Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಈ ವಾರದ (ಜುಲೈ1-7) ಭವಿಷ್ಯ ಪ್ರಕಾರ ಈ ವಾರದ ಅದೃಷ್ಟದ ರಾಶಿಗಳಿವು
ಈ ವಾರದ ರಾಶಿಫಲ ಪ್ರಕಾರ ಜುಲೈ 1-7 ಈ ರಾಶಿಗಳಿಗೆ ಹೆಚ್ಚು ಅನುಕೂಲಕರ:
ಮೇಷ ರಾಶಿ
ಈ ವಾರ ನಿಮಗೆ ಶುಭವಾಗಿದೆ, ನಿಮ್ಮ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ಪೂರ್ಣವಾಗಲಿದೆ. ಸರ್ಕಾರಿ ಕೆಲಸ ಮಾಡುವವರಿಗೆ ಇದು ತುಂಬಾ ಬಿಡುವಿಲ್ಲದ ಸಮಯವಾಗಿರುತ್ತದೆ.ಈ ಅವಧಿಯಲ್ಲಿ ಖರ್ಚು ಹೆಚ್ಚಿರಲಿದೆ, ಗಮನಹರಿಸದಿದ್ದರೆ ನಿಮ್ಮ ಬಜೆಟ್ ಅಸಮತೋಲನದ ಸಾಧ್ಯತೆಯಿದೆ. ನಿಮ್ಮ ಬಜೆಟ್‌ಗಿಂತ ಹೆಚ್ಚು ಖರ್ಚು ಮಾಡುವ ತಪ್ಪು ಮಾಡದಿರಿ. ಇನ್ನು ನಿಮ್ಮ ಆತ್ಮವಿಶ್ವಾಸ ಕುಗ್ಗಿಸುವ ವ್ಯಕ್ತಿಗಳಿಂದ ದೂರವಿರಿ. ಮದುವೆ ಪ್ರಾಯದವರಿಗೆ ವಿವಾಹ ಪ್ರಸ್ತಾಪ ಬರಲಿದೆ. ಕೆಲಸದ ಹೊರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆಯಾಸ ಇರಲಿದೆ.
ಅದೃಷ್ಟದ ಬಣ್ಣ: ಬೂದು
ಅದೃಷ್ಟದ ಸಂಖ್ಯೆ: 14
ಶುಭ ದಿನ: ಶುಕ್ರವಾರ

ತುಲಾ ರಾಶಿ'
ಈ ವಾರ ನಿಮಗೆ ಶುಭವಾಗುದೆ, ಕೆಲಸ ಹುಡುಕುತ್ತಿದ್ದರೆ ಅದರಲ್ಲಿ ಯಶಸ್ಸು ಕಾಣುತ್ತೀರಿ. ವಿದ್ಯಾರ್ಥಿಗಳಿಗೆ ಈ ಅವಧಿ ತುಂಬಾನೇ ಕೆಲಸದ ಕಡೆಗೆ ಗಮನಹರಿಸಿ. ಆರ್ಥಿಕವಾಗಿ ಒಳ್ಳೆಯದಲ್ಲ, ಉದ್ಯೋಗಿಗಳು ಈ ಸಮಯದಲ್ಲಿ ಹಣದ ಸಮಸ್ಯೆ ಎದುರಿಸಬಹುದು. ಅನಗ್ಯತ ವಿಷಯಗಳಿಂದ ದೂರವಿದ್ದರೆ ಉತ್ತಮ. ಉತ್ತಮ ಆರೋಗ್ಯಕ್ಕಾಗಿ, ನೀವು ಸರಿಯಾದ ಆಹಾರದ ಜೊತೆಗೆ ವ್ಯಾಯಾಮದತ್ತ ಗಮನ ಹರಿಸಬೇಕು.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 21
ಶುಭ ದಿನ: ಶನಿವಾರ
ಧನು ರಾಶಿ
ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಇರುತ್ತದೆ. ಆಸ್ತಿ ಸಂಬಂಧಿತ ಕೆಲಸ ಮಾಡಲು ಈ ಸಮಯ ಅನುಕೂಲಕರವಾಗಿದೆ. ಉದ್ಯಮಿಗಳು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಈ ಸಮಯವು ಅನುಕೂಲಕರವಾಗಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಉತ್ತಮ ಫಲಿತಾಂಶ ಸಿಗಲಿದೆ. ಇನ್ನು ವಿದೇಶದಲ್ಲಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಅವಧಿ ತುಂಬಾನೇ ಮುಖ್ಯ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ , ನಿಮ್ಮ ಖರ್ಚುಗಳನ್ನು ಸುಲಭವಾಗಿ ಭರಿಸಲಾಗುವುದು.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 36
