಿದೆ, ನಿಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯ ದೂರಾಗಲಿದೆ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು, ವಿವಾಹಿತರಿಗೆ, ಪ್ರೇಮಿಗಳಿಗೆ ಈ ವಾರ ರೊಮ್ಯಾಂಟಿಕ್ ಆಗಿರಲಿದೆ.
ಸಿಂಹ ರಾಶಿ
ಈ ವಾರ ಪ್ರೇಮಿಗಳಿಗೆ ರೊಮ್ಯಾಂಟಿಕ್ ಆಗಿರಲಿದೆ. ಆ ವಿವಾಹಿತರ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು, ನಿಮ್ಮ ನಡುವಿನ ಸಮಸ್ಯೆ ಮಕ್ಕಳ ಮೇಲೆ ಪರಿಣಾಮ ಬೀರದಂತೆ ಜಾಗ್ರತೆವಹಿಸಿ.
ಕನ್ಯಾ ರಾಶಿ
ಈ ವಾರ ನೀವು ನಿಮ್ಮ ಕುಟುಂಬದ ಜೊತೆಗೆ ಸಂತೋಷದಿಂದ ಕಳೆಯುತ್ತೀರಿ, ನೀವಿಬ್ಬರು ಜೊತೆಯಾಗಿ ಭವಿಷ್ಯದ ಕೆಲ ಯೋಜನೆಗಳನ್ನು ಕೂಡ ಮಾಡುತ್ತೀರಿ. ಪ್ರೇಮಿಗಳು ತಮ್ಮ ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಳಲು ಈ ಸಮಯ ಉತ್ತಮವಾಗಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಹೆಚ್ಚಾಗಲಿದೆ, ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ಸಮಯ ಉತ್ತಮವಾಗಿದೆ.
ತುಲಾ ರಾಶಿ
ಪ್ರೇಮಿಗಳಿಗೆ ಈ ಅವಧಿ ಅನುಕೂಲಕರವಾಗಿದೆ, ನಿಮ್ಮ ಸಂಬಂಧ ಮತ್ತಷ್ಟು ಬಲವಾಗಲಿದೆ, ವಿವಾಹಿತರು ವೈವಾಹಿಕ ಜೀವನದಲ್ಲಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದರಿಂದ ಈ ಸಮಯ ಉತ್ತಮವಾಗಿದೆ. ವೈವಾಹಿಕ ಬದುಕ ಚೆನ್ನಾಗಿರಲಿದೆ. ಎಲ್ಲಾ ಮರೆತು ಹೊಸ ಆರಂಭಕ್ಕೆ ಈ ಸಮಯ ಉತ್ತಮವಾಗಿದೆ.
ವೃಶ್ಚಿಕ ರಾಶಿ
ಪ್ರೇಮಿಗಳಿಗೆ ಈ ಅವಧಿ ಉತ್ತಮವಾಗಿದೆ, ವಿವಾಹಿತರಿಗೆ ಈ ವಾರ ಸ್ವಲ್ಪ ಕಷ್ಟವಾಗಬಹುದು. ನಿಮ್ಮ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷ್ಯ ಮಾಡಲು ಹೋಗಬೇಡಿ, ಮಾಡಿದರೆ ನಿಮ್ಮ ನಡುವಿನ ಭಿನ್ನಾಭಿಪ್ರಾಯ ಮತ್ತಷ್ಟು ಹೆಚ್ಚಾಗುವುದು.
ಧನು ರಾಶಿ
ವೈವಾಹಿಕ ಜೀವನ ಚೆನ್ನಾಗಿರಲಿದೆ, ಏನೇ ಮನಸ್ತಾಪವಿದ್ದರೂ ಅದು ದೂರಾಗಲಿದೆ, ಹೀಗಾಗಿ ವೈವಾಹಿಕ ಬದುಕಿನಲ್ಲಿ ಅನುರಾಗ ಹೆಚ್ಚಲಿದೆ, ಅವಿವಾಹಿತರ ವಿವಾಹ ನಿಶ್ಚಯವಾಗಬಹುದು. ನಿಮ್ಮ ಮನಸ್ಸಿನಲ್ಲಿ ಯಾರಾದರೂ ಇದ್ದರೆ ಪ್ರೀತಿ ಹೇಳಿಕೊಳ್ಳಲು ಈ ಸಮಯ ಉತ್ತಮವಾಗಿದೆ.
ಮಕರ ರಾಶಿ
ವೈವಾಹಿಕ ಜೀವನದಲ್ಲಿನ ಭಿನ್ನಾಭಿಪ್ರಾಯ ಬದುಕಿನ ಮೇಲೆ ತುಂಬಾನೇ ಪ್ರಭಾವ ಬೀರುವುದು, ನಿಮ್ಮ ನಡುವಿನ ಸಮಸ್ಯೆ ಕೂತು ಮಾತನಾಡಿ ಬಗೆಹರಿಸಿದರೆ ಒಳ್ಳೆಯದು. ಬೇರೆಯವರು ನಿಮ್ಮ ಬದದುಕಿನಲ್ಲಿ ಹಸ್ತಕ್ಷೇಪ ಮಾಡಲು ಬಿಡಬೇಡಿ. ಪ್ರೇಮಿಗಳು ಕೂಡ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.
ಕುಂಭ ರಾಶಿ
ಸಂಬಂಧದ ದೃಷ್ಟಿಯಿಂದ ನೋಡುವುದಾದರೆ ಈ ಅವಧಿ ನಿಮಗೆ ಅದ್ಭುತವಾಗಿರಲಿದೆ, ಅವಾಹಿತರಿಗೆ ಈ ವಾರ ವಿಶೇಷವಾಗಿರಲಿದೆ, ನೀವು ಬಯಸಿದಂಥ ಸಂಬಂಧ ಬರಬಹುದು. ಪ್ರೇಮಿಗಳಿಗೆ, ವಿವಾಹಿತರಿಗೆ ಈ ವಾರ ತುಂಬಾನೇ ಚೆನ್ನಾಗಿರಲಿದೆ.
ಮೀನ ರಾಶಿ
ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಲು ಪ್ರಯತ್ನಿಸಿ. ಈ ಸಮಯದಲ್ಲಿ, ನಿಮ್ಮ ಸಂಬಂಧವನ್ನು ಸುಧಾರಿಸಲು ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ಪ್ರೇಮ ಸಂಬಂಧಗಳು ಗಾಢವಾಗುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
