ಈ ವಾರದ (ಜೂ.30-ಜು.6) ಪ್ರೀತಿ ಭವಿಷ್ಯ 12 ರಾಶಿಗಳಿಗೆ ಹೇಗಿರಲಿದೆ?

ವಾರ ಭವಿಷ್ಯ ಪ್ರಕಾರ ಈ ವಾರ ಪ್ರೀತಿ (ಜೂ.30-ಜು.6)ಜೀವನ ಹೇಗಿರಲಿದೆ?:

ಮೇಷ ರಾಶಿ

ಅವಾಹಿತರಿಗೆ ವಿಶೇಷವಾಗಿರಲಿದೆ, ನಿಮ್ಮ ಬದುಕಿನಲ್ಲಿ ವ್ಯಕ್ತಿಯೊಬ್ಬರ ಆಗಮನವಾಗಲಿದೆ. ವಿವಾಹಿತರು ಮೂರನೇಯ ವ್ಯಕ್ತಿಯ ಮಾತಿಗೆ ಕಿವಿಕೊಡದಿರುವುದು ಒಳ್ಳೆಯದು, ನಿಮ್ಮ ನಿರ್ಧಾರವನ್ನು ಸ್ವಂತವಾಗಿ ತೆಗೆದುಕೊಳ್ಳಿ.

Weekly June 30 To July 6 Love Horoscope

ವೃಷಭ ರಾಶಿ

ವೈವಾಹಿಕ ಜೀವನ ಚೆನ್ನಾಗಿರಲಿದೆ, ನೀವು ಅವರ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದು, ಇದರಿಂದಾಗಿ ನಿಮ್ಮ ಸಂಬಂಧದಲ್ಲಿ ಪ್ರೀತಿ ಮತ್ತು ಅನ್ಯೋನ್ಯತೆ ಇರಲಿದೆ. ನಿಮ್ಮ ಸಂಬಂಧ ಸುಧಾರಿಸಲು ಉತ್ತಮ ಅವಕಾಶ ಸಿಗಲಿದೆ, ಹೀಗಾಗಿ ನಿಮ್ಮ ನಡುವೆ ಏನಾದರೂ ತಪ್ಪು ಕಲ್ಪನೆ ಇದ್ದರೆ ಅದನ್ನು ಸರಿಪಡಿಸಲು ಈ ವಾರ ಅನುಕೂಲಕರವಾಗಿದೆ.

ಮಿಥುನ ರಾಶಿ

ನಿಮ್ಮ ವೈವಾಹಿಕ ಜೀವನದಲ್ಲಿ ಸಾಮರಸ್ಯ ಕಾಪಾಡಲು ನೀವು ಪ್ರಯತ್ನ ಹಾಕಬೇಕು. ಕೋಪ ಸ್ವಭಾವ ಸಂಬಂಧದಲ್ಲಿ ಸಮಸ್ಯೆ ಹೆಚ್ಚಿಸಬಹುದು, ವೈವಾಹಿಕ ಬದುಕಿನಲ್ಲಿ ಅಹಂಗೆ ಅವಕಾಶ ನೀಡಬೇಡಿ. ಏನಾದರೂ ಭಿನ್ನಾಭಿಪ್ರಾಯವಿದ್ದರೆ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವ ಬದಲಿಗೆ ಸಂಗಾತಿ ಜೊತೆ ಮಾತನಾಡಿ ಬಗೆಹರಿಸಲು ಪ್ರಯತ್ನಿಸಿ.

ಕರ್ಕ ರಾಶಿ

ಈ ಅವಧಿಯಲ್ಲಿ ವಿವಾಹಿತರ ಬದುಕಿನಲ್ಲಿ ಕೆಲ ಭಿನ್ನಾಭಿಪ್ರಾಯವಿರಬಹುದು, ಆದರೆ ಆತುರದ ನಿರ್ಧಾರ ಒಳ್ಳೆಯದಲ್ಲ ಎಂದು ಸಲಹೆ ನೀಡಲಾಗುವುದು. ನೀವು ಯೋಚಿಸುವುದು ಒಂದು ಅವರು ಯೋಚಿಸುವುದು ಮತ್ತೊಂದು ಹೀಗಾಗಿ ಸಂಬಂಧದಲ್ಲಿ ಸಮಸ್ಯೆ ಹೆಚ್ಚಾಗಲಿದೆ. ಪ್ರೀತಿಸುತ್ತಿದ್ದರೆ ಈ ಸಮಯದಲ್ಲಿ ನಿಮ್ಮ ಪ್ರೀತಿಯ ಗುಟ್ಟು ರಟ್ಟಾಗಲಿದೆ.

ಸಿಂಹ ರಾಶಿ

ಪ್ರೇಮಿಗಳಿಗೆ ಅನುಕೂಲಕರವಾಗಿದೆ, ಸಂಗಾತಿಯೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಲು ನೀವು ಬಯಸುತ್ತೀರಿ. ನಿಮ್ಮ ನಡುವೆ ಸಾಮರಸ್ಯ ತುಂಬಾ ಚೆನ್ನಾಗಿರಲಿದೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ.

ಕನ್ಯಾ ರಾಶಿ

ಈ ವಾರ ನಿಮಗೆ ತುಂಬಾ ರೊಮ್ಯಾಂಟಿಕ್ ಆಗಿರಲಿದೆ. ನೀವು ನಿಮ್ಮ ಮನಸ್ಸಿನ ಮಾತುಗಳನ್ನು ಸಮಗಾತಿ ಜೊತೆಗೆ ಹಂಚಿಕೊಳ್ಳುತ್ತೀರಿ. ವಿವಾಹಿತರಿಗೆ ಈ ಅವಧಿ ಚೆನ್ನಾಗಿರಲಿದೆ, ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿದೆ, ನಿಮ್ಮಿಬ್ಬರ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ.

ತುಲಾ ರಾಶಿ

ಈ ವಾರ ನೀವು ಹೆಚ್ಚಿನ ತಾಳ್ಮೆಯಿಂದಿರಬೇಕು, ಕೋಪದಿಂದ ಹೇಳುವ ಮಾತುಗಳು ಸಂಸಾರದಲ್ಲಿ ಸಮಸ್ಯೆ ತರಬಹುದು. ಸಂಬಂಧದಲ್ಲಿ ನೀವು ಸಮತೋಲನವನ್ನು ಕಾಯ್ದುಕೊಳ್ಳಬೇಕು. ಏನೇ ವಿಷಯವಿರಲಿ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುವುದು ಒಳ್ಳೆಯದು. ಸಂಗಾತಿಯನ್ನು ಹೆಚ್ಚು ಅರ್ಥ ಮಾಡಿಕೊಲ್ಳಲು ಪ್ರಯತ್ನಿಸಿ.

ವೃಶ್ಚಿಕ ರಾಶಿ

ನಿಮಗೆ ಪ್ರೀತಿ ಮೂಡಿದ್ದರೆ ಪ್ರಪೋಸ್‌ ಮಾಡಲು ಅನುಕೂಲಕರ ಸಮಯ. ನೀವು ಸಕಾರಾತ್ಮಕ ಉತ್ತರಗಳನ್ನು ಪಡೆಯುವ ಸಾಧ್ಯತೆಯಿದೆ. ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ, ನೀವು ಒಬ್ಬರನ್ನೊಬ್ಬರನ್ನು ತುಂಬಾನೇ ಪ್ರೀತಿಸುತ್ತೀರಿ.

ಧನು ರಾಶಿ

ಪ್ರೇಮಿಗಳಿಗೆ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ, ಆದರೆ ಆ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೀರಿ. ಈ ರಾಶಿಯ ವಿವಾಹಿತರಿಗೆ ಈ ವಾರ ಸ್ವಲ್ಪ ನೀರಸವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು, ಸಂಗಾತಿಗೆ ನಿಮ್ಮ ಮೇಲೆ ಬೇಸರ ಮೂಡಿದರೆ ಸಂಬಂಧದಲ್ಲಿ ಅಂತರ ಹೆಚ್ಚಾಗಬಹುದು.

ಮಕರ ರಾಶಿ

ನಿಮ್ಮ ಹಾಗೂ ಈ ಅವಧಿಯಲ್ಲಿ ನೀವು ಉಪಕ್ರಮವನ್ನು ತೆಗೆದುಕೊಳ್ಳಬಹುದು. ನಿಮ್ಮ ಸಹಚರರು ಎಲ್ಲಾ ಅಸಮಾಧಾನವನ್ನು ಮರೆತು ಹೊಸ ಆರಂಭವನ್ನು ಮಾಡಲು ಪ್ರಯತ್ನಿಸುವ ಸಾಧ್ಯತೆಯಿದೆ. ನಿಮ್ಮ ಪ್ರೀತಿಯ ಬಂಧವನ್ನು ಮದುವೆಗೆ ಪರಿವರ್ತಿಸಲು ನೀವು ಬಯಸಿದರೆ, ಹೆಚ್ಚು ಆತುರಪಡಬೇಡಿ.

ಕುಂಭ ರಾಶಿ

ನಿಮ್ಮ ಸಂಗಾತಿ ನಿಮ್ಮಿಂದ ಕೆಲ ವಿಷಯ ಬಚ್ಚಿಡಬಹುದು, ಇದು ತಿಳಿದಾಗ ನಿಮ್ಮ ನಡುವೆ ಅಪಶ್ರುತಿಗೆ ಕಾರಣವಾಗಬಹುದು. ನೀವು ಮನಸ್ಸು ಬಿಚ್ಚಿ ಮಾತನಾಡಿದರೆ ಒಳ್ಳೆಯದು, ಈ ಅವಧಿಯಲ್ಲಿ ಸಂಗಾತಿಯ ಮನಸ್ಸನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಅದು ಉತ್ತಮವಾಗಿರುತ್ತದೆ. ವಿವಾಹಿತರಿಗೆ ಈ ವಾರ ತುಂಬಾ ಆಹ್ಲಾದಕರವಾಗಿರುತ್ತದೆ.

ಮೀನ ರಾಶಿ

ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ನೀವು ಪ್ರೇಮ ವಿವಾಹವನ್ನು ಹೊಂದಲು ಬಯಸಿದರೆ ಅದರ ಬಗ್ಗೆ ಮನೆಯಲ್ಲಿ ಹೇಳಲು ಈ ಸಮಯ ಸೂಕ್ತವಾಗಿದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly (June 30 To July 6) Love Horoscope Of 12 Zodiac Signs in Kannada

Weekly (June 30 To July 6) Love Horoscope, how will be for 12 zodiac signs read on..
Story first published: Saturday, June 29, 2024, 21:43 [IST]
X
Desktop Bottom Promotion