Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ವಾರ ಭವಿಷ್ಯ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ(ಜುಲೈ 26ರಿಂದ ಆಗಸ್ಟ್ 2) ನಿಮಗೆ ಹೇಗಿರಲಿದೆ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರದ ರಾಶಿಫಲ ನೋಡೋಣ:
ಮೇಷ ರಾಶಿ
ಈ ವಾರ ನಿಮಗೆ ಉತ್ತಮವಾಗಿದೆ, ಈ ಸಮಯ ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ. ಈ ಸಮಯದಲ್ಲಿ ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತಿರಿ. ವೃತ್ತಿ ಬದುಕು ಇರಲಿ, ವೈಯಕ್ತಿಕ ಬದುಕು ಅಗಿರಲಿ ಈ ಸಮಯ ತುಂಬಾ ಉತ್ತಮವಾಗಿರಲಿ. ವ್ಯಾಪಾರಿಗಳು ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ಕುಟುಂಬ ಜೀವನ ಚೆನ್ನಾಗಿರಲಿದೆ, ಈ ವಾರ ಆರ್ಥಿಕವಾಗಿ ತುಂಬಾ ಉತ್ತಮವಾಗಿರಲಿದೆ.
ಈ ವಾರ ನಿಮಗೆ ಅದೃಷ್ಟ ಬಣ್ಣ: ಗುಲಾಬಿ, ಶುಭ ದಿನ ಗುರುವಾರ, ಅದೃಷ್ಟದ ಸಂಖ್ಯೆ 19 ಆಗಿದೆ.

ವೃಷಭ ರಾಶಿ
ಈ ವಾರ ನಿಮಗೆ ಮಿಶ್ರಫಲ, ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ನಿರ್ಲಕ್ಷ್ಯ ಮಾಡಬೇಡಿ, ಕೆಲಸ-ಕಾರ್ಯದ ದೃಷ್ಟಿಯಿಂದ ಈ ಸಮಯ ನಿಮಗೆ ತುಂಬಾನೇ ಉತ್ತಮವಾಗಿದೆ, ಉದ್ಯೋಗಿಗಳಿಗೆ ಕೆಲಸದ ಒತ್ತಡ ಅಧಿಕವಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರ್ಥಿಕವಾಗಿ ಯಾವುದೇ ಸಮಸ್ಯೆ ಇರಲ್ಲ, ಆದರೆ ತುಂಬಾ ಖರ್ಚು ಮಾಡಲು ಹೋಗಬೇಡಿ. ಕೆಲಸದ ಒತ್ತಡ ಆರೋಗ್ಯದ ಮೇಲೂ ಪರಿಣಾಮ ಬೀರುವುದು.
ಈ ವಾರ ನಿಮಗೆ ಅದೃಷ್ಟದ ಬಣ್ಣ: ಕಂದು, ಅದೃಷ್ಟ ಸಂಖ್ಯೆ: 22, ಸೊಮವಾರ ಶುಭದಿನವಾಗಿದೆ.
ಮಿಥುನ ರಾಶಿ
ಮಿಥುನ ರಾಶಿಯವರು ಈ ವಾರ ಜಾಗ್ರತೆವಹಿಸಿ, ಆರೋಗ್ಯ ನಿರ್ಲಕ್ಷ್ಯ ಮಾಡಿದರೆ ತುಂಬಾನೇ ಕಷ್ಟ ಅನುಭವಿಸಬೇಕಾಗುತ್ತದೆ. ಕೆಲಸದ ಜೊತೆಗೆ ನೀವು ನಿಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕು. ಕೆಲಸದ ಜಾಗದಲ್ಲಿ ತಾಳ್ಮೆಯಿಂದ ವರ್ತಿಸಿ . ವೃತ್ತಿ ಜೀವನದ ಬಗ್ಗೆ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ವೈವಾಹಿಕ ಜೀವನ ಚೆನ್ನಾಗಿರಲಿದೆ.
ಈ ವಾರ ನಿಮಗೆ ಅದೃಷ್ಟದ ಬಣ್ಣ: ಕೆಂಪು, ಅದೃಷ್ಟದ ಸಂಖ್ಯೆ 30, ಅದೃಷ್ಟದ ದಿನ ಶನಿವಾರವಾಗಿದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ವಾರ ಆರ್ಥಿಕವಾಗಿ ಉತ್ತಮವಾಗಿದೆ, ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ಅವಾಹಿತರಿಗೆ ಈ ವಾರ ಮದುವೆ ಪ್ರಸ್ತಾಪ ಬರಲಿದೆ. ಕುಟುಂಬದಲ್ಲಿ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ. ವ್ಯಾಪಾರಿಗಳು ಲಾಭಕ್ಕಾಗಿ ಶಾರ್ಟ್‌ಕಟ್ ಅನುಸರಿಸಬೇಡಿ. ಈ ಅವಧಿಯಲ್ಲಿ ಆರೋಗ್ಯ ಚೆನ್ನಾಗಿರಲಿದೆ.
