Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾರ ಭವಿಷ್ಯ (ಜುಲೈ 12-19): ಈ ವಾರ ಈ ರಾಶಿಯವರು ಸ್ವಲ್ಪ ಜಾಗ್ರತೆವಹಿಸಿದರೆ ಒಳ್ಳೆಯದು
ಈ ವಾರದ ರಾಶಿಫಲ ಪ್ರಕಾರ ಈ ರಾಶಿಯವರಿಗೆ ಅಷ್ಟೊಂದು ಅನುಕೂಲಕರವಲ್ಲ, ಯಾವ ರಾಶಿಯವರು ಯಾವ ವಿಷಯದಲ್ಲಿ ಜಾಗ್ರತೆವಹಿಸಬೇಕು ನೋಡೋಣ ಬನ್ನಿ:
ವೃಷಭ ರಾಶಿ
ನೀವು ಮನೆಯ ದೃಷ್ಟಿಯಿಂದ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಖರ್ಚುಗಳು ಕೂಡ ಅಧಿಕವಿರಲಿದೆ, ಆದರೆ ಹಣವನ್ನು ಮಿತಿಯಲ್ಲಿ ಖರ್ಚು ಮಾಡಿದರೆ ಒಳ್ಳೆಯದು. ಇನ್ನು ಕೆಲಸದಲ್ಲಿಯೂ ಹೆಚ್ಚಿನ ಒತ್ತಡವಿರಲಿದೆ, ವ್ಯಾಪಾರಿಗಳು, ಉದ್ಯಮಿಗಳು ತಮ್ಮ ವ್ಯಾಪಾರ ಯೋಜನೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳದಿರಿ, ಇನ್ನು ಈ ವಾರ ಆರೋಗ್ಯ ಸಮಸ್ಯೆ ಇದ್ದರೆ ಸೂಕ್ತ ವೈದ್ಯರನ್ನು ಕಾಣಬೇಕು, ನಿರ್ಲಕ್ಷ್ಯವೂ ದುಬಾರಿಯಾಗಬಹುದು.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 19
ಶುಭ ದಿನ: ಶನಿವಾರ

ಕರ್ಕ ರಾಶಿ
ಕರ್ಕ ರಾಶಿಯವರು ಈ ಅವಧಿಯಲ್ಲಿ ಕೆಲವೊಂದು ಸೂಕ್ಷ್ಮ ವಿಷಯಗಳ ಕಡೆ ಗಮನಹರಿಸುವುದು ಒಳ್ಳೆಯದು. ಆಸ್ತಿ ಸಂಬಂಧಿಸಿದ ವಿವಾದಗಳನ್ನು ತಾಳ್ಮೆಯಿಂದ ಬಗೆಹರಿಸಿ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಬರಬಹುದು, ಇನ್ನು ಹಣದ ಬಗ್ಗೆ ಜಾಗ್ರತೆವಹಿಸಬೇಕು, ಯಾವುದೇ ಹೂಡಿಕೆ ಮಾಡಲು ಹೋಗಬೇಡಿ. ಅನಾವಶ್ಯಕ ಖರ್ಚುಗಳಿಂದ ದೂರವಿರಿ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 40
ಶುಭ ದಿನ: ಶುಕ್ರವಾರ
ಸಿಂಹ ರಾಶಿ
ಈ ವಾರ ನಿಮಗೆ ಮಿಶ್ರಫಲ. ಕೆಲಸದಲ್ಲಿ ಹೆಚ್ಚಿನ ಒತ್ತಡ ಇರಲಿದೆ, ಇದರಿಂದ ಆಯಾಸ ಇರಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ, ಕೆಲಸದಲ್ಲಿ ಅದೃಷ್ಟವನ್ನು ಮಾತ್ರ ನಂಬಿ ಕೂರಬೇಡಿ, ನೀವು ಕಠಿಣ ಶ್ರಮ ಕೂಡ ಹಾಕಬೇಕು. ಮೇಲಾಧಿಕಾರಿಗಳ ಸಲಹೆ ನಿರ್ಲಕ್ಷ್ಯ ಮಾಡಲು ಹೋಗದಿರಿ. ಪ್ರೇಮಿಗಳಿಗೆ ವಿಶೇಷವಾಗಿರಲಿದೆ, ವೈವಾಹಿಕ ಜೀವನದಲ್ಲಿ ಖುಷಿ ಇರಲಿದೆ. ಆರೋಗ್ಯ ಸಮಸ್ಯೆಗಳಿದ್ದರೆ ನಿರ್ಲಕ್ಷ್ಯ ಬೇಡ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 6
ಶುಭ ದಿನ: ಮಂಗಳವಾರ
ತುಲಾ ರಾಶಿ
ತುಲಾ ರಾಶಿಯ ಈ ವಾರ ಜಾಗ್ರತೆವಹಿಸಬೇಕು, ತಾಳ್ಮೆಯಿಂದಿರಬೇಕು, ಏಕೆಂದರೆ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ತಾಳ್ಮೆಯಿಂದ ಬಗೆಹರಿಸಿ, ಸಂಬಂಧಗಳಲ್ಲಿ ಬಿರುಕು ಉಂಟಾಗದಂತೆ ನೀವು ಜಾಗ್ರತೆವಹಿಸಬೇಕು. ನಿಮ್ಮ ಆತ್ಮವಿಶ್ವಾಸ ಕುಗ್ಗದಂತೆ ಜಾಗ್ರತೆವಹಿಸಿ, ಆರ್ಥಿಕವಾಗಿಯೂ ಈ ಅವಧಿ ಅನುಕೂಲಕರವಲ್ಲ. ನಕಾರಾತ್ಮಕತೆಯು ನಿಮ್ಮ ಮೇಲೆ ಪ್ರಾಬಲ್ಯದ ಮೇಲೆ ಗಮನಹರಿಸಬೇಕು. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 17
ಶುಭ ದಿನ: ಮಂಗಳವಾರ
ಧನು ರಾಶಿ
ಅದೃಷ್ಟವನ್ನು ಅವಲಂಬಿಸಿ ಕೂರಬೇಡಿ, ಯಶಸ್ಸನ್ನು ಸಾಧಿಸಲು ನೀವು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ, ಉದ್ಯೋಗ ಅಥವಾ ವ್ಯವಹಾರವಾಗಿರಲಿ ನಿಮ್ಮ ನಿರ್ಧಾರಗಳನ್ನು ನೀವು ಬಹಳ ಆಲೋಚಿಸಿ ತೆಗೆದುಕೊಳ್ಳಿ. ಯಾವುದೇ ಹಣಕಾಸಿನ ವಹಿವಾಟು ಮಾಡಲು ಹೋಗಬೇಡಿ. ಕಷ್ಟದ ಸಮಯದಲ್ಲಿ ನಿಮ್ಮ ಸಂಗಾತಿಯಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಈ ವಾರ ಆರೋಗ್ಯದಲ್ಲಿ ಏರಿಳಿತಗಳಿರಲಿದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 18
ಶುಭ ದಿನ: ಶನಿವಾರ
ಮಕರ ರಾಶಿ
ಈ ವಾರ ನಿಮಗೆ ತುಂಬಾ ಮುಖ್ಯ. ಕಛೇರಿಯಲ್ಲಿ ನೀವು ತುಂಬಾ ಸಮತೋಲಿತ ರೀತಿಯಲ್ಲಿ ವರ್ತಿಸಬೇಕು. ಕೆಲಸದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ಆಸ್ತಿಗೆ ಸಂಬಂಧಿಸಿದ ಏನಾದರೂ ಪ್ರಕರಣವಿದ್ದರೆ ಒಳ್ಳೆಯ ಲಾಯರ್ ಅನ್ನು ಸಂಪರ್ಕಿಸಿ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ನಿಮ್ಮ ಆರೋಗ್ಯದ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬೇಡಿ. ನೀವು ಆರೋಗ್ಯದ ಕಡೆಗೆ ಗಮನಹರಿಸಿ.
ಈ ವಾರ ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 26
ಶುಭ ದಿನ: ಸೋಮವಾರ
ಕುಂಭ ರಾಶಿ
ಈ ವಾರ ಕುಟುಂಬದಲ್ಲಿ ವಾತಾವರಣ ಅಷ್ಟೊಂದು ಚೆನ್ನಾಗಿರಲ್ಲ, ಸಂಬಂಧಗಳಲ್ಲಿ ಅಂತರ ಹೆಚ್ಚಾಗಬಹುದು. ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರಲಿದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನಿಮ್ಮ ಪ್ರಯತ್ನಗಳನ್ನು ನೀವು ವೇಗಗೊಳಿಸಬೇಕಾಗುತ್ತದೆ. ನೀವು ಸಾಲ ಅಥವಾ ಎರವಲು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ನೀವು ಕಚೇರಿ ಕೆಲಸ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ವ್ಯಾಪಾರಿಗಳಿಗೆ ಈ ವಾರ ಸರಾಸರಿಯಾಗಿರಲಿದೆ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 5
ಮೀನ ರಾಶಿ
ಹಣದ ವಿಷಯದಲ್ಲಿ ಈ ವಾರ ಖರ್ಚು ಅಧಿಕವಿರಲಿದೆ. ಹೀಗಾಗಿ ನಿಮ್ಮ ಹಣದ ಲೆಕ್ಕಾಚಾರ ಉಲ್ಟಾಪಲ್ಟ ಆಗಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ವಾರ ದೊಡ್ಡ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಸಂಬಂಧದಲ್ಲಿ ಏನಾದರೂ ಭಿನ್ನಾಭಿಪ್ರಾಯವಿದ್ದರೆ ನೀವೇ ಬಗೆಹರಿಸಿ, ಬೇರೆಯವರ ಜೊತೆಗೆ ಹೇಳಲು ಹೋಗಬೇಡಿ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 12
ಶುಭ ದಿನ: ಸೋಮವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











