Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇಷದಿಂದ -ಮೀನದವರೆಗಿನ ಈ ವಾರದ ಆರೋಗ್ಯ ಭವಿಷ್ಯ ಹೇಗಿರಲಿದೆ?
ಈ ವಾರ ನಿಮ್ಮ ಆರೋಗ್ಯ ಜೀವನ ಹೇಗಿರಲಿದೆ? ಯಾವ ರಾಶಿಯವರು ಈ ವಾರ ಆರೋಗ್ಯದಲ್ಲಿ ಜಾಗ್ರತೆವಹಿಸಬೇಕು ಎಂದು ನೋಡೋಣ ಬನ್ನಿ:
ಮೇಷ ರಾಶಿ
ನಿಮಗೆ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಆರೋಗ್ಯ ಸರಿಯಿಲ್ಲದಿರುವುದರಿಂದ ಕೆಲಸದ ಕಡೆಗೆ ಗಮನಹರಿಸಲು ಕಷ್ಟವಾಗುವುದು. ಹೃದಯ ಸಂಬಂಧಿ ಸಮಸ್ಯೆಯಿದ್ದರೆ ನೀವು ಮಾನಸಿಕ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಬೇಕು.

ವೃಷಭ ರಾಶಿ
ಆರೋಗ್ಯದಲ್ಲಿ ಈ ವಾರ ಮಿಶ್ರಫಲ. ನೀವು ನಿಯಮಿತ ದಿನಚರಿಯನ್ನು ಅನುಸರಿಸಿದರೆ, ನೀವು ಉತ್ತಮ ಆರೋಗ್ಯವನ್ನು ಆನಂದಿಸಬಹುದು. ಈ ವಾರ ಗರ್ಭಿಣಿಯರು ಸ್ವಲ್ಪ ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗುವುದು. ವಿಶೇಷವಾಗಿ ಮೆಟ್ಟಿಲುಗಳನ್ನು ಹತ್ತುವಾಗ ಮತ್ತು ಇಳಿಯುವಾಗ ನೀವು ಹೆಚ್ಚು ಜಾಗರೂಕರಾಗಿರಬೇಕು.
ಮಿಥುನ ರಾಶಿ
ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ತುಂಬಾ ಒಳ್ಳೆಯದಿದೆ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಈ ಅವಧಿಯಲ್ಲಿ ಪ್ರಗತಿ ಕಂಡು ಬರಲಿದೆ. ಈ ಅವಧಿ ಮಾನಸಿಕವಾಗಿ ತುಂಬಾ ಉತ್ತಮವಾಗಿರಲಿದೆ.
ಕರ್ಕ ರಾಶಿ
ನಿಮ್ಮ ಆರೋಗ್ಯವು ಸಂಪೂರ್ಣವಾಗಿ ಉತ್ತಮವಾಗಿರುತ್ತದೆ. ನಿಮ್ಮ ಎಲ್ಲಾ ಕೆಲಸಗಳನ್ನು ಹೆಚ್ಚು ಉತ್ಸಾಹದಿಂದ ಪೂರ್ಣಗೊಳಿಸುತ್ತೀರಿ. ಏನಾದರೂ ಆರೋಗ್ಯ ಸಮಸ್ಯೆಗೆ ಔಷಧಿ ತೆಗೆಯುತ್ತಿದ್ದರೆ ನಿಯಮಿತವಾಗಿ ಸೇವಿಸಿ.
ಸಿಂಹ ರಾಶಿ
ಅಜಾಗರೂಕತೆಯಿಂದ, ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು, ನಿಮ್ಮ ಆರೋಗ್ಯದೊಂದಿಗೆ ಆಟವಾಡದಿದ್ದರೆ ಉತ್ತಮ. ಅನಗತ್ಯ ವಿಷಯಗಳಿಗೆ ಕೋಪಗೊಳ್ಳುವ ನಿಮ್ಮ ಅಭ್ಯಾಸವು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು. ಅನಗ್ಯತ ಚಿಂತೆ ಮಾಡಿ ಮಾನಸಿಕ ಒತ್ತಡ ಹೆಚ್ಚಿಸಿಕೊಳ್ಳಬೇಡಿ.
ಕನ್ಯಾ ರಾಶಿ
ನೀವು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ನಿಮ್ಮ ನಿರ್ಧಾರಗಳನ್ನು ನೀವು ಪೂರ್ಣ ವಿಶ್ವಾಸದಿಂದ ತೆಗೆದುಕೊಳ್ಳುತ್ತೀರಿ. ಕೆಲಸದ ವಿಚಾರದಲ್ಲಿ ಹೆಚ್ಚು ಒತ್ತಡ ತೆಗೆದುಕೊಳ್ಳಬೇಡಿ. ನಿಮ್ಮ ಎಲ್ಲಾ ಕೆಲಸಗಳನ್ನು ಯೋಜನೆಯ ಪ್ರಕಾರ ಪೂರ್ಣಗೊಳಿಸಲು ಪ್ರಯತ್ನಿಸಿದರೆ ತುಂಬಾ ಒಳ್ಳೆಯದು.
ತುಲಾ ರಾಶಿ
ಆರೋಗ್ಯದ ಬಗ್ಗೆ ಹೇಳುವುದಾದರೆ ಅನಗ್ಯತ ಆತಂಕ ಮತ್ತು ಒತ್ತಡದಿಂದ ದೂರವಿರಿ. ನೀವು ಎಲ್ಲಾ ವಿಷಯಗಳನ್ನು ಮರೆತು ಹೊಸ ಪ್ರಾರಂಭವನ್ನು ಮಾಡಲು ಪ್ರಯತ್ನಿಸುವುದು ಉತ್ತಮ. ಮೊದಲನೆಯದಾಗಿ, ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡಿ.
ವೃಶ್ಚಿಕ ರಾಶಿ
ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನೀವು ಆಹಾರ ಪದ್ಧತಿಯ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ವಿಶೇಷವಾಗಿ ನೀವು ಹೊರಗಿನ ಆಹಾರವನ್ನು ಸೇವಿಸಬೇಡಿ, ಹೆಚ್ಚು ಚಹಾ ಮತ್ತು ಕಾಫಿ ಸೇವಿಸಬೇಡಿ.
ಧನು ರಾಶಿ
ವಾರದ ಆರಂಭವು ನಿಮಗೆ ಉತ್ತಮವಾಗಿರುತ್ತದೆ. ನಿಮ್ಮ ಸಂಪೂರ್ಣ ಗಮನವು ನಿಮ್ಮ ಕೆಲಸದ ಮೇಲೆ ಇರಲಿದೆ. ಆದರೆ ಅಜಾಗರೂಕತೆಯಿಂದ ನಿಮ್ಮ ಆರೋಗ್ಯವು ಹಠಾತ್ ಕ್ಷೀಣಿಸುವ ಸಾಧ್ಯತೆಯಿದೆ. ತಡರಾತ್ರಿಯವರೆಗೆ ಕೆಲಸ ಮಾಡಬೇಡಿ, ವಿಶ್ರಾಂತಿ ಕಡೆಯೂ ಗಮನಹರಿಸಿ.
ಮಕರ ರಾಶಿ
ವಾರದ ಆರಂಭವು ನಿಮಗೆ ಉತ್ತಮವಾಗಿರಲಿದೆ. ನಿಮ್ಮ ಸಂಪೂರ್ಣ ಗಮನವು ನಿಮ್ಮ ಕೆಲಸದ ಮೇಲೆ ಇರಲಿದೆ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಕೆಲಸದ ಒತ್ತಡ ಅಧಿಕ ತೆಗೆದುಕೊಳ್ಳಬೇಡಿ.
ಕುಂಭ ರಾಶಿ
ವಾರದ ಆರಂಭವು ನಿಮಗೆ ಉತ್ತಮವಾಗಿರಲಿದೆ. ನಿಮ್ಮ ಸಂಪೂರ್ಣ ಗಮನವು ನಿಮ್ಮ ಕೆಲಸದ ಮೇಲೆ ಇರುತ್ತದೆ, ಆದರೆ ಅಜಾಗರೂಕತೆಯಿಂದ ನಿಮ್ಮ ಆರೋಗ್ಯವು ಹಠಾತ್ ಕ್ಷೀಣಿಸುವ ಸಾಧ್ಯತೆಯಿದೆ, ಹಳೆಯ ಕಾಯಿಲೆ ಮರುಕಳಿಸುವ ಸಾಧ್ಯತೆ ಇದೆ.
ಮೀನ ರಾಶಿ
ನಿಮಗಾಗಿ ನೀವು ಸಾಕಷ್ಟು ಸಮಯವನ್ನು ವಿನಿಯೋಗಿಸಬೇಕಾಗಿದೆ. ಕೆಲಸದ ಜೊತೆಗೆ ಆರೋಗ್ಯದ ಕಡೆಗೂ ಗಮನ ಹರಿಸಿದರೆ ಉತ್ತಮ. ನೀವು ಅನಗತ್ಯ ಚಿಂತೆಗಳಿಂದ ದೂರವಿರಬೇಕು, ಬೇಗನೆ ಕೋಪಗೊಳ್ಳುವ ಸ್ವಭಾವ ಮಾನಸಿಕ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications