Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ವಾರ ಭವಿಷ್ಯ (ಜುಲೈ 12-19): ಈ ವಾರ ಈ 3 ರಾಶಿಯವರಿಗೆ ಎಲ್ಲಾ ರೀತಿಯಿಂದಲೂ ಒಳ್ಳೆಯದು
ವೈದಿಕ ಶಾಸ್ತ್ರದಲ್ಲಿ ಗ್ರಹಗಳ ಗ್ರಹಗಳ ಸ್ಥಾನ ನೋಡಿ ವಾರದ ರಾಶಿಫಲ ಹೇಳಲಾಗುವುದು, ಈ ವಾರದ ರಾಶಿಫಲದ ಪ್ರಕಾರ ಈ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿದೆ. ವೈಯಕ್ತಿಕ ಬದುಕು, ವೃತ್ತಿ ಬದುಕು, ಪ್ರೀತಿ ಜೀವನ, ಆರ್ಥಿಕ ಬದುಕು ಎಲ್ಲಾ ದೃಷ್ಟಿಯಿಂದ ಈ 3 ರಾಶಿಗಳಿಗೆ ಈ ವಾರ ಯಾವುದೇ ಸಮಸ್ಯೆವಿಲ್ಲ ನೋಡಿ:

ಮೇಷ ರಾಶಿ
ಈ ವಾರ ನಿಮಗೆ ತುಂಬಾ ತುಂಬಾ ಚೆನ್ನಾಗಿರಲಿದೆ. ಕೆಲಸದ ಒತ್ತಡ ಕಡಿಮೆ ಇರಲಿದೆ, ಅಲ್ಲದೆ ಈ ಅವಧಿಯಲ್ಲಿ ಶುಭ ಕಾರ್ಯಗಳಲ್ಲಿ ಭಾಗವಹಿಸಬಹುದು. ಕುಟುಂಬದ ಜೊತೆಗೆ ಸಂತೋಷದಿಂದ ಸಮಯ ಕಳೆಯುತ್ತೀರಿ, ಆದರೆ ದುಡ್ಡು ಹೆಚ್ಚು ಖರ್ಚು ಮಾಡಲು ಹೋಗಬೇಡಿ, ಉಳಿತಾಯದ ಕಡೆಗೆ ನೀವು ಗಮನಹರಿಸಬೇಕು, ಇಲ್ಲದಿದ್ದರೆ ಆರ್ಥಿಕ ಸಂಕಷ್ಟ ಉಂಟಾಗಬಹುದು. ಇನ್ನು ಈ ಸಮಯದಲ್ಲಿ ಯಾವುದೇ ಸಾಲದ ವ್ಯವಹಾರ ಮಾಡದಿದ್ದರೆ ಒಳ್ಳೆಯದು. ನೀವು ಸಾಲ ಕೊಟ್ಟರೆ ಆ ಹಣ ಮರಳಿ ಸಿಗುವುದು ಕಷ್ಟವಾಗುವುದು, ಕುಟುಂಬ ಜೀವನ ಚೆನ್ನಾಗಿರಲಿದೆ, ಆರೋಗ್ಯವೂ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಕೇಸರಿ
ಅದೃಷ್ಟದ ಸಂಖ್ಯೆ: 8
ಶುಭ ದಿನ: ಮಂಗಳವಾರ
ಮಿಥುನ ರಾಶಿ
ಈ ವಾರ ನಿಮಗೆ ಮಂಗಳಕರ, ನಿಮ್ಮ ದೊಡ್ಡ ಕನಸು ನೆರವೇರಲಿದೆ, ಅಲ್ಲದೆ ಆರ್ಥಿಕವೂ ಈ ವಾರ ಯಾವುದೇ ಸಮಸ್ಯೆ ಇರಲ್ಲ, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಕುಟುಂಬ ಜೀವನದಲ್ಲಿ ಪ್ರೀತಿ, ಹೊಂದಾಣಿಕೆ ಇರಲಿದೆ. ವಿವಾಹಿತರಿಗೆ ತುಂಬಾ ಚೆನ್ನಾಗಿರಲಿದೆ, ಆರೋಗ್ಯ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 52
ಶುಭ ದಿನ: ಸೋಮವಾರ
ಕನ್ಯಾ ರಾಶಿ
ಈ ದಿನ ನಿಮಗೆ ಶುಭವಾಗಿದೆ, ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಉತ್ತಮ ಯಶಸ್ಸು ಗಳಿಸುತ್ತೀರಿ. ಇನ್ನು ನೀವು ಏನಾದರೂ ಹೊಸ ವ್ಯವಹಾರಕ್ಕೆ ಹೂಡಿಕೆ ಮಾಡುವುದಾದರೆ ನೀವು ಅದರ ಬಗ್ಗೆ ಚೆನ್ನಾಗಿ ವಿಚಾರಿಸಿದ ಬಳಿಕವಷ್ಟೇ ಮುಂದುವರೆಯಬೇಕು. ಈ ವಾರ ಉತ್ತಮವಾಗಿರುತ್ತದೆ ಉದ್ಯೋಗಿಗಳ ಕೆಲಸ ಕಾರ್ಯಗಳು ನಿಮ್ಮ ಯೋಜನೆಯ ಪ್ರಕಾರ ಪೂರ್ಣಗೊಳ್ಳಲಿದೆ. ನೀವು ನಿರುದ್ಯೋಗಿಗಳಾಗಿದ್ದರೆ ಕೆಲಸ ಹುಡುಕುವ ಪ್ರಯತ್ನ ಮತ್ತಷ್ಟು ಚುರುಕುಗೊಳಿಸಿ. ವೈವಾಹಿಕ ಜೀವನದ ಕಡೆಗೆ ಗಮನಹರಿಸಿ, ಆರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಬೇಡ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 32
ಶುಭ ದಿನ: ಗುರುವಾರ
ವೃಶ್ಚಿಕ ರಾಶಿ
ಈ ಅವಧಿಯಲ್ಲಿ ಅದೃಷ್ಟ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗಬಹುದು. ವ್ಯಾಪಾರಿಗಳು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಇನ್ನು ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಮನೆಯ ವಾತಾವರಣ ಚೆನ್ನಾಗಿರಲಿದೆ. ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಕಡಿಮೆಯಾಗಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ವಾರ ಅನುಕೂಲಕರವಾಗಿರುತ್ತದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 9
ಶುಭ ದಿನ: ಶುಕ್ರವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
