ವಾರ ಭವಿಷ್ಯ: ಅಕ್ಟೋಬರ್ 12-18 ಈ ಏಳು ದಿನಗಳು 12 ರಾಶಿಗಳಿಗೆ ಹೇಗಿರಲಿದೆ?

ವೈದಿಕಶಾಸ್ತ್ರದ ಪ್ರಕಾರ ಈ ವಾರ (ಅಕ್ಟೋಬರ್ 12-18) 12 ರಾಶಿಗಳಿಗೆ ಹೇಗಿರಲಿದೆಮೇಷ ರಾಶಿ

ಈ ವಾರ ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಆರ್ಥಿಕ ದೃಷ್ಟಿಯಿಂದಲೂ ಈ ಸಮಯ ಅನುಕೂಲಕರವಾಗಿರಲಿದೆ. ಆದರೆ ಬಜೆಟ್ ಮೀರಿ ಖರ್ಚು ಮಾಡಬೇಡಿ. ವೃತ್ತಿ ಜೀವನದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ಆರೋಗ್ಯದ ಕಡೆಗೆ ಗಮನಹರಿಸಿ.

Weekly Horoscope Prediction From October 12-18 In Kannada

ವೃಷಭ ರಾಶಿ

ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯಗಳಿರಬಹುದು, ಏನೇ ಸಮಸ್ಯೆಯಿದ್ದರೆ ಕೂತು ಬಗೆಹರಿಸಲು ಪ್ರಯತ್ನಿಸಬೇಕು. ಇನ್ನು ಈ ಅವಧಿಯಲ್ಲಿ ಖರ್ಚು ಹೆಚ್ಚು ಬರಬಹುದು. ಆದರೆ ಯಾವುದೇ ಖರೀದಿಯಾದರೂ ಬಜೆಟ್ ಮೀರಿ ಹಣ ಖರ್ಚು ಮಾಡಬೇಡಿ. ವೃತ್ತಿ ಬದುಕಿನಲ್ಲಿಯೂ ಕೆಲ ಅಡೆತಡೆವಿರಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ಜ್ವರ, ಶೀತ ಹೀಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು.

ಮಿಥುನ ರಾಶಿ

ಈ ಅವಧಿ ಕುಟುಂಬ ಜೀವನದ ಕಡೆಗೆ ಹೆಚ್ಚು ಗಮನಹರಿಸಬೇಕು, ನಿಮ್ಮ ಸಂಗಾತಿಯ ಭಾವನೆಗಳನ್ನ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಆರ್ಥಿಕ ದೃಷ್ಟಿಯಿಂದ ಈ ಅವಧಿ ಉತ್ತಮವಲ್ಲ, ವೃತ್ತಿ ಬದುಕಿನಲ್ಲಿ ಕೆಲ ಅಡೆತಡೆಗಳು ಎದುರಾಗಬಹುದು. ಆರೋಗ್ಯದ ದೃಷ್ಟಿಯಿಂದ ಈ ವಾರ ಉತ್ತಮವಾಗಿರಲಿದೆ.

ಕರ್ಕ ರಾಶಿ

ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯಗಳಿರಲಿದೆ. ಕುಟುಂಬದಲ್ಲಿ ಸಮಸ್ಯೆಯಿದ್ದರೆ ಅದು ಹೆಚ್ಚಾಗಲು ಬಿಡಬೇಡಿ. ಆರ್ಥಿಕವಾಗಿ ಈ ಅವಧಿ ಅನಕೂಲಕರವಲ್ಲ, ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬೇರೆಯವರ ಮಾತು ಕೇಳಿ ತೆಗೆದುಕೊಳ್ಳಬೇಡಿ. ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ಆರೋಗ್ಯದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ.

ಸಿಂಹ ರಾಶಿ

ಈ ವಾರ ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ, ಕುಟುಂಬದಲ್ಲಿ ಸಂತೋಷದ ವಾತಾವರಣಲಿದೆ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ, ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತೀರಿ. ವೃತ್ತಿ ಜೀವನ ಚೆನ್ನಾಗಿರಲದೆ, ಈ ವಾರ ಆರೋಗ್ಯ ದುರ್ಬಲವಾಗಿರಬಹುದು, ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.

ಕನ್ಯಾ ರಾಶಿ

ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ, ನಿಮ್ಮ ಸಂಬಂಧ ಬಲವಾಗಲಿದೆ. ಆರ್ಥಿಕವಾಗಿಯೂ ಉತ್ತಮವಾಗಿರಲಿದೆ, ಆರ್ಥಿಕ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದ. ಆದರೆ ಹಣದ ಬಗ್ಗೆ ಹೇಳುವುದಾದರೆ ಬಜೆಟ್‌ ಪ್ಲ್ಯಾನ್‌ ಮಾಡಿ ಅದರಂತೆ ಖರ್ಚು ಮಾಡುವುದು ಒಳ್ಳೆಯದು. ವೃತ್ತಿ ಬದುಕಿನಲ್ಲಿ ಅಭದ್ರತೆ ಕಾಡಬಹುದು. ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರಲಿದೆ.

ತುಲಾ ರಾಶಿ

ನಿಮ್ಮ ವೈಯಕ್ತಿಕ ಬದುಕು ಚೆನ್ನಾಗಿರಲಿದೆ, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಸಂಬಂಧ ಚೆನ್ನಾಗಿರಲಿದೆ. ಆರ್ಥಿಕ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತೀರಿ, ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ. ವೃತ್ತಿ ಜೀವನ ಉತ್ತಮವಾಗಿರಲಿದೆ. ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರಲಿದೆ.

ವೃಶ್ಚಿಕ ರಾಶಿ
ವೈಯಕ್ತಿಕ ಜೀವನದಲ್ಲಿ ಕೆಲ ಸಮಸ್ಯೆ ಎದುರಾಗಬಹುದು, ನಿಮ್ಮ ನಡುವೆ ಕೆಲ ಭಿನ್ನಾಭಿಪ್ರಾಯವಿರಬಹುದು. ಆರ್ಥಿಕವಾಗಿ ಈ ಅವಧಿ ಉತ್ತಮವಲ್ಲ. ಇನ್ನು ಕೆಲಸದ ಜಾಗದಲ್ಲಿ ನಿಮ್ಮ ಕೆಲಸದತ್ತ ಗಮನಹರಿಸಿ, ಕುರುಡಾಗಿ ಯರನ್ನೂ ನಂಬಬೇಡಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ದುಬಾರಿಯಾಗಬಹುದು.

ಧನು ರಾಶಿ

ಕೆಲವೊಂದು ಪ್ರತಿಕೂಲ ಸಂದರ್ಭದಲ್ಲಿ ನಿಮ್ಮ ಸಂಗಾತಿಯ ಬೆಂಬಲ ಸಿಗಲಿದೆ. ಇನ್ನು ಹಣಕ್ಕೆ ಸಂಬಂಧಿಸಿದ ನಿರ್ಧಾರ ಆಲೋಚಿಸಿ ತೆಗೆದುಕೊಳ್ಳಬೇಕು, ಆರ್ಥಿಕವಾಗಿ ಉತ್ತಮವಾಗಿರಲಿದೆ. ವೃತ್ತಿ ಬದುಕಿನಲ್ಲಿ ಒತ್ತಡವಿರಲಿದೆ,ಆದರೆ ನಿಮಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರೋಗ್ಯದ ಕಡೆಗೆ ಗಮನಹರಿಸಿ.

ಮಕರ ರಾಶಿ

ಮಕರ ರಾಶಿಯವರಿಗೆ ಈ ಅವಧಿ ಉತ್ತಮವಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಗಿರಲಿದೆ. ಹಣದ ವಿಷಯದಲ್ಲಿ ಜಾಗ್ರತೆವಹಿಸಬೇಕು. ಹಣದ ವಿಷಯದಲ್ಲಿ ಕುರುಡಾಗಿ ನಂಬಬೇಡಿ. ಖರ್ಚು ಮಿತಿಯಲ್ಲಿ ಮಾಡಿದರೆ ಒಳ್ಳೆಯದು. ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ಮಾನಸಿಕ ಒತ್ತಡ ಹೆಚ್ಚರಲಿದೆ.

ಕುಂಭ ರಾಶಿ

ಕುಟುಂಬ ಬದುಕಿನಲ್ಲಿ ಒತ್ತಡವಿರಬಹುದು. ನಿಮ್ಮ ಕುಟುಂಬದಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೆ ಅದನ್ನು ಬಗೆಹರಿಲು ಪ್ರಯತ್ನಿಸಬೇಕು, ಆರ್ಥಿಕವಾಗಿ ಈ ಅವಧಿ ತುಂಬ ಚೆನ್ನಾಗಿರಲಿದೆ. ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ.

ಮೀನ ರಾಶಿ

ಸಂಬಂಧದಲ್ಲಿ ಮೂರನೇಯ ವ್ಯಕ್ತಿ ಹಸ್ತಕ್ಷೇಪ ಮಾಡಲು ಬಿಡಬೇಡಿ. ಸಂಗಾತಿಯ ಜೊತೆ ಏನೇ ಭಿನನ್ನಾಭಿಪ್ರಾಯ ಉಂಟಾದರೆ ಅದನ್ನು ಮಾತನಾಡಿ ಬಗೆಹರಿಸಲು ಪ್ರಯತ್ನಿಸಿ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ. ವೃತ್ತಿ ಜೀವನದಲ್ಲಿ ಅತ್ಯುತ್ತಮವಾದ ಅವಕಾಶ ಸಿಗಲಿದೆ. ಕೆಲಸ ಹುಡುಕುತ್ತಿದ್ದರೆ ಈ ಅವಧಿಯಲ್ಲಿ ಕೆಲಸ ಸಿಗಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಮೈಕೈ ನೋವಿನ ಸಮಸ್ಯೆವಿರಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Horoscope Prediction From October 12-18 In Kannada

Here is weekly horoscope prediction from October 12-18 for 12 zodiac signs read on..
X
Desktop Bottom Promotion