ಈ ವಾರ ನಿಮಗೆ ಅದೃಷ್ಟದ ಬಣ್ಣ: ಹಳದಿ, ಅದೃಷ್ಟದ ಸಂಖ್ಯೆ: 8, ಶುಭ ದಿನ ಮಂಗಳಕರವಾಗಿದೆ.
ಸಿಂಹ ರಾಶಿ
ಈ ವಾರದ ಆರಂಭ ಸವಾಲಿನಿಂದ ಕೂಡಿರಲಿದೆ. ನೀವು ನಿಮಗೆ ವಹಿಸಿದ ಕೆಲಸ ಕಾರ್ಯಗಳನ್ನು ನಿರ್ಲಕ್ಷ್ಯ ಮಾಡಬೇಡಿ. ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಸಮತೋಲನ ಕಾಪಾಡಲು ಪ್ರಯತ್ನಿಸಿ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ, ಹೂಡಿಕೆ ವಿಚಾರದಲ್ಲಿ ಯಾರನ್ನೂ ಕಣ್ಮುಚ್ಚಿ ನಂಬಬೇಡಿ. ಕುಟುಂಬ ಜೀವನದ ಕಡೆಗೆ ಗಮನಹರಿಸಬೇಕು, ಅದರಲ್ಲಿಯೂ ವಿವಾಹಿತರು ಸಂಗಾತಿಯ ಭಾವನೆಗಳನ್ನು ನಿರ್ಲಕ್ಷ್ಯ ಮಾಡಬೇಡಿ, ಅರೋಗ್ಯ ಜನರಲ್ಲಿದೆ.
ಈ ವಾರ ಅದೃಷ್ಟದ ಬಣ್ಣ ಮರೂನ್, ಅದೃಷ್ಟದ ಸಂಖ್ಯೆ 28, ಮಂಗಳವಾರ ಶುಭ ದಿನವಾಗಿದೆ.
ಕನ್ಯಾ ರಾಶಿ
ಈ ವಾರ ನಿಮಗೆ ಉತ್ತಮವಾಗಿದೆ, ನಿಮ್ಮ ಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳ ಸಾಧ್ಯತೆಯಿದೆ. ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನದಲ್ಲಿ ಯಶಸ್ಸು ಪಡೆಯುತ್ತೀರಿ. ವ್ಯಾಪಾರಿಗಳಿಗೂ ಈ ವಾರ ಧನಾತ್ಮಕವಾಗಿರಲಿದೆ. ಪಾಲುದಾರಿಕೆಯ ವ್ಯಾಪಾರ ಮಾಡುವವರಿಗೆ ಈ ಸಮಯ ಉತ್ತಮವಾಗಿದೆ. ಆರ್ಥಿಕವಾಗಿ ಜಾಗ್ರತೆವಹಿಸಿ ಇಲ್ಲದಿದ್ದರೆ ಹಣ ನಷ್ಟವಾಗಬಹುದು. ಆರೋಗ್ಯದ ವಿಷಯದಲ್ಲಿ ಈ ವಾರ ನಿಮಗೆ ಸರಾಸರಿಯಾಗಿರುತ್ತದೆ.
ಈ ವಾರ ಅದೃಷ್ಟದ ಬಣ್ಣ: ಆಕಾಶ ನೀಲಿ, ಅದೃಷ್ಟದ ಸಂಖ್ಯೆ: 11, ಶನಿವಾರ ಶುಭ ದಿನವಾಗಿದೆ.
ತುಲಾ ರಾಶಿ
ಈ ವಾರ ನಿಮಗೆ ಉತ್ತಮವಾಗಿದೆ. ಅದೃಷ್ಟದ ಬೆಂಬಲ ಇರುವುದರಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಯಶಸ್ಸು ಪಡೆಯುತ್ತೀರಿ. ಸರಿಯಾಗಿ ವಿಚಾರಣೆ ಮಾಡದೆ ಹಣಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಬೇಡಿ. ಆರೋಗ್ಯ ಸಮಸ್ಯೆ ಇದ್ದರೆ ಸುಧಾರಣೆ ಕಂಡು ಬರಲಿದೆ . ವೈವಾಹಿಕ ಹಾಗೂ ಕುಟುಂಬ ಜೀವನ ಚೆನ್ನಾಗಿರಲಿದೆ, ಆರೋಗ್ಯದ ಬಗ್ಗೆ ನೋಡುವುದಾದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆವಿರಬಹುದು.
ಈ ವಾರ ಅದೃಷ್ಟದ ಬಣ್ಣ: ಕಿತ್ತಳೆ, ಅದೃಷ್ಟದ ಸಂಖ್ಯೆ: 6, ಶುಭ ದಿನ: ಗುರುವಾರ
ವೃಶ್ಚಿಕ ರಾಶಿ
ಈ ರಾಶಿಯ ಉದ್ಯಮಿಗಳಿಗೆ ಈ ವಾರ ತುಂಬಾ ಚೆನ್ನಾಗಿರಲಿದೆ. ಆರ್ಥಿಕವಾಗಿ ತುಂಬಾ ಪ್ರಯೋಜನ ಪಡೆಯುತ್ತೀರಿ. ವ್ಯಾಪಾರಿಗಳು, ಅದರಲ್ಲಿಯೂ ಬಟ್ಟೆ ವ್ಯಾಪಾರಿಗಳು ಉತ್ತಮ ಲಾಭ ಗಳಿಸುತ್ತೀರಿ. ಈ ವಾರ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ನಿಮಗೆ ಉತ್ತಮವಾಗಿರುತ್ತದೆ.
ಈ ವಾರ ಅದೃಷ್ಟದ ಬಣ್ಣ:ಕೆಂಪು, ಅದೃಷ್ಟದ ಸಂಖ್ಯೆ: 14, ಶುಭ ದಿನ ಭಾನುವಾರ
ಧನು ರಾಶಿ
ಈ ವಾರದ ಆರಂಭ ನಿಮಗೆ ತುಂಬಾ ದುಬಾರಿಯಾಗಲಿದೆ. ಖರ್ಚು ಹೆಚ್ಚಿರಲಿದೆ, ಅನಾವಶ್ಯಕ ಖರ್ಚುಗಳೇ ಹೆಚ್ಚು ಬರುವುದು. ಕೆಲಸಕ್ಕೆ ಸಂಬಂಧಿಸಿದ ಒತ್ತಡ ಇರಬಹುದು. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಿರಲಿದೆ. ಮನೆಯ ಜವಾಬ್ದಾರಿಗಳನ್ನು ಪೂರೈಸುವಲ್ಲಿ ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಅವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ, ಆರೋಗ್ಯ ಚೆನ್ನಾಗಿರಲಿದೆ.
ಈ ವಾರ ಅದೃಷ್ಟದ ಬಣ್ಣ: ಪೀಚ್, ಅದೃಷ್ಟದ ಸಂಖ್ಯೆ: 26, ಶುಭ ದಿನ: ಶುಕ್ರವಾರವಾಗಿದೆ.
ಮಕರ ರಾಶಿ
ಈ ವಾರ ನಿಮಗೆ ತುಂಬಾನೇ ಶುಭವಾಗಿದೆ, ವ್ಯಾಪಾರವಿರಲಿ ನಿಮ್ಮ ಎಲ್ಲಾ ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ, ಕುಟುಂಬ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯ ಬಂದರೆ ತಾಳ್ಮೆಯಿಂದ ವರ್ತಿಸಿ ಎಂದು ಸಲಹೆ ನೀಡಲಾಗುವುದು, ಆರೋಗ್ಯದ ಬಗ್ಗೆ ಹೇಳುವುದಾದರೆ ಬೇಡದ ವಿಚಾರಗಳ ಬಗ್ಗೆ ಚಿಂತಿಸಬೇಡಿ, ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ.
ಈ ವಾರ ನಿಮಗ ಅದೃಷ್ಟದ ಬಣ್ಣ ನೇರಳೆ, ಅದೃಷ್ಟದ ದಿನ ಸೋಮವಾರವಾಗಿದೆ.
ಕುಂಭ ರಾಶಿ
ನೀವು ಸರ್ಕಾರಿ ಕೆಲಸಕ್ಕೆ ಪ್‌ರಯತ್ನಿಸುತ್ತಿದ್ದರೆ ಈ ಅವಧಿ ಉತ್ತಮವಾಗಿದೆ, ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಲಾಭ ಗಳಿಸುತ್ತೀರಿ, ಆರ್ಥಿಕವಾಗಿ ಈ ಅವಧಿ ಚೆನ್ನಾಗಿರಲಿದೆ. ನೀವು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರೆ ಮನೆಯ ವಾತಾವರಣವು ತುಂಬಾ ಚೆನ್ನಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ.
ಈ ವಾರ ನಿಮಗೆ ಅದೃಷ್ಟದ ಬಣ್ಣ ನೇರಳೆ, ಅದೃಷ್ಟದ ದಿನ: ಶನಿವಾರವಾಗಿದೆ.
ಮೀನ ರಾಶಿ
ಈ ವಾರ ನೀವು ಕೆಲ ಸವಾಲುಗಳನ್ನು ಎದುರಿಸಬಹುದು. ಆದರೆ ಅವುಗಳಿಗೆ ಕುಗ್ಗಬೇಡಿ, ಧೈರ್ಯದಿಂದ ಎದುರಿಸಿದರೆ ಗೆಲುವು ನಿಮ್ಮದಾಗುವುದು. ಈ ಅವಧಿಯಲ್ಲಿ ಕೆಲಸದ ಒತ್ತಡ ಹೆಚ್ಚಿರಲಿದೆ. ಕುಟುಂಬ ಜೀವನದಲ್ಲಿನ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಿ. ಆರೋಗ್ಯದ ಬಗ್ಗೆ ಸ್ವಲ್ಪವೂ ನಿರ್ಲಕ್ಷ್ಯ ಬೇಡ.
ಈ ವಾರ ಅದೃಷ್ಟದ ಣ್ಣ: ಹಳದಿ, ಅದೃಷ್ಟದ ಸಂಖ್ಯೆ 35, ದಿನ ಗುರುವಾರವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