ಶುಭ ದಿನ: ಶನಿವಾರ
ಮಕರ ರಾಶಿ
ಈ ರಾಶಿಯ ಉದ್ಯಮಿಗಳಿಗೆ ಈ ವಾರವು ತುಂಬಾ ಚೆನ್ನಾಗಿರಲಿದೆ. ಉದ್ಯೋಗಿಗಳಿಗೆ ಇದು ಬದಲಾವಣೆಯ ಸಮಯ. ಬೇರೆ ಕೆಲಸಕ್ಕೆ ಪ್ರಯತ್ನಿಸಲು ಈ ಅವಧಿ ಅನುಕೂಲಕರವಾಗಿದೆ, ಆರ್ಥಿಕವಾಗಿ ಈ ಸಮಯ ಒಳ್ಳೆಯದಿದೆ. ಈ ಸಮಯದಲ್ಲಿ, ನೀವು ಕೆಲವು ದುಬಾರಿ ಐಷಾರಾಮಿಗಳನ್ನು ಖರೀದಿಸಬಹುದು. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರಲಿದೆ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕೇಸರಿ
ಅದೃಷ್ಟದ ಸಂಖ್ಯೆ:42
ಶುಭ ದಿನ: ಮಂಗಳವಾರ
ವೃಷಭ ರಾಶಿ
ಈ ವಾರ ನೀವು ಜಾಗ್ರತೆವಹಿಸಿ, ವ್ಯಾಪಾರಿಗಳು ತಮ್ಮ ವ್ಯಾಪಾರ ಪ್ಲ್ಯಾನ್ ರಹಸ್ಯವಾಗಿಡಿ, ಉದ್ಯೋಗಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಈ ಸಮಯದಲ್ಲಿ ಕೆಲಸ ಅಧಿಕವಿರಲಿದೆ, ಆದರೆ ನೀವು ಧನಾತ್ಮಕವಾಗಿರುವಿರಿ. ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರಲಿದೆ. ಆರ್ಥಿಕವಾಗಿ ಈ ದಿನ ನಿಮಗೆ ತುಂಬಾ ಒಳ್ಳೆಯದು. ಈ ಅವದಿಯಲ್ಲಿ ನೀವು ಬಯಸಿದ ಕೆಲವೊಂದು ವಸ್ತು ಖರೀದಿಸಲು ಸಾಧ್ಯವಾಗುವುದು, ಆರೋಗ್ಯದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 28
ಶುಭ ದಿನ: ಬುಧವಾರ
ಮಿಥುನ ರಾಶಿ
ಈ ವಾರ ಆರಂಭದ ದಿನದಲ್ಲಿ ಕೆಲ ಸವಾಲು ಎದುರಿಸಬಹುದು. ಆದರೆ ನಂತರ ಪರಿಸ್ಥಿತಿ ಬದಲಾಗಲಿದೆ. ಇನ್ನು ಹಲವಾರು ಕೆಲಸವನ್ನು ಒಂದೇ ಸಮಯದಲ್ಲಿ ಮಾಡದಂತೆ ಸಲಹೆ ನೀಡಲಾಗುವುದು. ಇನ್ನು ಯಾವುದೇ ಕೆಲಸ ಮಾಡುವುದಾದರೆ ಪ್ಲ್ಯಾನ್ ಮಾಡಿ ಮಾಡಿದರೆ ಕೆಲವು ಬೇಗನೆ ಪೂರ್ನಗೊಳ್ಳಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಉದ್ಯೋಗಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಈ ಸಮಯದಲ್ಲೊ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿದೆ. ಈ ಅವಧಿ ನಿಮಗೆ ಧನಾತ್ಮಕವಾಗಿರಲಿದೆ.
ಅದೃಷ್ಟದ ಬಣ್ಣ: ಗೋಲ್ಡನ್
ಅದೃಷ್ಟದ ಸಂಖ್ಯೆ: 6
ಶುಭ ದಿನ: ಸೋಮವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications