Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಈ ವಾರ(ಜುಲೈ 7-14) ಹಣಕಾಸು ಯಾರಿಗೆ ಚೆನ್ನಾಗಿರಲಿದೆ, ಯಾರು ಜಾಗ್ರತೆವಹಿಸಬೇಕು?
ಮೇಷ ರಾಶಿ
ಆರ್ಥಿಕವಾಗಿ ತೊಂದರೆ ಇರಲ್ಲ, ಆದರೆ ಖರ್ಚು ಅಧಿಕವಿರಲಿದೆ. ಆದರೆ ನೀವು ಖರ್ಚು ನೋಡಿಕೊಂಡು ಮಾಡಿದರೆ ತುಂಬಾ ಒಳ್ಳೆಯದು. ಅಲ್ಲದೆ ಮೂರನೇಯವರ ಮಾತು ಕೇಳಿ ಹಣದ ಹೂಡಿಕೆ ಮಾಡಲು ಹೋಗಬೇಡಿ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಆದಾಯದ ದೃಷ್ಟಿಯಿಂದ ಒಳ್ಳೆಯದಿದೆ. ಆರ್ಥಿಕ ಸಮಸ್ಯೆ ಇರಲ್ಲ, ವ್ಯಾಪಾರಿಗಳು ಲಾಭ ಗಳಿಸುತ್ತೀರಿ. ಉದ್ಯಮಿಗಳಿಗೆ ದೊಡ್ಡ ವ್ಯವಹಾರ ಮಾಡಲು ಅವಕಾಶ ಸಿಗಲಿದೆ.
ಮಿಥುನ ರಾಶಿ
ಈ ವಾರ ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ, ಈ ವಾರ ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ, ಹಣದ ತೊಂದರೆಯಿಲ್ಲದ ಕಾರಣ ಹಣಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಅಡೆತಡೆ ಕಂಡು ಬರುವುದಿಲ್ಲ. ವ್ಯಾಪಾರಿಗಳು ಲಾಭ ಗಳಿಸಲು ಉತ್ತಮ ಲಾಭ ಪಡೆಯುತ್ತೀರಿ.
ಕರ್ಕ ರಾಶಿ
ಈ ವಾರ ನೀವು ಜಾಗ್ರತೆವಹಿಸಬೇಕು, ಹಣಕ್ಕೆ ಸಂಬಂಧಿಸಿದ ನಿರ್ಧಾರವನ್ನು ತುಂಬಾ ಗಡಿಬಿಡಿಯಿಂದ ಮಾಡಬೇಡಿ. ವ್ಯಾಪಾರಿಗಳು ಕೂಡ ತುಂಬಾನೇ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ನಷ್ಟ ಉಂಟಾಗುವುದು, ಇನ್ನು ಈ ಅವಧಿಯಲ್ಲಿ ಆರ್ಥಿಕ ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ.
ಸಿಂಹ ರಾಶಿ
ಆರ್ಥಿಕವಾಗಿ ಈ ವಾರ ನಿಮಗೆ ಅಷ್ಟೊಂದು ಪ್ರಯೋಜನಕಾರಿಯಲ್ಲ, ಆಮದು-ರಫ್ತು ವ್ಯವಹಾರ ಮಾಡುವುದಾದರೆ ಜಾಗ್ರತೆವಹಿಸಿ, ಕೆಲಸ ಕಾರ್ಯಗಳಲ್ಲಿ ಗಮನಹರಿಸದಿದ್ದರೆ ಹಣದ ನಷ್ಟ ಉಂಟಾಗುವುದು, ವ್ಯಾಪಾರಿಗಳು ಜಾಗ್ರತೆವಹಿಸಬೇಕು.
ಕನ್ಯಾ ರಾಶಿ
ಈ ವಾರ ನಿಮಗೆ ಆರ್ಥಿಕವಾಗಿ ಒಳ್ಳೆಯದಿದೆ, ಖರ್ಚು ಕಡಿಮೆ ಇರಲಿದೆ, ಅಲ್ಲದೆ ಆರ್ಥಿಕ ಪ್ರಗತಿಗೆ ನೀವು ಮಾಡುವ ಪ್ರಯತ್ನಗಳಲ್ಲಿ ಫಲ ಸಿಗಲಿದೆ. ಆಸ್ತಿ ಸಂಬಂಧಿತ ವ್ಯವಹಾರಕ್ಕೆ ಈ ಅವಧಿ ಉತ್ತಮವಾಗಿದೆ. ಮಾರಾಟ ಅಥವಾ ಖರೀದಿ ಲಾಭ ನೀಡಲಿದೆ.
ತುಲಾ ರಾಶಿ
ಈ ಅವಧಿ ಆರ್ಥಿಕವಾಗಿ ಉತ್ತಮವಲ್ಲ, ಖರ್ಚು ಕೂಡ ಅಧಿಕವಿರಲಿದೆ. ನೀವು ಹಣದ ನಿರ್ಧಾರಗಳನ್ನು ತುಂಬಾ ಜಾಗ್ರತೆಯಿಂದ ತೆಗೆದುಕೊಳ್ಳಬೇಕು. ಅಲ್ಲದೆ ಸಾಧ್ಯವಾದಷ್ಟು ಖರ್ಚು ಮಾಡದಿರಿ.
ವೃಶ್ಚಿಕ ರಾಶಿ
ಈ ಅವಧಿ ನಿಮಗೆ ಆರ್ಥಿಕವಾಗಿ ಉತ್ತಮವಾಗಿರಲಿದೆ, ಆಸ್ತಿ ಸಂಬಂಧಿಸಿದ ವ್ಯವಹಾರದಲ್ಲಿ ಲಾಭ ಗಳಿಸುತ್ತೀರಿ, ವ್ಯಾಪಾರಿಗಳು ಧನ ಲಾಭ ಗಳಿಸುತ್ತೀರಿ, ಒಟ್ಟಿನಲ್ಲಿ ಯಾವುದೇ ದೊಡ್ಡ ಆರ್ಥಿಕ ತೊಂದರೆಯಿಲ್ಲದೆ ಈ ವಾರ ಗಳಿಯುತ್ತೀರಿ.
ಧನು ರಾಶಿ
ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ, ಆರ್ಥಿಕ ಪ್ರಗತಿ ಕಂಡು ಬರಲಿದೆ, ಸ್ವಂತ ವ್ಯವಹಾರ ಮಾಡುತ್ತಿದ್ದರೆ ಲಾಭ ಗಳಿಸುತ್ತೀರಿ, ವ್ಯಾಪಾರಿಗಳು ಲಾಭ ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಉದ್ಯೋಗ ಬದಲಾವಣೆಗೆ ಕೂಡ ಈ ಅವಧಿ ಉತ್ತಮವಾಗಿದೆ.
ಮಕರ ರಾಶಿ
ಹಣದ ಬಗ್ಗೆ ಅತಿಯಾಗಿ ಚಿಂತೆ ಮಾಡಬೇಡಿ, ಆದರೆ ಹಣದ ವಿಷಯದಲ್ಲಿ ಜಾಗ್ರತೆವಹಿಸಲೇಬೇಕು.. ನಿಮ್ಮ ವ್ಯವಹಾರ ನಿರ್ಧಾರಗಳನ್ನು ಚೆನ್ನಾಗಿ ಯೋಚಿಸಿ ಮಾಡಿ, ಗಡಿಬಿಡಿಯಿಂದ ಮಾಡಿದರೆ ಹಣ ನಷ್ಟ ಉಂಟಾಗಬಹುದು.
ಕುಂಭ ರಾಶಿ
ಉದ್ಯೋಗಿಗಳಿಗೆ ಈ ವಾರ ಆರ್ಥಿಕವಾಗಿ ತುಂಬಾ ಉತ್ತಮವಾಗಿದೆ. ಆದರೆ ಹಣದ ವ್ಯವಹಾರದ ಬಗ್ಗೆ ಜಾಗ್ರತೆವಹಿಸದಿದ್ದರೆ ಆರ್ಥಿಕ ನಷ್ಟ ಉಂಟಾಗುವುದು. ಆದ್ದರಿಂದ ಜಾಗ್ರತೆಯಿಂದ ಹಣದ ವ್ಯವಹಾರ ಮಾಡಿ.
ಮೀನ ರಾಶಿ
ಈ ವಾರ ನಿಮಗೆ ತುಂಬಾ ಶುಭವಾಗಿದೆ, ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಸಿಗಲಿದೆ, ಹೀಗಾಗಿ ಆರ್ಥಿಕ ಪ್ರಗತಿ ಕಂಡು ಬರಲಿದೆ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಈ ವಾರ ನಿಮಗೆ ಫಲಪ್ರದವಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications