Latest Updates
-
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ!
ವಾರ ಭವಿಷ್ಯ: ಅಕ್ಟೋಬರ್ 20-27ರವರೆಗೆ ಈ ರಾಶಿಯವರು ಸ್ವಲ್ಪ ಜಾಗ್ರತೆ
ಜ್ಯೋತಿಷ್ಯದಲ್ಲಿ ಗ್ರಹಗತಿಗಳ ಸ್ಥಾನ ನೋಡಿ ಭವಿಷ್ಯ ಹೇಳಲಾಗುವುದು, ಅದರ ಪ್ರಕಾರ ಈ ವಾರ 6 ರಾಶಿಯವರು ಜಾಗ್ರತೆವಹಿಸಬೇಕಾಗಿದೆ:
ಮೇಷ ರಾಶಿ
ವೃತ್ತಿ ಬದುಕು: ಈ ವಾರ ನಿಮಗೆ ಮಿಶ್ರವಾಗಿರುತ್ತದೆ. ಕೆಲಸದಲ್ಲಿ ಸಮಸ್ಯೆ ಬರಬಹುದು, ನೀವು ನಿರೀಕ್ಷೆ ಮಾಡದಿರುವ ಸಮಸ್ಯೆ ನಿಮ್ಮನ್ನು ಸಂಕಷ್ಟಕ್ಕೆ ದೂಡಬಹುದು. ಆದರೆ ನೀವು ಈ ರೀತಿಯ ಸಮಸ್ಯೆ ತಾಳ್ಮೆಯಿಂದ ಬಗಹರಿಸಲು ಪ್ರಯತ್ನಿಸಬೇಕು.
ಹಣಕಾಸು: ಇನ್ನು ಈ ವಾರ ನೀವು ಹಣದ ವಿಷಯದಲ್ಲಿ ಜಾಗ್ರತೆವಹಿಸಬೇಕು, ಈ ಸಮಯದಲ್ಲಿ ಯಾವುದೇ ಹಣದ ವ್ಯವಹಾರ ಮಾಡಲು ಹೋಗಬೇಡಿ, ಸಾಲ ಕೊಟ್ಟರೆ ಮರಳಿ ಸಿಗುವುದು ಕಷ್ಟವಾಗುವುದು, ಸಾಲ ಪಡೆದಿದ್ದರೆ ಮರುಪಾವತಿಯ ಒತ್ತಡ ಹೆಚ್ಚಾಗಬಹುದು.

ಕುಟುಂಬ ಜೀವನ: ಕುಟುಂಬ ಜೀವನದ ದೃಷ್ಟಿಯಿಂದ ಕೂಡ ಈ ಅವಧಿ ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ಕೆಲ ಭಿನ್ನಾಭಿಪ್ರಾಯಗಳು ನಿಮ್ಮ ಮಾನಸಿಕ ನೆಮ್ಮದಿಗೆ ಭಂಗ ಉಂಟು ಮಾಡಬಹುದು.
ಆರೋಗ್ಯದಲ್ಲಿಯೂ ಏರಳಿತವಿರಬಹುದು, ಹಾಗಾಗಿ ಆರೋಗ್ಯ ಸಮಸ್ಯೆವಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 21
ಶುಭ ದಿನ: ಶನಿವಾರ
ಮಿಥುನ ರಾಶಿ
ವೃತ್ತಿ ಬದುಕು: ಈ ವಾರ ನೀವು ಜಾಗ್ರತೆವಹಿಸಬೇಕು, ವೃತ್ತಿ ಬದುಕಿನಲ್ಲಿ ಕೆಲ ಪ್ರಮುಖ ಬದಲಾವಣೆಯಾಗಬಹುದು, ಇದರಿಂದ ನಿಮಗೆ ಕೆಲಸದಲ್ಲಿ ಅತೃಪ್ತಿ, ಅಭದ್ರತೆ ಕಾಡಬಹುದು, ನೀವು ಕೆಲಸದ ಕಡೆಗೆ ತುಂಬಾ ಗಮನಹರಿಸಬೇಕು.
ಆರ್ಥಿಕ ಜೀವನ: ವ್ಯಾಪಾರಿಗಳಿಗೆ ಹಣ ಗಳಿಸಲು ಕಷ್ಟವಾಗುವುದು, ಆರ್ಥಿಕವಾಗಿ ಈ ವಾರ ಉತ್ತಮವಲ್ಲ, ಖರ್ಚುಗಳು ಹೆಚ್ಚಿರಲಿದೆ.
ಕುಟುಂಬ ಜೀವನ: ಆಪ್ತರ ನಡುವೆ ಕೆಲ ಭಿನ್ನಾಭಿಪ್ರಾಯವಿರಬಹುದು, ನಿಮ್ಮ ಹಾಗೂ ಸಂಗಾತಿ ಚಿಕ್ಕ ವಿಷಯಕ್ಕೆ ಮನಸ್ತಾಪ ಬರಬಹುದು.
ಆರೋಗ್ಯ: ಆರೋಗ್ಯ ಸಮಸ್ಯೆವಿದ್ದರೆ ಹೆಚ್ಚಿನ ಜಾಗ್ರತೆವಹಿಸಿ.
ಅದೃಷ್ಟದ ಬಣ್ಣ:ಆಕಾಶ ನೀಲಿ
ಅದೃಷ್ಟದ ಸಂಖ್ಯೆ 16
ಶುಭ ದಿನ: ಬುಧವಾರ
ಕನ್ಯಾ ರಾಶಿ
ವೃತ್ತಿ ಬದುಕು: ಈ ವಾರ ಕೆಲಸದಲ್ಲಿ ಒತ್ತಡ ಅಧಿಕವಿರಲಿದೆ, ಕೆಲಸದಲ್ಲಿನ ಸಮಸ್ಯೆ ಸಮಧಾನದಿಂದ ಬಗೆಹರಿಸಲು ಪ್ರಯತ್ನಿಸಬೇಕು, ಹೊಸ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಇನ್ನೂ ಸ್ವಲ್ಪ ವಿಳಂಬವಾಗಬಹುದು.
ಆರ್ಥಿಕ ಜೀವನ: ಹಣದ ಸಮಸ್ಯೆ ಬಗೆಹರಿಯಲಿದೆ, ಆದರೆ ಖರ್ಚುಗಳ ಕಡೆಗೆ ಗಮನಹರಿಸಿ, ಇಲ್ಲದಿದ್ದರೆ ಖರ್ಚುಗಳು ಮತ್ತಷ್ಟು ಹೆಚ್ಚಾಗಬಹುದು, ಹಣದ ವಿಷಯದಲ್ಲಿ ಯಾರನ್ನೂ ನಂಬಬೇಡಿ.
ಕುಟುಂಬ ಜೀವನ: ಕುಟುಂಬದಲ್ಲಿ ಪರಿಸ್ಥಿತಿ ಅಷ್ಟು ಸರಿಯಿರಲ್ಲ, ನೀವು ಸಮತೋಲಿತ ರೀತಿಯಲ್ಲಿ ವರ್ತಿಸುವಂತೆ ಸಲಹೆ ನೀಡಲಾಗುವುದು.
ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಕ್ಯೆ 27
ಶುಭ ದಿನ: ಸೋಮವಾರ
ವೃಶ್ಚಿಕ ರಾಶಿ
ವೃತ್ತಿ ಬದುಕು: ಈ ವಾರ ನೀವು ಹೆಚ್ಚಿನ ಗಮನಹರಿಸಬೇಕು, ನಿರ್ಲಕ್ಷ್ಯ ಸಮಸ್ಯೆಯನ್ನುಂಟು ಮಾಡಬಹುದು. ಒಳ್ಳೆಯ ಅವಕಾಶಗಳು ಕೈಜಾರಬಹುದು, ಈ ಬಗ್ಗೆ ನೀವು ಜಾಗ್ರತೆವಹಿಸಬೇಕು.
ಆರ್ಥಿಕ ಜೀವನ: ಆರ್ಥಿಕ ದೃಷ್ಟಿಯಿಂದಲೂ ಈ ಅವಧಿ ಸವಾಲಿನಿಂದ ಕೂಡಿರಲಿದೆ. ವ್ಯಾಪಾರಿಗಳು ಕಠಿಣ ಸ್ಪರ್ಧೆ ಎದುರಸಬಹುದು.
ಕುಟುಂಬ ಜೀವನ: ಕುಟುಂಬ ಜೀವನದ ಕಡೆಯೂ ಗಮನಹರಿಸಬೇಕು, ಚಿಕ್ಕ ಸಮಸ್ಯೆ ದೊಡ್ಡದಾಗಿ ಬದಲಾಗಬಹುದು, ಈ ಬಗ್ಗೆ ಜಾಗ್ರತೆವಹಿಸಿ.
ಆರ್ಥಿಕ ಜೀವನ:ಆರ್ಥಿಕವಾಗಿ ಈ ಅವಧಿ ಅನುಕೂಲಕರವಲ್ಲ, ಕೆಲಸ ಕಾರ್ಯಗಳು ಅರ್ಧದಲ್ಲಿ ನಿಂತು ಹೋಗಬಹುದು, ಹಣದ ಖರ್ಚು ಹೆಚ್ಚಿರಲಿದೆ.
ಅತಿಯಾದ ಮಾನಸಿಕ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ 4
ಶುಭ ದಿನ: ಸೋಮವಾರ
ಮಕರ ರಾಶಿ
ವೃತ್ತಿ ಬದುಕು: ಈ ವಾರ ಸವಾಲಿನಿಂದ ಕೂಡಿರಬಹುದು, ನೀವು ಕೆಲಸಕ್ಕೆ ಸಂಬಂಧಿಸಿದ ನಿರ್ಧಾರ ಆಲೋಚಿಸಿ ತೆಗೆದುಕೊಳ್ಳಿ, ಅವರಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ಆರ್ಥಿಕ ಜೀವನ: ನಿಮ್ಮ ಕಠಿಣ ಶ್ರಮಕ್ಕೆ ಸೂಕ್ತ ಹಣ ಸಿಗುತ್ತಿಲ್ಲ ಎಂದನಿಸಬಹುದು. ಹಣಕಾಸಿನ ವಹಹಿವಾಟಿನಲ್ಲಿ ಜಾಗ್ರತೆವಹಿಸಬೇಕು, ಹಣದ ನಷ್ಟ ಉಂಟಾಗದಂತೆ ಜಾಗ್ರತೆವಹಿಸಿ.
ಕುಟುಂಬ ಜೀವನ: ಕೆಲ ಸಮಸ್ಯೆಗಳಿರಬಹುದು, ಆದರೆನೀವು ಸಕರಾತ್ಮಕವಾಗಿ ಮುಂದುವರೆಯಬೇಕು.
ಆರೋಗ್ಯದ ಬಗ್ಗೆ ಹೇಳುವುದಾದರೆ ಇತ್ತೀಚೆಗೆಆಪರೇಷನ್ ಆಗಿದ್ದರೆ ಜಾಗ್ರತೆವಹಿಸಿ, ಆರೋಗ್ಯ ಸಮಸ್ಯೆವಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 28
ಶುಭ ದಿನ: ಮಂಗಳವಾರ
ಕುಂಭ ರಾಶಿ
ವೃತ್ತಿ ಬದುಕು:ಕೆಲಸದ ಸ್ಥಳದಲ್ಲಿ ನೀವು ಜಾಗರೂಕರಾಗಿರಬೇಕು. ಅಗತ್ಯಕ್ಕಿಂತ ಹೆಚ್ಚಾಗಿ ಯಾರನ್ನೂ ನಂಬಬೇಡಿ, ಕೆಲಸದಲ್ಲಿ ಹೆಚ್ಚಿನ ಗಮನಹರಿಸಬೇಕು.
ಆರ್ಥಿಕ ಜೀವನ: ಆರ್ಥಿಕವಾಗಿ ಈ ಅವಧಿ ನಿಮಗೆ ಅನುಕೂಲಕರವಲ್ಲ, ಹಣ ಬರಬಹುದು, ಆದರೆ ಖರ್ಚಿನ ಬಗ್ಗೆ ಗಮನಹರಿಸದಿದ್ದರೆ ನಷ್ಟ ಉಂಟಾಗಬಹುದು, ಅದರಲ್ಲಿಯೂ ವ್ಯಾಪಾರಿಗಳು ಹೆಚ್ಚಿನ ಜಾಗ್ರತೆವಹಿಸಬೇಕು.
ಕುಟುಂಬ ಜೀವನ: ಕುಟುಂಬ ಜೀವನದ ದೃಷ್ಟಿಯಿಂದ ಈ ಅವಧಿ ನಿಮಗೆ ಅನುಕೂಲಕವಾಗಿದೆ, ಪ್ರತಿಕೂಲ ಸಂದರ್ಭದಲ್ಲಿ ಸಂಗಾತಿಯ ಬೆಂಬಲ ದೊರೆಯಲಿದೆ.
ಆರೋಗ್ಯದ ದೃಷ್ಟಿಯಿಂದ ಈ ಸಮಯವು ಅನುಕೂಲಕರವಾಗಿರುತ್ತದೆ.
ಅದೃಷ್ಟದ ಬಣ್ಣ ಬಿಳಿ
ಅದೃಷ್ಟದ ಸಂಖ್ಯೆ 5
ಶುಭ ದಿನ: ಶುಕ್ರವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications