Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾರ ಭವಿಷ್ಯ: ವೈದಿಕ ಶಾಸ್ತ್ರದ ಪ್ರಕಾರ ಈ ವಾರ 12 ರಾಶಿಗಳಿಗೆ ಹೇಗಿರಲಿದೆ?
ಗ್ರಹಗತಿಗಳ ಸ್ಥಾನದ ಪ್ರಕಾರ ಈ ವಾರ ನಿಮಗೆ ಹೇಗಿರಲಿದೆ ನೋಡೋಣ ಬನ್ನಿ:
ಮೇಷ ರಾಶಿ
ಈ ವಾರ ನಿಮಗೆ ತುಂಬಾ ಚೆನ್ನಾಗಿರಲಿದೆ. ಗ್ರಹಗಳ ಸ್ಥಾನವು ನಿಮಗೆ ಅನುಕೂಲಕರ ಸ್ಥಾನದಲ್ಲಿ ಇರುವುದರಿಂದ ಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು, ಈ ಸಮಯದಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ಸಿಗುವುದು.

ಆರ್ಥಿಕವಾಗಿ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ, ನೀವು ಖರ್ಚು ನೋಡಿಕೊಂಡು ಮಾಡಿದರೆ ಒಳ್ಳೆಯದು. ಈ ಅವಧಿಯಲ್ಲಿ ನೀವು ನಿಮಗೆ ಗೊತ್ತಿಲ್ಲದ ವ್ಯಕ್ತಿಯನ್ನು ನಂಬಲು ಬಿಡದಿರಿ. ಆರೋಗ್ಯ ಚೆನ್ನಾಗಿರಲಿದೆ.
ಈ ವಾರ ಅದೃಷ್ಟದ ಬಣ್ಣ: ಬಿಳಿ, ಅದೃಷ್ಟದ ಸಂಖ್ಯೆ: 12, ಈ ವಾರ ಏನಾದೂ ಹೊಸ ಕಾರ್ಯ ಮಾಡುವುದಾರೆ ಶುಭ ದಿನ: ಶುಕ್ರವಾರವಾಗಿದೆ
ವೃಷಭ ರಾಶಿ
ಈ ವಾರ ನಿಮಗೆ ಶುಭವಾಗಿದೆ. ಕೆಲಸ ಕಾರ್ಯಗಳಲ್ಲಿ ನೀವು ಉತ್ತಮ ಫಲ ಪಡೆಯುತ್ತೀರಿ. ಆದಾಯದ ದೃಷ್ಟಿಯಿಂದಲೂ ಈ ಅವಧಿ ಅನುಕೂಲಕರವಾಗಿದೆ. ಬೇರೆ ಕಡೆ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ಸಮಯ ಉತ್ತಮವಾಗಿದೆ. ಉದ್ಯಮಿಗಳಿಗೆ ಈ ಸಮಯ ತುಂಬಾ ಚೆನ್ನಾಗಿರಲಿದೆ. ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದ ಪೂರ್ಣಗೊಳ್ಳಲಿದೆ. ಈ ವಾರ ಕುಟುಂಬದ ಜೊತೆಗೆ ಸಂತೋಷದಿಂದ ಕಾಲ ಕಳೆಯುತ್ತೀರಿ, ಆರೋಗ್ಯ ಚೆನ್ನಾಗಿರಲಿದೆ.
ಈ ವಾರ ನಿಮಗೆ ಅದೃಷ್ಟದ ಬಣ್ಣ: ನೀಲಿ, ಅದೃಷ್ಟದ ಬಣ್ಣ ಸಂಖ್ಯೆ: 9, ಶುಭ ದಿನ: ಭಾನುವಾರವಾಗಿದೆ
ಮಿಥುನ ರಾಶಿ
ಈ ವಾರ ತುಂಬಾ ಚೆನ್ನಾಗಿರಲಿದೆ, ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ, ವ್ಯಾಪಾರಿಗಳು ಲಾಭ ಗಳಿಸಲು ಅನೇಕ ಹೊಸ ಅವಕಾಶ ಪಡೆಯುತ್ತೀರಿ, ವೈವಾಹಿಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ದೂರಾಗಲಿದೆ, ನಿಮ್ಮ ನಡುವೆ ಉತ್ತಮ ಬಾಂಧವ್ಯ ಇರಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ನೀವು ಆರೋಗ್ಯದ ಕಡೆಗೆ ಗಮನಹರಿಸಿ.
ಈ ವಾರ ಅದೃಷ್ಟದ ಬಣ್ಣ: ಆಕಾಶ ನೀಲಿ, ಅದೃಷ್ಟದ ಸಂಖ್ಯೆ: 28, ಈ ವಾರ ಶುಭ ದಿನ: ಶನಿವಾರ
ಕರ್ಕ ರಾಶಿ
ಈ ವಾರ ನೀವು ಜಾಗ್ರತೆವಹಿಸಿ, ವೃತ್ತಿ ಸಂಬಂಧಿಸಿದ ಸಮಸ್ಯೆಯನ್ನು ಗಡಿಬಿಡಿಯಿಂದ ತೆಗೆದುಕೊಳ್ಳಬೇಡಿ. ವ್ಯಾಪಾರಿಗಳು ಕೂಡ ತುಂಬಾನೇ ಜಾಗ್ರತೆವಹಿಸಬೇಕು. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ ನೀವು ನಿಮ್ಮ ನಡುವಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. ಇನ್ನು ಆರ್ಥಿಕವಾಗಿ ನೋಡುವುದಾದರೆ ಈ ವಾರ ಖರ್ಚು ಹೆಚ್ಚಿರಲಿದೆ, ಆರೋಗ್ಯಕ್ಕಾಗಿ ಯೋಗ, ಧ್ಯಾನ ಮಾಡುವುದು ಒಳ್ಳೆಯದು.
ಈ ವಾರ ನಿಮಗೆ ಅದೃಷ್ಟದ ಬಣ್ಣ: ಮರೂನ್, ಅದೃಷ್ಟದ ಸಂಖ್ಯೆ 11, ಅದೃಷ್ಟದ ದಿನ ಸೋಮವಾರವಾಗಿದೆ.
ಸಿಂಹ ರಾಶಿ
ಈ ವಾರ ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ನೀವು ನಕರಾತ್ಮಕ ವಿಷಯಗಳ ಬಗ್ಗೆ ಗಮನಹರಿಸದೆ, ಸಕಾರಾತ್ಮಕ ಅಂಶಗಳನ್ನು ಪರಿಗಣಿಸಬೇಕು. ಆಮದು-ರಫ್ತು ವ್ಯವಹಾರ ಮಾಡುವುದಾದರೆ ಜಾಗ್ರತೆವಹಿಸಿ, ಇನ್ನು ನೀವು ಕೆಲಸದ ಕಡೆಗೆ ತುಂಬಾನೇ ಗಮನಹರಿಸಬೇಕು. ಸಂಬಂಧದ ಬಗ್ಗೆ ಹೇಳುವುದಾದರೆ ನಿಮ್ಮ ಮಾತಿನಿಂದ ನೋವಾಗದಂತೆ ನೋಡಿಕೊಳ್ಳಿ.
ಈ ದಿನ ಅದೃಷ್ಟದ ಬಣ್ಣ: ಕಂದು, ಅದೃಷ್ಟದ ಸಂಖ್ಯೆ: 5, ಈ ವಾರ ನಿಮಗೆ ಶುಭ ದಿನ, ಬುಧವಾರ
ಕನ್ಯಾ ರಾಶಿ
ಈ ವಾರ ಆರ್ಥಿಕವಾಗಿ ನೋಡುವುದಾದರೆ ಈ ವಾರ ತುಂಬಾ ಚೆನ್ನಾಗಿರಲಿದೆ. ಆರ್ಥಿಕ ತೊಂದರೆಗಳು ಇರಲ್ಲ, ಖರ್ಚು ಕಡಿಮೆ ಇರಲಿದೆ, ಇನ್ನು ನೀವು ಬೇರೆ ಕಡೆ ಕೆಲಸ ಹುಡುಕುತ್ತಿದ್ದರೆ ಈ ಸಮಯ ನಿಮಗೆ ಉತ್ತಮವಾಗಿದೆ. ಆಸ್ತಿ ಸಂಬಂಧಿತ ವ್ಯವಹಾರಕ್ಕೆ ಈ ಅವಧಿ ಉತ್ತಮವಾಗಿದೆ. ಮನೆಯಲ್ಲಿ ವಾತಾವರಣ ತುಂಬಾ ಚೆನ್ನಾಗಿರಲಿದೆ. ಮನೆಯಲ್ಲಿ ಅವಾಹಿತರು ಇದ್ದರೆ ಮದುವೆ ಪ್ರಸ್ತಾಪ ಬರಬಹುದು. ಕೆಲಸ ಅಂತ ನಿಮ್ಮ ಆರೋಗ್ಯ ನಿರ್ಲಕ್ಷ್ಯ ಮಾಡದಿರಿ.
ಈ ವಾರ ಅದೃಷ್ಟದ ಬಣ್ಣ: ಕಿತ್ತಳೆ, ಅದೃಷ್ಟದ ಸಂಖ್ಯೆ: 32, ಈ ವಾರ ಶುಭ ದಿನ: ಭಾನುವಾರ
ತುಲಾ ರಾಶಿ
ಈ ವಾರ ಆರೋಗ್ಯ ಹಾಗೂ ಆರ್ಥಿಕ ವಿಷಯದಲ್ಲಿ ಜಾಗ್ರತೆವಹಿಸಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಅಲ್ಲದೆ ಖರ್ಚು ಕೂಡ ಅಧಿಕವಿರಲಿದೆ, ಅಲ್ಲದೆ ಆದಾಯ ಕೂಡ ಸರಿಯಾಗಿರಲ್ಲ, ನೀವು ಹಣದ ನಿರ್ಧಾರಗಳನ್ನು ತುಂಬಾ ಜಾಗ್ರತೆಯಿಂದ ತೆಗೆದುಕೊಳ್ಳಬೇಕು. ಹೆಚ್ಚು ಖರ್ಚು ಮಾಡಲು ಹೋಗದಿರಿ. ವೈವಾಹಿಕ ಬದುಕಿನಲ್ಲಿ ಆಕರ್ಷಣೆ ಚೆನ್ನಾಗಿರಲಿದೆ.
ಈ ವಾರ ಅದೃಷ್ಟದ ಬಣ್ಣ: ಬಿಳಿ, ಅದೃಷ್ಟದ ಸಂಖ್ಯೆ: 8, ಈ ವಾರ ಶುಭ ದಿನ: ಶುಕ್ರವಾರ
ವೃಶ್ಚಿಕ ರಾಶಿ
ಉದ್ಯೋಗಿಗಳು ಈ ವಾರ ತುಂಬಾ ಶ್ರದ್ಧೆಯಿಂದ ಕೆಲಸ ಮಾಡಬೇಕು. ಹೆಚ್ಚಿನ ಜವಾಬ್ದಾರಿವಹಿಸಬೇಕು, ಆರ್ಥಿಕ ಸಮಸ್ಯೆ ಹೆಚ್ಚಿರಲಿದೆ, ಅಲ್ಲದೆ ಈ ಅವಧಿಯಲ್ಲಿ ಮಾನಸಿಕ ಒತ್ತಡ ಅಧಿಕವಿರಲಿದೆ, ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆಸ್ತಿ ಸಂಬಂಧಿಸಿದ ವ್ಯವಹಾರದಲ್ಲಿ ಲಾಭ ಗಳಿಸುತ್ತೀರಿ, ಆರೋಗ್ಯದ ಕಡೆಗೆ ಗಮನಹರಿಸಿ.
ಈ ವಾರ ಅದೃಷ್ಟದ ಬಣ್ಣ: ಗುಲಾಬಿ, ಈ ವಾರ ಅದೃಷ್ಟದ ಸಂಖ್ಯೆ: 10, ಈ ವಾರ ಶುಭ ದಿನ: ಮಂಗಳವಾರ
ಧನು ರಾಶಿ
ಪ್ರೇಮಿಗಳಿಗೆ ತುಂಬಾನೇ ವಿಶೇಷವಾಗಿರಲಿದೆ, ನಿಮ್ಮ ಸಂಬಂಧಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಅವಧಿ ತುಂಬಾ ಮುಖ್ಯವಾಗಿದೆ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ, ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುವುದು. ಇನ್ನು ಈ ಅವಧಿಯಲ್ಲಿ ಸಾಲ ತೀರಿಸಲು ಸಾಧ್ಯವಾಗುವುದು. ಆರೋಗ್ಯ ಚೆನ್ನಾಗಿರಲಿದೆ, ಕೆಲಸ ಹುಡುತ್ತಿದ್ದರೆ ಈ ಅವಧಿಯಲ್ಲಿ ಸಕರಾತ್ಮಕ ಉತ್ತರ ಪಡೆಯುತ್ತೀರಿ, ಇನ್ನು ಸ್ವಂತ ವ್ಯವಹಾರ ಮಾಡುವುದಾದರೆ ಅದರ ಪ್ರಾರಂಭಕ್ಕೆ ಈ ಅವಧಿ ಉತ್ತಮವಾಗಿದೆ.
ಈ ವಾರ ಅದೃಷ್ಟದ ಬಣ್ಣ: ಹಳದಿ, ಈ ವಾರ ಅದೃಷ್ಟದ ಸಂಖ್ಯೆ: 27, ಈ ವಾರ ಶುಭ ದಿನ: ಶುಕ್ರವಾರ
ಮಕರ ರಾಶಿ
ಈ ವಾರ ನಿಮಗೆ ಹೊಸ ಸವಾಲುಗಳು ಬರಬಹುದು, ಆದರೆ ಅತಿಯಾಗಿ ಚಿಂತೆ ಮಾಡದೆ ನೀವು ಮಾಡಬೇಕಾಗಿರುವ ಕೆಲಸದ ಕಡೆಗೆ ಗಮನಹರಿಸಿ. ನಿಮ್ಮ ವ್ಯವಹಾರ ನಿರ್ಧಾರಗಳನ್ನು ಚೆನ್ನಾಗಿ ಯೋಚಿಸಿ ಮಾಡಿ, ಈ ಏಳು ದಿನಗಳು ಉದ್ಯೋಗಿಗಳಿಗೆ ತುಂಬಾ ಕಾರ್ಯನಿರತವಾಗಿರುತ್ತದೆ. ನೀ ತರಾತುರಿಯಲ್ಲಿ ಯಾವುದೇ ಕೆಲಸವನ್ನು ಮಾಡಬೇಡಿ, ಕುಟುಂಬ ಜೀವನದಲ್ಲಿ ಸುಧಾರಣೆ ಕಂಡು ಬರುವುದು, ಆರೋಗ್ಯ ಸಮಸ್ಯೆಯಿದ್ದಾಗ ನಿರ್ಲಕ್ಷ್ಯ ಬೇಡ.
ಈ ವಾರ ಅದೃಷ್ಟದ ಬಣ್ಣ: ಕೆಂಪು, ಅದೃಷ್ಟದ ಸಂಖ್ಯೆ:42, ಈ ವಾರ ಶುಭ ದಿನ: ಮಂಗಳವಾರ
ಕುಂಭ ರಾಶಿ
ವಿದ್ಯಾರ್ಥಿಗಳಾಗಿದ್ದರೆ ಸಮಯ ವ್ಯರ್ಥ ಮಾಡದಿರಿ. ಹಣಕಾಸಿನ ವಿಷಯಗಳಲ್ಲಿ ನೀವು ಹೆಚ್ಚು ಜಾಗರೂಕರಾಗಿರಬೇಕು. ಉದ್ಯೋಗಿಗಳಿಗೆ ಈ ವಾ ತುಂಬಾ ಉತ್ತಮವಾಗಿದೆ. ಆರ್ಥಿಕವಾಗಿಯೂ ಚೆನ್ನಾಗಿದೆ. ಈ ಸಮಯದಲ್ಲಿ ಲಾಭ ಮತ್ತು ನಷ್ಟದ ಬಗ್ಗೆ ಎಚ್ಚರಿಕೆಯಿಂದ ಯೋಚಿಸಬೇಕು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ಈ ವಾರ ಅದೃಷ್ಟದ ಬಣ್ಣ: ಹಸಿರು, ಅದೃಷ್ಟದ ಸಂಖ್ಯೆ: 16, ಈ ವಾರ ಶುಭ ದಿನ: ಸೋಮವಾರ
ಮೀನ ರಾಶಿ
ಈ ವಾರ ನಿಮಗೆ ಶುಭವಾಗಿದೆ, ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಸಿಗಲಿದೆ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಈ ವಾರ ಸಕರಾತ್ಮಕ ಪ್ರಯೋಜನ ಸಿಗಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ, ಶಾಂತಿ ಇರುತ್ತದೆ. ತಂದೆಯ ಆರೋಗ್ಯ ಸುಧಾರಿಸಲಿದೆ. ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸುತ್ತಿದ್ದರೆ, ನೀವು ಯಶಸ್ಸನ್ನು ಪಡೆಯಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ನೀವು ಕೋಪ ಮತ್ತು ಒತ್ತಡದಿಂದ ದೂರವಿದ್ದರೆ ಎಲ್ಲಾ ರೀತಿಯಿಂದಲೂ ಒಳ್ಳೆಯದು.
ಈ ವಾರ ಅದೃಷ್ಟದ ಬಣ್ಣ: ಗಾಢ ಹಳದಿ ಅದೃಷ್ಟದ ಸಂಖ್ಯೆ: 11, ಶುಭ ದಿನ: ಗುರುವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications