Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಾರ ಭವಿಷ್ಯ: ಈ ವಾರ (ಆಗಸ್ಟ್ 18-24) 12 ರಾಶಿಗಳಿಗೆ ಹೇಗಿರಲಿದೆ?
ವೈದಿಕಶಾಸ್ತ್ರದ ಪ್ರಕಾರ ಈ ವಾರ (ಆಗಸ್ಟ್ 18-24) ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಅವಧಿ ಉತ್ತಮವಾಗಿದೆ, ಉದ್ಯೋಗದ ದೃಷ್ಟಿಯಿಂದ ಈ ಅವಧಿ ತುಂಬಾ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಕೆಲಸದಲ್ಲಿ ಉತ್ತಮ ಪ್ರಗತಿ ಕಂಡು ಬರಲಿದೆ. ವೈವಾಹಿಕ ಜೀವನ, ಕುಟುಂಬ ಬದುಕು ತುಂಬಾ ಚೆನ್ನಾಗಿರಲಿದೆ. ಪ್ರೇಮಿಗಲಿಗೆ ಈ ವಾರ ತುಂಬಾ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಕಿವಿ ನೋವಿನ ಸಮಸ್ಯೆವಿರಬಹುದು.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ದಿನ: ಬುಧವಾರ

ವೃಷಭ ರಾಶಿ
ಕೆಲಸದಲ್ಲಿ ಒತ್ತಡ ತುಂಬಾವಿರುವುದರಿಂದ ಕುಟುಂಬದ ಕಡೆಗೆ ಗಮನಹರಿಸಲು ಸಾಧ್ಯವಾಗಲ್ಲ. ಆದರೆ ಇದರಿಂದ ನಿಮ್ಮ ಸಂಗಾತಿ ಮನಸ್ಸಿಗೆ ನೋವಾಗುವುದು, ಹಾಗಾಗಿ ಕೆಲಸದ ಜೊತೆಗೆ ಕುಟುಂಬದ ಕಡೆಗೂ ಗಮನಹರಿಸಬೇಕು. ಆರ್ಥಿಕವಾಗಿ ನೋಡುವುದಾದರೆ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ. ಇನ್ನು ಈ ಸಮಯದಲ್ಲಿ ನೀವು ಆರೋಗ್ಯದ ಕಡೆಗೂ ಗಮನಹರಿಸಬೇಕು.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 6
ಶುಭ ಮುಹೂರ್ತ: ಸೋಮವಾರ
ಮಿಥುನ ರಾಶಿ
ಈ ವಾರ ನಿಮಗೆ ಅನುಕೂಲಕರವಾಗಿದೆ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ನಿಮಗೆ ತುಂಬಾ ಉತ್ತಮವಾಗಿರಲಿದೆ. ಆರ್ಥಿಕವಾಗಿ ಈ ಅವಧಿ ತುಂಬಾ ಚೆನ್ನಾಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ಬಾಂಧವ್ಯ ಉತ್ತಮವಾಗಿರಲಿದೆ. ಪ್ರೇಮಿಗಳ ನಡುವಿನ ಬಾಂಧವ್ಯ ಮತ್ತಷ್ಟು ಹೆಚ್ಚಾಗಲಿದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 20
ಶುಭ ಮುಹೂರ್ತ: ಶನಿವಾರ
ಕರ್ಕ ರಾಶಿ
ಈ ವಾರ ನಿಮಗೆ ಉತ್ತಮವಾಗಿದೆ, ನ್ಯಾಯಾಲಯದಲ್ಲಿ ಏನಾದರು ಪ್ರಕರಣವಿದ್ದರೆ ಅದರ ತೀರ್ಪು ನಿಮ್ಮ ಪರವಾಗಿ ಬರುವುದರಿಂದ ಈ ಅವಧಿ ಉತ್ತಮವಾಗಿರಲಿದೆ, ಆರ್ಥಿಕವಾಗಿ ಈ ಸಮಯ ಉತ್ತಮವಾಗಿದೆ, ವೃತ್ತಿ ಬದುಕಿನಲ್ಲಿ ಕೆಲ ಅಡೆತಡೆಗಳಿರಬಹುದು, ಆದರೆ ನೀವು ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಬೇಕು. ಪ್ರೇಮಿಗಳು ಮದುವೆಯ ಬಗ್ಗೆ ಮನೆಯವರ ಜೊತೆ ಹೇಳಿದರೆ ವಿರೋಧ ಬರಬಹುದು, ಆದರೆ ನೀವು ತಾಳ್ಮೆಯಿಂದ ಬಗೆಹರಿಸಲು ಸಾಧ್ಯವಾಗುವುದು. ಆರೋಗ್ಯದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 18
ಶುಭ ಮುಹೂರ್ತ: ಸೋಮವಾರ
ಸಿಂಹ ರಾಶಿ
ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಉದ್ಯೋಗಸ್ಥರಿಗೆ ಉನ್ನತ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲ ದೊರೆಯಲಿದೆ, ನಿಮ್ಮ ಕೆಲಸ ಕಾರ್ಯಗಳು ನಿಮ್ಮ ಯೋಜನೆಯಂತೆಯೇ ಪೂರ್ಣಗೊಳ್ಳಲಿದೆ. ಹೊಸ ವಾಹನ, ಮನೆ, ಭೂಮಿ ಇತ್ಯಾದಿಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಈ ಸಮಯವು ಅನುಕೂಲಕರವಾಗಿರುತ್ತದೆ. ವೈವಾಹಿಕ, ಕುಟುಂಬ ಜೀವನ ಚೆನ್ನಾಗಿರಲಿದದೆ, ಆರೋಗ್ಯವೂ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ:42
ಶುಭ ಸಮಯ: ಮಂಗಳವಾರ
ಕನ್ಯಾ ರಾಶಿ
ಈ ವಾರ ನಿಮಗೆಎ ಶುಭವಾಗಿದೆ. ಅದು ಉದ್ಯೋಗವಾಗಲಿ ಅಥವಾ ವ್ಯವಹಾರವಾಗಲಿ, ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆಯಿದೆ. ಉದ್ಯೋಗಿಗಳ ಆದಾಯದಲ್ಲಿ ಉತ್ತಮ ಪ್ರಗತಿ ಕಂಡು ಬರಲಿದೆ. ವಿವಾಹಿತರಿಗೆ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 39
ಶುಭ ಮುಹೂರ್ತ: ಶುಕ್ರವಾರ
ತುಲಾ ರಾಶಿ
ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ. ನಿಮ್ಮ ಕಾರ್ಯಕ್ಷಮತೆಯಲ್ಲಿ ನೀವು ದೊಡ್ಡ ಸುಧಾರಣೆಯನ್ನು ಸಹ ನೋಡುತ್ತೀರಿ. ಆದರೆ ವ್ಯಾಪಾರಿಗಳು ಈ ವಾರ ಹಣದ ವ್ಯವಹಾರದ ಬಗ್ಗೆ ಜಾಗ್ರತೆವಹಿಸಿ, ದೊಡ್ಡ ಹೂಡಿಕೆ ಮಾಡಬೇಡಿ. ವೈವಾಹಿಕ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಆದಾಯವು ಉತ್ತಮವಾಗಿರುತ್ತದೆ, ಆದರೆ ನಿಮ್ಮ ಖರ್ಚು ಕೂಡ ಹೆಚ್ಚಾಗುವುದು. ಆರೋಗ್ಯದ ಕಡೆ ಗಮನಹರಿಸಿ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 7
ಶುಭ ಮುಹೂರ್ತ: ಗುರುವಾರ
ವೃಶ್ಚಿಕ ರಾಶಿ
ಕೆಲಸದ ಕಡೆ ಗಮನಹರಿಸಬೇಕು. ಕೆಲಸದ ಹೊರೆ ಕೂಡ ಹೆಚ್ಚಿರಲಿದೆ. ಆರ್ಥಿಕವಾಗಿ ತೊಂದರೆಯಿಲ್ಲ, ಆದರೆ ಖರ್ಚು ನಿಯಂತ್ರಿಸಬೇಕು, ಉಳಿತಾಯದ ಕಡೆಗೆ ಗಮನಹರಿಸಬೇಕು. ವೈವಾಹಿಕ ಜೀವನದಲ್ಲಿ ಪ್ರೀತಿ, ನೆಮ್ಮದಿ ಇರಲಿದೆ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 25
ಶುಭ ಮುಹೂರ್ತ: ಸೋಮವಾರ
ಧನು ರಾಶಿ
ಈ ವಾರ ನಿಮಗೆ ಉತ್ತಮವಾಗಿರಲಿದೆ, ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ. ಇನ್ನು ಈ ಅವಧಿಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಪ್ರಯೋಜನ ಪಡೆಯುತ್ತೀರಿ. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ. ವ್ಯಾಪಾರಿಗಳಿಗೆ ಧನಲಾಭವಾಗಲಿದೆ. ವೈವಾಹಿಕ ಜೀವನದಲ್ಲಿ ಈ ವಾರ ವಿಶೇಷವಾಗಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 10
ಶುಭ ಸಮಯ: ಮಂಗಳವಾರ
ಮಕರ ರಾಶಿ
ವ್ಯಾಪಾರಿಗಳಿಗೆ ಈ ಅವಧಿ ತುಂಬಾ ಚೆನ್ನಾಗಿರದೆ, ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯುತ್ತೀರಿ. ಉದ್ಯೋಗಿಗಳಿಗೂ ಈ ಅವಧಿ ತುಂಬಾ ಚೆನ್ನಾಗಿರಲಿದೆ.
ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ಕಡೆಗೆ ತುಂಬಾ ಗಮನಹರಿಸಬೇಕು. ವೈವಾಹಿಕ ಬದುಕಿನಲ್ಲಿ ನೀವು ಸಮಯ ಕೊಡುತ್ತಿಲ್ಲ ಎಂದು ಸಂಗಾತಿ ಕೋಪಗೊಳ್ಳಬಹುದು. ಆರೋಗ್ಯದ ಕಡೆಗೆ ಗಮನಹರಿಸಬೇಕು.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 32
ಶುಭ ಮುಹೂರ್ತ: ಶನಿವಾರ
ಕುಂಭ ರಾಶಿ
ಈ ವಾರ ನಿಮಗೆ ಉತ್ತಮವಾಗಿದೆ, ಉದ್ಯೋಗಿಗಳು, ವ್ಯಾಪಾರಿಗಳು ಉತ್ತಮ ಪ್ರಯೋಜನ ಪಡೆಯುತ್ತೀರಿ. ಆರ್ಥಿಕವಾಗಿಯು ಈ ಅವಧಿ ಉತ್ತಮವಾಗಿದೆ, ಬರಬೇಕಾಗಿರುವ ಹಣ ನಿಮ್ಮ ಕೈ ಸೇರಲಿದೆ. ಕುಟುಂಬದಲ್ಲಿ ನೆಮ್ಮದಿ, ಪ್ರೀತಿ ಇರಲಿದೆ. ವೈವಾಹಿಕ ಬದುಕಿನಲ್ಲಿ ಸಾಮರಸ್ಯ ಇರಲಿದೆ. ಈ ಅವಧಿ ಆರ್ಥಿಕವಾಗಿ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 7
ಶುಭ ಮುಹೂರ್ತ: ಸೋಮವಾರ
ಮೀನ ರಾಶಿ
ಈ ಅವಧಿ ಉತ್ತಮವಾಗಿರಲಿದೆ. ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಯಶಸ್ಸಿನ ಬಲವಾದ ಸಾಧ್ಯತೆಯಿದೆ. ನಿರ್ಧಾರ ನಿಮ್ಮ ಪರವಾಗಿ ಬರಬಹುದು. ವೃತ್ತಿ ಜೀವನದ ಕಡೆಗೆ ಗಮನಹರಿಸಿ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ. ಆರೋಗ್ಯ ಸಮಸ್ಯೆ ಇದ್ದರೆ ಸುಧಾರಣೆ ಕಂಡು ಬರಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 26
ಶುಭ ಸಮಯ: ಮಂಗಳವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











