ವಾರ ಭವಿಷ್ಯ ಪ್ರಕಾರ ಈ ವಾರದ 12 ರಾಶಿಗಳ ಭವಿಷ್ಯ

ವಾರ ಭವಿಷ್ಯ ಪ್ರಕಾರ ಈ ವಾರ ನಿಮಗೆ ಹೇಗಿರಲಿದೆ?

ಮೇಷ ರಾಶಿ
ಈ ವಾರ ನಿಮಗೆ ಅನುಕೂಲಕರವಾಗಿದೆ, ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ಈ ವಾರ ನಿಮ್ಮ ಆತ್ಮವಿಶ್ವಾಸ ಚೆನ್ನಾಗಿರಲಿದೆ, ವ್ಯಾಪಾರಿಗಳು ಲಾಭ ಗಳಿಸುತ್ತೀರಿ. ಆರ್ಥಿಕವಾಗಿ ನಿಮಗೆ ಅನುಕೂಲಕರವಾಗಿದೆ. ಆದರೆ ಹೆಚ್ಚು ಹಣ ಖರ್ಚು ಮಾಡಬೇಡಿ ಎಂದು ಸಲಹೆ ನೀಡಲಾಗುವುದು. ಆರೋಗ್ಯ ಚೆನ್ನಾಗಿರುತ್ತದೆ.
ಅದೃಷ್ಟದ ಬಣ್ಣ ನೇರಳೆ
ಅದೃಷ್ಟದ ಸಂಖ್ಯೆ 8
ಶುಭ ದಿನ: ಶನಿವಾರ

weekly horoscope

ವೃಷಭ ರಾಶಿ
ಈ ವಾರ ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ಈ ಅವಧಿಯಲ್ಲಿ ವೃತ್ತಿ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು. ಇನ್ನು ಹಣದ ಬಗ್ಗೆ ಈ ವಾರ ನಿಮಗೆ ಅನುಕೂಲಕರವಲ್ಲ, ಖರ್ಚು ಹೆಚ್ಚಿರಲಿದೆ. ಇನ್ನು ಆರೋಗ್ಯದ ಕಡೆಯೂ ಗಮನಹರಿಸಬೇಕು.
ಅದೃಷ್ಟದ ಬಣ್ಣ ಹಳದಿ
ಅದೃಷ್ಟದ ಸಂಖ್ಯೆ 16
ಶುಭ ದಿನ: ಗುರುವಾರ

ಮಿಥುನ ರಾಶಿ
ನಿಮ್ಮ ಹಾಗೂ ಸಂಗಾತಿಯ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೆ ಮಾತನಾಡಿ ಬಗೆಹರಿಸಲು ಪ್ರಯತ್ನಿಸುವುದು ಒಳ್ಳೆಯದು. ಇನ್ನು ಕೋಪ ನಿಯಂತ್ರಿಸಿ, ಇಲ್ಲದಿದ್ದರೆ ನಿಮ್ಮ ಸಂಬಂಧ ಮತ್ತಷ್ಟು ಹದಗೆಡುವುದು. ಈ ವಾರ ಖರ್ಚು ಇರಲಿದೆ, ಆದರೆ ಆದಾಯ ಹೆಚ್ಚಿಸುವ ಪ್ರಯತ್ನಕ್ಕೆ ಉತ್ತಮ ಫಲ ಸಿಗಲಿದದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿರಬಹುದು.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ 33
ಶುಭ ದಿನ: ಸೋಮವಾರ

ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ವಾರ ಕೆಲ ಸವಾಲುಗಳು ಎದುರಾಗಬಹುದು. ವೈಯಕ್ತಿಕ -ವೃತ್ತಿಪರ ಜೀವನದಲ್ಲಿ ನೀವು ಸಹನೆಯಿಂದಿರಬೇಕು, ಇಲ್ಲದಿದ್ದರೆ ದೊಡ್ಡ ಸಮಸ್ಯೆ ಉಂಟಾಗುವುದು. ಈ ಸಮಯದಲ್ಲಿ ಹಣದ ಸಮಸ್ಯೆ ಎದುರಾಗಬಹುದು, ಖರ್ಚು ಹೆಚ್ಚಿರಲಿದೆ. ಕುಟುಂಬ ಜೀವನದಲ್ಲಿಯೂ ಕೆಲ ಸಮಸ್ಯೆಗಳಿರಬಹುದು, ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಕೆಲ ಆರೋಗ್ಯ ಸಮಸ್ಯೆಯೂ ಇರಬಹುದು.
ಅದೃಷ್ಟದ ಬಣ್ಣ ಕೆನೆ
ಅದೃಷ್ಟದ ಸಂಖ್ಯೆ 5
ಶುಭ ದಿನ: ಶುಕ್ರವಾರ

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ವಾರ ಅನುಕೂಲಕರವಲ್ಲ, ನೀವು ವೃತ್ತಿ ಬದುಕಿನ ಕಡೆಗೆ ತುಂಬಾನೇ ಗಮನಹರಿಸಬೇಕು. ಇಲ್ಲದಿದ್ದರೆ ವೃತ್ತಿ ಬದುಕಿನಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಸಂಗಾತಿಯ ಜೊತೆ ಕೆಲ ಭಿನ್ನಾಭಿಪ್ರಾಯಗಳಿರಬಹುಉದ, ಆದರೆ ನೀವು ನಿಮ್ಮಿಬ್ಬಿರ ನಡುವಿನ ಭಿನ್ನಾಭಿಪ್ರಾಯ ಕಡಿಮೆ ಮಾಡಲು ಪ್ರಯತ್ನಿಸಬೇಕು. ಇನ್ನು ಖರ್ಚಚು ಅಧಿಕವಿರಲಿದೆ, ಅನಗ್ಯತ ಖರ್ಚು ನಿಯಂತ್ರಿಸಿದರೆ ಒಳ್ಳೆಯದು.
ಅದೃಷ್ಟದ ಬಣ್ಣ ನೀಲಿ
ಅದೃಷ್ಟದ ಸಂಖ್ಯೆ 28
ಶುಭ ದಿನ: ಸೋಮವಾರ

ಕನ್ಯಾ ರಾಶಿ
ಈ ವಾರ ನಿಮಗೆ ಅನುಕೂಲಕರವಾಗಿದೆ. ಕೆಲಸದಲ್ಲಿ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ ಈ ಅವಧಿ ತುಂಬಾ ಚೆನ್ನಾಗಿರಲಿದೆ. ವ್ಯಾಪಾರಿಗಳಿಗೆ ಅಪೇಕ್ಷಿತ ಲಾಭ ದೊರೆಯಲಿದೆ. ಮನೆಯಲ್ಲಿ ಶೀಘ್ರವೇ ಶುಭ ಕಾರ್ಯ ನಡೆಯಲಿದೆ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 6
ಶುಭ ದಿನ: ಮಂಗಳವಾರ

ತುಲಾ ರಾಶಿ

ತುಲಾ ರಾಶಿಯವರು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ನೀವು ಆರೋಗ್ಯದ ಕಡೆಗೆ ಗಮನಹರಿಸಿ. ಉದ್ಯಮಿಗಳು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೆ ಈ ಅವಧಿಯಲ್ಲಿ ಅದಕ್ಕೆ ಪರಿಹಾರ ಸಿಗಲಿದೆ. ಸಂಬಂಧಗಳ ವಿಷಯದಲ್ಲಿ ಈ ವಾರ ನಿಮಗೆ ಉತ್ತಮವಾಗಿರುತ್ತದೆ. ನೀವು ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಿದರೆ ಕುಟುಂಬ ಜಿವನ ಚೆನ್ನಾಗಿರಲಿದೆ. ಖರ್ಚು ಮಿತಗೊಳಿಸಿದರೆ ಒಳ್ಳೆಯದು.
ಅದೃಷ್ಟದ ಬಣ್ಣ ನೇರಳೆ
ಅದೃಷ್ಟದ ಸಂಖ್ಯೆ 41
ಶುಭ ದಿನ: ಶನಿವಾರ

ವೃಶ್ಚಿಕ ರಾಶಿ
ಈ ವಾರ ಹಣದ ವಿಷಯದಲ್ಲಿ ಜಾಗ್ರತೆವಹಿಸಬೇಕು, ವ್ಯಾಪಾರಿಗಳು ಹಣದ ತೊಂದರೆಯನ್ನು ಎದುರಿಸಬಹುದು. ಈ ವಾರ ನೀವು ಅನಗ್ಯತ ಖರ್ಚಿಗೆ ಕಡಿವಾಣ ಹಾಕಿದರೆ ಒಳ್ಳೆಯದು. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಬೇಕು. ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಬೇಡ.
ಅದೃಷ್ಟದ ಬಣ್ಣ ಹಳದಿ
ಅದೃಷ್ಟದ ಸಂಖ್ಯೆ 10
ಶುಭ ದಿನ: ಬುಧವಾರ

ಧನು ರಾಶಿ
ಈ ವಾರ ನಿಮಗೆ ಶುಭವಾಗಿದೆ. ಆರ್ಥಿಕವಾಗಿ ಈ ವಾರ ಉತ್ತಮವಾಗಿರುವುದರಿಂದ ಹಣದ ಚಿಂತೆ ಕಾಡಲ್ಲ, ಅಲ್ಲದೆ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುವುದು. ಈ ಸಮಯದಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ವ್ಯಾಪಾರಿಗಳು ಲಾಭ ಗಳಿಸುತ್ತೀರಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 25
ಶುಭ ದಿನ: ಶುಕ್ರವಾರ

ಮಕರ ರಾಶಿ
ಮಕರ ರಾಶಿಯವರು ಈ ವಾರ ಸ್ವಲ್ಪ ಜಾಗ್ರತೆವಹಿಸಿ, ಅನಗ್ಯತ ವಿವಾದಗಳಲ್ಲಿ ಸಿಲುಕಿ ಹಾಕಿಕೊಳ್ಳದಂತೆ ಜಾಗ್ರತೆವಹಿಸಿ. ವ್ಯಾಪಾರಿಗಳು ಕೂಡ ಹಣದ ವಿಷಯದಲ್ಲಿ ತುಂಬಾನೆ ಜಾಗ್ರತೆವಹಿಸಬೇಕು. ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ. ಇನ್ನು ಆರೋಗ್ಯದ ಬಗ್ಗೆ ಕೂಡ ಗಮನಹರಿಸಬೇಕು.
ಅದೃಷ್ಟದ ಬಣ್ಣ ಕೆಂಪು
ಅದೃಷ್ಟದ ಸಂಖ್ಯೆ 32
ಶುಭ ದಿನ: ಮಂಗಳವಾರ

ಕುಂಭ ರಾಶಿ

ಈ ವಾರ ಉತ್ತಮವಾಗಿರುತ್ತದೆ, ಕೆಲಸ-ಕಾರ್ಯಗಳಲ್ಲಿ ಜಯ ಗಳಿಸುತ್ತೀರಿ, ಆದರೆ ಅತಿಯಾದ ಅತ್ಮವಿಶ್ವಾಸ ಒಳ್ಳೆಯದಲ್ಲ. ಮನೆಯಲ್ಲಿ ಏನಾದರು ಸಮಸ್ಯೆವಿದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಿದರೆ ಉತ್ತಮ. ಇನ್ನು ಆರೋಗ್ಯ ಸಮಸ್ಯೆ ಇದ್ದರೆ ಸುಧಾರಣೆ ಕಂಡು ಬರುವುದು. ವೈವಾಹಿಕ ಜೀವನ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 8
ಶುಭ ದಿನ: ಭಾನುವಾರ

ಮೀನ ರಾಶಿ
ಈ ವಾರ ನಿಮಗೆ ಅನುಕೂಲಕರವಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಕೆಲಸದಲ್ಲಿ ಕೆಲ ಸವಾಲುಗಳು ಎದುರಾಗಬಹುದು, ಅದರೆ ಅದನ್ನೆಲ್ಲಾ ಚೆನ್ನಾಗಿ ನಿಭಾಯಿಸುವುದರಿಂದ ದೊಡ್ಡ ಚಿಂತೆ ಇರಲ್ಲ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆರೋಗ್ಯವು ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ 12
ಶುಭ ದಿನ: ಮಂಗಳವಾರ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

X
Desktop Bottom Promotion