Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಾರಭವಿಷ್ಯ: ಈ ವಾರ (ನವೆಂಬರ್ 16ರವರೆಗೆ) ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ಈ ವಾರದ ಗ್ರಹ ಗತಿಗಳ ಸ್ಥಾನದ ಪ್ರಕಾರ ದ್ವಾದಶ ರಾಶಿಗಳ ಭವಿಷ್ಯ ನೀಡಲಾಗಿದ್ದು ಯಾರಿಗಲ್ಲಾ ಶುಭ ಎಂದು ನೋಡೋಣ:
ಮೇಷ ರಾಶಿ
ಈ ವಾರ ನಿಮಗೆ ಮಿಶ್ರಫಲ. ಹಣದ ಖರ್ಚು ಇರಲಿದೆ, ಆದರೆ ಆದಾಯವೂ ಇರುವುದರಿಂದ ದೊಡ್ಡ ಚಿಂತೆಯಿರಲ್ಲ, ಕುಟುಂಬದ ಜೊತೆಗೆ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಈ ಅವಧಿಯಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳಿರಬಹುದು, ಗಂಡ-ಹೆಂಡತಿ ನಡುವೆ ಏನಾದರು ಭಿನ್ನಾಭಿಪ್ರಾಯ ಉಂಟಾದರೆ ಬಗೆಹರಿಸಲು ಪ್ರಯತ್ನಿಸಿ, ವೃತ್ತಿ ಬದುಕಿನಲ್ಲಿ ಹೆಚ್ಚಿನ ಒತ್ತಡ ತೆಗೆದುಕೊಳ್ಳಬೇಡಿ.

ವೃಷಭ ರಾಶಿ
ಈ ವಾರ ನಿಮಗೆ ಅನುಕೂಲಕರವಾಗಿರಲಿದೆ, ಕುಟುಂಬದ ದೃಷ್ಟಿಯಿಂದಲೂ ಈ ಅವಧಿ ಅನುಕೂಲಕರವಾಗಿರಲಿದೆ, ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳು ಯೋಜನೆಯಂತೆಯೇ ಪೂರ್ಣಗೊಳ್ಳಲಿದೆ. ಖರ್ಚು ಬರಲಿದೆ, ಆದರೆ ಆದಾಯವೂ ಚೆನ್ನಾಗಿರಲಿದೆ, ಸಂಬಂಧದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ಒಟ್ಟಿನಲ್ಲಿ ಈ ಅವಧಿ ಅನುಕೂಲಕರವಾಗಿದೆ.
ಮಿಥುನ ರಾಶಿ
ಈ ವಾರ ಕೆಲಸದಲ್ಲಿ ಅಧಿಕ ಒತ್ತಡವಿರಬಹುದು, ಆದರೆ ವಾರದ ಕೊನೆಯಲ್ಲಿ ಕೆಲಸದ ಒತ್ತಡ ಕಡಿಮೆಯಾಗಲಿದೆ, ಹಣಕಾಸಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ, ನಿಮ್ಮ ಕೆಲಸ ಕಾರ್ಯಗಳಿಗೆ ಕುಟುಂಬದ ಬೆಂಬಲ ಇರಲಿದೆ, ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರಲಿದೆ, ಒಟ್ಟಿನಲ್ಲಿ ಈ ವಾರ ನಿಮಗೆ ಅನುಕೂಲಕರವಾಗಿರಲಿದೆ.
ಕರ್ಕ ರಾಶಿ
ಈ ಅವಧಿಯಲ್ಲಿ ನೀವು ಆರ್ಥಿಕವಾಗಿ ತುಂಬಾನೇ ಜಾಗ್ರತೆವಹಿಸಬೇಕು, ಕುಟುಂಬದ ಜವಾಬ್ದಾರಿ ನಿಭಾಯಿಸಿಕೊಂಡು ಹೋಗಲು ಪ್ರಯತ್ನಿಸಬೇಕು, ಕೋರ್ಟ್ ಸಂಬಂಧಿತ ವಿಷಯಗಳು ನಿಮ್ಮ ಪರವಾಗಿ ಇರಲಿದೆ. ಈ ಅವಧಿಯಲ್ಲಿ ಯಾವುದೇ ಹೊಸ ಹೂಡಿಕೆ ಮಾಡಲು ಹೋಗಬೇಡಿ. ಸಂಗಾತಿಯ ಬೆಂಬಲ ನಿಮಗಿರಲಿದೆ.
ಸಿಂಹ ರಾಶಿ
ವಾರದ ಆರಂಭ ಅಷ್ಟೊಂದು ಚೆನ್ನಾಗಿಲ್ಲ, ನಂತರ ಪರಿಸ್ಥಿತಿ ಸುಧಾರಿಸಲಿದೆ, ವ್ಯಾಪಾರಿಗಳು ಈ ವಾರ ಹೆಚ್ಚಿನ ಸವಾಲು ಎದುರಿಸಬಹುದು. ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ, ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ, ವಾರದ ಕೊನೆಯಲ್ಲಿ ಒತ್ತಡಗಳು ಕಡಿಮೆಯಾಗುವುದರಿಂದ ನಿರಾಳವಾಗುತ್ತೀರಿ. ಸಂಬಂಧದಲ್ಲಿ ಅನಗ್ಯತ ವಾದ ತಪ್ಪಿಸಿ.
ಕನ್ಯಾ ರಾಶಿ
ಈ ಅವಧಿಯಲ್ಲಿ ಯಾವುದೇ ಹೊಸ ಕಾರ್ಯ ಮಾಡಬೇಡಿ, ವೃತ್ತಿ ಸಂಬಂಧಿತ ಒತ್ತಡ ಇರಲಿದೆ, ಆರ್ಥಿಕವಾಗಿಯೂ ಈ ವಾರ ಅಷ್ಟೊಂದು ಪ್ರಯೋಜನಕಾರಿಯಲ್ಲ, ಗಾಡಿ ಚಲಾಯಿಸುವಾಗ ಜಾಗ್ರತೆವಹಿಸಿ. ಆರೋಗ್ಯ ಸಮಸ್ಯೆಗಳಿರಬಹುದು.
ತುಲಾ ರಾಶಿ
ಈ ವಾರ ನಿಮಗೆ ಆರ್ಥಿಕ ದೃಷ್ಟಿಯಿಂದ ಉತ್ತಮವಾಗಿದೆ, ಮನೆಯ ವಾತಾವರಣ ಸಂತೋಷದಿಂದ ಕೂಡಿರಲಿದೆ, ಕೆಲಸದ ಸಂಬಂಧಿತ ಪ್ರಯಾಣ ಲಾಭ ತರಲಿದೆ, ವೃತ್ತಿ ಜೀವನದಲ್ಲಿ ನಿಮ್ಮ ನಿರೀಕ್ಷಗೆ ತಕ್ಕ ಫಲ ಸಿಗಲಿದೆ, ತ್ವಚೆ ಸಂಬಂಧಿ ಸಮಸ್ಯೆಯಿದ್ದರೆ ಸೂಕ್ತ ವೈದ್ಯರನ್ನು ಕಾಣಿ.
ವೃಶ್ಚಿಕ ರಾಶಿ
ಪ್ರಾರಂಭದ ದಿನದಲ್ಲಿ ಕೆಲ ಸಮಸ್ಯೆ ಎದುರಾಗಬಹುದು, ಆದರೆ ನಮತರ ಎಲ್ಲವೂ ಸರಿಯಾಗಲಿದೆ, ಆದಾಯ ಚೆನ್ನಾಗಿರಲಿದೆ, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ, ಅನಗ್ಯತ ಚಿಂತೆಗಳಿಂದ ದೂರವಿರಿ, ಆರ್ಥಿಕ ಪ್ರಯತ್ನಗಳಿಗೆ ಒಳ್ಳೆಯ ಫಲ ಸಿಗಲಿದೆ.
ಧನು ರಾಶಿ
ಈ ವಾರ ನಿಮಗೆ ಅನುಕೂಲಕರವಾಗಿರಲಿದೆ, ಪ್ರಮುಖ ಸಮಸ್ಯೆ ಬಗೆಹರಿಯಲಿದೆ,ಅದೃಷ್ಟದ ಬಲ ಇರುವುದರಿಂದ ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಕುಟುಂಬದ ವಾತಾವರಣ ಚೆನ್ನಾಗಿರಲಿದೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.
ಮಕರ ರಾಶಿ
ಆರ್ಥಿಕವಾಗಿ ನಿಮಗೆ ಈ ವಾರ ಉತ್ತಮವಾಗಿರಲಿದೆ, ವ್ಯವಹಾರದಲ್ಲಿ ಲಾಭ ಗಳಿಸುತ್ತೀರಿ. ಕೆಲವೊಂದು ರಹಸ್ಯ ನಿಮ್ಮಲ್ಲಿಯೇಢ ಇರಲಿ, ಅನಗ್ಯತ ರಿಸ್ಕ್ ತೆಗೆದುಕೊಳ್ಳಬೇಡಿ, ಆರೋಗ್ಯ ಸಮಸ್ಯೆಗಳಿದ್ದರೆ ನಿರ್ಲಕ್ಷ್ಯ ಬೇಡ.
ಕುಂಭ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿರಲಿದೆ. ಆರ್ಥಿಕವಾಗಿ ನಿಮಗೆ ಉತ್ತಮವಾಗಿದೆ, ಆದಾಯ ಚೆನ್ನಾಗಿರಲಿದೆ. ವೈಯಕ್ತಿಕ ಬದುಕಿನಲ್ಲಿನ ಸಮಸ್ಯೆ ಬಗೆಹರಿಯಲಿದೆ, ವೈವಾಹಿಕ ಬದುಕು ಚೆನ್ನಾಗಿರಲಿದೆ.
ಮೀನ ರಾಶಿ
ಈ ವಾರ ನೀವು ಆರ್ಥಿಕ ವಿಷಯದಲ್ಲಿ ಜಾಗ್ರತೆವಹಿಸಬೇಕು, ಕೆಲಸ ಹುಡುಕುತ್ತಿದ್ದರೆ ಒಳ್ಳೆಯ ಸುದ್ದಿ ಪಡೆಯುತ್ತೀರಿ, ವೈವಾಹಿಕ ಬದುಕಿನಲ್ಲಿ ಸಂಬಂಧ ಚೆನ್ನಾಗಿರಲಿದೆ, ಗಾಯವಾಗದಂತೆ ಜಾಗ್ರತೆವಹಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











