ವಾರ ಭವಿಷ್ಯ(ಸೆಪ್ಟೆಂಬರ್‌ 28-ಅಕ್ಟೋಬರ್ 5): ಈ ವಾರದ 12 ರಾಶಿಗಳ ಭವಿಷ್ಯ

ವಾರ ಭವಿಷ್ಯ ಪ್ರಕಾರ ಈ ವಾರ ನಿಮಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ

ಈ ವಾರ ನಿಮಗೆ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ವೃತ್ತಿ ಬದುಕು ಚೆನ್ನಾಗಿರಲಿದೆ. ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಸರಿಯಾದ ಫಲಿತಾಂಶ ಪಡೆಯಬಹುದು.

weekly horoscope prediction

ಬೇರೆ ಕಡೆ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿಯಲ್ಲಿ ನಿಮ್ಮ ಪ್ರಯತ್ನಕ್ಕೆ ಫಲ ಸಿಗಲಿದೆ. ಆರ್ಥಿಕವಾಗಿ ಈ ಅವಧಿ ನಿಮಗೆ ಉತ್ತಮವಾಗಿದೆ. ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕು. ಈ ಅವಧಿಯಲ್ಲಿ ವೈವಾಹಿಕ ಬದುಕು ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 28
ಶುಭ ದಿನ: ಸೋಮವಾರ

ವೃಷಭ ರಾಶಿ

ನೀವು ಕೆಲಸದ ಕಡೆಗೆ ಗಮನಹರಿಸಬೇಕು, ನಿಮಗೆ ವಹಿಸಿರುವ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ವೃತ್ತಿ ಬದುಕಿನಲ್ಲಿ, ಉದ್ಯೋಗದಲ್ಲಿ ಪ್ರಗತಿ ದೊರೆಯಲಿದೆ. ಇನ್ನು ಹಣದ ಬಗ್ಗೆಸ್ವಲ್ಪ ಜಾಗ್ರತೆವಹಿಸಬೇಕು, ಖರ್ಚು ಹೆಚ್ಚಿರಬಹುದು. ನೀವು ಖರ್ಚು ನಿಯಂತ್ರಿಸದಿದ್ದರೆ ಬಜೆಟ್‌ನಲ್ಲಿ ಅಸಮತೋಲನ ಉಂಟಾಗಬಹುದು.
ಕುಟುಂಬ ಜೀವನ ಈ ಅವಧಿಯಲ್ಲಿ ಸಂತೋಷದಿಂದ ಕೂಡಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ. ಇನ್ನು ಮನೆಯಲ್ಲಿ ಅವಾಹಿತರಿದ್ದು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ವಾರ ಉತ್ತಮವಾಗಿದೆ. ಈ ಅವಧಿಯಲ್ಲಿ ಆರೋಗ್ಯ ಕೂಡ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 8
ಶುಭ ದಿನ: ಮಂಗಳವಾರ


ಮಿಥುನ ರಾಶಿ

ಈ ವಾರ ನಿಮಗೆ ಉತ್ತಮವಾಗಿರಲಿದೆ, ಈ ಸಮಯದಲ್ಲಿ ನಿಮ್ಮ ಕೆಲಸವು ಯೋಜನೆಯಂತೆ ಪೂರ್ಣಗೊಳ್ಳುವುದರಿಂದ ಹೆಚ್ಚು ಚಿಂತೆಯಿಲ್ಲದೆ ಕಳೆಯಬಹುದು. ಈ ಅವಧಿಯಲ್ಲಿ ನೀವು ತಗೆಗೆದುಕೊಳ್ಳುವ ನಿರ್ಧಾರ ತುಂಬಾ ಪ್ರಯೋಜನಕಾರರಿಯಾಗಿರಲಿದೆ. ಈ ವಾರ ನಿಮಗೆ ಆರ್ಥಿಕವಾಗಿ ಉತ್ತಮವಾಗಿರಲಿದೆ.

ಆರೋಗ್ಯ ಉತ್ತಮವಾಗಿರಲಿದೆ. ಇನ್ನು ತುಂಬಾ ಸಮಯದಿಂದ ನೀವು ಬಯಸಿದ ವಸ್ತು ಖರೀದಿಸಲು ಸಾಧ್ಯವಾಗುವುದು. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿರಲಿದೆ. ಈ ಅವಧಿಯಲ್ಲಿ ಸಮಯ ವ್ಯರ್ತ ಮಾಡದೆ ಅಧ್ಯಯನದ ಕಡೆಗೆ ಗಮನಹರಿಸಿದರೆ ಹೆಚ್ಚಿನ ಪ್ರಯೋಜನ ಪಡೆಯುವಿರಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 22
ಶುಭ ದಿನ: ಗುರುವಾರ

ಕರ್ಕ ರಾಶಿ

ಕರ್ಕ ರಾಶಿಯವರು ಈ ಸಮಯದಲ್ಲಿ ಜಾಗ್ರತೆವಹಿಸಬೇಕು, ವೃತ್ತಿ ಬದುಕಿನಲ್ಲಿ, ವಯಯಕ್ತಿಕ ಬದುಕಿನಲ್ಲಿ ಕೆಲ ಸವಾಲುಗಳು ಕಂಡು ಬರುವುದು. ಆದರೆ ಹೆಚ್ಚು ಚಿಂತೆ ಪಡಬೇಕಾಗಿಲ್ಲ, ನಿಮಗೆ ಆ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವುದು, ಆದ್ದರಿಂದ ಆತ್ಮವಿಶ್ವಾಸದಿಂದ ಎಲ್ಲವನ್ನು ಎದುರಿಸಲು ಪ್ರಯತ್ನಿಸಬೇಕು. ವಾರದ ಕೊನೆಯಲ್ಲಿ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ.
ಆರ್ಥಿಕವಾಗಿ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ, ಹಾಗಾಗಿ ಹಣವನ್ನು ನೋಡಿಕೊಂಡು ಖರ್ಚು ಮಾಡಿದರೆ ಒಳ್ಳೆಯದು. ನೀವು ಖರ್ಚು ನಿಯಂತ್ರಿಸಿದರೆ ಈ ಅವಧಿಯಲ್ಲಿ ದೊಡ್ಡ ಆರ್ಥಿಕ ತೊಂದರೆ ಆಗದಂತೆ ನೋಡಿಕೊಳ್ಳಬಹುದು. ಆರೋಗ್ಯ ಉತ್ತಮವಾಗಿರಲಿದೆ.

ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 4
ಶುಭ ದಿನ: ಭಾನುವಾರ


ಸಿಂಹ ರಾಶಿ

ಈ ಉದ್ಯೋಗಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ವೃತ್ತಿ ಬದುಕು ಚೆನ್ನಾಗಿರಲಿದೆ. ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತೀರಿ, ಈ ಅವಧಿಯಲ್ಲಿ ನೀವು ಊಹಿಸಿರುವುದಕ್ಕಿಂತಲೂ ಹೆಚ್ಚಿನ ಲಾಭ ಗಳಿಸುವಿರಿ.

ವೈವಾಹಿಕ ಬದುಕು ಚೆನ್ನಾಗಿರಲಿದೆ, ನಿಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇರಲಿದೆ, ನೀವು ನಿಮ್ಮ ಸಂಗಾತಿಗೆ ಹೆಚ್ಚಿನ ಸಮಯ ನೀಡಲು ಪ್ರಯತ್ನಿಸಬೇಕು. ಕುಟುಂಬದಲ್ಲಿ ಏನಾದರು ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ, ಪ್ರತಿಕೂಲ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಂದನೀವು ಬೆಂಬಲವನ್ನು ಪಡೆಯುತ್ತೀರಿ. ಅರೋಗ್ಯದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ.

ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 31
ಶುಭ ದಿನ: ಶುಕ್ರವಾರ

ಕನ್ಯಾ ರಾಶಿ

ಈ ವಾರ ನಿಮಗೆ ಉತ್ತಮವಾಗಿರಲಿದೆ. ಕೆಲಸದಲ್ಲಿ ಹೆಚ್ಚಿನ ಒತ್ತಡವಿರಬಹುದು, ನೀವು ಯೋಜನೆಯಂತೆ ಕೆಲಸವನ್ನು ಮಾಡಿ ಮುಗಿಸಲು ಪ್ರಯತ್ನಿಸಬೇಕು. ಕೆಲಸದ ಸ್ಥಳದಲ್ಲಿ ನೀವು ಸಮತೋಲಿತ ರೀತಿಯಲ್ಲಿ ವರ್ತಿಸಬೇಕು. ನಿಮ್ಮ ಕುಟುಂಬ ಬದುಕು ಚೆನ್ನಾಗಿರಲಿದೆ. ಇನ್ನು ಈ ಅವಧಿಯಲ್ಲಿ ಆರೋಗ್ಯ ಸಮಸ್ಯೆಯಿದ್ದರೆ ನೀವು ನಿರ್ಲಕ್ಷ್ಯ ಮಾಡಬೆಡಿ.

ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 16
ಶುಭ ದಿನ: ಬುಧವಾರ

ತುಲಾ ರಾಶಿ

ಈ ವಾರ ನಿಮ್ಮ ಕೆಲ ಸವಾಲುಗಳು ಬಗೆಹರಿಯಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯವಿದ್ದರೆ ಅದು ಬಗೆಹರಿಯಲಿದೆ, ನಿಮ್ಮೆಲ್ಲಾ ಭಿನ್ನಾಭಿಪ್ರಾಯ ಮರೆತು ಮುಂದಿನ ಬದುಕಿನ ಕಡೆಗೆ ಗಮನಹರಿಸಿ. ಆರ್ಥಿಕ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿರಲಿದೆ. ವ್ಯಾಪಾರಿಗಳಿಗೆ ಲಾಭ ದೊರೆಯಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ, ಇನ್ನು ಮನೆಯಲ್ಲಿ ಶೀಘ್ರದಲ್ಲೇ ಶುಭ ಕಾರ್ಯ ನಡೆಯಬಹುದು, ಈ ಸಮಯದಲ್ಲಿ ಆರೋಗ್ಯ ಉತ್ತಮವಾಗಿರಲಿದೆ.

ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 39
ಶುಭ ದಿನ: ಸೋಮವಾರ

ವೃಶ್ಚಿಕ ರಾಶಿ

ಈ ವಾರ ವೃಶ್ಚಿಕ ರಾಶಿಯವರು ಜಾಗ್ರತೆವಹಿಸಬೇಕು. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಉದ್ಯೋಗಿಗಳಿಗೆ ಈ ಸಮಯದಲ್ಲಿ ಕೆಲಸದ ಹೊರೆ ಅಧಿಕವಿರಲಿದೆ.
ಹಣಕಾಸಿನ ವಿಷಯಗಳಲ್ಲಿ ಜಾಗ್ರತೆವಹಿಸಬೇಕು ಹೆಚ್ಚು ಖರ್ಚು ಮಾಡಬೇಡಿ, ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.

ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 7
ಶುಭ ದಿನ: ಗುರುವಾರ

ಧನು ರಾಶಿ

ಈ ವಾರ ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದೆ. ಆರ್ಥಿಕ ಪ್ರಗತಿ ಕಂಡು ಬರುವುದು, ವ್ಯಾಪಾರ-ವ್ಯವಹಾರ ಉತ್ತಮವಾಗಿ ನಡೆಯಲಿದೆ. ಕುಟುಂಬ ಜೀವನ ಅಷ್ಟೊಂದು ಅನುಕೂಲಕರವಲ್ಲ, ತಂದೆಯ ಆರೋಗ್ಯ ದುರ್ಬಲವಾಗಿರುತ್ತದೆ. ವಾರದ ಕೊನೆಯಲ್ಲಿ ಯಾವುದೇ ಹಠಾತ್ ಖರ್ಚು ಬರಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 21
ಶುಭ ದಿನ: ಶುಕ್ರವಾರ

ಮಕರ ರಾಶಿ

ಈ ವಾರ ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ವೈಯಕ್ತಿಕ ಅಥವಾ ವೃತ್ತಿಪರ ಜೀವನವಾಗಿರಲಿ, ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಸಿಗದೆ ಕಷ್ಟವಾಗಬಹುದು. ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು. ನೀವು ಹಿರಿಯರ ಮಾತು ಪಾಲಿಸಿ. ಆರ್ಥಿಕವಾಗಿ ಈ ಅವಧಿಯಲ್ಲಿ ದೊಡ್ಡ ಸಮಸ್ಯೆ ಇರಲ್ಲ. ನಿಮ್ಮ ಶತ್ರುಗಳ ಬಗ್ಗೆ ಜಾಗರೂಕರಾಗಿರಬೇಕು. ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರುತ್ತದೆ.

ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 2
ಶುಭ ದಿನ: ಗುರುವಾರ


ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ವಾರ ಶುಭವಾಗಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಪ್ರಮುಖ ಕೆಲಸ ಈ ವಾರ ಪೂರ್ಣಗೊಳ್ಳುವ ಸೂಚನೆಯಿದೆ. ಆರ್ಥಿಕವಾಗಿ ಈ ಅವದಿ ಉತ್ತಮವಾಗಿರಲಿದೆ, ಆರೋಗ್ಯ ಕೂಡ ಚೆನ್ನಾಗಿರಲಿದೆ.

ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 17
ಶುಭ ದಿನ: ಸೋಮವಾರ

ಮೀನ ರಾಶಿ

ವೈಯಕ್ತಿಕ ಬದುಕು ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಉತ್ತಮವಾಗಿರಲಿದೆ. ಮದುವೆಗೆ ಅಡಚಣೆ ಇದ್ದರೆ ಅದು ಬಗೆಹರಿಯಲಿದೆ. ಹಣಕಾಸಿನ ದೃಷ್ಟಿಯಿಂದ ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ. ವ್ಯಾಪಾರಿಗಳಿಗೆ ಈ ವಾರ ಲಾಭದಾಯಕವಾಗಿರುತ್ತದೆ. ನೀವು ದೊಡ್ಡ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. ಒಟ್ಟಿನಲ್ಲಿ ಈ ಅವಧಿ ಉತ್ತಮವಾಗಿರಲಿದೆ.

ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 24
ಶುಭ ದಿನ: ಶನಿವಾರ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Horoscope Prediction From September 28 To October 5 In Kannada

Here is weekly horoscope prediction From September 28 To October 5 for 12 zodiac signs,
Story first published: Saturday, September 28, 2024, 15:06 [IST]
X
Desktop Bottom Promotion