ವಾರ ಭವಿಷ್ಯ: ನವೆಂಬರ್ ಕೊನೆಯ ವಾರ ದ್ವಾದಶ ರಾಶಿಗಳಿಗೆ ಹೇಗಿದೆ?

ಗ್ರಹಗತಿಗಳ ಸ್ಥಾನದ ಪ್ರಕಾರ ಈ ವಾರದ ರಾಶಿಫಲ ನೋಡೋಣ:

ಮೇಷ ರಾಶಿ
ಮೇಷ ರಾಶಿಯವರಿಗೆ ಈ ವಾರ ತುಂಬಾ ಅನುಕೂಲಕರವಾಗಿದೆ. ಯಾರ ಜೊತೆಗಾದರೂ ಭಿನ್ನಾಭಿಪ್ರಾಯ ಉಂಟಾಗಿದ್ದರೆ ಅದನ್ನು ಸರಿಪಡಿಸಲು ಈ ವಾರ ಉತ್ತಮವಾಗಿದೆ, ವ್ಯಾಪಾರಿಗಳಿಗೆ ಈ ವಾರ ಅನುಕೂಲಕರವಾಗಿರಲಿದೆ, ವ್ಯಾಪಾರಿಗಳು ನಿರೀಕ್ಷೆ ಮಾಡಿರುವುದಕ್ಕಿಂತ ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ. ಹಣಕಾಸಿನ ದೃಷ್ಟಿಯಿಂದ ಈ ವಾರ ಉತ್ತಮವಾಗಿರಲಿದೆ.

ಹವಾಮಾನ ಬದಲಾವಣೆಯಿಂದ ಆರೋಗ್ಯ ಸಮಸ್ಯೆ ಉಂಟಾಗುವುದು, ಈ ಬಗ್ಗೆ ಜಾಗ್ರತೆವಹಿಸಿ. ಆಸ್ತಿ ವ್ಯವಹಾರ ಮಾಡುವುದಾದರೆ ಬುದ್ಧಿವಂತಿಕೆಯಿಂದ ವ್ಯವಹಾರ ಮಾಡಿ. ಅವಾಹಿತರಿಗೆ ಮದುವೆ ಸಂಬಂಧ ಬರಬಹುದು. ವಿವಾಹಿತರು ಸಂಗಾತಿಯ ಅಭಿಪ್ರಾಯಕ್ಕೂ ಬೆಲೆ ನೀಡಬೇಕು.

Weekly Horoscope

ವೃಷಭ ರಾಶಿ
ಈ ವಾರ ನೀವು ಸ್ವಲ್ಪ ಜಾಗ್ರತೆವಹಿಸಬೇಕು, ಯಾರನ್ನೂ ಕಣ್ಮುಚ್ಚಿ ನಂಬಬೇಡಿ, ಯಾವುದೇ ಡಾಕ್ಯೂಮೆಂಟ್ ಮಾಡುವುದಾದರೆ ಸರಿಯಾಗಿ ಗಮನಿಸಿ ಸಹಿ ಮಾಡಬೇಕು. ಹೂಡಿಕೆ ಮಾಡುವ ಅದರ ಷರತ್ತುಗಳನ್ನು ಗಮನಿಸಬೇಕು, ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಜಾಗ್ರತೆವಹಿಸಬೇಕು.

ಕೆಲಸ ಕಾರ್ಯಗಳಲ್ಲಿ ತಪ್ಪಾಗದಂತೆ ಜಾಗ್ರತೆವಹಿಸಿ, ಕುಟುಂಬದಲ್ಲಿಯೂ ಕೆಲ ಭಿನ್ನಾಭಿಪ್ರಾಯ ಉಂಟಾಗಬಹುದು, ಕೋಪವನ್ನು ಪ್ರಯತ್ನಿಸಿ.ಕುಟುಂಬದಲ್ಲಿನ ಸಮಸ್ಯೆ ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ.

ಮಿಥುನ ರಾಶಿ
ಈ ವಾರ ಮಿಥುನ ರಾಶಿಯವರೂ ಜಾಗ್ರತೆವಹಿಸಬೇಕು, ಕೆಲಸ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ವ್ಯಾಪಾರಿಗಳಿಗೂ ಈ ವಾರ ನಿರೀಕ್ಷೆ ಮಾಡಿದಷ್ಟು ಲಾಭ ಪಡೆಯುವುದು ಕಷ್ಟವಾಗಬಹುದು. ಈ ವಾರ ನೀವು ಶತ್ರುಗಳ ಬಗ್ಗೆ ಜಾಗ್ರತೆವಹಿಸಬೇಕು.
ನಿಮ್ಮ ಇಮೇಜ್‌ ಹಾಳಾಗುವ ಯಾವ ಕಾರ್ಯವೂ ಮಾಡದಿರಿ, ಸಂಬಂಧದಲ್ಲಿ ನಿಯತ್ತಿನಿಂದ ಇರಿ, ಸಂಗಾತಿಯ ಭಾವನೆಗಳನ್ನು ಗೌರವಿಸಿ. ಅತಿಯಾದ ಮಾನಸಿಕ ಒತ್ತಡ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು.

ಕರ್ಕ ರಾಶಿ
ಕರ್ಕ ರಾಶಿಯವರಿಗೆಈ ವಾರ ತುಂಬಾನೇ ಶುಭವಾಗಿದೆ, ನೀವು ಬಹು ಸಮಯದಿಂದ ನಿರೀಕ್ಷೆ ಮಾಡುತ್ತಿದ್ದ ಸುದ್ದಿ ಪಡೆಯುತ್ತೀರಿ. ಇನ್ನು ನೀವು ವರ್ಗಾವಣೆಗೆ ಪ್ರಯತ್ನಿಸುತ್ತಿದ್ದರೆ ವರ್ಗಾವಣೆ ಸಿಗಲಿದೆ, ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನದಲ್ಲಿ ಒಳ್ಳೆಯ ಫಲ ಸಿಗಲಿದೆ. ವ್ಯಾಪಾರಿಗಳು ಲಾಭ ಪಡೆಯುತ್ತಾರೆ.

ಸಂಬಂಧದಲ್ಲಿ ಏನಾದರು ಭಿನ್ನಾಭಿಪ್ರಾಯವಿದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಿ. ಕುಟುಂಬ ಜೀವನ ಚೆನ್ನಾಗಿರಲಿದೆ, ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ.

ಸಿಂಹ ರಾಶಿ
ಈ ವಾರ ನಿಮಗೆ ಶುಭವಾಗಿದೆ, ಕೆಲಸ ಕಾರ್ಯಗಳು ನಿಮ್ಮ ಯೋಜನೆಯಂತೆಯೇ ನಡೆಯಲಿದೆ, ವ್ಯಾಪಾರಿಗಳಿಗೆ ಈ ಅವಧಿ ಅನುಕೂಲಕರವಾಗಿರಲಿದೆ. ವ್ಯಾಪಾರ ಉದ್ದೇಶಕ್ಕೆ ಮಾಡುವ ಪ್ರಯಾಣವು ಲಾಭದಾಯಕವಾಗಿರಲಿದೆ. ವೃತ್ತಿ ಬದುಕು ತುಂಬಾ ಚೆನ್ನಾಗಿರಲಿದೆ. ಹಣಕಾಸಿನ ದೃಷ್ಟಿಯಿಂದಲೂ ಈ ಅವಧಿ ನಿಮಗೆ ಅನುಕೂಲಕರವಾಗಿರಲಿದೆ, ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ, ಒಟ್ಟಿನಲ್ಲಿ ಈ ವಾರ ಸಿಂಹ ರಾಶಿಯವರಿಗೆ ಅನುಕೂಲಕರವಾಗಿರಲಿದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ವಾರ ತುಂಬಾ ಅನುಕೂಲಕರವಾಗಿರಲಿದೆ, ವೃತ್ತಿ ಜೀವನದಲ್ಲಿ ಪ್ರಗತಿ ಕಂಡು ಬರಲಿದೆ, ವ್ಯಾಪಾರಿಗಳಿಗೆ ಈ ಸಮಯ ಅನುಕೂಲಕರವಾಗಿರಲಿದೆ, ಪ್ರತಿಕೂಲ ಸಂದರ್ಭದಲ್ಲಿ ಆಪ್ತರ ಬೆಂಬಲ ನಿಮಗೆ ಸಿಗಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ದಾಂಪತ್ಯ ಜೀವನ ಚೆನ್ನಾಗಿರಲಿದೆ.

ತುಲಾ ರಾಶಿ
ಈ ವಾರ ನೀವು ಕೆಲಸದಲ್ಲಿ ಆತುರ ತೋರಬೇಡಿ, ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಈ ಅವಧಿ ಸರಾಸರಿಯಾಗಿರಲಿದೆ. ಈ ಅವಧಿಯಲ್ಲಿ ಅಪೂರ್ಣ ಕೆಲಸಗಳು ಪೂರ್ಣಗೊಳ್ಳಲು ಸಾಧ್ಯವಾಗುವುದು. ವೈವಾಹಿಕ ಜೀವನ ಚೆನ್ನಾಗಿರಲಿದೆ, ಹಣಕ್ಕೆ ಸಂಬಂಧಿಸಿದ ಪ್ರಯತ್ನಕ್ಕೆ ಫಲ ನೀಡಲಿದೆ.

ವೃಶ್ಚಿಕ ರಾಶಿ
ಈ ವಾರ ಅನುಕೂಲಕರವಾಗಿದೆ, ಕೆಲಸ ಕಾರ್ಯಗಳಲ್ಲಿ ನಿರ್ಲಕ್ಷ್ಯ ತೋರಬೇಡಿ, ಹಣದ ಬಗ್ಗೆ ಜಾಗ್ರತೆವಹಿಸಿ. ಹಣವನ್ನು ಹೂಡಿಕೆ ಮಾಡುವ ಮುನ್ನ ಆಲೋಚಿಸಿ ಮಾಡಬೇಕು, ಅನುಭವಿಗಳ ಸಲಹೆ ಪಡೆಯಿರಿ, ವ್ಯಾಪಾರಿಗಳಿಗೆ ಈ ವಾರ ನಿರೀಕ್ಷಿತ ಲಾಭ ಪಡೆಯಲು ಕಷ್ಟವಾಗುವುದು. ಸಂಬಂಧದ ಕಡೆಗೆ ಗಮನಹರಿಸಿ.

ಧನು ರಾಶಿ
ಈ ವಾರ ಸ್ವಲ್ಪ ಒತ್ತಡವಿರಲಿದೆ ಆದರೆ ಹಣಕಾಸಿನ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡವಿದ್ದರೆ ಈ ವಾರ ಅನುಕೂಲಕರವಾಗಿರಲಿದೆ. ಸಂಬಂಧದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿರಲಿದೆ, ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಆಸ್ತಿ ವ್ಯವಹಾರ ಮಾಡಲು ಸೂಕ್ತವಾಗಿದೆ, ಆದರೆ ಡಾಕ್ಯೂಮೆಂಟ್ ಕಡೆಗೆ ಗಮನಹರಿಸಿ.

ಮಕರ ರಾಶಿ
ಈ ವಾರ ಏರಳಿತದಿಂದ ಕೂಡಿರಲಿದೆ, ವಾರದ ಆರಂಭದಲ್ಲಿ ಖರ್ಚು ಹೆಚ್ಚಿರಲಿದೆ, ಬಜೆಟ್‌ ಪ್ಲ್ಯಾನ್‌ ಮಾಡಿ ಅದರಂತೆ ಖರ್ಚು ಹೆಚ್ಚಿರಲಿದೆ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಗಮನಹರಿಸಬೇಕು, ಇಲ್ಲದಿದ್ದರೆ ನಷ್ಟ ಉಂಟಾಗಬಹುದು. ಆರೋಗ್ಯದ ಕಡೆಗೆ ಗಮನಹರಿಸಿ. ಕುಟುಂಬದಲ್ಲಿ ಚಿಕ್ಕ-ಪುಟ್ಟ ವಿಷಯಗಳನ್ನು ನಿರ್ಲಕ್ಷ್ಯ ಮಾಡಿದರೆ ಒಳ್ಳೆಯದು.ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ.

ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿರಲಿದೆ, ವೃತ್ತಿ ಬದುಕಿನಲ್ಲಿ ದೊಡ್ಡ ಅವಕಾಶ ದೊರೆಯಲಿದೆ,ಹಣಕಾಸಿನ ದೃಷ್ಟಿಯಿಂದಲೂ ಈ ಅವಧಿ ನಿಮಗೆ ಅನುಕೂಲಕರವಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಿರಲಿದೆ, ಅವಾಹಿತರಿಗೆ ಮದುವೆ ಪ್ರಸ್ತಾಪ ಬರಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ.

ಮೀನ ರಾಶಿ
ಈ ವಾರ ಮೀನ ರಾಶಿಯವರಿಗೆ ಸರಾಸರಿಯಾಗಿರಲಿದೆ. ವೃತ್ತಿ ಜೀವನದಲ್ಲಿ ನಿಮ್ಮ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ, ವ್ಯಾಪಾರಿಗಳು ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುವುದು. ರಾಜಕೀಯ ಕ್ಷೇತ್ರದಲ್ಲಿ ಇರುವವರೆಗೆ ಈ ಅವಧಿ ಅನುಕೂಲಕರವಾಗಿರಲಿದೆ.ಕುಟುಂಬ ಜೀವನದಲ್ಲಿ ಸರಾಸರಿ ಇರಲಿದೆ, ವೈವಾಹಿಕ ಜೀವನದ ಕಡೆಗೆ ಗಮನಹರಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Horoscope: November 24 To 30 These 7 Days Prediction For 12 Zodiac Signs In Kannada

Weekly astrology: Here is weekly horoscope prediction for 12 zodiac signs In Kannada
Story first published: Sunday, November 24, 2024, 13:01 [IST]
X
Desktop Bottom Promotion